Bangalore ಅಲ್ಲ, Bengaluru; ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ವಿರಾಟ್ ಕೊಹ್ಲಿ-idu rcb ya hosa adhyaya chinnaswamy crowd goes wild as virat kohli speaks kannada at rcb unbox event before ipl 2024 prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Bangalore ಅಲ್ಲ, Bengaluru; ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ವಿರಾಟ್ ಕೊಹ್ಲಿ

Bangalore ಅಲ್ಲ, Bengaluru; ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ವಿರಾಟ್ ಕೊಹ್ಲಿ

Virat Kohli : ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ‘ಆರ್​ಸಿಬಿ ಅನ್​ಬಾಕ್ಸ್ ಈವೆಂಟ್’​ನಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಅವರು ಕನ್ನಡದಲ್ಲಿ ಮಾತನಾಡಿ ಹೆಸರು ಬದಲಾವಣೆಗೆ ಚಾಲನೆ ನೀಡಿದರು.

ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ವಿರಾಟ್ ಕೊಹ್ಲಿ
ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳಿದ ವಿರಾಟ್ ಕೊಹ್ಲಿ

ಬ್ಯಾಂಗಳೂರ್ ಎಂಬ ಹೆಸರನ್ನು ಬೆಂಗಳೂರು ಎಂದು ಬದಲಿಸಲು ವರ್ಷಗಳಿಂದ ಒತ್ತಾಯ ಕೇಳಿ ಬರುತ್ತಿತ್ತು. ಇದೀಗ ಹಲವು ವರ್ಷಗಳ ಕನಸನ್ನು ಆರ್​​ಸಿಬಿ ಮಾಲೀಕರು ನನಸು ಮಾಡಿದ್ದಾರೆ. 2008ರಿಂದ ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೂರ್‌ (Bangalore) ಎಂದು ಆರ್​ಸಿಬಿಯನ್ನು ಕರೆಯಲಾಗುತ್ತಿತ್ತು. ಈಗ ಬೆಂಗಳೂರು (Bengaluru) ಎಂದು ‘ಆರ್​​ಸಿಬಿ ಅನ್​ಬಾಕ್ಸ್ ಈವೆಂಟ್’ನಲ್ಲಿ ಅಧಿಕೃತವಾಗಿ ಬದಲಾವಣೆ ಮಾಡಲಾಗಿದೆ.

ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಅವರು ಕನ್ನಡದಲ್ಲಿ ಮಾತನಾಡಿ ಹೆಸರು ಬದಲಾವಣೆಗೆ ಚಾಲನೆ ನೀಡಿದರು. ಈ ಹಿಂದೊಮ್ಮೆ ‘ಈ ಸಲ ಕಪ್ ನಮ್ದೆ’ ಎಂದು ಕನ್ನಡದಲ್ಲಿ ಹೇಳಿದ್ದನ್ನೇ ಕೊಹ್ಲಿ ಕನ್ನಡ ಪ್ರೇಮ ಎಂದು ಹೇಳಲಾಗಿತ್ತು. 2024ರ ಅನ್​ಬಾಕ್ಸ್​ ಈವೆಂಟ್​ನಲ್ಲಿ ಅವರ ಸ್ಪಷ್ಟವಾದ ಕನ್ನಡ ಮಾತುಗಳಿಂದ ‘ಇದು ಆರ್​ಸಿಬಿಯ ಹೊಸ ಅಧ್ಯಾಯ’ ಎಂದು ಹೇಳಿದ್ದು ಇಡೀ ಮೈದಾನವೇ ಪ್ರತಿಧ್ವನಿಸಿತು.

