ಕುಸ್ತಿಗೆ ಸಾಕ್ಷಿ ಮಲಿಕ್ ವಿದಾಯ: ಒಲಿಂಪಿಕ್ ಪದಕ ವಿಜೇತೆಯ ಸಾಧನೆಗಳ ಕಿರು ಅವಲೋಕನ
ಕನ್ನಡ ಸುದ್ದಿ  /  ಕ್ರೀಡೆ  /  ಕುಸ್ತಿಗೆ ಸಾಕ್ಷಿ ಮಲಿಕ್ ವಿದಾಯ: ಒಲಿಂಪಿಕ್ ಪದಕ ವಿಜೇತೆಯ ಸಾಧನೆಗಳ ಕಿರು ಅವಲೋಕನ

ಕುಸ್ತಿಗೆ ಸಾಕ್ಷಿ ಮಲಿಕ್ ವಿದಾಯ: ಒಲಿಂಪಿಕ್ ಪದಕ ವಿಜೇತೆಯ ಸಾಧನೆಗಳ ಕಿರು ಅವಲೋಕನ

Sakshi Malik: ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದ ಸಾಕ್ಷಿ ಮಲಿಕ್‌, ದಿಢೀರ್‌ ವಿದಾಯ ಹೇಳಿದ್ದಾರೆ. ಸಾಕ್ಷಿ ಮಲಿಕ್ ಕುಸ್ತಿ ಬದುಕಿನ ಸಾಧನೆಗಳ ಪುಟ್ಟ ಅವಲೋಕನ ಇಲ್ಲಿದೆ.

202ರ ಕಾಮನ್‌ವೆಲ್ತ್‌ ಚಿನ್ನದ ಪದಕದೊಂದಿಗೆ ಸಾಕ್ಷಿ ಮಲಿಕ್
202ರ ಕಾಮನ್‌ವೆಲ್ತ್‌ ಚಿನ್ನದ ಪದಕದೊಂದಿಗೆ ಸಾಕ್ಷಿ ಮಲಿಕ್ (File)

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ (Sakshi Malik) ಕುಸ್ತಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ ಬೆಂಬಲಿಗ ಸಂಜಯ್ ಸಿಂಗ್, ಭಾರತೀಯ ಕುಸ್ತಿ ಫೆಡರೇಶನ್ (WFI -Wrestling Federation of India) ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಪ್ರತಿಭಾನ್ವಿತ ಕುಸ್ತಿಪಟು ಸಾಕ್ಷಿ, ಡಿಸೆಂಬರ್‌ 21ರ ಗುರುವಾರ ಕುಸ್ತಿಗೆ ವಿದಾಯ ಹೇಳಿದ್ದಾರೆ. ಡಬ್ಲ್ಯೂಎಫ್‌ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಜಯಗಳಿಸಿದ್ದರ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ದಿಢೀರನೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಸಂಜಯ್ ನೇತೃತ್ವದ ಸಮಿತಿಯು ಗುರುವಾರ ನಡೆದ ಭಾರತೀಯ ಕುಸ್ತಿ ಫೆಡರೇಶನ್ ಚುನಾವಣೆಯಲ್ಲಿ 15 ಹುದ್ದೆಗಳ ಪೈಕಿ 13ರಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ | ಕುಸ್ತಿಗೆ ಕಣ್ಣೀರ ವಿದಾಯ ಹೇಳಿದ ಸಾಕ್ಷಿ ಮಲಿಕ್; ಕಾರಣ ಇದು

