logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೂಗಿನ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ; ಅಗಲವಾದ ಮೂಗು ಹೊಂದಿರುವರ ಗುಣ ಸ್ವಭಾವ ಹೇಗೆ? ಇಲ್ಲಿದೆ ಉತ್ತರ

ಮೂಗಿನ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ; ಅಗಲವಾದ ಮೂಗು ಹೊಂದಿರುವರ ಗುಣ ಸ್ವಭಾವ ಹೇಗೆ? ಇಲ್ಲಿದೆ ಉತ್ತರ

Rakshitha Sowmya HT Kannada

Sep 17, 2024 11:53 AM IST

google News

ಮೂಗಿನ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ; ಅಗಲವಾದ ಮೂಗು ಹೊಂದಿರುವರ ಗುಣ ಸ್ವಭಾವ ಹೇಗೆ? ಇಲ್ಲಿದೆ ಉತ್ತರ (ಸಾಂದರ್ಭಿಕ ಚಿತ್ರ)

  • ಅಗಲವಾದ ಮೂಗು ಹೊಂದಿರುವವರು ಸ್ವತಂತ್ರವಾಗಿ ಯಾವುದೇ ಕೆಲಸ ನಿರ್ವಹಿಸುವುದಿಲ್ಲ. ಕನಿಷ್ಠ ಪಕ್ಷ ಒಳ್ಳೆಯ ಸ್ಪೂರ್ತಿಯಾದರೂ ಇವರಿಗೆ ಬೇಕಾಗುತ್ತದೆ. ಆದರೆ ಕುಟುಂಬದ ಎಲ್ಲಾ ಸದಸ್ಯರ ಪ್ರೀತಿ ವಿಶ್ವಾಸವನ್ನು ಬಹುಕಾಲ ಉಳಿಸಿಕೊಳ್ಳುತ್ತಾರೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮೂಗಿನ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ; ಅಗಲವಾದ ಮೂಗು ಹೊಂದಿರುವರ ಗುಣ ಸ್ವಭಾವ ಹೇಗೆ? ಇಲ್ಲಿದೆ ಉತ್ತರ (ಸಾಂದರ್ಭಿಕ ಚಿತ್ರ)
ಮೂಗಿನ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ; ಅಗಲವಾದ ಮೂಗು ಹೊಂದಿರುವರ ಗುಣ ಸ್ವಭಾವ ಹೇಗೆ? ಇಲ್ಲಿದೆ ಉತ್ತರ (ಸಾಂದರ್ಭಿಕ ಚಿತ್ರ)

ಕೆಲವರ ಮೂಗು ಸಾಮಾನ್ಯಕಿಂತ ಅಗಲವಾಗಿರುತ್ತದೆ. ಇಂತಹವರು ಕೊಂಚ ದಪ್ಪವಾಗಿದ್ದು ನೋಡಲು ಅಂದವಾಗಿರುತ್ತಾರೆ. ಆದರೆ ಇವರಿಗೆ ಪದೇ ಪದೆ ಅನಾರೋಗ್ಯ ಕಾಡುತ್ತದೆ. ಸಣ್ಣಪುಟ್ಟ ಕೆಲಸಗಳಿಗೂ ಹೆಚ್ಚಿನ ದೈಹಿಕ ಶಕ್ತಿ ಬೇಕಾಗುತ್ತದೆ. ಅತಿ ಬೇಗನೆ ನಿತ್ರಾಣರಾಗುತ್ತಾರೆ ಸುಲಭವಾಗಿ ಇವರು ಯಾರನ್ನೂ ನಂಬುವುದಿಲ್ಲ. ಆದರೆ ಬೇರೆಯವರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಕುಟುಂಬದಲ್ಲಿ ಅನಾವಶ್ಯಕವಾದ ವಾದ ವಿವಾದ ಇರುತ್ತದೆ. ಕೌಟುಂಬಿಕ ನೆಮ್ಮದಿ ಕಡಿಮೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ

