ಕ್ರಿಸ್ತ ಪೂರ್ವದಲ್ಲೇ ಹುಟ್ಟಿತ್ತು ಒಲಿಂಪಿಕ್ಸ್, ಗ್ರೀಸ್​ ದೇಶಕ್ಕೇಕೆ ವಿಶೇಷ ಸ್ಥಾನಮಾನ; ಶ್ರೀಮಂತ ಕ್ರೀಡಾಕೂಟ ಇತಿಹಾಸ
ಕನ್ನಡ ಸುದ್ದಿ  /  ಕ್ರೀಡೆ  /  ಕ್ರಿಸ್ತ ಪೂರ್ವದಲ್ಲೇ ಹುಟ್ಟಿತ್ತು ಒಲಿಂಪಿಕ್ಸ್, ಗ್ರೀಸ್​ ದೇಶಕ್ಕೇಕೆ ವಿಶೇಷ ಸ್ಥಾನಮಾನ; ಶ್ರೀಮಂತ ಕ್ರೀಡಾಕೂಟ ಇತಿಹಾಸ

ಕ್ರಿಸ್ತ ಪೂರ್ವದಲ್ಲೇ ಹುಟ್ಟಿತ್ತು ಒಲಿಂಪಿಕ್ಸ್, ಗ್ರೀಸ್​ ದೇಶಕ್ಕೇಕೆ ವಿಶೇಷ ಸ್ಥಾನಮಾನ; ಶ್ರೀಮಂತ ಕ್ರೀಡಾಕೂಟ ಇತಿಹಾಸ

Olympics History: ಒಲಿಂಪಿಕ್ಸ್​​ ಹುಟ್ಟಿದ್ದು ಎಲ್ಲಿ, ಯಾವಾಗ, ಯಾವ ದೇಶ ಮೊದಲು ಆಯೋಜಿಸಿತ್ತು? ಉದ್ಘಾಟನಾ ಸಮಾರಂಭದ ಧ್ವಜಧಾರಿ ಪರೇಡ್ ವೇಳೆ ಗ್ರೀಸ್​ ದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವುದೇಕೆ? ಇಲ್ಲಿದೆ ಉತ್ತರ.

ಕ್ರಿಸ್ತ ಪೂರ್ವದಲ್ಲೇ ಹುಟ್ಟಿತ್ತು ಒಲಿಂಪಿಕ್ಸ್, ಗ್ರೀಸ್​ ದೇಶಕ್ಕೇಕೆ ವಿಶೇಷ ಸ್ಥಾನಮಾನ; ಶ್ರೀಮಂತ ಕ್ರೀಡಾಕೂಟ ಇತಿಹಾಸ
ಕ್ರಿಸ್ತ ಪೂರ್ವದಲ್ಲೇ ಹುಟ್ಟಿತ್ತು ಒಲಿಂಪಿಕ್ಸ್, ಗ್ರೀಸ್​ ದೇಶಕ್ಕೇಕೆ ವಿಶೇಷ ಸ್ಥಾನಮಾನ; ಶ್ರೀಮಂತ ಕ್ರೀಡಾಕೂಟ ಇತಿಹಾಸ (The Bridge)

ಬಹುನಿರೀಕ್ಷಿತ ಒಲಿಂಪಿಕ್ಸ್ ಮತ್ತೆ ಬಂದಿದೆ. 33ನೇ ಆವೃತ್ತಿಯ ಜಾಗತಿಕ ಕ್ರೀಡಾ ಜಾತ್ರೆಗೆ ಪಾರಂಪರಿಕ ದೇಶ ಫ್ರಾನ್ಸ್​ ಸಜ್ಜಾಗಿದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಮಹೋನ್ನತ ಕ್ರೀಡಾಕೂಟಕ್ಕೆ ಪ್ಯಾರಿಸ್ ನಗರ ವೇದಿಕೆ ಒದಗಿಸುತ್ತಿದೆ. ಸಿಟಿ ಆಫ್ ಲವ್, ಸಿಟಿ ಆಫ್ ಲೈಟ್ಸ್​​​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್​​ನಲ್ಲಿ ಕ್ರೀಡಾ ಸಂಭ್ರಮ ಮನೆ ಮಾಡಿದೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ (ಜುಲೈ 26) ರಾತ್ರಿ 11 ಗಂಟೆಗೆ ಪ್ಯಾರಿಸ್​ ಒಲಿಂಪಿಕ್ಸ್​​ಗೆ ವರ್ಣರಂಜಿತ ಚಾಲನೆ ಸಿಗಲಿದೆ.

