ಕನ್ನಡ ಸುದ್ದಿ  /  Sports  /  Want To Get More Out Of Him At The Delhi Capitals This Year Ricky Ponting Sets Plans For Axar Patel After Recent All Round Show

IPL 2023: ಅಕ್ಷರ್​ ಪಟೇಲ್​ರಿಂದ ಈ ಬಾರಿ ಹೆಚ್ಚಿನದನ್ನೇ ನಿರೀಕ್ಷಿಸುತ್ತಿದ್ದೇವೆ: ರಿಕಿ ಪಾಂಟಿಂಗ್​ ಕೊಟ್ಟ ಸುಳಿವೇನು?

IPL 2023: ಪಂತ್ ಅಲಭ್ಯತೆಯಲ್ಲಿ ಡೇವಿಡ್​ ವಾರ್ನರ್, ಡೆಲ್ಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಈಗಾಗಲೇ ಫ್ರಾಂಚೈಸಿ ವಾರ್ನರ್​ ಜೊತೆ ಮಾತುಕತೆ ನಡಸಿದ್ದು, ವಾರ್ನರ್ ನಾಯಕರಾಗಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ.

ಡೇವಿಡ್​ ವಾರ್ನರ್​ ಮತ್ತು ಅಕ್ಷರ್ ಪಟೇಲ್​
ಡೇವಿಡ್​ ವಾರ್ನರ್​ ಮತ್ತು ಅಕ್ಷರ್ ಪಟೇಲ್​ (Twitter)

ಟೀಮ್​ ಇಂಡಿಯಾ ವಿಕೆಟ್​ ಕೀಪರ್​​​​ ರಿಷಭ್ ಪಂತ್ (Rishabh Pant)​ ಅಪಘಾತದಿಂದಾಗಿ 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (Indian Premier League) ಅನ್ನು​ ಮಿಸ್​​ ಮಾಡಿಕೊಳ್ಳಲಿದ್ದಾರೆ. ಇದರಿಂದ ಆಸ್ಟ್ರೇಲಿಯಾದ ಈ ಆಟಗಾರನಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್​​ ಟೀಮ್​ ಮ್ಯಾನೇಜ್​ಮೆಂಟ್​ ಮತ್ತೊಬ್ಬ ಆಟಗಾರನಿಗೆ ಮಣೆ ಹಾಕಲು ಮುಂದಾಯಿತಾ ಎಂಬ ಪ್ರಶ್ನೆ ಎದ್ದಿದೆ.

ಭೀಕರ ಅಪಘಾತದಿಂದ ಪಂತ್​ ತೀವ್ರ ಇಂಜುರಿಗೊಳಗಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೆದು, ವಿಶ್ರಾಂತಿಯಲ್ಲಿದ್ದಾರೆ. ಕನಿಷ್ಠ 1 ವರ್ಷ ಪಂತ್​ ಬ್ಯಾಟ್​ ಹಿಡಿಯಲು ಸಾಧ್ಯವಿಲ್ಲ. ಮತ್ತೊಂದೆಡೆ IPL ಸೀಸನ್ 16ರಿಂದಲೂ ಪಂತ್​ ಹೊರಗುಳಿಯಲಿದ್ದಾರೆ. ಇದು ಡೆಲ್ಲಿ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ನಾಯಕನೇ ಹಾಸಿಗೆ ಹಿಡಿದಿರುವ ಕಾರಣ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಆಗ ಫ್ರಾಂಚೈಸಿ ಮತ್ತು ಟೀಮ್ ಮ್ಯಾನೇಜ್​ಮೆಂಟ್​ಗೆ ನೆನಪಾಗಿದ್ದೇ ಚಾಂಪಿಯನ್​ ನಾಯಕ ಡೇವಿಡ್​ ವಾರ್ನರ್​.

ಪಂತ್ ಅಲಭ್ಯತೆಯಲ್ಲಿ ಡೇವಿಡ್​ ವಾರ್ನರ್, ಡೆಲ್ಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಈಗಾಗಲೇ ಫ್ರಾಂಚೈಸಿ ವಾರ್ನರ್​ ಜೊತೆ ಮಾತುಕತೆ ನಡಸಿದ್ದು, ವಾರ್ನರ್ ನಾಯಕರಾಗಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ. ಆದರೆ ಈಗ ಟೀಮ್​ ಮ್ಯಾನೇಜ್​ಮೆಂಟ್​ ವರಸೆ ಬದಲಿಸುತ್ತಿದೆಯಾ?ತಂಡದ ಅನಾನುಭವಿ ಅಕ್ಷರ್​ ಪಟೇಲ್​ಗೆ ಪಟ್ಟ ಕಟ್ಟಲು ಚಿಂತನೆ ನಡೆಸುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಕಾರಣ ಕೋಚ್​ ರಿಕಿ ಪಾಂಟಿಂಗ್​ ನೀಡಿರುವ ಅಂತಹದ್ದು.