ಚಿಕ್ಕ ವಯಸ್ಸಿನಲ್ಲಿ ಬುದ್ಧಿವಂತಿಕೆಯಿಂದ ಬೇರೆಯವರ ಸಹಾಯ ಪಡೆದು ತಮ್ಮ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಯಾವುದೇ ಕೆಲಸ ಕಾರ್ಯಗಳಾದರೂ ಆರಂಭಿಸುವುದು ಬಹಳ ತಡ ಆದರೆ ಒಮ್ಮೆ ಆರಂಭಿಸಿದರೆ ಬಿಡುವಿಲ್ಲದಂತೆ ದುಡಿಯುತ್ತಾರೆ. ಇವರ ಮಾತಿನ ದಾಟಿ ಇವರಿಗೆ ಎಲ್ಲಾ ವಿಚಾರವೂ ತಿಳಿದಿದೆ ಎಂಬಂತಿರುತ್ತದೆ. ಮುಖದಲ್ಲಿ ಸದಾ ಕಾಲ ಮಂದಹಾಸವಿರುತ್ತದೆ. ಇವರ ನಗೆಯ ಮೋಡಿಗೆ ಜನರು ಸುಲಭವಾಗಿ ಮರುಳಾಗುತ್ತಾರೆ. ಸ್ವತಂತ್ರವಾಗಿ ಯಾವುದೇ ಕೆಲಸವನ್ನು ನಿರ್ವಹಿಸುವುದಿಲ್ಲ. ಕನಿಷ್ಠಪಕ್ಷ ಒಳ್ಳೆಯ ಸ್ಪೂರ್ತಿಯಾದರೂ ಇವರಿಗೆ ಬೇಕಾಗುತ್ತದೆ. ಆದರೆ ಕುಟುಂಬದ ಎಲ್ಲಾ ಸದಸ್ಯರ ಪ್ರೀತಿ ವಿಶ್ವಾಸವನ್ನು ಬಹುಕಾಲ ಉಳಿಸಿಕೊಳ್ಳುತ್ತಾರೆ.

ವಿದ್ಯಾಭ್ಯಾಸದಲ್ಲಿ ನಿರೀಕ್ಷಿಸಿದ ಮಟ್ಟ ತಲುಪುತ್ತಾರೆ. ಆದರೆ ನಾಯಕತ್ವದ ಗುಣವಿದ್ದರೂ ಅದನ್ನು ಬಳಸಿಕೊಳ್ಳುವುದಿಲ್ಲ. ಬೇರೆಯವರನ್ನು ಸುಲಭವಾಗಿ ನಂಬಿ ಮೋಸ ಹೋಗುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ಇವರ ಆತ್ಮೀಯರಿಂದಲೇ ಇವರ ಯಶಸ್ಸಿಗೆ ತೊಂದರೆ ಉಂಟಾಗುತ್ತದೆ. ಸಾಧ್ಯವಾದಷ್ಟು ಗಂಭೀರತೆಯಿಂದ ಜೀವನದಲ್ಲಿ ನಡೆಸಲು ಪ್ರಯತ್ನಿಸುತ್ತಾರೆ. ಇವರು ಎರಡಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸುತ್ತಾರೆ. ವಿದೇಶಿ ಭಾಷೆಯೊಂದರಲ್ಲಿ ಅಧ್ಯಯನ ಮಾಡುತ್ತಾರೆ. ವಿದ್ಯಾಭ್ಯಾಸಕ್ಕಾಗಿ ಪರಸ್ಥಳಕ್ಕೆ ತೆರಳುವ ಅವಕಾಶ ದೊರೆತರೂ ಬಳಸಿಕೊಳ್ಳುವುದಿಲ್ಲ. ಇವರ ಮನಸ್ಸಿಗೆ ಇಷ್ಟವಾಗದ ಉದ್ಯೋಗ ಮಾಡಬೇಕಾಗುತ್ತದೆ. ಆದಾಯ ಕಡಿಮೆ ಇದ್ದರೂ ಉಪವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. 