3ನೇ ಬಾರಿಗೆ ಒಲಿಂಪಿಕ್ಸ್​​ ಆಯೋಜನೆ ಹೊತ್ತಿರುವ ಪ್ಯಾರಿಸ್​​​ನ ಸೀನ್​​​ ನದಿಯಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಚಾಲನೆ ಸಿಗಲಿದೆ. ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್ ಕೊನೆಯದಾಗಿ 1924ರಲ್ಲಿ​ ನಡೆದಿತ್ತು. ಇದೀಗ 21ನೇ ಶತಮಾನದಲ್ಲಿ ಮೊದಲ ಬಾರಿಗೆ ಆತಿಥ್ಯ ಒದಗಿಸುತ್ತಿದೆ. 17 ದಿನಗಳ ಕಾಲ ನಡೆಯುವ ಒಲಿಂಪಿಕ್ಸ್​ನಲ್ಲಿ 32 ಕ್ರೀಡೆಗಳ 329 ವಿಭಾಗಗಳಲ್ಲಿ 206 ದೇಶಗಳ 10,500 ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಡಲು ತುದಿಗಾಲಲ್ಲಿ ನಿಂತಿದ್ದಾರೆ.

ಆದರೆ, ಒಲಿಂಪಿಕ್ಸ್​​ ಹುಟ್ಟಿದ್ದು ಎಲ್ಲಿ, ಯಾವಾಗ, ಯಾವ ದೇಶ ಮೊದಲು ಆಯೋಜಿಸಿತ್ತು? ಉದ್ಘಾಟನಾ ಸಮಾರಂಭದ ಧ್ವಜಧಾರಿ ಪರೇಡ್ ವೇಳೆ ಗ್ರೀಸ್​ ದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವುದೇಕೆ? ಪರೇಡ್ ವೇಳೆ ಭಾರತ ಎಷ್ಟನೇ ಸ್ಥಾನಿಯಾಗಿ ಧ್ವಜ ಹಿಡಿದು ಸಾಗಲಿದೆ? ರಾಷ್ಟ್ರಗಳ ಮೊದಲ ಮೆರವಣಿಗೆಗೆ ಸಾಕ್ಷಿಯಾದ ಒಲಿಂಪಿಕ್ಸ್ ಯಾವುದು? ರಾಷ್ಟ್ರಗಳ ಪರೇಡ್‌ನಲ್ಲಿ ಯಾವ ದೇಶವು ಮೊದಲು ಸಾಗಲಿದೆ? ಈ ಎಲ್ಲದಕ್ಕೂ ಉತ್ತರ ಇಲ್ಲಿದೆ.

