ಕನ್ನಡ ಸುದ್ದಿ  /  ಕ್ರಿಕೆಟ್  /  ಯಾಕ್ರಪ್ಪ ನೀವೇ ಹಿಂಗಾದ್ರೆ ಹೆಂಗೆ; ಟಿ20 ವಿಶ್ವಕಪ್​ಗೂ ಮುನ್ನ ತಲೆನೋವು ಹೆಚ್ಚಿಸಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ

ಯಾಕ್ರಪ್ಪ ನೀವೇ ಹಿಂಗಾದ್ರೆ ಹೆಂಗೆ; ಟಿ20 ವಿಶ್ವಕಪ್​ಗೂ ಮುನ್ನ ತಲೆನೋವು ಹೆಚ್ಚಿಸಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ

Rohit Sharma - Hardik Pandya : ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಫಾರ್ಮ್​, ಭಾರತೀಯ ಕ್ರಿಕೆಟಿಗರ ಚಿಂತೆ ಹೆಚ್ಚಿಸಿದೆ.

ಯಾಕ್ರಪ್ಪ ನೀವೇ ಹಿಂಗಾದ್ರೆ ಹೆಂಗೆ; ಟಿ20 ವಿಶ್ವಕಪ್​ಗೂ ಮುನ್ನ ತಲೆನೋವು ಹೆಚ್ಚಿಸಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ
ಯಾಕ್ರಪ್ಪ ನೀವೇ ಹಿಂಗಾದ್ರೆ ಹೆಂಗೆ; ಟಿ20 ವಿಶ್ವಕಪ್​ಗೂ ಮುನ್ನ ತಲೆನೋವು ಹೆಚ್ಚಿಸಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ

ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ (T20 World Cup 2024) ಸಮೀಪಿಸುತ್ತಿದೆ. 2013ರ ನಂತರ ಐಸಿಸಿ ಕಿರೀಟಕ್ಕೆ ಮುತ್ತಿಕ್ಕಲು ಟೀಮ್ ಇಂಡಿಯಾ ಸಜ್ಜಾಗಿದೆ. ಏಪ್ರಿಲ್ 30ರಂದು 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಘೋಷಿಸಿತು. ಆದರೆ, ನಾಯಕ ರೋಹಿತ್​ ಶರ್ಮಾ ಮತ್ತು ಉಪನಾಯಕ ಹಾರ್ದಿಕ್​ ಪಾಂಡ್ಯ (Rohit Sharma - Hardik Pandya) ಅವರ ಆಟ ವಿಶ್ವಕಪ್​ಗೂ ಮುನ್ನ ಆತಂಕ ಹೆಚ್ಚಿಸಿದೆ. ತಂಡ ಪ್ರಕಟಿಸಿದ ನಂತರ ಇಬ್ಬರ ಪ್ರದರ್ಶನ ಹಳಿ ತಪ್ಪಿದೆ. ಅಂಕಿ-ಅಂಶಗಳೇ ಇದನ್ನು ನಿರೂಪಿಸುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಜೂನ್ 1 ರಿಂದ ಟಿ20 ವಿಶ್ವಕಪ್ ಪ್ರಾರಂಭವಾಗಲಿದ್ದು, ಅದೇ ತಿಂಗಳ 29ರ ತನಕ ನಡೆಯಲಿದೆ. ರೋಹಿತ್​ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9ರಂದು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆದರೆ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗ ನಾಯಕ ಮತ್ತು ಉಪ ನಾಯಕ ಫಾರ್ಮ್​​ ಅಭಿಮಾನಿಗಳ ಚಿಂತೆ ದುಪ್ಪಟ್ಟುಗೊಳಿಸಿದೆ.

ಅಬ್ಬರಿಸಿ ತಣ್ಣಗಾದ ರೋಹಿತ್​ ಶರ್ಮಾ

ಮುಕ್ತಾಯದ ಹಂತ ತಲುಪಿರುವ ಪ್ರಸಕ್ತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಮೊದಲಾರ್ಧದಲ್ಲಿ ಸಿಡಿದ ಹಿಟ್​ಮ್ಯಾನ್​, ಸೆಕೆಂಡ್ ಹಾಫ್​ನಲ್ಲಿ ತಣ್ಣಗಾಗಿದ್ದಾರೆ. ಆರಂಭಿಕ 7 ಪಂದ್ಯಗಳಲ್ಲಿ 49.5ರ ಬ್ಯಾಟಿಂಗ್ ಸರಾಸರಿಯಲ್ಲಿ 297 ರನ್ ಗಳಿಸಿದ್ದರು. ಸ್ಟ್ರೈಕ್​ರೇಟ್ ಇತ್ತು. ಆದರೆ ಕಳೆದ 6 ಪಂದ್ಯಗಳಲ್ಲಿ ರೋಹಿತ್ ಗಳಿಸಿದ್ದು, ಕೇವಲ 52 ರನ್. ಅವರ ಬ್ಯಾಟಿಂಗ್ ಸರಾಸರಿ 8.66 ಆಗಿದೆ. ಸ್ಟ್ರೈಕ್​ರೇಟ್​ 90+ ಅಷ್ಟೆ.