ನಾನು ಅಕ್ಷರ ಅವರನ್ನು ಬಹಳ ಸಮಯದಿಂದ ತಿಳಿದಿದ್ದೇನೆ ಮತ್ತು ನಾನು ಮೊದಲು ಮುಂಬೈಗೆ ಹೋದಾಗ ಅವನು ಚಿಕ್ಕ ಹುಡುಗನಾಗಿದ್ದ. ಕಳೆದೆರಡು ವರ್ಷಗಳ ಹೊರತಾಗಿ ಅವರು ನಿಜವಾಗಿಯೂ IPL ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಿರ್ದಿಷ್ಟ ಪ್ರಮಾಣದ ಬ್ಯಾಟಿಂಗ್ ಕೌಶಲವಿದೆ ಎಂದು ನನಗೆ ತಿಳಿದಿದೆ ಎಂದು ಪಾಂಟಿಂಗ್ ಐಸಿಸಿ ರಿವ್ಯೂಗೆ ಹೇಳಿದ್ದಾರೆ.

ಹಾಗೆಯೇ ಮಾತು ಮುಂದುವರೆಸಿದ ಪಾಂಟಿಂಗ್​, ನಾವು ಅವರೊಂದಿಗೆ ಕೆಲವು ಸಣ್ಣ ತಂತ್ರ ಬದಲಾವಣೆಗಳನ್ನು ಮಾಡಿದ್ದೇವೆ. ಕವರ್ ಡ್ರೈವಿಂಗ್ ಮತ್ತು ಕಟಿಂಗ್ ಸೇರಿದಂತೆ ಬ್ಯಾಟಿಂಗ್​ ಟೆಕ್ನಿಕ್​ನಲ್ಲಿ ಬದಲಾವಣೆ ಮಾಡಿದ್ದೇವೆ. ನಾನು ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಅವರಿಂದ ಸ್ವಲ್ಪ ಹೆಚ್ಚಿನದನ್ನು ಪಡೆಯಲು ಬಯಸುತ್ತೇನೆ. ಜವಾಬ್ದಾರಿಯೂ ಹೆಚ್ಚಿನದಾಗಿರಲಿದೆ. ಜವಾಬ್ದಾರಿ ಏನೆಂಬುದು ಈಗಾಗಲೇ ಖಚಿತವಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ಕ್ಯಾಪ್ಟನ್ಸಿ ಬದಲಾವಣೆಗೆ ಸಂಬಂಧಿಸಿದ್ದಾ ಅಥವಾ ಬ್ಯಾಟಿಂಗ್​ ಕ್ರಮಾಂಕ ಬದಲಾವಣೆಗೆ ಸಂಬಂಧಿಸಿದ್ದಾ ಎಂಬ ಗೊಂದಲ ಸೃಷ್ಟಿಸಿದೆ.

ಈವರೆಗೆ IPLನಲ್ಲಿ ಅಕ್ಷರ್​ 7.25ರ ಎಕಾನಮಿಯಲ್ಲಿ 101 ವಿಕೆಟ್‌ ಪಡೆದಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟ್​​ ಬೀಸುವ ಅಕ್ಷರ್​ 122 ಪಂದ್ಯಗಳಲ್ಲಿ 1135 ರನ್ ಸಹ ಗಳಿಸಿದ್ದಾರೆ. 2022ರ ಐಪಿಎಲ್​ನಲ್ಲಿ 13 ಪಂದ್ಯಗಳಲ್ಲಿ 182 ರನ್ ಗಳಿಸಿದರು. 6 ವಿಕೆಟ್​​ ಪಡೆದಿದ್ದರು.

ಆದರೆ ರಿಕಿ ಪಾಂಟಿಂಗ್​ ನೀಡಿರುವ ಸುಳಿವು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಚಾಂಪಿಯನ್​ ನಾಯಕನಿಗೆ ಬಿಟ್ಟು, ಅನಾನುಭವಿ ಆಟಗಾರನಿಗೆ ಅವಕಾಶ ನೀಡಲು ಮುಂದಾರುವುದು ಎಷ್ಟು ಸರಿ ಎಂದು ನೆಟಿಜನ್ಸ್​, ಮಾಜಿ ಕ್ರಿಕೆಟರ್ಸ್​ ಪ್ರಶ್ನಿಸಿದ್ದಾರೆ. IPL​ನಲ್ಲಿ ವಾರ್ನರ್​ ಈ ಹಿಂದಿನ ಕೆಲ ಸೀಸನ್​ಗಳಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕತ್ವ ವಹಿಸಿದ್ದರು. ವಾರ್ನರ್​ ನಾಯಕತ್ವದಲ್ಲಿ SRH 2016ರಲ್ಲಿ IPL​ ಕಪ್​ ಎತ್ತಿಹಿಡಿದಿತ್ತು. 2018ರಲ್ಲಿ ಸನ್​ರೈಸರ್ಸ್​ ತಂಡವನ್ನು ಫೈನಲ್​ವರೆಗೂ ಕೊಂಡೊಯ್ದಿತ್ತು.

ಕಪ್​ ಗೆದ್ದು ಕೊಡದೇ ಹೋದರೂ ರಿಷಭ್ ಪಂತ್ ನಾಯಕತ್ವದಲ್ಲಿ ಕಳೆದೆರೆಡು ಸೀಸನ್​ಗಳಲ್ಲಿ ಡೆಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಒಂದು ಅಕ್ಷರ್​ ಪಟೇಲ್​​ಗೆ ನಾಯಕತ್ವದ ಜವಬ್ದಾರಿ ಹೆಗಲೇರಿದರೆ ತಂಡಕ್ಕೆ ಚೊಚ್ಚಲ ಟ್ರೋಫಿ ತಂದುಕೊಡ್ತಾರಾ.? ಅನ್ನೋದನ್ನ ಕಾದು ನೋಡಬೇಕಿದೆ.