logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭೂಮಿಗೆ ಬಂದ ಮಹಾಗುರು ಶಂಕರಾಚಾರ್ಯ: ಅದ್ವೈತ ಸಿದ್ಧಾಂತ ಕೊಟ್ಟು ದೇಶ ಸಂಚರಿಸಿದ ತತ್ವಜ್ಞಾನಿಗೆ ಅಮ್ಮನೆಂದರೆ ಪ್ರಾಣ

ಭೂಮಿಗೆ ಬಂದ ಮಹಾಗುರು ಶಂಕರಾಚಾರ್ಯ: ಅದ್ವೈತ ಸಿದ್ಧಾಂತ ಕೊಟ್ಟು ದೇಶ ಸಂಚರಿಸಿದ ತತ್ವಜ್ಞಾನಿಗೆ ಅಮ್ಮನೆಂದರೆ ಪ್ರಾಣ

HT Kannada Desk HT Kannada

May 10, 2024 06:00 AM IST

google News

ಭೂಮಿಗೆ ಬಂದ ಮಹಾಗುರು ಶಂಕರಾಚಾರ್ಯ

    • Shankaracharya Jayanthi 2024: ಜಗತ್ತಿಗೆ ಅದ್ವೈತ ತತ್ವಜ್ಞಾನದ ಕೊಟ್ಟ, ಭಾರತದಲ್ಲಿ ಧರ್ಮದ ಪುನರುಜ್ಜೀವನದ ಮಾಡಿದ ಮಹಾನ್ ಗುರು ಶಂಕರಾಚಾರ್ಯರ ಹೆಸರು ಕೇಳದವರೇ ಇಲ್ಲ. ತಮ್ಮ ತಾಯಿಯ ಬಗ್ಗೆ ಅಪಾರ ಕಾಳಜಿ, ಗೌರವ ಇಟ್ಟುಕೊಂಡಿದ್ದ ಗುರುಗಳು ಅಮ್ಮನನ್ನು ಹೇಗೆ ಕಾಳಜಿ ಮಾಡಬೇಕು ಎನ್ನುವುದಕ್ಕೂ ತಮ್ಮ ನಡವಳಿಕೆಯಿಂದಲೇ ಮಾದರಿಯಾದವರು.
ಭೂಮಿಗೆ ಬಂದ ಮಹಾಗುರು ಶಂಕರಾಚಾರ್ಯ
ಭೂಮಿಗೆ ಬಂದ ಮಹಾಗುರು ಶಂಕರಾಚಾರ್ಯ (Pinterest)

ಹಿಂದೂ ಧರ್ಮವು ಅವನತಿಯ ಅಂತ್ಯದಲ್ಲಿ ಇರುವ ವೇಳೆ ಆದಿ ಗುರು ಶ್ರೀ ಶಂಕರಾಚಾರ್ಯರ ಜನನವಾಗುತ್ತದೆ. ಭೂಲೋಕದಲ್ಲಿ ನಡೆಯುತ್ತಿದ್ದ ಪಾಪ ಕೃತ್ಯಗಳನ್ನು ಗಮನಿಸಿದ ಭೂದೇವಿಯು ಬ್ರಹ್ಮನನ್ನು ಕುರಿತು ಇದರ ಬಗ್ಗೆ ಚರ್ಚಿಸುತ್ತಾಳೆ. ಬ್ರಹ್ಮದೇವನು ಭೂದೇವಿ ಮತ್ತು ಇತರ ದೇವತೆಗಳೊಂದಿಗೆ ಪರಮೇಶ್ವರನ ಕಡೆಗೆ ತೆರಳುತ್ತಾರೆ. ಎಲ್ಲಾ ವಿಚಾರವನ್ನು ತಿಳಿದ ಪರಮೇಶ್ವರನು, ತಾನು ಶಂಕರ ಎಂಬ ಹೆಸರಿನ ಯತಿಯಾಗಿ ಭೂಲೋಕದಲ್ಲಿ ಅವತಾರ ತಳೆಯುವುದಾಗಿ ತಿಳಿಸುತ್ತಾನೆ. ಆನಂತರ ಭೂಲೋಕದಲ್ಲಿ ಅದ್ವೈತ ತತ್ವವು ನೆಲೆಯಾಗುತ್ತದೆ ಎಂದು ಹೇಳುತ್ತಾನೆ. ಇದರಿಂದ ಸಂತಸಗೊಂಡ ಭೂದೇವಿಯು ಶಾಂತ ಚಿತ್ತದಿಂದ ಮರಳುತ್ತಾಳೆ.

