ಪ್ರೋ ಕಬಡ್ಡಿಗೆ ಸ್ಟಾರ್ ಪ್ರಚಾರಕರು; ಅಖಾಡಕ್ಕೆ ಧುಮುಕಿದ ಬಾಲಕೃಷ್ಣ, ಸುದೀಪ್, ಟೈಗರ್​ ಶ್ರಾಫ್
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೋ ಕಬಡ್ಡಿಗೆ ಸ್ಟಾರ್ ಪ್ರಚಾರಕರು; ಅಖಾಡಕ್ಕೆ ಧುಮುಕಿದ ಬಾಲಕೃಷ್ಣ, ಸುದೀಪ್, ಟೈಗರ್​ ಶ್ರಾಫ್

ಪ್ರೋ ಕಬಡ್ಡಿಗೆ ಸ್ಟಾರ್ ಪ್ರಚಾರಕರು; ಅಖಾಡಕ್ಕೆ ಧುಮುಕಿದ ಬಾಲಕೃಷ್ಣ, ಸುದೀಪ್, ಟೈಗರ್​ ಶ್ರಾಫ್

Pro Kabaddi League 2023: ಭಾರತದ ಪ್ರತಿ ಉಸಿರಲ್ಲೂ ಕಬಡ್ಡಿಎಂಬ ಅಭಿಯಾನಕ್ಕೆ ಕಿಚ್ಚ ಸುದೀಪ್, ನಂದಮೂರಿ ಬಾಲಕೃಷ್ಣ, ಟೈಗರ್​ ಶ್ರಾಫ್ ಸಾಥ್ ನೀಡಿರುವುದು ವಿಶೇಷ.

ಕಿಚ್ಚ ಸುದೀಪ್, ನಂದಮೂರಿ ಬಾಲಕೃಷ್ಣ, ಟೈಗರ್​ ಶ್ರಾಫ್.
ಕಿಚ್ಚ ಸುದೀಪ್, ನಂದಮೂರಿ ಬಾಲಕೃಷ್ಣ, ಟೈಗರ್​ ಶ್ರಾಫ್.

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ (Pro Kabaddi League 2023) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಲೀಗ್​​​ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಇದೀಗ 10ನೇ ಆವೃತ್ತಿಯನ್ನು ಇನ್ನಷ್ಟು ಅವಿಸ್ಮರಣೀಯಗೊಳಿಸಲು ಮಹತ್ವದ ಹೆಜ್ಜೆಯಿಟ್ಟಿದೆ. 'ಭಾರತದ ಪ್ರತಿ ಉಸಿರಲ್ಲೂ ಕಬಡ್ಡಿ' ಎಂಬ ಶೀರ್ಷಿಕೆಯೊಂದಿಗೆ ಅಭಿಯಾನ ಆರಂಭಿಸಿದೆ. ಕಬಡ್ಡಿ ಲೀಗ್ ಟೂರ್ನಿಯು ಡಿಸೆಂಬರ್ 2ರಿಂದ ಕಿಕ್​​ಸ್ಟಾರ್ಟ್​​ ಪಡೆದುಕೊಳ್ಳಲಿದೆ. ಪ್ರತಿದಿನ ರಾತ್ರಿ 8 ಗಂಟೆಯಿಂದ ಪಂದ್ಯಗಳು ಪ್ರಾರಂಭವಾಗಲಿವೆ.

ಭಾರತದ ಪ್ರತಿ ಉಸಿರಲ್ಲೂ ಕಬಡ್ಡಿಎಂಬ ಶೀರ್ಷಿಕೆಯನ್ನು ಅಭಿಮಾನಿಗಳಿಗಾಗಿಯೇ ರೂಪಿಸಲಾಗಿದೆ. ಈ ಅಭಿಯಾನಕ್ಕೆ ಬಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನ ಮೂವರು ಸ್ಟಾರ್​ ನಟರು ಸಾಥ್ ನೀಡಿರುವುದು ವಿಶೇಷ. ಇದು ದೇಶಾದ್ಯಂತ ಹೆಚ್ಚಿನ ಮಟ್ಟದಲ್ಲಿ ಉತ್ಸಾಹ ಹುಟ್ಟು ಹಾಕಿದೆ. ತೆಲುಗಿನ ನಂದಮೂರಿ ಬಾಲಕೃಷ್ಣ, ಕನ್ನಡದ ಕಿಚ್ಚ ಸುದೀಪ್ ಮತ್ತು ಬಾಲಿವುಡ್​ನ ಟೈಗರ್ ಶ್ರಾಫ್ ಈ ಕ್ಯಾಂಪೇನ್​ನ ಭಾಗವಾಗಿದ್ದಾರೆ. ಈ ಬಗ್ಗೆ ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