ಶೀತ ಹೆಚ್ಚಾಗಿ ಕಾಡುತ್ತದೆ. ಸದಾಕಾಲ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗುತ್ತಾರೆ. ಉದ್ಯೋಗದಲ್ಲಿ ಅಧಿಕಾರದ ಯೋಗ ತಾನಾಗಿಯೇ ದೊರೆಯುತ್ತದೆ. ಇವರ ಅನುಭವಕ್ಕೆ ತಕ್ಕಂತೆ ಸ್ಥಾನಮಾನ ಗೌರವ ದೊರೆಯುತ್ತದೆ. ಸಹೋದ್ಯೋಗಿಗಳ ಜೊತೆ ಶಾಂತಿ ಮತ್ತು ಸಂಯಮದಿಂದ ನಡೆದುಕೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ದಿಢೀರನೆ ಕೋಪಗೊಳ್ಳುವ ಕಾರಣ ಇವರಿಂದ ಸಹೋದ್ಯೋಗಿಗಳು ದೂರವಿರುತ್ತಾರೆ. ಸ್ವತಂತ್ರವಾಗಿ ಆರಂಭಿಸಿದ ವ್ಯಾಪಾರ ವ್ಯವಹಾರಗಳು ಬಹು ದಿನ ನಡೆಯುವುದಿಲ್ಲ. ಆದರೆ ನಷ್ಟದ ಮಾತು ಇರುವುದಿಲ್ಲ. ಹಾಕಿದ ಬಂಡವಾಳವನ್ನು ಸುಲಭವಾಗಿ ವಾಪಸ್‌ ಪಡೆಯುತ್ತಾರೆ.

ತಮ್ಮ ನಿರ್ಧಾರದಿಂದಲೇ ಸಮಸ್ಯೆ ಅನುಭವಿಸುತ್ತಾರೆ

ಇವರು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು, ಜೀವನವನ್ನು ತಪ್ಪು ಹಾದಿಯಲ್ಲಿ ನಡೆಸುತ್ತದೆ. ಮಾಡಬೇಕಾದ ಕೆಲಸ ಕಾರ್ಯಗಳನ್ನು ಪದೇ ಪದೆ ಮುಂದೂಡುತ್ತಾರೆ. ಇದರಿಂದ ಕೆಲವೊಮ್ಮೆ ಅಪರೂಪದ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ತಮ್ಮ ಕುಟುಂಬದ ಸದಸ್ಯರನ್ನು ಸಂತೋಷದಿಂದ ಪೋಷಿಸುತ್ತಾರೆ. ತಾವು ಕಷ್ಟಪಟ್ಟು ದುಡಿದ ಹಣವನ್ನು ಬೇರೆಯವರಿಗೆ ಸಹಾಯವಾಗಲೆಂದು ವಿನಿಯೋಗಿಸುತ್ತಾರೆ. ಇವರಿಗೆ ಕವನಗಳನ್ನು ಬರೆಯುವುದೆಂದರೆ ಬಹಳ ಆಸಕ್ತಿ. ಅದರಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸುತ್ತಾರೆ. ಸಮಾಜದಲ್ಲಿ ವಿಶೇಷವಾದ ಗೌರವ ದೊರೆಯುತ್ತದೆ. ಇವರ ಕೆಲಸದ ರೀತಿ ನೀತಿಯನ್ನು ಮೆಚ್ಚಿ ಅನೇಕರು ಪ್ರಶಸ್ತಿಗಳು ಒಲಿದು ಬರುತ್ತದೆ.

ಇವರ ವೈವಾಹಿಕ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಆದರೆ ಮಧ್ಯವಯಸ್ಸಿನ ನಂತರ ಇವರಿಗೆ ಅಥವಾ ಇವರ ಬಾಳ ಸಂಗಾತಿಗೆ ಅನಾರೋಗ್ಯ ಉಂಟಾಗಬಹುದು. ತಮ್ಮ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಸಾಕುತ್ತಾರೆ. ಅವರಿಗೆ ಬೇಕಾದ ಅನುಕೂಲತೆಗಳನ್ನು ಒದಗಿಸುವುದೆಂದರೆ ಇವರಿಗೆ ಎಲ್ಲಿಲ್ಲದ ಸಂತಸ. ಒಮ್ಮೆ ಇವರ ಪ್ರೀತಿ ವಿಶ್ವಾಸ ಗಳಿಸಿದರೆ ಅದನ್ನು ಬಹುಕಾಲ ಉಳಿಸಿಕೊಳ್ಳುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