ತಾಜಾ ಫೋಟೊಗಳು

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

ಹಲವು ದೇವತೆಗಳು ಭೂಲೋಕದಲ್ಲಿ ಸಾಮಾನ್ಯ ಮಾನವರಂತೆ ಅವತರಿಸುತ್ತಾರೆ. ಕೇರಳ ದೇಶದಲ್ಲಿ ಶ್ರೀ ಪರಮೇಶ್ವರನು ಲಿಂಗರೂಪಿಯಾಗಿ ನೆಲೆಸಿರುತ್ತಾನೆ. ಸ್ವಯಂ ಶಿವನೇ ಆ ಪ್ರದೇಶದ ರಾಜನ ಕನಸಿನಲ್ಲಿ ಬಂದು ತಾನು ಲಿಂಗ ರೂಪಿಯಾಗಿ ಇರುವ ಬಗ್ಗೆ ತಿಳಿಸುತ್ತಾನೆ. ಇದರಿಂದ ಸಂತೋಷಗೊಂಡ ರಾಜನು, ಆ ಲಿಂಗಕ್ಕೆ ದೇವಾಲಯವನ್ನು ಕಟ್ಟಿಸುತ್ತಾನೆ. ಕೇರಳದಲ್ಲಿರುವ ಕಾಲಟಿ ಎಂಬ ಪ್ರದೇಶದಲ್ಲಿ ಶಿವಗುರು ಮತ್ತು ಆರ್ಯಾಂಬೆ ಎಂಬ ದಂಪತಿಗಳು ವಾಸವಿರುತ್ತಾರೆ. ಇದೇ ದೇವಾಲಯದಲ್ಲಿ ಪೂಜಾಕೈಂಕರ್ಯವನ್ನು ಅರ್ಪಿಸುವ ಅವಕಾಶ ಇವರಿಗೆ ದೊರೆಯುತ್ತದೆ. ಇದೇ ಪ್ರದೇಶದಲ್ಲಿ ಆ ದಂಪತಿಗಳು ಶಿವನನ್ನು ಕುರಿತು ತಪಸ್ಸನ್ನು ಮಾಡುತ್ತಾರೆ. ಇವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ ಶಿವನು ಈ ದಂಪತಿಗಳಿಗೆ ಗಂಡು ಸಂತಾನದ ವರವನ್ನು ನೀಡುತ್ತಾನೆ. ಆನಂತರ ಶಿವನ ಅಂಶವು ಆರ್ಯಂಬೆಯ ಗರ್ಭವನ್ನು ಸೇರುತ್ತದೆ.

ವೈಶಾಖ ಮಾಸದ ಶುದ್ಧ ಪಂಚಮಿಯ ದಿನದಂದು ಗಂಡು ಮಗುವಿನ ಜನನವಾಗುತ್ತದೆ. ಅವನನ್ನು ಶಂಕರ ಎಂಬ ಹೆಸರಿನಿಂದ ಕರೆಯುತ್ತಾರೆ. ಇದೇ ವೇಳೆಯಲ್ಲಿ ಬ್ರಹ್ಮದೇವನು ಮಂಡನಮಿಶ್ರ ಎಂಬ ಹೆಸರಿನಿಂದ ಅವತರಿಸುತ್ತಾನೆ. ಸ್ವಯಂ ಶಾರದಾ ಮಾತೆಯು ಉಭಯ ಭಾರತಿ ಎಂಬ ಹೆಸರಿನಿಂದ ಖ್ಯಾತಳಾಗಿರುತ್ತಾಳೆ. ಶಂಕರನಿಗೆ ಚೌಲ ಕರ್ಮವಾದ ನಂತರ ಶಿವಗುರುವು ಪ್ರಾಣತ್ಯಾಗ ಮಾಡಿ ಸ್ವರ್ಗವನ್ನು ಸೇರುತ್ತಾನೆ. ಐದು ವರ್ಷಗಳಾಗಿದ್ದಾಗ ಶಂಕರನಿಗೆ ಉಪನಯನವಾಗುತ್ತದೆ. ಸ್ವಯಂ ಶಿವನೇ ಶಂಕರನ ರೂಪದಲ್ಲಿ ಇರುವ ಕಾರಣ ಗುರು ಸೇವೆಯನ್ನು ಮಾಡಿ ಸಕಲ ವೇದಗಳನ್ನು ಕರಗತ ಮಾಡಿಕೊಳ್ಳುತ್ತಾನೆ.