ಇದು ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿಂತೆ ಹೆಚ್ಚಾಗಲು ಕಾರಣವಾಗಿದೆ. ಹೀನಾಯ ಬ್ಯಾಟಿಂಗ್​ ಪ್ರದರ್ಶನವನ್ನು ವಿಶ್ವಕಪ್​ನಲ್ಲೂ ಮುಂದುವರೆದರೆ ಟ್ರೋಫಿ ಕನಸು ಭಗ್ನವಾಗುವುದು ಖಚಿತ ಎನ್ನುತ್ತಿದ್ದಾರೆ ಫ್ಯಾನ್ಸ್. ಪ್ರತಿ ಪಂದ್ಯದಲ್ಲೂ 8ರ ಸರಾಸರಿಯಲ್ಲಿ ರನ್ ಗಳಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. 13 ಪಂದ್ಯಗಳಲ್ಲಿ 1 ಶತಕ ಸಹಿತ 29.08ರ ಬ್ಯಾಟಿಂಗ್ ಸರಾಸರಿಯಲ್ಲಿ 349 ರನ್ ಗಳಿಸಿದ್ದಾರೆ. ಸ್ಟ್ರೈಕ್​ರೇಟ್ 145.42. ರೋಹಿತ್​​ ತಮ್ಮ ಕೊನೆಯ ಪಂದ್ಯದಲ್ಲಿ ಅಬ್ಬರಿಸಿ ಲಯಕ್ಕೆ ಮರಳಬೇಕಿರುವುದು ಅನಿವಾರ್ಯ.

ಬ್ಯಾಟಿಂಗ್​-ಬೌಲಿಂಗ್ ಎರಡರಲ್ಲೂ ಹಾರ್ದಿಕ ಫೇಲ್​

ಬಿಸಿಸಿಐ ಚಿಂತೆ ಹೆಚ್ಚಿಸಿರುವ ಮತ್ತೊಬ್ಬ ಆಟಗಾರ ಮುಂಬೈ ಇಂಡಿಯನ್ಸ್ ನಾಯಕ ಹಾಗೂ ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಕಳಪೆ ಫಾರ್ಮ್​​ನಲ್ಲಿ ಮುಂದುವರೆದಿದ್ದಾರೆ. ಬ್ಯಾಟಿಂಗ್​​-ಬೌಲಿಂಗ್​ ಮತ್ತು ನಾಯಕನಾಗಿಯೂ ಯಶಸ್ಸು ಕಾಣಲು ವಿಫಲರಾಗಿದ್ದಾರೆ. ತನ್ನ ನಾಯಕತ್ವದಲ್ಲಿ ಮುಂಬೈ, 13ರಲ್ಲಿ 9 ಪಂದ್ಯ ಸೋಲೊಪ್ಪಿಕೊಂಡಿದೆ. ಅಲ್ಲದ, ಎಂಐ ಎಲಿಮಿನೇಟ್ ಕೂಡ ಆಗಿದೆ. ಇದರೊಂದಿಗೆ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

13 ಐಪಿಎಲ್ ಪಂದ್ಯಗಳಲ್ಲಿ 18.18ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 200 ರನ್ ಗಳಿಸಿದ್ದಾರೆ. 144.93ರ ಸ್ಟ್ರೈಕ್​ರೇಟ್​​ನಲ್ಲಿ ರನ್ ಕಲೆ ಹಾಕಿರುವ ಪಾಂಡ್ಯ, 1 ಅರ್ಧಶತಕವನ್ನೂ ಸಿಡಿಸಿಲ್ಲ. ಬೌಲಿಂಗ್​ನಲ್ಲಿ 204 ಎಸೆತಗಳನ್ನು ಎಸೆದಿದ್ದು 360 ರನ್ ಬಿಟ್ಟುಕೊಟ್ಟಿದ್ದಾರೆ. 11 ವಿಕೆಟ್ ಪಡೆದಿದ್ದಾರೆ. ಪ್ರತಿ ಓವರ್​ಗೆ 10.59 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿರುವ ಪಾಂಡ್ಯ ಅವರ ಬೌಲಿಂಗ್ ಸರಾಸರಿ 32.73. ಇಷ್ಟರ ಮಟ್ಟಿಗೆ ಕಳಪೆ ಪ್ರದರ್ಶನ ನೀಡಿರುವ ಎಂಐ ನಾಯಕ, ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ವಿಶ್ವಕಪ್​ಗೆ ತಂಡ ಪ್ರಕಟಗೊಂಡ ನಂತರ ಟೀಮ್​ಗೆ ಆಯ್ಕೆಯಾದ ಭಾರತದ ಯಾವೊಬ್ಬ ಆಟಗಾರನೂ ಸಹ ಉತ್ತಮ ಪ್ರದರ್ಶನ ನೀಡಿಲ್ಲ. ಕೊಹ್ಲಿ-ಬುಮ್ರಾ ಪ್ರಸ್ತುತ ಕ್ರಮವಾಗಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್​ ಕ್ಯಾಪ್ ಅನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಉಳಿದ ಪಂದ್ಯಗಳಲ್ಲಾದರೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಯಕ್ಕೆ ಮರಳಬೇಕಿದೆ. ಟಿ20 ವಿಶ್ವಕಪ್​ನಲ್ಲಿ ಯಾರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

IPL_Entry_Point