ಎಬಿ ಡಿವಿಲಿಯರ್ಸ್ ಟೀಮ್ ಇಂಡಿಯಾ ಮುಂದಿನ ಹೆಡ್​ಕೋಚ್; ಪ್ರಮುಖ ಸುಳಿವು ನೀಡಿದ ಸೌತ್ ಆಫ್ರಿಕಾ ದಿಗ್ಗಜ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಬಿ ಡಿವಿಲಿಯರ್ಸ್ ಟೀಮ್ ಇಂಡಿಯಾ ಮುಂದಿನ ಹೆಡ್​ಕೋಚ್; ಪ್ರಮುಖ ಸುಳಿವು ನೀಡಿದ ಸೌತ್ ಆಫ್ರಿಕಾ ದಿಗ್ಗಜ

ಎಬಿ ಡಿವಿಲಿಯರ್ಸ್ ಟೀಮ್ ಇಂಡಿಯಾ ಮುಂದಿನ ಹೆಡ್​ಕೋಚ್; ಪ್ರಮುಖ ಸುಳಿವು ನೀಡಿದ ಸೌತ್ ಆಫ್ರಿಕಾ ದಿಗ್ಗಜ

AB de Villiers : ಸೌತ್​ ಆಫ್ರಿಕಾ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಅವರು ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸ್ಥಾನ ತುಂಬುವ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಬಿ ಡಿವಿಲಿಯರ್ಸ್ ಮುಂದಿನ ಟೀಮ್ ಇಂಡಿಯಾ ಹೆಡ್​ಕೋಚ್; ಪ್ರಮುಖ ಸುಳಿವು ನೀಡಿದ ದಕ್ಷಿಣ ಆಫ್ರಿಕಾದ ದಿಗ್ಗಜ
ಎಬಿ ಡಿವಿಲಿಯರ್ಸ್ ಮುಂದಿನ ಟೀಮ್ ಇಂಡಿಯಾ ಹೆಡ್​ಕೋಚ್; ಪ್ರಮುಖ ಸುಳಿವು ನೀಡಿದ ದಕ್ಷಿಣ ಆಫ್ರಿಕಾದ ದಿಗ್ಗಜ

ಅಮೆರಿಕ  ಮತ್ತು ವೆಸ್ಟ್ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ (T20 World Cup 2024) ನಂತರ ಟೀಮ್ ಇಂಡಿಯಾದಲ್ಲಿ (Team India) ಮಹತ್ವದ ಬದಲಾವಣೆಯ ನಿರೀಕ್ಷೆ ಮಾಡಲಾಗಿದೆ. ಮಿನಿ ಸಮರ ಮುಗಿದ ನಂತರ ಹೆಡ್​ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರವಧಿ ಕೊನೆಗೊಳ್ಳಲಿದೆ. ಹಾಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್, ಅವಕಾಶ ಸಿಕ್ಕರೆ ಟೀಮ್ ಇಂಡಿಯಾ ಕೋಚ್ ಆಗುವ ಸುಳಿವು ನೀಡಿದ್ದಾರೆ.

​ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್​ನಿಂದ ಹಿಡಿದು ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್​​ವರೆಗೆ ಕ್ರಿಕೆಟ್​ನ ಹಲವು ಐಕಾನ್​​ಗಳ ಹೆಸರು ತಳುಕು ಹಾಕಿಕೊಳ್ಳುತ್ತಿವೆ. ರಿಕಿ ಪಾಂಟಿಂಗ್, ಜಸ್ಟೀನ್ ಲ್ಯಾಂಗರ್, ಆ್ಯಂಡಿ ಫ್ಲವರ್​​ ಸೇರಿ ಪ್ರಮುಖ ಆಟಗಾರರನ್ನು ಈಗಾಗಲೇ ಬಿಸಿಸಿಐ ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ. ಆದರೆ ಅವರೆಲ್ಲರೂ ಈ ಆಫರ್​ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ರಾಹುಲ್ ದ್ರಾವಿಡ್ ಮತ್ತೊಮ್ಮೆ ಮುಂದುವರೆಯುವ ಸಾಧ್ಯತೆ ಅಸಂಭವವಾಗಿದೆ.