ಶಂಕರಾಚಾರ್ಯರ ಮಾತೃಭಕ್ತಿಗೆ ನದಿ ಪ್ರವಾಹದ ಮಾರ್ಗವೇ ಬದಲಾಯಿತು

ತಾಯಿಯ ಕ್ಷೇಮಕ್ಕಾಗಿ ಮನೆಯಿಂದ ದೂರ ಹರಿಯುತ್ತಿದ್ದ ಪೂರ್ಣ ನದಿಯನ್ನು ಸ್ತೋತ್ರಗಳಿಂದ ಅರ್ಚಿಸುತ್ತಾರೆ. ಆಗ ಪ್ರಸನ್ನಳಾದ ದೇವಿಯು ತನ್ನ ಪ್ರವಾಹವನ್ನು ಆರ್ಯಾಂಬೆ ನೆಲೆಸಿದ್ದ ಮನೆಯ ಬಳಿಯೇ ಹರಿಯುವಂತೆ ಮಾಡುತ್ತಾಳೆ. ಇದರಿಂದ ಎಲ್ಲರೂ ಶಂಕರರ ಶಕ್ತಿಗೆ ತಲೆದೂಗುತ್ತಾರೆ. ಅಗಸ್ತ್ಯರ ಜೊತೆಗೂಡಿ ಎಲ್ಲಾ ಮಹಾಮುನಿಗಳು ಆರ್ಯಾಂಬೆಯ ಮನೆಗೆ ಬರುತ್ತಾರೆ. ಇದರಿಂದ ಸಂತಸ ಗೊಂಡ ಆರ್ಯಾಂಬೆಯು ಬಂದ ಕಾರಣವನ್ನು ಕೇಳುತ್ತಾಳೆ. ಆಗ ಮಹಾಮುನಿಗಳು ಶಂಕರನನ್ನು ಭೇಟಿ ಮಾಡಲೆಂದು ಬಂದೆವು ಎನ್ನುತ್ತಾರೆ ಇದರಿಂದ ಆಶ್ಚರ್ಯಚಕಿತಳಾದ ಆರ್ಯಾಂಬೆಯು ತನ್ನ ಮಗನ ಬಗ್ಗೆ ಕೇಳುತ್ತಾರೆ. ಆಗ ಮಗನು ಅಲ್ಪಾಯುಷಿ ಎಂದು ತಿಳಿದು ವ್ಯಥೆಪಡುತ್ತಾಳೆ. ಸ್ವಯಂ ಶಂಕರನೇ ತಾಯಿಯನ್ನು ಸಮಾಧಾನಗೊಳಿಸುತ್ತಾನೆ.

ನದಿಯಲ್ಲಿ ಇಳಿದು ಸ್ನಾನವನ್ನು ಮಾಡುವ ವೇಳೆ ಮೊಸಳೆಯು ಅವರ ಕಾಲನ್ನು ಹಿಡಿಯುತ್ತದೆ ಇದರ ಮರ್ಮವನ್ನು ಆರಿತ ಶಂಕರರು ತಾಯಿಯನ್ನು ಕುರಿತು 'ಸನ್ಯಾಸಿಯಾಗಲು ಒಪ್ಪಿದರೆ ಮಾತ್ರ ಮೊಸಳೆಯಿಂದ ಪಾರಾಗಲು ಸಾಧ್ಯ' ಎಂದು ಹೇಳುತ್ತಾರೆ. ಆಗ ಆರ್ಯಾಂಬೆಯು ಮಗನ ಮೇಲಿನ ಪ್ರೀತಿಯಿಂದ ದುಃಖದಿಂದಲೇ ಸನ್ಯಾಸಿಯಾಗಲು ಒಪ್ಪಿಗೆ ನೀಡುತ್ತಾಳೆ. ಆ ಕ್ಷಣದಲ್ಲಿ ಕೊಂಚವೂ ಗಾಯಗೊಳಿಸದೆ ಮೊಸಳೆಯು ಶಂಕರರನ್ನು ಬಿಟ್ಟುಬಿಡುತ್ತದೆ. ಮೊಸಳೆಯಾಗಿ ಜನಿಸಿದ್ದ ಗಂಧರ್ವನು ತನ್ನ ನಿಜರೂಪವನ್ನು ಪಡೆಯುತ್ತಾನೆ.

