ಮೂರು ಚಿನ್ನ, 3 ಬೆಳ್ಳಿ, 4 ಕಂಚು ಸಾಧನೆ; ಹಾಕಿ ಸೆಮಿಫೈನಲ್​​ಗೂ ಮುನ್ನ​ ಬ್ಯಾನ್ ಆದ ಭಾರತದ ಅಮಿತ್ ರೋಹಿದಾಸ್ ಯಾರು?
ಕನ್ನಡ ಸುದ್ದಿ  /  ಕ್ರೀಡೆ  /  ಮೂರು ಚಿನ್ನ, 3 ಬೆಳ್ಳಿ, 4 ಕಂಚು ಸಾಧನೆ; ಹಾಕಿ ಸೆಮಿಫೈನಲ್​​ಗೂ ಮುನ್ನ​ ಬ್ಯಾನ್ ಆದ ಭಾರತದ ಅಮಿತ್ ರೋಹಿದಾಸ್ ಯಾರು?

ಮೂರು ಚಿನ್ನ, 3 ಬೆಳ್ಳಿ, 4 ಕಂಚು ಸಾಧನೆ; ಹಾಕಿ ಸೆಮಿಫೈನಲ್​​ಗೂ ಮುನ್ನ​ ಬ್ಯಾನ್ ಆದ ಭಾರತದ ಅಮಿತ್ ರೋಹಿದಾಸ್ ಯಾರು?

Who is Amit Rohidas: ಪ್ಯಾರಿಸ್ ಒಲಿಂಪಿಕ್ಸ್​ನ ಕ್ವಾರ್ಟರ್​​ಫೈನಲ್​​ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ರೆಡ್​ ಕಾರ್ಡ್​ ಪಡೆದು ಸೆಮಿಫೈನಲ್​​ ಪಂದ್ಯಕ್ಕೆ ನಿಷೇಧಕ್ಕೆ ಒಳಗಾಗಿರುವ ಅಮಿತ್ ರೋಹಿದಾಸ್ ಯಾರು? ಇಲ್ಲಿದೆ ವಿವರ.

ಹಾಕಿ ಸೆಮಿಫೈನಲ್​​ಗೂ ಮುನ್ನ​ ಬ್ಯಾನ್ ಆಗಿರುವ ಭಾರತದ ಅಮಿತ್ ರೋಹಿದಾಸ್
ಹಾಕಿ ಸೆಮಿಫೈನಲ್​​ಗೂ ಮುನ್ನ​ ಬ್ಯಾನ್ ಆಗಿರುವ ಭಾರತದ ಅಮಿತ್ ರೋಹಿದಾಸ್

2024ರ ಪ್ಯಾರಿಸ್ ಒಲಿಂಪಿಕ್ಸ್​​ ಕ್ರೀಡಾಕೂಟದ ಹಾಕಿ ಸೆಮಿಫೈನಲ್​​ನಲ್ಲಿ ಇಂದು (ಆಗಸ್ಟ್​ 6)​ ಭಾರತ ಮತ್ತು ಜರ್ಮನಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದು 1980ರ ನಂತರ ಅಂದರೆ 44 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಲು ಭಾರತ ತಂಡ ತವಕಿಸುತ್ತಿದೆ. ಆದರೆ ಸೆಮೀಸ್​ಗೂ ಮುನ್ನ ಟೀಮ್ ಇಂಡಿಯಾ ಆಘಾತಕ್ಕೆ ಒಳಗಾಗಿದ್ದು, ಡಿಫೆಂಡರ್​​ ಅಮಿತ್‌ ರೋಹಿದಾಸ್‌ ಅವರಿಗೆ ಒಂದು ಪಂದ್ಯ ನಿಷೇಧ ಹೇರಲಾಗಿದೆ.

ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಎದುರು ಅಮಿತ್​ಗೆ ರೆಡ್​ಕಾರ್ಡ್ ನೀಡಲಾಗಿತ್ತು. ಬ್ರಿಟನ್‌ ಫಾರ್ವರ್ಡ್‌ ಆಟಗಾರ ವಿಲ್‌ ಕಾಲ್ನಾನ್‌ ಮುಖದ ಸಮೀಪ ಹಾಕಿ ಸ್ಟಿಕ್‌ ಬೀಸಿದ್ದಾರೆ ಎಂದು ಅಮಿತ್​ಗೆ ರೆಡ್​ಕಾರ್ಡ್ ನೀಡಲಾಗಿತ್ತು. ಮೈದಾನದ​ ಅಂಪೈರ್ ಈ​ ತೀರ್ಪನ್ನು ಕೊಡದೇ ಇದ್ದರೂ ವಿಡಿಯೋ ರೆಫರಲ್​ನಲ್ಲಿ ತಪ್ಪು ಬೆಳಕಿಗೆ ಬಂದ್ದದ್ದು ಕಂಡು ಬಂದಿದೆ. ಹಾಗಾಗಿ ರೆಡ್​ಕಾರ್ಡ್ ನೀಡಲಾಗಿದೆ.

