ನವರಾತ್ರಿ ಹಬ್ಬ ಆಚರಣೆಗೂ ಮೊದಲೇ ಪುರಾಣ ಕಥೆಗಳಲ್ಲಿರುವ ನವದುರ್ಗೆಯರ ಬಗ್ಗೆ ಸ್ವಲ್ಪ ತಿಳಿದುಕೊಂಡಿರಿ
Sep 30, 2024 06:39 AM IST
ನವರಾತ್ರಿ ವೇಳೆ ಪೂಜಿಸಲ್ಪಡುವ ದುರ್ಗಾದೇವಿಯ ಒಂಬತ್ತು ಅವತಾರಗಳು
ನವರಾತ್ರಿ ಆಚರಣೆ ಸನಿಹದಲ್ಲಿದೆ. ಅಕ್ಟೋಬರ್ 3 ರಿಂದ 12 ತನಕ ನವರಾತ್ರಿ ಹಬ್ಬ ಆಚರಿಸಲ್ಪಡುತ್ತಿದ್ದು, ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ಒಂಬತ್ತು ಅವತಾರಗಳ ವಿಶೇಷ ವಿವರ ಇಲ್ಲಿದೆ.
ಭಾರತದ ಉದ್ದಗಲಕ್ಕೂ ನವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ. ಈ ಸಲ ಅಕ್ಟೋಬರ್ 3 ರಿಂದ 12 ತನಕ ನವರಾತ್ರಿ ಉತ್ಸವ ನಡೆಯಲಿದೆ. ಪ್ರಪಂಚದಾದ್ಯಂತದ ಹಿಂದೂಗಳು ಒಂಬತ್ತು ದಿನಗಳ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಪ್ರತಿ ವರ್ಷ ನಾಲ್ಕು ನವರಾತ್ರಿಗಳನ್ನು ಆಚರಿಸುತ್ತಾರೆ. ನವರಾತ್ರಿ ವೇಳೆ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗಿದೆ. ಚಂದ್ರಘಂಟಾ, ಮಾ ಕೂಷ್ಮಾಂಡಾ, ಮಾ ಶೈಲಪುತ್ರಿ, ಮಾ ಬ್ರಹ್ಮಚಾರಿಣಿ, ಮಾ ಸ್ಕಂದಮಾತಾ, ಮಾ ಕಾತ್ಯಾಯನಿ, ಮಾ ಕಾಳರಾತ್ರಿ, ಮಾ ಮಹಾಗೌರಿ ಮತ್ತು ಮಾ ಸಿದ್ಧಿದಾತ್ರಿ ಅವರ ಒಂಬತ್ತು ಅವತಾರಗಳಲ್ಲಿ ನವರಾತ್ರಿಯಲ್ಲಿ ಪೂಜಿಸಲಾಗುತ್ತದೆ. ಈ ಒಂಬತ್ತು ಅವತಾರಗಳ ಹಿಂದೆಯೂ ಪುರಾಣ ಕಥೆಗಳಿವೆ, ಐತಿಹ್ಯಗಳಿವೆ. ದುರ್ಗಾ ದೇವಿ ಅಥವಾ ಪಾರ್ವತಿ ದೇವಿ ಆಯಾ ಅವತಾರ ಎತ್ತುವುದಕ್ಕೆ ಕಾರಣವೇನು, ಸನ್ನಿವೇಶ ಏನಿತ್ತು ಮತ್ತು ಬೇರೆ ಬೇರೆ ಹೆಸರುಗಳು ದೇವಿಗೆ ಹೇಗೆ ಬಂದವು ಎಂಬುದಕ್ಕೂ ವಿವರಣೆಗಳು ಸಿಗುತ್ತವೆ.