ನೀನು ನೆನೆದಾಗ ಬರ್ತೇನೆ ಅಮ್ಮ ಎಂದ ಶಂಕರಾಚಾರ್ಯರು

ಯತಿಯಾದ ಶಂಕರನು ತನ್ನ ತಾಯಿಯನ್ನು ಬಂಧುಗಳ ಆಸರೆಗೆ ಒಪ್ಪಿಸಿ, ನಿನ್ನ ಮನಸ್ಸಿಗೆ ನನ್ನನ್ನು ನೋಡಬೇಕೆಂದಾಗ ಶಂಕರ ಎಂದು ಕರೆದರೆ ತಕ್ಷಣ ಬರುವೆ ಎಂದು ಭಾಷೆ ನೀಡಿ ಹೊರಡುತ್ತಾರೆ. ಮಾರ್ಗಮಧ್ಯದಲ್ಲಿ ಶ್ರೀ ಗೋವಿಂದ ಭಗವತ್ಪಾದರ ಆಶ್ರಮವನ್ನು ತಲುಪುತ್ತಾರೆ. ಇವರ ವಾಕ್ಚಾತುರ್ಯಕ್ಕೆ ಮೆಚ್ಚಿದ ಗೋವಿಂದ ಭಗವತ್ಪಾದರು, ಶಂಕರರ ಪೂರ್ವಾಶ್ರಮದ ಬಗ್ಗೆ ಕೇಳುತ್ತಾರೆ. ಶಂಕರರು ತನಗೆ ಆದಿಯಾಗಲಿ ಅಂತ್ಯವಾಗಲಿ ಇಲ್ಲ ಎಂಬ ಮಾತನ್ನು ತಿಳಿಸುತ್ತಾರೆ. ಇವರ ಬಗ್ಗೆ ಗೋವಿಂದ ಭಗವಾತ್ಪಾದರು ತಮ್ಮ ಯೋಗದ ಬಲದಿಂದ ತಿಳಿಯುತ್ತಾರೆ.

ಒಮ್ಮೆ ಇಂದ್ರನು ಯತಿಗಳ ಸಾಮರ್ಥ್ಯವನ್ನು ಪರೀಕ್ಷಿಸಲು ದೊಡ್ಡ ಪ್ರಮಾಣದ ಮಳೆಯನ್ನು ಸುರಿಸುತ್ತಾನೆ. ಆಗ ಇಡೀ ಆಶ್ರಮವೇ ಜಲಮಯವಾಗುತ್ತದೆ. ಆಗ ಶಂಕರರು ಇಡೀ ನೀರನ್ನೆಲ್ಲ ತಮ್ಮ ಕಮಂಡಲದಲ್ಲಿ ಶೇಖರಿಸುತ್ತಾರೆ. ಇದನ್ನು ಕಂಡ ಇಂದ್ರನು ನಾಚಿಕೆಗೆ ಒಳಗಾಗುತ್ತಾನೆ. ಆನಂತರ ಗುರುಗಳ ಆಜ್ಞೆಯಂತೆ ಕಾಶಿಗೆ ತೆರಳುವ ಶಂಕರರು ಪ್ರತಿವಾದಿಗಳನ್ನು ವಾದದಲ್ಲಿ ಸೋಲಿಸುತ್ತಾರೆ. ಇವರನ್ನು ಕಂಡ ವ್ಯಾಸ ಮಹರ್ಷಿಗಳು ಸಹ ಸಂತೋಷಗೊಳ್ಳುತ್ತಾರೆ. ಸ್ವಯಂ ವಿಶ್ವನಾಥನೇ ಶಂಕರರಿಗೆ ತನ್ನ ನಿಜ ಸ್ವರೂಪವನ್ನು ತೋರಿಸುತ್ತಾನೆ. ಬದರಿಕಾಶ್ರಮದಲ್ಲಿ ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ರಚಿಸುತ್ತಾರೆ. ಕಾಶಿಯಲ್ಲಿಅನೇಕ ವಿದ್ವಾಂಸರು ಶಂಕರರ ಭಾಷ್ಯಗಳನ್ನು ಪ್ರಶಂಶಿಸುತ್ತಾರೆ.

ಶಂಕರಾಚಾರ್ಯರ ಕೃತಿಗಳು

ಗಣಪತಿಗೆ ಸಂಬಂಧಪಟ್ಟಂತೆ ನಾಲ್ಕು ಸ್ತೋತ್ರಗಳು, ಶಿವನಿಗೆ ಸಂಬಂಧಪಟ್ಟಂತೆ 18 ಸ್ತೋತ್ರಗಳು, ದೇವಿಗೆ ಸಂಬಂಧಪಟ್ಟಂತೆ 19 ಶ್ಲೋಕಗಳು, ವಿಷ್ಣುವಿಗೆ ಸಂಬಂಧಪಟ್ಟಂತೆ 10 ಶ್ಲೋಕಗಳು, ನದಿಗೆ ಸಂಬಂಧಿಸಿದಂತೆ 5 ಶ್ಲೋಕಗಳೊಂದಿಗೆ ಹಲವು ಗ್ರಂಥಗಳನ್ನೂ ಶಂಕರರು ರಚಿಸಿದ್ದಾರೆ.

