ನಾನು ಎಲ್ಲರನ್ನೂ ಬೇಡಿಕೊಳ್ಳುತ್ತಿದ್ದೇನೆ: ವಿರಾಟ್ ಕೊಹ್ಲಿ ಕುಟುಂಬಕ್ಕೆ ಮತ್ತೆ ಕ್ಷಮೆಯಾಚಿಸಿದ ಎಬಿ ಡಿವಿಲಿಯರ್ಸ್
Ab de Villiers on Virat Kohli : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಹೇಳಿದ್ದ ನಂತರ ಇದು ಸುಳ್ಳು ಸುದ್ದಿ, ನಾನು ದೊಡ್ಡ ತಪ್ಪು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿಡಿ ವಿಲಿಯರ್ಸ್ ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ (BCCI) ಭಾರತ ತಂಡವನ್ನು (Team India) ಪ್ರಕಟಿಸಿದೆ. ಈ ಪಂದ್ಯಗಳಿಗೆ ವಿರಾಟ್ ಕೊಹ್ಲಿ (Virat Kohli) ಭಾರತ ತಂಡಕ್ಕೆ ಮರಳುತ್ತಾರೆ ಎಂದು ನಿರೀಕ್ಷಿಸಿದ್ದರು. ಈಗ ಅಧಿಕೃತ ಸಂದೇಶ ಹೊರಬಿದ್ದಿದ್ದು, ಈ ಸಿರೀಸ್ನಿಂದ ಹೊರಗುಳಿದಿದ್ದಾರೆ. 13 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೊಹ್ಲಿ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಸರಣಿಯ ಉಳಿದ ಪಂದ್ಯಗಳಿಗೆ ಆಯ್ಕೆಗೆ ಅಲಭ್ಯರಾಗುತ್ತಾರೆ ಎಂದು ಬಿಸಿಸಿಐ ಪೋಸ್ಟ್ ಮಾಡಿದೆ.
ತಂಡ ಘೋಷಣೆಯಾದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರ ಕುಟುಂಬಕ್ಕೆ ಎಬಿಡಿ ವಿಲಿಯರ್ಸ್ (AB de Villiers) ಮತ್ತೊಮ್ಮೆ ಕ್ಷಮೆ ಕೋರಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಹೇಳಿದ್ದ ನಂತರ ಇದು ಸುಳ್ಳು ಸುದ್ದಿ, ನಾನು ದೊಡ್ಡ ತಪ್ಪು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿಡಿ, ಯೂಟ್ಯೂಬ್ನಲ್ಲಿ ಮಾತನಾಡಿ ಭಾರತೀಯ ಕ್ರಿಕೆಟಿಗನ ಕುಟುಂಬಕ್ಕೆ ಕ್ಷಮೆ ಕೋರಿದ್ದಾರೆ. ನಾನು ಎಲ್ಲರನ್ನೂ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾದ ನಂತರ ಗೈರಿಗೆ ಕಾರಣ ಏನೆಂಬುದನ್ನು ಎಬಿಡಿ ಬಹಿರಂಗಪಡಿಸಿದ್ದರು. ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದರು. ಇದು ಬಿರುಗಾಳಿಯಂತೆ ಹಬ್ಬಿತ್ತು. ಇದಾದ ಕೆಲವೇ ದಿನಗಳಲ್ಲಿ ಮಾಜಿ ಕ್ರಿಕೆಟಿಗ ನಾನು ಹೇಳಿದ್ದು ಸುಳ್ಳು. ಅರಿವಿಲ್ಲದೆ ದುಡುಕಿ ಮಾತಾಡಿದೆ. ದೊಡ್ಡ ಪ್ರಮಾದ ಮಾಡಿಬಿಟ್ಟೆ ಎಂದು ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದರು. ಆದರೀಗ ಅದೇ ಹೇಳಿಕೆಗೆ ಮತ್ತೆ ಸಾರಿ ಕೇಳಿದ್ದಾರೆ.
‘ನಾನು ಕೊಹ್ಲಿ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ’
ನನ್ನ ಸ್ನೇಹಿತ ವಿರಾಟ್ ಕೊಹ್ಲಿ ಸರಣಿಗೆ ಇನ್ನೂ ಲಭ್ಯವಿಲ್ಲ. ಅವರಿಗೆ ಅರ್ಹವಾದ ಗೌಪ್ಯತೆ ನೀಡುವಂತೆ ಎಲ್ಲರಿಗೂ ಮೊರೆಯಿಡುತ್ತೇನೆ. ಮೊದಲು ಕುಟುಂಬವೇ ಆದ್ಯತೆಯಾಗಿರುತ್ತದೆ. ನಿಖರವಾಗಿ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಅದನ್ನು ಗೌರವಿಸುವಂತೆ ನಾನು ನಮ್ಮೆಲ್ಲರನ್ನು ಕೇಳುತ್ತಿದ್ದೇನೆ. ನನ್ನಿಂದ ಪ್ರಮಾದವಾಗಿದೆ ಮತ್ತು ಅದಕ್ಕಾಗಿ ನಾನು ಕೊಹ್ಲಿ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಮೊದಲಿನಂತೆ ಹಿಂತಿರುಗಲಿ ಎಂದ ಎಬಿಡಿ
ನಾನು ದೃಢೀಕರಿಸದ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ನಾನು ಅವರನ್ನು ಮತ್ತು ಅವರ ಕುಟುಂಬ ಮತ್ತು ಅವರ ಖಾಸಗಿ ಸಮಯವನ್ನು ಗೌರವಿಸಲು ಅಲ್ಲಿರುವ ಪ್ರತಿಯೊಬ್ಬರನ್ನು ಬೇಡಿಕೊಳ್ಳುತ್ತಿದ್ದೇನೆ. ಆಶಾದಾಯಕವಾಗಿ, ನಾವು ವಿರಾಟ್ ಅವರನ್ನು ಹಿಂತಿರುಗಿ, ಯಾವಾಗಲೂ ಇರುವಂತೆ ಸಂತೋಷದಿಂದ ಮತ್ತು ರನ್ ಗಳಿಸುವುದನ್ನು ನೋಡುತ್ತೇವೆ ಎಂದು ಡಿವಿಲಿಯರ್ಸ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸೆಷನ್‌ನಲ್ಲಿ ಕೋರಿದ್ದಾರೆ.