ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಎಸ್‌ಆರ್‌ಎಚ್‌ Vs ಮುಂಬೈ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶ ಸೇರಿ ಸಂಪೂರ್ಣ ವಿವರ

IPL 2024 Latest Updates: ಎಸ್‌ಆರ್‌ಎಚ್‌ vs ಮುಂಬೈ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶ ಸೇರಿ ಸಂಪೂರ್ಣ ವಿವರ

Indian Premier League 2024 Updates: ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ 2024 ಆವೃತ್ತಿಯು 7ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವ ಈ ತಂಡಗಳು ಮೊದಲ ಗೆಲುವಿಗೆ ಎದುರು ನೋಡುತ್ತಿವೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ಲೇಟೆಸ್ಟ್ ಅಪ್ಡೇಟ್‌ ಇಲ್ಲಿದೆ.

ಎಸ್‌ಆರ್‌ಎಚ್‌ vs ಮುಂಬೈ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಎಸ್‌ಆರ್‌ಎಚ್‌ vs ಮುಂಬೈ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier League 2024) 17ನೇ ಆವೃತ್ತಿಯಲ್ಲಿ ಮಾರ್ಚ್‌ 27ರ ಮಂಗಳವಾರ ಎಸ್‌ಆರ್‌ಎಚ್‌ ಮತ್ತು ಮುಂಬೈ ಇಂಡಿಯನ್ಸ್‌ (Sunrisers Hyderabad vs Mumbai Indians) ತಂಡಗಳ ಹಣಾಹಣಿ ನಡೆಯುತ್ತಿದೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಗೆಲುವು ಸಾಧಿಸಲು ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಆತಥೇಯ ತಂಡ ಸಜ್ಜಾಗಿದೆ. ಅತ್ತ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋಲುಂಡ ಮುಂಬೈ, ಜಯದ ಹಳಿಗೆ ಮರಳಲು ತಂತ್ರ ರೂಪಿಸುತ್ತಿದೆ. ಇಂದಿನ ಪಂದ್ಯವು ಹಾರ್ದಿಕ್‌ ಪಾಂಡ್ಯ ಸೇರಿದಂತೆ ಉಭಯ ತಂಡಗಳ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲುವು ಅನಿವಾರ್ಯವಾಗಿದೆ.

ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ; ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ

ಸನ್​ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ರನ್‌ ಸುನಾಮಿ ಹರಿಸಿದೆ. ಟ್ರಾವಿಸ್ ಹೆಟ್ 18 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಸಿಡಿಸಿದ ಕೆಲವೇ ನಿಮಿಷಗಳಲ್ಲಿ, ಭಾರತದ ಎಡಗೈ ಆಟಗಾರ ಅಭಿಷೇಕ್ ಶರ್ಮಾ ಆ ದಾಖಲೆಯನ್ನು ಮುರಿದಿದ್ದಾರೆ. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಶತಕ ಸಿಡಿಸಿ ಎಸ್‌ಆರ್‌ಎಚ್‌ ಪರ ವಿಶೇಷ ದಾಖಲೆ ಬರೆದಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಎಸ್‌ಆರ್‌ಎಚ್‌ ವಿರುದ್ಧ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್ ಆಯ್ಕೆ

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ 2024ರ ಆವೃತ್ತಿಯ 8ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ತಾವಾಡುತ್ತಿರುವ ಎರಡನೇ ಪಂದ್ಯದಲ್ಲಿ ಗೆಲುವನ್ನು ಕಾಣಲು ಹಾರ್ದಿಕ್‌ ಪಾಂಡ್ಯ ಮತ್ತು ದುಬಾರಿ ನಾಯಕ ಪ್ಯಾಟ್‌ ಕಮಿನ್ಸ್‌ ಬಳಗ ಸಜ್ಜಾಗಿದೆ. ಪಂದ್ಯದ ಟಾಸ್‌ ಹಾಗೂ ಆಡುವ ಬಳಗದ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ.

ಟ್ರೆಂಡಿಂಗ್​ ಸುದ್ದಿ

ಮುಂಬೈ ಇಂಡಿಯನ್ಸ್‌ vs ಎಸ್‌ಆರ್‌ಎಚ್‌ ಸಂಭಾವ್ಯ ತಂಡ

ಉಭಯ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಕೊನೆಯ ಪಂದ್ಯದಲ್ಲಿ ಎಂಐ ಹಾಗೂ ಹೈದರಾಬಾದ್‌ ಚೇಸಿಂಗ್‌ನಲ್ಲಿ ಕೊನೆಯ ಕ್ಷಣದವರೆಗೆ ಪ್ರಯತ್ನಿಸದರೂ ಅಂತಿಮ ಕ್ಷಣದಲ್ಲಿ ಗೆಲುವು ದಕ್ಕಲಿಲ್ಲ. ಇಂದು ನಡೆಯುತ್ತಿರುವ ಮಹತ್ವದ ಪಂದ್ಯಕ್ಕೆ ತಂಡಗಳ ಆಡುವ ಬಳಗ ಹೇಗಿರಲಿದೆ, ಇಂಪ್ಯಾಕ್ಟ್‌ ಆಟಗಾರರು ಯಾರು ಎಂಬುದನ್ನು ನೋಡೋಣ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಎಸ್ಆರ್‌ಎಚ್ vs ಮುಂಬೈ ಇಂಡಿಯನ್ಸ್ ಪಂದ್ಯದ ಪಿಚ್, ಹವಾಮಾನ ವರದಿ

ಐಪಿಎಲ್‌ನ ಅತ್ಯಂತ ದುಬಾರಿ ನಾಯಕ ಪ್ಯಾಟ್‌ ಕಮಿನ್ಸ್‌ ನೇತೃತ್ವದ ಹೈದರಾಬಾದ್ ತಂಡವು, ತವರು ಮೈದಾನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸುತ್ತಿದೆ. ಅತ್ತ ಗುಜರಾತ್‌ ತಂಡದಿಂದ ತಮ್ಮ ಹಳೆಯ ತಂಡಕ್ಕೆ ಮರಳಿ ನಾಯಕತ್ವ ವಹಿಸಿರುವ ಹಾರ್ದಿಕ್‌ ಪಾಂಡ್ಯ ಮುಂದೆ, ಹಲವು ಸವಾಲುಗಳಿವೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯಗೆ ಯಾವುದೇ ಬೆಂಬಲ ಸಿಗಲಿಲ್ಲ. ಅತ್ತ ದುಬಾರಿ ಬೆಲೆ ತೆತ್ತು ಕಮಿನ್ಸ್‌ ಅವರನ್ನು ನಾಯಕನಾಗಿ ಮಾಡಿರುವ ಹೈದರಾಬಾದ್‌, ಈ ಬಾರಿ ಯಶಸ್ಸು‌ ಕಾಣುವ ಉತ್ಸಾಹದಲ್ಲಿದೆ. ಪಂದ್ಯದ ಪಿಚ್‌, ಹವಾಮಾನ ವರದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