ನಾನು ಕೋಚಿಂಗ್ ಆನಂದಿಸುತ್ತೇನೆ ಎಂದ ಎಬಿಡಿ

ಮುಖ್ಯಕೋಚ್​ ಸ್ಥಾನಕ್ಕೆ ಬಿಸಿಸಿಐ ಹುಡುಕಾಟ ನಡೆಸುತ್ತಿರುವ ಈ ವೇಳೆ ದಕ್ಷಿಣ ಆಫ್ರಿಕಾ ಎಬಿ ಡಿವಿಲಿಯರ್ಸ್ ಅವರನ್ನು ಭವಿಷ್ಯದಲ್ಲಿ ಭಾರತ ತಂಡದ ಉಸ್ತುವಾರಿ ವಹಿಸಿಕೊಳ್ಳುವ ಬಗ್ಗೆ ಇತ್ತೀಚೆಗೆ ಪ್ರಶ್ನಿಸಲಾಯಿತು. ಭವಿಷ್ಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದರೆ, ನಾನು ಕೋಚಿಂಗ್ ಅನ್ನು ಆನಂದಿಸುತ್ತೇನೆ. ಕೋಚ್​ ಹುದ್ದೆಯಲ್ಲಿ ಕೆಲವೊಂದು ಅಂಶಗಳ ಮೇಲೆ ನನಗೆ ಎಂಜಾಯ್‌ ಮಾಡಲು ಆಗುತ್ತಿಲ್ಲ ಎಂದು ಅನಿಸುತ್ತದೆ. ಅವನ್ನೆಲ್ಲಾ ನಾನು ಕಲಿಯಬೇಕಿದೆ. ಮುಂದೆ ಏನು ಬೇಕಾದರೂ ಆಗಬಹುದು. ಎಲ್ಲವೂ ಸಮಯವೇ ನಿರ್ಧರಿಸುತ್ತದೆ ಎಂದು ನ್ಯೂಸ್ 18ಗೆ ತಿಳಿಸಿದ್ದಾರೆ.

ನಿಜ, ಕೋಚಿಂಗ್ ಜವಾಬ್ದಾರಿಯನ್ನು ಆನಂದಿಸುತ್ತವೆ ಎಂದು ನಾನು ಭಾವಿಸುತ್ತೇನೆ. ವರ್ಷಗಳಲ್ಲಿ ನಾನು ಕಲಿತ ವಿಷಯಗಳು, 40ನೇ ವಯಸ್ಸಿನಲ್ಲಿ ನಾನು ಈಗ ಪಡೆದ ಪ್ರಬುದ್ಧತೆ, ನನ್ನ ವೃತ್ತಿಜೀವನ ಹಿಂತಿರುಗಿ ನೋಡಿದಾಗ ಬಹಳಷ್ಟು ವಿಷಯಗಳನ್ನು ಕಲಿಯಬೇಕು ಎಂಬುದು ಸ್ಪಷ್ಟವಾಗಿ ಕಾಣುತ್ತವೆ. ಆದ್ದರಿಂದ, ಅಂತಹ ಅಂಶಗಳನ್ನು ಕಲಿತು ಮಾರ್ಗದರ್ಶಕನಾಗಿ ಸೇವೆ ಸಲ್ಲಿಸಿದರೆ ಯುವ ಮತ್ತು ಹಿರಿಯ ಆಟಗಾರರಿಗೆ ಮೌಲ್ಯಯುತವಾಗಬಹುದು ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ ಅವಕಾಶ ಸಿಕ್ಕರೆ ಭಾರತ ತಂಡಕ್ಕೆ ಸಮರ್ಥ ಕೋಚ್ ಆಗುವ ಸುಳಿವು ಬಿಟ್ಟುಕೊಟ್ಟಿದ್ದಾರೆ.

'ನಾನು ಹೇಳಿದಂತೆ, ಎಂದಿಗೂ ಹೇಳಬೇಡಿ'

ಡಿವಿಲಿಯರ್ಸ್ ಪ್ರಸ್ತುತ ಕೋಚಿಂಗ್ ರಿಂಗ್​ಗೆ ಪ್ರವೇಶಿಸುವ ಸಾಧ್ಯತೆ ಇಲ್ಲವಾದರೂ ಭವಿಷ್ಯದಲ್ಲಿ ವಿಷಯಗಳು ಬದಲಾಗಬಹುದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್​ಮನ್​ ಅಭಿಪ್ರಾಯಪಟ್ಟಿದ್ದಾರೆ. ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78ಟಿ 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್​ನಲ್ಲಿ 184 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಆರ್​ಸಿಬಿ ಐಕಾನ್, ಕೆಲವು ಆಟಗಾರರು ಮತ್ತು ಕೆಲವು ತಂಡಗಳೊಂದಿಗೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ ಎಂದಿದ್ದಾರೆ.

ಪೂರ್ಣ ಪ್ರಮಾಣದ ಕೋಚ್​ ಆಗಬೇಕೆಂದು ಸದ್ಯಕ್ಕೇನು ಯೋಚಿಸುತ್ತಿಲ್ಲ. ನಿಜವಾಗಿಯೂ ನನಗೀಗ ಇಷ್ಟವಿಲ್ಲ. ಆದರೆ, ಇದೇ ಸತ್ಯವೇನು ಅಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಬಹುದು ಎಂದು ಅವರು ಹೇಳಿದ್ದಾರೆ. 2023ರ ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಅವರ ಅವಧಿಯನ್ನು 6 ತಿಂಗಳ ಕಾಲ ವಿಸ್ತರಿಸಲಾಗಿತ್ತು. ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ 10 ಗೆಲುವು ದಾಖಲಿಸಿ ಫೈನಲ್​​ಗೆ ಪ್ರವೇಶಿಸಿತ್ತು. ಆದಾಗ್ಯೂ, ಫೈನಲ್ ಮುಖಾಮುಖಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ದ ಸೋಲನುಭವಿಸಿತು.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

 

 

Whats_app_banner