ಕನ್ನಡ ಸುದ್ದಿ  /  ಕ್ರಿಕೆಟ್  /  ನಾನೇನು ಬಾಲಿವುಡ್ ಹೀರೋನಾ; ನೀವ್ಯಾಕೆ ನಗಲ್ಲ ಅಂತ ಕೇಳಿದ್ದಕ್ಕೂ ಕೋಪ ಮಾಡ್ಕೊಂಡ ಗೌತಮ್ ಗಂಭೀರ್​

ನಾನೇನು ಬಾಲಿವುಡ್ ಹೀರೋನಾ; ನೀವ್ಯಾಕೆ ನಗಲ್ಲ ಅಂತ ಕೇಳಿದ್ದಕ್ಕೂ ಕೋಪ ಮಾಡ್ಕೊಂಡ ಗೌತಮ್ ಗಂಭೀರ್​

Gautam Gambhir: ನೀವು ಯಾಕೆ ನಗೋದಿಲ್ಲ ಎಂದು ರವಿಚಂದ್ರನ್ ಅಶ್ವಿನ್ ಕೇಳಿದ್ದಕ್ಕೆ ನಾನೇನು ಬಾಲಿವುಡ್ ಹೀರೋನಾ ಎಂದು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಗರಂ ಆಗಿದ್ದಾರೆ.

ನಾನೇನು ಬಾಲಿವುಡ್ ಹೀರೋನಾ; ನೀವ್ಯಾಕೆ ನಗಲ್ಲ ಅಂತ ಕೇಳಿದ್ದಕ್ಕೂ ಕೋಪ ಮಾಡ್ಕೊಂಡ ಗೌತಮ್ ಗಂಭೀರ್​
ನಾನೇನು ಬಾಲಿವುಡ್ ಹೀರೋನಾ; ನೀವ್ಯಾಕೆ ನಗಲ್ಲ ಅಂತ ಕೇಳಿದ್ದಕ್ಕೂ ಕೋಪ ಮಾಡ್ಕೊಂಡ ಗೌತಮ್ ಗಂಭೀರ್​

ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಹಾಗೂ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, ನಗುವುದನ್ನು ನೀವು ನೋಡಿದ್ದೀರಾ? ಅವರ ಮುಖದಲ್ಲಿ ನಗು ಅರಳಿರುವುದು ವಿರಳ ಅಂದರೆ ತುಂಬಾ ವಿರಳ. ಎಂತಹ ಖುಷಿಯ ಸನ್ನಿವೇಶವೇ ಆದರೂ ಗಂಭೀರ್ ಯಾಕೆ ಯಾವಾಗಲೂ ಮುಖವನ್ನು ಗಂಟಿಕ್ಕಿಕೊಂಡೇ ಇರುತ್ತಾರೆ ಎಂಬುದು ಹಲವರ ಪ್ರಶ್ನೆ. ಇದೇ ಪ್ರಶ್ನೆ ಕೇಳಿದ್ದಕ್ಕೂ ಗೌತಿ ಗರಂ ಆಗಿದ್ದು, ಟೀಕಾಕಾರರ ಬಾಯ್ಮುಚ್ಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೆಕೆಆರ್​ ನಾಯಕನಾಗಿದ್ದಲ್ಲೂ ಕೆಕೆಆರ್ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದ ಗೌತಮ್ ಗಂಭೀರ್​ ಈಗ ಮೆಂಟರ್ ಆದ ಮೊದಲ ಆವೃತ್ತಿಯಲ್ಲೇ ಫೈನಲ್​ಗೇರಿಸಿದ್ದಾರೆ. ಆ ಮೂಲಕ ಶಾರೂಖ್​ ಖಾನ್ ನೇತೃತ್ವದ ತಂಡದ ಪಾಲಿಗೆ ಲಕ್ಕಿ ಚಾರ್ಮ್​ ಆಗಿದ್ದಾರೆ. ಕ್ವಾಲಿಫೈಯರ್​​-1ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ 8 ವಿಕೆಟ್​ಗಳ ಗೆಲುವು ಸಾಧಿಸಿತು. ಮೇ 26 ರಂದು ಚೆನ್ನೈನಲ್ಲಿ ನಡೆಯುವ ಫೈನಲ್​​​ನಲ್ಲಿ ಪ್ರಶಸ್ತಿಗಾಗಿ ಹೋರಾಡಲು ಮತ್ತೊಂದು ತಂಡಕ್ಕೆ ಕಾಯುತ್ತಿದೆ.