ತಾಜಾ ಫೋಟೊಗಳು
ಪಾರ್ವತಿ ದೇವಿ ಮತ್ತು ಆಕೆಯ 9 ಅವತಾರಗಳು
1) ಶೈಲಪುತ್ರೀ ದೇವಿ: ನವರಾತ್ರಿಯ ಮೊದಲ ದಿನ ಶೈಲಪುತ್ರೀ ದೇವಿಯನ್ನು ಆರಾಧಿಸಲಾಗುತ್ತದೆ. ಪರ್ವತ ರಾಜನ ಮಗಳಾದ ಕಾರಣ ಶೈಲಾ ಪುತ್ರೀ ಎಂಬ ಹೆಸರು. ಹಿಮಾಲಯದ ರಾಜ ಹಿಮವಂತನ ಮಗಳಾಗಿ ಹುಟ್ಟಿದ ದೇವಿ. ಆಕೆಯನ್ನು ಸತಿ ಭವಾನಿ, ಹೇಮಾವತಿ ಮತ್ತು ಪಾರ್ವತಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮೊದಲು ತಾಯಿಯ ಹಿನ್ನೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
2) ಬ್ರಹ್ಮಚಾರಿಣಿ ದೇವಿ: ನವರಾತ್ರಿಯ ಎರಡನೇ ದಿನ ದುರ್ಗಾ ದೇವಿಯ ಎರಡನೇ ರೂಪ ಬ್ರಹ್ಮಚಾರಿಣಿ ದೇವಿಯ ಆರಾಧನೆ. ಬ್ರಹ್ಮಚಾರಿಣಿ ದೇವಿಯ ಬಗ್ಗೆ ಮತ್ತು ಅವಳಿಗೆ ಸಂಬಂಧಿಸಿದ ಪುರಾಣ ಕಥೆಗಳು ಹಲವು ಇವೆ. ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮುನ್ನ ಈ ಮಾತೆಯು ತಪಶ್ಚಾರಿಣಿ ಎಂದು ಕರೆಯಿಸಿಕೊಂಡ ಕಥೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ಮಾಡಿ
3) ಚಂದ್ರಘಂಟಾ ದೇವಿ: ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು. ತಾಯಿ ದುರ್ಗೆಯ ಶಾಂತ ಮತ್ತು ಪ್ರಯೋಜನಕಾರಿ ರೂಪ. ಆಕೆಯ ಹಣೆಯ ಮೇಲೆ ಗಂಟೆ ಮತ್ತು ಅರ್ಧಚಂದ್ರಾಕಾರ ಇರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ಈ ತಾಯಿಯ ಇನ್ನೊಂದು ಹೆಸರು ಗೆಸ್ ಮಾಡುತ್ತ ಈ ಲಿಂಕ್ ಕ್ಲಿಕ್ ಮಾಡಿ.
4) ಕೂಷ್ಮಾಂಡಾ ದೇವಿ: ನವರಾತ್ರಿ ಉತ್ಸವದ ನಾಲ್ಕನೇ ದಿನವು ಕೂಷ್ಮಾಂಡಾ ದೇವಿಯ ಆರಾಧನೆಗೆ ಸಂಬಂಧಿಸಿದ್ದು. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯ ಆರಾಧನೆಯು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಅಂದಹಾಗೆ, ಕೂಷ್ಮಾಂಡ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ, ಅದೇನು ತಿಳಿಯೋಣ
5) ಸ್ಕಂದಮಾತೆ : ಸ್ಕಂದ ಎಂಬುದು ಭಗವಾನ್ ಕಾರ್ತಿಕೇಯನ (ಪಾರ್ವತಿ ದೇವಿಯ ಮಗ) ಮತ್ತೊಂದು ಹೆಸರು. ಆದ್ದರಿಂದ ಸ್ಕಂದಮಾತಾ ಎಂದರೆ ಕಾರ್ತಿಕೇಯನ ತಾಯಿ ಎಂದರ್ಥ. ಇದು ತಾಯಿ ಪಾರ್ವತಿಯ ಮತ್ತೊಂದು ರೂಪ. ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ, ಫಲವಂತಿಕೆಗಾಗಿ ಆರಾಧಿಸಲ್ಪಡುವ ಈ ದೇವಿಯ ವಿಶೇಷ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