ಒಲಿಂಪಿಕ್ಸ್ ಇತಿಹಾಸ

1896ರಲ್ಲಿ ಗ್ರೀಸ್ ರಾಜಧಾನಿ ಅಥೇನ್ಸ್​ ನಗರದಲ್ಲಿ ಆಯೋಜಿಸಿದ್ದೇ ಮೊದಲ ಒಲಿಂಪಿಕ್ಸ್​ ಎಂದು ಸಾಕಷ್ಟು ಮಂದಿ ತಿಳಿದಿದಿದ್ದಾರೆ. ಆದರೆ, ಇದು ಆಧನಿಕ ಒಲಿಂಪಿಕ್ಸ್​ ಕ್ರೀಡಾಕೂಟ. ಕ್ರಿಸ್ತ ಪೂರ್ವದಲ್ಲೇ ಒಲಿಂಪಿಕ್ಸ್ ಹುಟ್ಟಿಕೊಂಡಿತ್ತು. ಕ್ರಿ.ಪೂ 776 ರಲ್ಲೇ ಗ್ರೀಸ್​ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಕೂಟವನ್ನು ಆಯೋಜಿಸಿತ್ತು. ಹೀಗಾಗಿ ಪ್ರಪ್ರಥಮ ಒಲಿಂಪಿಕ್ಸ್ ಆಯೋಜಿಸಿದ ಖ್ಯಾತಿ ಗ್ರೀಸ್​​ಗೆ ಸಲ್ಲಬೇಕಿದೆ. ಅಂದು ಆರಂಭಗೊಂಡ ಕ್ರೀಡಾಕೂಟ ಎರಡ್ಮೂರು ಶತಮಾನಗಳ ಕಾಲ ನಡೆದಿತ್ತು. ತದನಂತರ ಸ್ಥಗಿತಗೊಂಡಿತ್ತು.

ಆದರೆ, 1859ರಲ್ಲಿ ಒಲಿಂಪಿಕ್ಸ್​​ಗೆ ಮತ್ತೆ ಚಾಲನೆ ಸಿಕ್ಕಿತು. ಗ್ರೀಕ್ ದೇಶದ ಹೋರಾಟಗಾರ, ಲೋಕೋಪಕಾರಿ, ಉದ್ಯಮಿ ಇವಾಂಜೆಲಾಸ್‌ ಝಪ್ಪಾಸ್‌ ಎಂಬವರು ಚೊಚ್ಚಲ ಅಂತಾರಾಷ್ಟ್ರೀಯ ಒಲಿಂಪಿಕ್‌ ಕ್ರೀಡಾಕೂಟ ಆಯೋಜಿಸಿದ್ದರು. 1894ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ರಚಿಸಲಾಯಿತು. ಅದನ್ನು ಹುಟ್ಟು ಹಾಕಿದವರು ಫ್ರಾನ್ಸ್‌ನ ಪಿಯರೆ ಡಿ ಕ್ಯುಬರ್ತಿನ್‌. ಮೊದಲ ಆಧುನಿಕ ಒಲಿಂಪಿಕ್ಸ್​​ ನಡೆದಿದ್ದು 1896ರಲ್ಲಿ.

ಗ್ರೀಸ್​ಗೇಕೆ ವಿಶೇಷ ಮಾನ್ಯತೆ?

ಚೊಚ್ಚಲ ಒಲಿಂಪಿಕ್ಸ್ ಆಯೋಜಿಸಿದ್ದ ಕಾರಣ ಪ್ರತಿ ಆವೃತ್ತಿಯ ಉದ್ಘಟನಾ ಸಮಾರಂಭದಲ್ಲಿ ಅಥ್ಲೀಟ್ಸ್​​ಗಳ ಪರೇಡ್​ನಲ್ಲಿ ಗ್ರೀಸ್ ತಂಡ ಮೊದಲ ಸ್ಥಾನ ಪಡೆದಿರುತ್ತದೆ. ಒಲಿಂಪಿಕ್ಸ್‌ನ ಜನ್ಮಸ್ಥಳವಾಗಿ ಗ್ರೀಸ್‌ ದೇಶದ ಪಾತ್ರ ಗೌರವಿಸಲು, ಪಥಸಂಚಲನದಲ್ಲಿ ಮೊದಲ ಸ್ಥಾನ ಪಡೆದಿರುತ್ತದೆ. ಬಳಿಕ ಉಳಿದ ದೇಶಗಳು ಇಂಗ್ಲಿಷ್ ವರ್ಣಮಾಲೆಯ ಪ್ರಕಾರ ಪರೇಡ್​ನಲ್ಲಿ ಭಾಗವಹಿಸಲಿವೆ. ಆದರೆ ಆತಿಥ್ಯ ವಹಿಸುವ ದೇಶ ಹಾಗೂ ಮುಂದಿನ ಎರಡು ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ದೇಶಗಳು ಕೊನೆಯ ಸ್ಥಾನದಲ್ಲಿರುತ್ತವೆ. 1908ರ ಒಲಿಂಪಿಕ್ಸ್​ನಲ್ಲಿ ರಾಷ್ಟ್ರಗಳ ಮೊದಲ ಪರೇಡ್ ನಡೆಯಿತು. ಪರೇಡ್ ನಡೆಸುವ ದೇಶಗಳ ಪಟ್ಟಿಯಲ್ಲಿ ಭಾರತವು 84 ನೇ ರಾಷ್ಟ್ರವಾಗಿದೆ.