ಎಸ್​ಆರ್​​ಹೆಚ್​ ವಿರುದ್ಧ ಮೊದಲ ಕ್ವಾಲಿಫೈಯರ್​​ಗೂ ಮುನ್ನ ಟೀಮ್ ಇಂಡಿಯಾ ಹಾಗೂ ರಾಜಸ್ತಾನ್ ರಾಯಲ್ಸ್ ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಶೋ ಕುಟ್ಟಿ ಸ್ಟೋರೀಸ್ ವಿತ್ ಆಶ್‌ನಲ್ಲಿ ಪಾಲ್ಗೊಂಡಿದ್ದ ಗೌತಮ್ ಗಂಭೀರ್​, ತನ್ನ ನಗುವಿನ ಕುರಿತು ಸ್ಪಷ್ಟನೆ ನೀಡಿದ್ದಾರೆ. ತನ್ನ ಶೋನಲ್ಲಿ ಹಲವು ಪ್ರಶ್ನೆಗಳೊಂದಿಗೆ ನೀವು ನಗಲ್ಲ ಎಂದು ಫ್ಯಾನ್ಸ್ ಪರವಾಗಿ ಅಶ್ವಿನ್, ಗಂಭೀರ್​ಗೆ ಪ್ರಶ್ನೆ ಕೇಳಿದ್ದಾರೆ. ಉತ್ತರ ಕೊಡುವಾಗಲೂ ಗೌತಿ ಕೋಪಗೊಂಡಿದ್ದಾರೆ.

ನಾನೇನು ಬಾಲಿವುಡ್ ಹೀರೋನಾ ಎಂದ ಗೌತಮ್ ಗಂಭೀರ್

ಈ ಪ್ರಶ್ನೆ ಯಾಕೆ ಕೇಳುತ್ತಾರೆ ಎಂಬುದು ನನಗೆ ಅರ್ಥವಾಗಲ್ಲ. ಅವರು ನಗುವುದಿಲ್ಲ, ಯಾವಾಗಲೂ ಕೋಪದಿಂದ ಇರುತ್ತಾರೆ, ಯಾವಾಗಲೂ ಮುಂಗೋಪಿ, ಯಾವಾಗಲೂ ಗಂಭೀರವಾಗಿರುತ್ತಾರೆ. ಹೀಗೆ ಕೇಳುತ್ತಲೇ ಇರುತ್ತಾರೆ. ಜನರು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಮೈದಾನಕ್ಕೆ ಬರುತ್ತಾರೆ. ನನ್ನನ್ನು ನೋಡಲು ಅಲ್ಲ. ನಾನೇನು ಮನರಂಜನೆ ನೀಡುವ ವ್ಯಕ್ತಿಯಲ್ಲ. ಬಾಲಿವುಡ್ ನಟನೂ ಅಲ್ಲ ಅಥವಾ ಕಾರ್ಪೊರೇಟ್ ವ್ಯಕ್ತಿಯೂ ಅಲ್ಲ. ನಾನೊಬ್ಬ ಕ್ರಿಕೆಟಿಗ ಎಂದು ಗಂಭೀರ್ ಹೇಳುವಾಗ ಗರಂ ಆಗಿದ್ದಾರೆ.