10ನೇ ಸೀಸನ್‌ ಕುರಿತು ಮಾತನಾಡಿರುವ ಕನ್ನಡದ ನಟ ಕಿಚ್ಚ ಸುದೀಪ್, ಕಬ್ಬಡಿ ಸೀಸನ್​ 10ರ ಪ್ರಯಾಣದ ಭಾಗವಾಗಲು ನಾನು ಕೂಡ ರೋಮಾಂಚನಗೊಂಡಿದ್ದೇನೆ. 'ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ'ಯನ್ನು ಜೀವಂತವಾಗಿಡಲು ಉತ್ಸುಕನಾಗಿದ್ದೇನೆ. ಈ ಭಾವನೆಯು ಕನ್ನಡಿಗರ ಸಮುದಾಯದ ಅಚಲ ಬೆಂಬಲ ಮತ್ತು ಅದಮ್ಯ ಚೇತನಕ್ಕೆ ಗೌರವ ಸಲ್ಲಿಸುತ್ತದೆ ಎಂದು ಹೇಳಿದರು.

ಈ ಕುರಿತು ಮಾತನಾಡಿದ ಟಾಲಿವುಡ್ ಹಿರಿಯ ನಟ ನಂದಮೂರಿ ಬಾಲಕೃಷ್ಣ, ಕಬಡ್ಡಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಅಖಾಡಕ್ಕೆ ಜೀವ ತುಂಬಿ ಪ್ರತಿ ಉಸಿರು ಕಬಡ್ಡಿಯ ಸಾರವನ್ನು ಅನುರಣಿಸುವಂತೆ ಒಂದಾಗೋಣ, ಈ ಭಾವನೆಯು ಕಬಡ್ಡಿ ಕ್ರೀಡಾಪಟುಗಳಿಗೆ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪ್ರತಿಧ್ವನಿಸುತ್ತದೆ ಎಂದಿದ್ದಾರೆ.

4 ವರ್ಷಗಳ ವಿರಾಮದ ನಂತರ ಕಬಡ್ಡಿ ಲೀಗ್​​ನ ಸೀಸನ್ 10 ಎಲ್ಲಾ 12 ಫ್ರಾಂಚೈಸಿಗಳ ತವರು ನಗರಗಳಿಗೆ ಹಿಂತಿರುಗುತ್ತಿದೆ. ಹಿಂದೆಂದಿಗಿಂತಲೂ ಉತ್ಸಾಹಭರಿತದಿಂದ ಕೂಡಿರುತದೆ. ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಡಿಸೆಂಬರ್ 2ರಿಂದ ಕಬಡ್ಡಿ ಲೀಗ್​ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಲಿದೆ.

ಪ್ರತಿ ನಗರದ ವೇಳಾಪಟ್ಟಿ

ಡಿಸೆಂಬರ್ 2ರಿಂದ 7ರವರೆಗೆ ಅಹಮದಾಬಾದ್‌​ನಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ಡಿಸೆಂಬರ್ 8ರಿಂದ 13ರವರೆಗೆ

ಪುಣೆಯಲ್ಲಿ ಡಿಸೆಂಬರ್ 15ರಿಂದ 20ರವರೆಗೆ

ಚೆನ್ನೈನಲ್ಲಿ ಡಿಸೆಂಬರ್ 22ರಿಂದ 27ರವರೆಗೆ

ನೋಯ್ಡಾದಲ್ಲಿ ಡಿಸೆಂಬರ್ 29ರಿಂದ ಜನವರಿ 3ರವರೆಗೆ

ಮುಂಬೈನಲ್ಲಿ ಜನವರಿ 5ರಿಂದ 10 ರವರೆಗೆ

ಜೈಪುರದಲ್ಲಿ ಜನವರಿ 12ರಿಂದ 17 ರವರೆಗೆ

ಹೈದರಾಬಾದ್‌ನಲ್ಲಿ ಜನವರಿ 19ರಿಂದ 24 ರವರೆಗೆ

ಪಾಟ್ನಾದಲ್ಲಿ ಜನವರಿ 26ರಿಂದ 31ರವರೆಗೆ

ದೆಹಲಿಯಲ್ಲಿ ಫೆಬ್ರವರಿ 2ರಿಂದ 7ರವರೆಗೆ

ಕೋಲ್ಕತ್ತಾದಲ್ಲಿ ಫೆಬ್ರವರಿ 9ರಿಂದ 14ರವರೆಗೆ

ಪಂಚಕುಲದಲ್ಲಿ ಫೆಬ್ರವರಿ 16ರಿಂದ 21ರವರೆಗೆ ನಡೆಯಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.