ಕೇವಲ ಶೃಂಗೇರಿಯಷ್ಟೇ ಅಲ್ಲದೆ ಇತರ ಸ್ಥಳದಲ್ಲಿಯೂ ಮಠಗಳನ್ನು ಸ್ಥಾಪಿಸುತ್ತಾರೆ. ಶಂಕರರ ತಾಯಿಯು ಅಸು ನೀಗಿದಾಗ ಸುತ್ತಮುತ್ತಲಿನ ಜನರು ಯತಿಗೆ ಕರ್ಮ ಮಾಡುವ ಹಕ್ಕಿಲ್ಲ ಎಂದು ಹೇಳುತ್ತಾರೆ. ಆದರೆ ಎಲ್ಲರನ್ನೂ ಎದುರಿಸಿದ ಶಂಕರರು ತಮ್ಮ ಯೋಗ ಬರದಿಂದಲೇ ಅಗ್ನಿಯನ್ನು ಸೃಷ್ಟಿಸುತ್ತಾರೆ. ತಮ್ಮ ಎಲ್ಲಾ ಕರ್ತವ್ಯವನ್ನು ನಿರ್ವಹಿಸಿದ ನಂತರ ಮನುಷ್ಯ ಶರೀರವನ್ನು ಬಿಟ್ಟು ಚಂದ್ರಮೌಳಿಯಾಗಿ ನಂದೀಶ್ವರನನ್ನು ಏರಿ ವಿರಾಜಿಸುತ್ತಾರೆ.

ಅದ್ವೈತ ಮತಕ್ಕೆ ರಾಜ ಮಾನ್ಯತೆ

ಶ್ರೀಪರಮೇಶ್ವರನ ಆಜ್ಞೆಯಂತೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಭೂಲೋಕದಲ್ಲಿ ಭಟ್ಟಪಾದನಾಗಿ ಜನ್ಮತಾಳುತ್ತಾನೆ. ಗುರುಕುಲದಲ್ಲಿ ವೇದವನ್ನು ಅಭ್ಯಾಸ ಮಾಡಿ ಬೃಹಸ್ಪತಿಗೆ ಸಮಾನವಾಗಿ ಬೆಳೆಯುತ್ತಾನೆ. ಕ್ರಮೇಣವಾಗಿ ಇವನಿಗೆ ರಾಜಾಶ್ರಯ ದೊರೆಯುತ್ತದೆ. ಒಮ್ಮೆ ಮಹಾರಾಜನು ಕೊಡವೊಂದರಲ್ಲಿ ಸರ್ಪವನ್ನು ಇರಿಸಿ, ರಾಜಸಭೆಯಲ್ಲಿ ಈ ಕೊಡದಲ್ಲಿ ಇರುವುದು ಏನೆಂದು ಕೇಳುತ್ತಾನೆ. ಆಗ ಒಂದು ವರ್ಗವು ಸರ್ಪ ಎಂದು ಹೇಳುತ್ತದೆ. ಆದರೆ ಭಟ್ಟಪಾದನು ಅದರಲ್ಲಿ ಇರುವುದು ಮಹಾವಿಷ್ಣುವಿನ ಮೂರ್ತಿ ಎಂದು ಹೇಳುತ್ತಾನೆ. ಪರೀಕ್ಷಿಸಿ ನೋಡಿದಾಗ ಆ ಕೊಡದಲ್ಲಿ ರಾಜನಿರಿಸಿದ್ದ ಸರ್ಪವು ಮಾಯವಾಗಿ ವಿಷ್ಣುವಿನ ಮೂರ್ತಿ ಕಂಡು ಬರುತ್ತದೆ. ಇದರಿಂದ ಪ್ರಸನ್ನನಾದ ರಾಜನು ಅದ್ವೈತ ಧರ್ಮವನ್ನು ಒಪ್ಪುತ್ತಾನೆ.

ಬರಹ: ಎಚ್.ಸತೀಶ್, ಜ್ಯೋತಿಷಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