ಆರ್ಡರ್ ಪ್ರಕಾರ ಪಥಸಂಚಲನದ ದೇಶಗಳ ಪಟ್ಟಿ

1. ಗ್ರೀಸ್

2. ನಿರಾಶ್ರಿತರ ಒಲಿಂಪಿಕ್ ತಂಡ

3. ಅಫ್ಘಾನಿಸ್ತಾನ

4. ದಕ್ಷಿಣ ಆಫ್ರಿಕಾ

5. ಅಲ್ಬೇನಿಯಾ

6. ಅಲ್ಜೀರಿಯಾ

7. ಜರ್ಮನಿ

8. ಅಂಡೋರಾ

9. ಅಂಗೋಲಾ

10. ಆಂಟಿಗುವಾ ಮತ್ತು ಬಾರ್ಬಡೋಸ್

11. ಸೌದಿ ಅರೇಬಿಯಾ

12. ಅರ್ಜೆಂಟೀನಾ

13. ಅರ್ಮೇನಿಯಾ

14. ಅರುಬಾ

15. ಆಸ್ಟ್ರಿಯಾ

16. ಅಜರ್ಬೈಜಾನ್

17. ಬಹಾಮಾಸ್

18. ಬಹ್ರೇನ್

19. ಬಾಂಗ್ಲಾದೇಶ

20. ಬಾರ್ಬಡೋಸ್

21. ಬೆಲ್ಜಿಯಂ

22. ಬೆಲೀಜ್

23. ಬೆನಿನ್

24. ಬರ್ಮುಡಾ

25. ಭೂತಾನ್

26. ಬೊಲಿವಿಯಾ

27. ಬೋಸ್ನಿಯಾ ಮತ್ತು ಹರ್ಜೆಗೋವಿನಾ

28. ಬೋಟ್ಸ್ವಾನ

29. ಬ್ರೆಜಿಲ್

30. ಬ್ರೂನಿ

31. ಬಲ್ಗೇರಿಯಾ

32. ಬುರ್ಕಿನಾ ಫಾಸೊ

33. ಬುರುಂಡಿ

34. ಕೇಮನ್ ದ್ವೀಪಗಳು

35. ಕಾಂಬೋಡಿಯಾ

36. ಕ್ಯಾಮರೂನ್

37. ಕೆನಡಾ

38. ಕೇಪ್ ವರ್ಡೆ

39. ಮಧ್ಯ ಆಫ್ರಿಕಾದ ಗಣರಾಜ್ಯ

40. ಚಿಲಿ

41. ಚೀನಾ

42. ಸೈಪ್ರಸ್

43. ಕೊಲಂಬಿಯಾ

44. ಕೊಮೊರೊಸ್

45. ಕಾಂಗೋ ಗಣರಾಜ್ಯ

46. ​​ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

47. ಕುಕ್ ದ್ವೀಪಗಳು

48. ದಕ್ಷಿಣ ಕೊರಿಯಾ

49. ಕೋಸ್ಟರಿಕಾ

50. ಐವರಿ ಕೋಸ್ಟ್

51. ಕ್ರೊಯೇಷಿಯಾ

52. ಕ್ಯೂಬಾ

53. ಡೆನ್ಮಾರ್ಕ್

54. ಜಿಬೌಟಿ

55. ಡೊಮಿನಿಕನ್ ರಿಪಬ್ಲಿಕ್

56. ಡೊಮಿನಿಕಾ

57. ಈಜಿಪ್ಟ್

58. ಎಲ್ ಸಾಲ್ವಡಾರ್

59. ಯುನೈಟೆಡ್ ಅರಬ್ ಎಮಿರೇಟ್ಸ್

60. ಈಕ್ವೆಡಾರ್

61. ಎರಿಟ್ರಿಯಾ

62. ಸ್ಪೇನ್

63. ಎಸ್ಟೋನಿಯಾ

64. ಎಸ್ವತಿನಿ

65. ಇಥಿಯೋಪಿಯಾ

66. ಫಿಜಿ

67. ಫಿನ್​ಲ್ಯಾಂಡ್

68. ಗ್ಯಾಬೊನ್

69. ಗ್ಯಾಂಬಿಯಾ

70. ಜಾರ್ಜಿಯಾ

