WWE: ಡಬ್ಲ್ಯೂಡಬ್ಲ್ಯೂಇ ಮನಿ ಇನ್ ಬ್ಯಾಂಕ್ ಪೈಪೋಟಿ ವೇಳೆ ರಸ್ಲರ್ಗೆ ಗಾಯ; ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಟ್ರಿಪಲ್ ಎಚ್
WWE Money in the Bank: ಗಾಯಕ್ಕೆ ತುತ್ತಾದ ಕುಸ್ತಿಪಟುವಿನ ಹೆಸರನ್ನು ಟ್ರಿಪಲ್ ಎಚ್ ಬಹಿರಂಗಪಡಿಸಿಲ್ಲ. ಬ್ಯಾಕ್ಸ್ಟೇಜ್ ಪ್ರದೇಶಕ್ಕೆ ನಡೆದುಕೊಂಡು ಹೋಗುವಾಗ ಸೂಪರ್ಸ್ಟಾರ್ ಗಾಯಗೊಂಡಿದ್ದಾರೆ ಎಂದು ಟ್ರಿಪಲ್ ಎಚ್ ತಿಳಿಸಿದ್ದಾರೆ.
ಡಬ್ಲ್ಯೂಡಬ್ಲ್ಯೂಇ (World Wrestling Entertainment) ರಸ್ಲಿಂಗ್ ಅನ್ನು ಜಗತ್ತಿನ ಹಲವು ದೇಶಗಳ ಅಭಿಮಾನಿಗಳು ವೀಕ್ಷಿಸುತ್ತಾರೆ. ಡಬ್ಲ್ಯೂಡಬ್ಲ್ಯೂಇ (WWE) ನಡೆಸುವ ಮನರಂಜನಾ ಸ್ಪರ್ಧೆಯನ್ನು ಭಾರತದಲ್ಲಿಯೂ ನಿರಂತರವಾಗಿ ವೀಕ್ಷಿಸುವ ಅಭಿಮಾನಿಗಳ ಬಳಗವಿದೆ. ಇದರಲ್ಲಿರುವ ಘಟಾನುಘಟಿ ಕುಸ್ತಿಪಟುಗಳಿಗೆ ಅಭಿಮಾನಿಗಳು ಕೂಡಾ ಇದ್ದಾರೆ. ಇದೀಗ ಡಬ್ಲ್ಯೂಡಬ್ಲ್ಯೂಇಯಲ್ಲಿ ರಸ್ಲಿಂಗ್ ಕರಾಮತ್ತು ಪ್ರದರ್ಶಿಸುವ ಒಬ್ಬ ರಸ್ಲರ್ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಆದ್ರೆ ಇದು ರೀಲ್ ಅಲ್ಲ ರಿಯಲ್.
2023ರ ಡಬ್ಲ್ಯೂಡಬ್ಲ್ಯೂಇ ಮನಿ ಇನ್ ದ ಬ್ಯಾಂಕ್ (WWE Money in the Bank) ಕಳೆದ ಶನಿವಾರ ರಾತ್ರಿ ಲಂಡನ್ನ ಇಂಗ್ಲೆಂಡ್ನಲ್ಲಿ ಮುಕ್ತಾಯವಾಯಿತು. ಈ ಸಂಭ್ರಮಾಚರಣೆ ಮುಕ್ತಾಯದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ WWEನ ಚೀಫ್ ಕಂಟೆಂಟ್ ಆಫೀಸರ್ ಹಾಗೂ ಮಾಜಿ ಕುಸ್ತಿಪಟು ಟ್ರಿಪಲ್ ಹೆಚ್ (Triple H), ಶನಿವಾರ ನಡೆದ ಪ್ರೀಮಿಯಂ ಈವೆಂಟ್ನಲ್ಲಿ WWE ಸೂಪರ್ಸ್ಟಾರ್ ಒಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ.
ಗಾಯಕ್ಕೆ ತುತ್ತಾದ ಕುಸ್ತಿಪಟುವಿನ ಹೆಸರನ್ನು ಟ್ರಿಪಲ್ ಎಚ್ ಬಹಿರಂಗಪಡಿಸಿಲ್ಲ. ಬ್ಯಾಕ್ಸ್ಟೇಜ್ ಪ್ರದೇಶಕ್ಕೆ ನಡೆದುಕೊಂಡು ಹೋಗುವಾಗ ಸೂಪರ್ಸ್ಟಾರ್ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ಕುಸ್ತಿಪಟುವಿಗೆ ಮುಜುಗರವಾಗುವುದನ್ನು ತಪ್ಪಿಸಲು ಅವರ ಹೆಸರು ಬಹಿರಂಗಪಡಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
“ಇಂದು(ಶನಿವಾರ) ರಾತ್ರಿ ಒಬ್ಬರಿಗೆ ಮಾತ್ರ ಗಾಯವಾಗಿದೆ. ಅವರು ಯಾರೆಂದು ಹೇಳಲು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಅವರಿಗೆ ಮುಜುಗರವನ್ನುಂಟುಮಾಡಲು ನಾನು ಬಯಸುವುದಿಲ್ಲ. ಕುಸ್ತಿ ಮುಗಿಸಿ ಕಣದಿಂದ ಹಿಂತಿರುಗುತ್ತಿದ್ದಾಗ ಬ್ಯಾಕ್ ಸ್ಟೇಜ್ ಪ್ರದೇಶದಲ್ಲಿ ಒಬ್ಬರಿಗೆ ಮಾತ್ರ ಗಾಯವಾಗಿದೆ. ಹೆಚ್ಚೇನೂ ಗಂಭೀರ ಇಲ್ಲ. ಎಡವಿದಂತಾಗಿ ಪಾದಕ್ಕೆ ಗಾಯವಾಗಿದೆ. ಉಳಿದಂತೆ ಎಲ್ಲರೂ ಆರೋಗ್ಯವಾಗಿದ್ದಾರೆ” ಎಂದು ಟ್ರಿಪಲ್ ಎಚ್ ಹೇಳಿದ್ದಾರೆ.
