ನನ್ನ ವಿರುದ್ಧ ನೀವು ಏನೆಲ್ಲಾ ಷಡ್ಯಂತ್ರ ಮಾಡುತ್ತಿದ್ದೀರೆಂದು ಗೊತ್ತು; ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಗರಂ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನನ್ನ ವಿರುದ್ಧ ನೀವು ಏನೆಲ್ಲಾ ಷಡ್ಯಂತ್ರ ಮಾಡುತ್ತಿದ್ದೀರೆಂದು ಗೊತ್ತು; ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಗರಂ

ನನ್ನ ವಿರುದ್ಧ ನೀವು ಏನೆಲ್ಲಾ ಷಡ್ಯಂತ್ರ ಮಾಡುತ್ತಿದ್ದೀರೆಂದು ಗೊತ್ತು; ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಗರಂ

Sep 28, 2024 03:07 PM IST Rakshitha Sowmya
twitter
Sep 28, 2024 03:07 PM IST

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಇದೀಗ ಮಾಜಿ ಸಿಎಂ ಹೆಚ್‌ಡಿಕೆ ಮತ್ತೆ ಸಿದ್ದು ವಿರುದ್ಧ ಗುಡುಗಿದ್ದಾರೆ. ಸರ್ಕಾರವು ಪೊಲೀಸ್‌ ಇಲಾಖೆಗೆ ಆಮಿಷ ಒಡುತ್ತಿದೆ. ನಿಮ್ಮನ್ನು ಕಮಿಷನರ್‌ ಮಾಡುತ್ತೇನೆ, ಸಿಐಡಿ ಮುಖ್ಯಸ್ಥರನ್ನಾಗಿ ಮಾಡುತ್ತೇವೆ ಎಂದು ಕೆಲವರಿಗೆ ಆಸೆ ತೋರಿಸುತ್ತಿದ್ದೀರಿ. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲೆಂದೇ ಸಂಚು ಮಾಡುತ್ತಿದ್ದೀರಿ. ಕಳೆದ ಒಂದು ವರ್ಷದಲ್ಲಿ ನಿಮ್ಮ ಸರ್ಕಾರದ ವಿರುದ್ಧ ಗದಾ ಪ್ರಹಾರ ಮಾಡಿದಾಗಿನಿಂದ ಏನೆಲ್ಲಾ ಷಡ್ಯಂತ್ರ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ರಾಜ್ಯಪಾಲದ ಸಚಿವಾಲಯವನ್ನು ಸರ್ಚ್‌ ಮಾಡುತ್ತೇನೆ ಎಂದು ಬಂದಿರುವ ಅಧಿಕಾರಿ ಹಿನ್ನೆಲೆ ನನಗೆ ಗೊತ್ತು ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗರಂ ಹೆಚ್‌ಡಿಕೆ ಆಗಿದ್ದಾರೆ.

More