71. ಘಾನಾ

72. ಗ್ರೇಟ್ ಬ್ರಿಟನ್

73. ಗ್ರೆನಡಾ

74. ಗುವಾಮ್

75. ಗ್ವಾಟೆಮಾಲಾ

76. ಗಿನಿಯಾ

77. ಗಿನಿ-ಬಿಸ್ಸೌ

78. ಈಕ್ವಟೋರಿಯಲ್ ಗಿನಿಯಾ

79. ಗಯಾನಾ

80. ಹೈಟಿ

81. ಹೊಂಡುರಾಸ್

82. ಹಾಂಗ್ ಕಾಂಗ್

83. ಹಂಗೇರಿ

84. ಭಾರತ

85. ಇಂಡೋನೇಷ್ಯಾ

86. ಇರಾನ್

87. ಇರಾಕ್

88. ಐರ್ಲೆಂಡ್

89. ಐಸ್ಲ್ಯಾಂಡ್

90. ಇಸ್ರೇಲ್

91. ಇಟಲಿ

92. ಜಮೈಕಾ

93. ಜಪಾನ್

94. ಜೋರ್ಡಾನ್

95. ಕಝಾಕಿಸ್ತಾನ್

96. ಕೀನ್ಯಾ

97. ಕಿರ್ಗಿಸ್ತಾನ್

98. ಕಿರಿಬಾಟಿ

99. ಕೊಸೊವೊ

100. ಕುವೈತ್

101. ಲಾವೋಸ್

102. ಲೆಸೊಥೊ

103. ಲಾಟ್ವಿಯಾ

104. ಲೆಬನಾನ್

105. ಲೈಬೀರಿಯಾ

106. ಲಿಬಿಯಾ

107. ಲಿಚೆನ್‌ಸ್ಟೈನ್

108. ಲಿಥುವೇನಿಯಾ

109. ಲಕ್ಸೆಂಬರ್ಗ್

110. ಉತ್ತರ ಮ್ಯಾಸಿಡೋನಿಯಾ

111. ಮಡಗಾಸ್ಕರ್

112. ಮಲೇಷ್ಯಾ

113. ಮಲಾವಿ

114. ಮಾಲ್ಡೀವ್ಸ್

115. ಮಾಲಿ

116. ಮಾಲ್ಟಾ

117. ಮೊರಾಕೊ

118. ಮಾರ್ಷಲ್ ದ್ವೀಪಗಳು

119. ಮಾರಿಷಸ್

120. ಮಾರಿಟಾನಿಯಾ

121. ಮೆಕ್ಸಿಕೋ

122. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ

123. ಮೊಲ್ಡೊವಾ

124. ಮೊನಾಕೊ

125. ಮಂಗೋಲಿಯಾ

126. ಮಾಂಟೆನೆಗ್ರೊ

127. ಮೊಜಾಂಬಿಕ್

128. ಮ್ಯಾನ್ಮಾರ್

129. ನಮೀಬಿಯಾ

130. ನೌರು

131. ನೇಪಾಳ

132. ನಿಕರಾಗುವಾ

133. ನೈಜರ್

134. ನೈಜೀರಿಯಾ

135. ನಾರ್ವೆ

136. ನ್ಯೂಜಿಲೆಂಡ್

137. ಓಮನ್

138. ಉಗಾಂಡಾ

139. ಉಜ್ಬೇಕಿಸ್ತಾನ್

140. ಪಾಕಿಸ್ತಾನ

141. ಪಲಾವ್

142. ಪ್ಯಾಲೆಸ್ತೀನ್

143. ಪನಾಮ

144. ಪಪುವಾ ನ್ಯೂ ಗಿನಿಯಾ

145. ಪರಾಗ್ವೆ

146. ನೆದರ್ಲ್ಯಾಂಡ್ಸ್

147. ಪೆರು