ಹೀಗಾಗಿ, ಸೆಮಿಫೈನಲ್​ ಪಂದ್ಯದಲ್ಲಿ ಬ್ರಿಟನ್ ವಿರುದ್ಧದ ಪಂದ್ಯಕ್ಕೆ ಭಾರತದ 16 ಆಟಗಾರರ ಬದಲಿಗೆ 15 ಮಂದಿಯಷ್ಟೇ ಕಣಕ್ಕೆ ಇಳಿಯಲಿದ್ದಾರೆ. ಪಂದ್ಯದ ನಂತರ ಅಂಪೈರ್ ನಿರ್ಧಾರ ಪ್ರಶ್ನಿಸಿ ಇಂಟರ್​​ನ್ಯಾಷನಲ್ ಹಾಕಿ ಫೆಡರೇಷನ್​ಗೆ (FIH) ಭಾರತ ಹಾಕಿ ತಂಡ ದೂರು ಸಲ್ಲಿಸಿದೆ. ಆದರೆ, ಎಫ್​ಐಹೆಚ್​, ಭಾರತದ ಮನವಿಯನ್ನು ತಿರಸ್ಕರಿಸಿದೆ. ಹೀಗಾಗಿ, 15 ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಿರುವ ಅಮಿತ್ ಯಾರು? ಹಾಕಿಯಲ್ಲಿ ಅವರ ಸಾಧನೆ ಹೇಗಿದೆ? ಇಲ್ಲಿದೆ ವಿವರ. 2020ರ ಟೊಕಿಯೊ ಒಲಿಂಪಿಕ್ಸ್​​ನ ಹಾಕಿಯಲ್ಲಿ ಕಂಚು ಗೆದ್ದ ಭಾರತ ತಂಡದ ಭಾಗವಾಗಿದ್ದ ಅಮಿತ್ ಡಿಫೆಂಡರ್​ ಆಗಿದ್ದಾರೆ. ಉಪನಾಯಕನಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 2020ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಮತ್ತು 2022ರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.

ರೋಹಿದಾಸ್ ಅವರು 10 ಮೇ 1993ರಂದು ಸುಂದರ್‌ಗಢ್ ಜಿಲ್ಲೆಯ ಸೌನಾಮಾರಾ ಗ್ರಾಮದಲ್ಲಿ ಜನಿಸಿದರು. ತಮ್ಮ ಹಳ್ಳಿಯಲ್ಲಿ ಹಾಕಿ ಆಡಲು ಪ್ರಾರಂಭಿಸಿದ್ದ ರೋಹಿದಾಸ್​, 2004ರಲ್ಲಿ ರೂರ್ಕೆಲಾದ ಪನ್ಪೋಶ್ ಸ್ಪೋರ್ಟ್ಸ್ ಹಾಸ್ಟೆಲ್​ಗೆ ಸೇರಿದ್ದಾರೆ. 2009ರಲ್ಲಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆಯಾದರು. 2013ರ ಇಪೋದಲ್ಲಿ ನಡೆದ ಏಷ್ಯಾಕಪ್‌ ಟೂರ್ನಿಗೆ ಹಿರಿಯ ತಂಡಕ್ಕೆ ಅಮಿತ್​ ಆಯ್ಕೆಯಾದರು.

ಆ ಟೂರ್ನಿಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತು. ಆದರೆ ಆ ನಂತರ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ದೀರ್ಘಕಾಲದ ನಂತರ 2017ರಲ್ಲಿ ಭಾರತ ತಂಡಕ್ಕೆ ಪುನರಾಗಮನ ಮಾಡಿದರು. ಒಡಿಶಾದಿಂದ ಒಲಿಂಪಿಕ್ಸ್​​ ಆಡಲು ಭಾರತಕ್ಕೆ ಆಯ್ಕೆಯಾದ 10ನೇ ಅಂತಾರಾಷ್ಟ್ರೀಯ ಆಟಗಾರ. ಮತ್ತು 6ನೇ ಪುರುಷ ಹಾಕಿ ಆಟಗಾರ. ಅಲ್ಲದೆ, ಇವರು ಬುಡಕಟ್ಟು ಜನಾಂಗಕ್ಕೆ ಸೇರದ ಮೊದಲ ಹಾಕಿ ಒಲಿಂಪಿಯನ್‌.

ಅಮಿತ್ ಪದಕಗಳ ಪಟ್ಟಿ ಇಲ್ಲಿದೆ.

ಒಲಿಂಪಿಕ್ಸ್​

ಟೊಕಿಯೋ ಒಲಿಂಪಿಕ್ಸ್ 2020 - ಕಂಚಿನ ಪದಕ

ಏಷ್ಯನ್ ಗೇಮ್ಸ್

ಹ್ಯಾಂಗ್​ಝೌ-2022 - ಚಿನ್ನದ ಪದಕ

ಜಕಾರ್ತಾ-2018 - ಕಂಚಿನ ಪದಕ

ಏಷ್ಯಾ ಕಪ್

ಢಾಕಾ 2017 - ಚಿನ್ನದ ಪದಕ

ಇಪೋ 2013 - ಬೆಳ್ಳಿ ಪದಕ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ

ಚೆನ್ನೈ 2023 - ಚಿನ್ನದ ಪದಕ

ಚಾಂಪಿಯನ್ಸ್ ಟ್ರೋಫಿ

ಬ್ರೆಡಾ 2018 - ಬೆಳ್ಳಿ ಪದಕ

ಕಾಮನ್​ವೆಲ್ತ್ ಗೇಮ್ಸ್

ಬರ್ಮಿಂಗ್​ಹ್ಯಾಮ್​ 2022 - ಬೆಳ್ಳಿ ಪದಕ

ಹಾಕಿ ವಿಶ್ವ ಲೀಗ್

ಭುವನೇಶ್ವರ 2016-17 - ಕಂಚಿನ ಪದಕ

ಜೂನಿಯರ್ ಏಷ್ಯಾ ಕಪ್

ಮಲಾಕ್ಕಾ 2012 - ಕಂಚಿನ ಪದಕ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.