ತಂಡದಲ್ಲಿ ಸೂಕ್ತವಾದ ವಾತಾವರಣ ನಿರ್ಮಿಸುವುದು ಹಾಗೂ ಪಂದ್ಯ ಗೆಲ್ಲಲು ಪ್ರಯತ್ನಿಸುವುದು ನನ್ನ ಏಕೈಕ ಜವಾಬ್ದಾರಿಯಾಗಿದೆ. ನನ್ನ ಕೆಲಸವೆಂದರೆ ಡ್ರೆಸ್ಸಿಂಗ್ ರೂಮ್ ಅನ್ನು ಸಂತೋಷವಾಗಿಡುವುದು. ತಂಡದ ಆಟಗಾರರು ಹೋರಾಡಲು ಮತ್ತು ಪ್ರತಿರೋಧ ತೋರಲು ನಾನು ಏನೆಲ್ಲಾ ಮಾಡಬೇಕು ಎಂಬ ಹಕ್ಕನ್ನು ನಾನು ಹೊಂದಿದ್ದೇನೆ. ತಂಡವನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದೆಲ್ಲವನ್ನೂ ನಾನು ಕಲಿತಿದ್ದೇನೆ. ಕ್ರಿಕೆಟ್​ನಲ್ಲೇ ನಾನು ತೊಡಗಿಸಿಕೊಂಡಿದ್ದರೆ, ಅದನ್ನು ನನ್ನ ಜೀವನದ ಕೊನೆಯವರೆಗೂ ಮಾಡುತ್ತೇನೆ ಎಂದಿದ್ದಾರೆ.

ಗಂಭೀರ್​ ನಾಯಕತ್ವದಲ್ಲಿ ಕೆಕೆಆರ್​ 2 ಟ್ರೋಫಿ ಗೆಲುವು

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿದ್ದ ಅವಧಿಯಲ್ಲಿ ತಂಡಕ್ಕೆ ಎರಡು ಟ್ರೋಫಿ ಗೆದ್ದುಕೊಟ್ಟಿದ್ದಾರೆ. 2012ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದ ಕೆಕೆಆರ್, 2014ರಲ್ಲಿ ಪಂಜಾಬ್ ಕಿಂಗ್ಸ್​ ಎದುರು ಎರಡನೇ ಬಾರಿಗೆ ಟ್ರೋಫಿ ಗೆದ್ದಿತ್ತು. ಈ ಎರಡು ಪ್ರಶಸ್ತಿಗಳನ್ನೂ ಗಂಭೀರ್ ನಾಯಕತ್ವದಲ್ಲೇ ಗೆದ್ದಿದ್ದು ವಿಶೇಷ. 2021ರಲ್ಲಿ ಕೆಕೆಆರ್ ತಂಡವನ್ನು ಇಯಾನ್ ಮಾರ್ಗನ್ ತಂಡವನ್ನು ಮುನ್ನಡೆಸಿ ಫೈನಲ್​ಗೆ ಕೊಂಡೊಯ್ದಿದ್ದರು. ಆದರೆ ಸಿಎಸ್​ಕೆ ವಿರುದ್ಧ ಸೋತಿತ್ತು.

ಇದೀಗ ಗಂಭೀರ್​ ತಂಡದ ನಾಯಕನಾಗದಿದ್ದರೂ ಮೆಂಟರ್​ ಸೇವೆ ಸಲ್ಲಿಸುತ್ತಿದ್ದು, ಮೂರನೇ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದ್ದಾರೆ. 2014ರಲ್ಲಿ ಕೊನೆಯ ಬಾರಿಗೆ ಟ್ರೋಫಿ ಜಯಿಸಿರುವ ಕೆಕೆಆರ್​, ಇದೀಗ 10 ವರ್ಷಗಳ ನಂತರ ಪ್ರಶಸ್ತಿಯ ಕನಸಿನಲ್ಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಮತ್ತು ಆರ್​ಆರ್ ನಡುವೆ ಗೆದ್ದವರು ಎರಡನೇ ಕ್ವಾಲಿಫೈಯರ್ ಆಡಲಿದ್ದಾರೆ. ಅಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಇಲ್ಲಿ ಗೆದ್ದ ತಂಡದೊಂದಿಗೆ ಕೆಕೆಆರ್​ ಪ್ರಶಸ್ತಿಗೆ ಹೋರಾಟ ನಡೆಸಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