ಶನಿವಾರದಂದು ನಡೆದ ಪ್ರೀಮಿಯಂ ಈವೆಂಟ್ ಅನಿರೀಕ್ಷಿತ ಪ್ರದರ್ಶನ ಹಾಗೂ ಫಲಿತಾಂಶಕ್ಕೆ ಸಾಕ್ಷಿಯಾಯ್ತು. ಈ ಫಲಿತಾಂಶದಿಂದ ಅಭಿಮಾನಿಗಳು ಕೂಡಾ ದಿಗ್ಭ್ರಮೆಗೊಂಡರು. ಕಳೆದ ಮೂರೂವರೆ ವರ್ಷಗಳಲ್ಲಿ ಯುನಿವರ್ಸಲ್ ಚಾಂಪಿಯನ್ ಆಗಿ ಗುರುತಿಸಿಕೊಂಡಿದ್ದ ರೋಮನ್ ರೀನ್ಸ್ ಅವರನ್ನು ಮೊದಲ ಬಾರಿಗೆ ಜೆಯ್ ಉಸೊ ಅವರು ಹೊಡೆದುರುಳಿಸಿದರು. ಹೀಗಾಗಿ ಬ್ಲಡ್ಲೈನ್ ಸಿವಿಲ್ ವಾರ್ ಅನ್ನು ಗೆದ್ದ ದಿ ಯುಸೋಸ್ ವಿರುದ್ಧ ರೀನ್ಸ್ ಮತ್ತು ಸೊಲೊ ಸಿಕೋವಾ ಸೋತರು. ಇದು ಪ್ರಬಲ ಕುಸ್ತಿಪಟು ರೀನ್ಸ್ಗೆ ಇದು ದೊಡ್ಡ ಮುಖಭಂಗ ಎಂದು ಹೇಳಲಾಗಿದೆ.
2023ರ ಮನಿ ಇನ್ ದಿ ಬ್ಯಾಂಕಿನಲ್ಲಿ ಮೂರು ಟೈಟಲ್ಗಳಿಗೆ ಪೈಪೋಟಿ ನಡೆಯಿತು. ಇಂಟರ್ಕಾಂಟಿನೆಂಟಲ್ ಚಾಂಪಿಯನ್ ಗುಂಥರ್, ಮ್ಯಾಟ್ ರಿಡಲ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಪ್ರದರ್ಶಿಸಿ ತಮ್ಮ ಟೈಟಲ್ ಉಳಿಸಿಕೊಂಡರು. ವಿಶ್ವ ಹೆವಿವೇಟ್ ಚಾಂಪಿಯನ್ ಸೇಥ್ ರೋಲಿನ್ಸ್ ಅವರು ದಿ ಜಡ್ಜ್ಮೆಂಟ್ ಡೇಸ್ ಫಿನ್ ಬಾಲೋರ್ ವಿರುದ್ಧ ಕಠಿಣ ಹೋರಾಟದ ಪಂದ್ಯದಲ್ಲಿ ಯಶಸ್ವಿಯಾಗಿ ತಮ್ಮ ಪ್ರಶಸ್ತಿಯನ್ನು ಮತ್ತೊಮ್ಮೆ ಉಳಿಸಿಕೊಂಡರು.
ಡಾಮಿಯನ್ ಪ್ರೀಸ್ಟ್ ಮತ್ತು ಐಯೊ ಸ್ಕೈ ಅವರು ಪುರುಷರ ಲ್ಯಾಡರ್ ಪಂದ್ಯ ಮತ್ತು ಮಹಿಳೆಯರ ಲ್ಯಾಡರ್ ಪಂದ್ಯದಲ್ಲಿ ವಿಜಯಶಾಲಿಯಾದರು. ವಿಜೇತರಾಗಿ ಇಬ್ಬರೂ ಬ್ಯಾಂಕ್ ಒಪ್ಪಂದಗಳಲ್ಲಿ ಹಣವನ್ನು ಪಡೆದುಕೊಂಡರು. ಅದರಂತೆಯೇ ಒಂದು ವರ್ಷದೊಳಗೆ ಯಾವುದೇ ಶೀರ್ಷಿಕೆ ಪಂದ್ಯದಲ್ಲಿ ಸ್ಪರ್ಧಿಸಲು ಹಣವನ್ನು ಎನ್ಕ್ಯಾಶ್ ಮಾಡಬಹುದು.