ಬೆಳ್ತಂಗಡಿ ಸೌತಡ್ಕ ಮಹಾಗಣಪತಿ ದೇವಸ್ಥಾನದ ಜಮೀನು ಅವ್ಯವಹಾರದ ವಿರುದ್ಧ ಸಿಡಿದೆದ್ದ ಭಕ್ತರು
ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸೇರಿದ ಸುಮಾರು 3.46 ಎಕರೆ ಜಮೀನು ದುರ್ಬಳಕೆ ಆರೋಪ ಕೇಳಿ ಬಂದಿದೆ. ಬಹಳ ವರ್ಷಗಳಿಂದ ಈ ಜಮೀನಿಂದ ಬರುವ ಆದಾಯ ಬಂದ ಹಣ ದೇವಸ್ಥಾನದ ಭಂಡಾರಕ್ಕೆ ಸೇರುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಈ ಜಮೀನಿನಿಂದ ಬಂದ ಆದಾಯವನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಭೂಮಿಯಲ್ಲಿರುವ ವಾಣಿಜ್ಯ ಕಟ್ಟಡ , ವಸತಿ ಗೃಹದ ಬಾಡಿಗೆ ಸೇರಿದಂತೆ ಸಂಗ್ರಹವಾಗುತ್ತಿರುವ ಕೋಟಿಗಟ್ಟಲೆ ಹಣ ಖಾಸಗಿಯವರ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಅವ್ಯವಹಾರದ ವಿರುದ್ದ ಹೋರಾಟ ಶುರುವಾಗಿದೆ.