ಲೈಂಗಿಕ ಕಿರುಕುಳ ಆರೋಪಿಸಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರತದ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. “ನಾವು ನಮ್ಮ ಹೃದಯದಿಂದ ಹೋರಾಡಿದ್ದೇವೆ. ಆದರೆ ಬ್ರಿಜ್ ಭೂಷಣ್ ಅವರಂಥ ವ್ಯಕ್ತಿ, ಅವರ ವ್ಯವಹಾರ ಪಾಲುದಾರ ಮತ್ತು ನಿಕಟ ಸಹವರ್ತಿಯೇ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದರೆ, ನಾನು ಕುಸ್ತಿಯನ್ನು ತ್ಯಜಿಸುತ್ತೇನೆ” ಎಂದು ಚುನಾವಣೆಯ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಾಕ್ಷಿ ಹೇಳಿದ್ದಾರೆ. ಭಾವುಕರಾದ ಸಾಕ್ಷಿ ಕಣ್ಣೀರಿನೊಂದಿಗೆ ತಮ್ಮ ಬೂಟುಗಳನ್ನು ಮೇಜಿನ ಮೇಲಿಟ್ಟರು.

1992ರ ಸೆಪ್ಟೆಂಬರ್ 3ರಂದು ಜನಿಸಿದ ಮಲಿಕ್, ಏಳು ವರ್ಷಗಳ ಹಿಂದೆ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿ ಗಮನಾರ್ಹ ಸಾಧನೆ ಮಾಡಿದ್ದರು. ತಮ್ಮ 12ನೇ ವಯಸ್ಸಿನಲ್ಲಿಯೇ ಕುಸ್ತಿ ಪಯಣವನ್ನು ಆರಂಭಿಸಿದ ಸಾಕ್ಷಿ, ದೇಶದಲ್ಲಿ ವ್ಯಾಪಕ ಮನ್ನಣೆ ಗಳಿಸಿದ್ದಾರೆ.

ಸಾಕ್ಷಿ ಮಲಿಕ್ ಕುಸ್ತಿ ಬದುಕಿನ ಸಾಧನೆಗಳ ಪುಟ್ಟ ಅವಲೋಕನ

ಸೀನಿಯರ್‌ ಹಂತ

  • ಒಲಿಂಪಿಕ್ಸ್, 2016 (ರಿಯೊ ದಿ ಜನೈರೊ) - 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಕಾಮನ್ವೆಲ್ತ್ ಗೇಮ್ಸ್, 2022 (ಬರ್ಮಿಂಗ್ಹ್ಯಾಮ್) - 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ
  • ಕಾಮನ್‌ವೆಲ್ತ್ ಗೇಮ್ಸ್, 2014 (ಗ್ಲಾಸ್ಗೋ) - 58 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ.
  • ಕಾಮನ್‌ವೆಲ್ತ್ ಗೇಮ್ಸ್, 2018 (ಗೋಲ್ಡ್ ಕೋಸ್ಟ್) - 62 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಏಷ್ಯನ್ ಚಾಂಪಿಯನ್‌ಶಿಪ್, 2015 (ದೋಹಾ) - 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಏಷ್ಯನ್ ಚಾಂಪಿಯನ್‌ಶಿಪ್, 2017 (ನವದೆಹಲಿ) - 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ.
  • ಏಷ್ಯನ್ ಚಾಂಪಿಯನ್‌ಶಿಪ್, 2018 (ಬಿಷ್ಕೆಕ್) - 62 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಏಷ್ಯನ್ ಚಾಂಪಿಯನ್‌ಶಿಪ್, 2019 (ಕ್ಸಿಯಾನ್) - 62 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, 2013 (ಜೋಹಾನ್ಸ್‌ಬರ್ಗ್) - 63 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, 2017 (ಜೋಹಾನ್ಸ್‌ಬರ್ಗ್) - 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ.

ಜೂನಿಯರ್‌ ಹಂತ

  • ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್, 2009 (ಮನಿಲಾ) - 59 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ
  • ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್, 2010 (ಬುಡಾಪೆಸ್)ಟ್ - 59 ಕೆಜಿ ವಿಭಾಗದಲ್ಲಿ ಕಂಚಿನ ಪದಕ
  • ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್, 2012 (ಅಲ್ಮಾಟಿ) - 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.