6) ಕಾತ್ಯಾಯನೀ ದೇವಿ: ನವರಾತ್ರಿಯ 6ನೇ ಕಾತ್ಯಾಯನಿ ದೇವಿಯ ರೂಪದಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಯೋಧ ಅವತಾರ ಇದಾಗಿದ್ದು,ಸಿಂಹದ ಮೇಲೆ ಸವಾರಿ ಮಾಡುವ ಮಹಿಷಾಸುರಮರ್ದಿನಿಯಾಗಿ ಆರಾಧಿಸಲ್ಪಡುತ್ತಾಳೆ. ಈಗಾಗಲೇ ಹೇಳಿದಂತೆ, ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ. ಆದರೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು ಕ್ಲಿಕ್ ಮಾಡಿ ಓದಿ
7) ಕಾಳರಾತ್ರಿ ದೇವಿ: ದುರ್ಗಾಸಪ್ತ ಶತಿಯಲ್ಲಿ ಕಾಳರಾತ್ರಿಯ ಉಲ್ಲೇಖವಿದೆ. ಅದೇ ರೀತಿ ಮಾರ್ಕಂಡೇಯ ಪುರಾಣದ 81ರಿಂದ 93ನೇ ಅಧ್ಯಾಯ ನಡುವೆ ಕೂಡ ಕಾಳರಾತ್ರಿ ದೇವಿಯನ್ನು ಉಲ್ಲೇಖಿಸಲಾಗಿದೆ. ನವರಾತ್ರಿ ದುರ್ಗಾ ಪೂಜೆಯಲ್ಲಿ ಏಳನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಿಯು ಪಾರ್ವತಿಯ ಮತ್ತೊಂದು ಅವತಾರ. ಕತ್ತೆಯ ಮೇಲೇರಿ ಬರುವ ಕಾಳರಾತ್ರಿ ದೇವಿಯ ಬಗ್ಗೆ ಅನೇಕ ದಂತಕಥೆಗಳೂ ಇವೆ.
8) ಮಹಾಗೌರಿ ದೇವಿ: ಪಾರ್ವತಿ ದೇವಿಯ ಎಂಟನೇ ಅವತಾರ ಮಹಾಗೌರಿ. ನವರಾತ್ರಿಯ 8ನೇ ದಿನ ಪೂಜಿಸಲ್ಪಡುವ ದೇವಿ. ಒಂಬತ್ತು ರೂಪಗಳು ಮತ್ತು ಹತ್ತು ಮಹಾವಿದ್ಯೆಗಳು ಆದಿಶಕ್ತಿಯ ಅಂಶಗಳೆಂದು ದೇವಿ ಭಾಗವತ ಪುರಾಣ ವಿವರಿಸುತ್ತದೆ. ಅಂದ ಹಾಗೆ, ಪಾರ್ವತಿ ದೇವಿ ಮಹಾಗೌರಿಯಾಗಲು ಮಿಂದೆದ್ದ ಪುಣ್ಯನದಿ ಬಗ್ಗೆ ತಿಳ್ಕೊಂಡಿದ್ದೀರಾ... ನವರಾತ್ರಿ 8ನೇ ದಿನ ಪೂಜೆಗೆ ಮೊದಲು ತಿಳ್ಕೊಳ್ಳಿ..
9) ಸಿದ್ಧಿದಾತ್ರಿ ದೇವಿ: ನವರಾತ್ರಿಯ ಸಮಯದಲ್ಲಿ, ಜಗದಂಬೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಮಹಾ ಅಷ್ಟಮಿ ಮತ್ತು ಮಹಾನವಮಿ ವಿಶೇಷ ಮಹತ್ವ. ಹಿಂದೂ ಆಚರಣೆಗಳ ಪ್ರಕಾರ, ಮಹಾನವಮಿಯೊಂದಿಗೆ ಕೊನೆಗೊಳ್ಳುವ ನವರಾತ್ರಿಯ ಒಂಬತ್ತನೇ ದಿನದಂದು ಮಾ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಅಂದ ಹಾಗೆ, ಪರಶಿವ ಕೂಡ ಸಿದ್ಧಿದಾತ್ರಿಯನ್ನು ಪೂಜಿಸಿದ್ದ. ಆಗ ಸಿದ್ಧಿದಾತ್ರಿ ಶಿವನಿಗೊಲಿದು ಏನಾಯಿತು- ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