148. ಫಿಲಿಪೈನ್ಸ್

149. ಪೋಲೆಂಡ್

150. ಪೋರ್ಟೊ ರಿಕೊ

151. ಪೋರ್ಚುಗಲ್

152. ಕತಾರ್

153. ಉತ್ತರ ಕೊರಿಯಾ

154. ರೊಮೇನಿಯಾ

155. ರುವಾಂಡಾ

156. ಸೇಂಟ್ ಕಿಟ್ಸ್ ಮತ್ತು ನೆವಿಸ್

157. ಸೇಂಟ್ ಲೂಸಿಯಾ

158. ಸ್ಯಾನ್ ಮರಿನೋ

159. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

160. ಸೊಲೊಮನ್ ದ್ವೀಪಗಳು

161. ಸಮೋವಾ

162. ಅಮೆರಿಕನ್ ಸಮೋವಾ

163. ಸಾವೊ ಟೋಮ್ ಮತ್ತು ಪ್ರಿನ್ಸಿಪಿ

164. ಸೆನೆಗಲ್

165. ಸೆರ್ಬಿಯಾ

166. ಸೀಶೆಲ್ಸ್

167. ಸಿಯೆರಾ ಲಿಯೋನ್

168. ಸಿಂಗಾಪುರ

169. ಸ್ಲೋವಾಕಿಯಾ

170. ಸ್ಲೊವೇನಿಯಾ

171. ಸೊಮಾಲಿಯಾ

172. ದಕ್ಷಿಣ ಸುಡಾನ್

173. ಸುಡಾನ್

174. ಶ್ರೀಲಂಕಾ

175. ಸ್ವೀಡನ್

176. ಸ್ವಿಟ್ಜರ್ಲೆಂಡ್

177. ಸುರಿನಾಮ್

178. ಸಿರಿಯಾ

179. ತಜಕಿಸ್ತಾನ್

180. ಚೈನೀಸ್ ತೈಪೆ

181. ಟಾಂಜಾನಿಯಾ

182. ಚಾಡ್

183. ಜೆಕ್ ಗಣರಾಜ್ಯ

184. ಥೈಲ್ಯಾಂಡ್

185. ಪೂರ್ವ ಟಿಮೋರ್

186. ಟೋಗೊ

187. ಟೊಂಗಾ

188. ಟ್ರಿನಿಡಾಡ್ ಮತ್ತು ಟೊಬಾಗೊ

189. ಟುನೀಶಿಯಾ

190. ತುರ್ಕಮೆನಿಸ್ತಾನ್

191. ಟರ್ಕಿ

192. ತುವಾಲು

193. ಉಕ್ರೇನ್

194. ಉರುಗ್ವೆ

195. ವನವಾಟು

196. ವೆನೆಜುವೆಲಾ

197. ಬ್ರಿಟಿಷ್ ವರ್ಜಿನ್ ದ್ವೀಪಗಳು

198. ವರ್ಜಿನ್ ದ್ವೀಪಗಳು

199. ವಿಯೆಟ್ನಾಂ

200. ಯೆಮೆನ್

201. ಜಾಂಬಿಯಾ

202. ಜಿಂಬಾಬ್ವೆ

203. ಆಸ್ಟ್ರೇಲಿಯಾ (2032 ಒಲಿಂಪಿಕ್ಸ್ ಆತಿಥೇಯ)

204. ಯುನೈಟೆಡ್ ಸ್ಟೇಟ್ಸ್ (2028 ಒಲಿಂಪಿಕ್ಸ್ ಆತಿಥೇಯ)

205. ಫ್ರಾನ್ಸ್ (2024 ಒಲಿಂಪಿಕ್ಸ್ ಆತಿಥೇಯ)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.