ನಮ್ಮ ಪ್ರೀತಿಯ ನಗರ, ಇಲ್ಲಿನ ಪರಂಪರೆ ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯವನ್ನು ಪ್ರಸ್ತುತಪಡಿಸುತ್ತಿದ್ದೇವೆ ಎನ್ನುತ್ತಾರೆ. Royal Challengers Bangalore ಬದಲಿಗೆ Royal Challengers Bengaluru ಎಂದು ಅಧಿಕೃತವಾಗಿ ಬದಲಾವಣೆ ಮಾಡಲಾಯಿತು. ನಿಮ್ಮ ತಂಡ, ನಿಮ್ಮ ಆರ್​​ಸಿಬಿ ಎಂದು ಹೆಸರಿನ ಜೊತೆಗೆ ಬದಲಾದ ಲೋಗೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಭಿಯಾನಕ್ಕೂ ಮುನ್ನ ನಡೆದ ಈವೆಂಟ್​ನಲ್ಲಿ ಅಭಿಮಾನಿಗಳಿಗೆ ಮನವಿಯೊಂದನ್ನು ಮನವಿ ಮಾಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ ಪ್ರಶಸ್ತಿ ಗೆದ್ದ ಮಹಿಳಾ ತಂಡಕ್ಕೆ ಪುರುಷರ ತಂಡವು ಆತ್ಮೀಯ ಸ್ವಾಗತ ಕೋರಿತು. ಮುಂಬರುವ ಆವೃತ್ತಿಗೆ ತಮ್ಮ ಹೊಸ ಜೆರ್ಸಿ ಬಿಡುಗಡೆ ಮಾಡಿದ ಆರ್​ಸಿಬಿ, ಕರ್ನಾಟಕ ಮತ್ತು ತಮ್ಮ ಮಾಜಿ ಆಟಗಾರ ವಿನಯ್ ಕುಮಾರ್​​ಗೆ ಹಾಲ್​ ಆಫ್ ಫೇಮ್ ನೀಡಿ ಗೌರವಿಸಲಾಯಿತು.

ಕಿಂಗ್ ಎಂದು ಕರೆಯಬೇಡಿ ಎಂದ ಕೊಹ್ಲಿ

ಈವೆಂಟ್​​ನಲ್ಲಿ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೊಹ್ಲಿ, ಇನ್ಮುಂದೆ ಕಿಂಗ್ ಎಂದು ಕರೆಯಬೇಡಿ ಎಂದು ಹೇಳಿದ್ದಾರೆ. ಕಾರ್ಯಕ್ರಮದ ನಿರೂಪಕನಾಗಿದ್ದ ದಾನಿಶ್ ಸೇಠ್, ವಿರಾಟ್ ಹೇಗಿದೆ ಕಿಂಗ್ ಫೀಲಿಂಗ್ ಎಂದು ಕೇಳಿದ್ದಾರೆ. ಆದರೆ ಈ ವೇಳೆ ನನ್ನನ್ನು ಇನ್ಮುಂದೆ ಆ ಪದದಿಂದ (ಕಿಂಗ್) ಎಂದು ಕರೆಯಬೇಡಿ. ಹಾಗೆ ಕರೆದರೆ ನನಗೆ ಮುಜುಗರವಾಗುತ್ತದೆ. ನನ್ನನ್ನು ವಿರಾಟ್ ಎಂದು ಕರೆಯಿರಿ ಎಂದು ಮನವಿ ಮಾಡಿದ್ದಾರೆ.

ಚೆನ್ನೈ ತಲುಪಿದ ಆರ್​ಸಿಬಿ

ಆರ್​​ಸಿಬಿ ಅನ್​ಬಾಕ್ಸ್ ಈವೆಂಟ್​​​ ಮುಗಿದ ಬೆನ್ನಲ್ಲೇ ಬೆಂಗಳೂರು ಆಟಗಾರರು ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲು ಚೆನ್ನೈ ತಲುಪಿದ್ದಾರೆ. ಮಾರ್ಚ್​ 22ರಿಂದ ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಈ ಹೈವೋಲ್ಟೇಜ್​ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2008ರ ನಂತರ ಚಿದಂಬರಂ ಮೈದಾನದಲ್ಲಿ ಆರ್​​ಸಿಬಿ ಗೆದ್ದ ಇತಿಹಾಸ ಇಲ್ಲ. ಹಾಗಾಗಿ ಈ ಬಾರಿ ಗೆದ್ದು ಇತಿಹಾಸ ನಿರ್ಮಿಸಲು ಬೆಂಗಳೂರು ಸಜ್ಜಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡ 2009, 2011 ಮತ್ತು 2016ರಲ್ಲಿ ರನ್ನರ್-ಅಪ್​ಗೆ ತೃಪ್ತಿಪಟ್ಟುಕೊಂಡ ಐಪಿಎಲ್‌ನಲ್ಲಿ ಎಂದಿಗೂ ಪ್ರಶಸ್ತಿಯನ್ನು ಗೆದ್ದಿಲ್ಲ. ಇದೀಗ 2024ರಲ್ಲಿ ಟ್ರೋಫಿ ಜಯಿಸಿ ಮಹಿಳಾ ತಂಡದ ಜೊತೆಗೆ ಸಂತೋಷವನ್ನು ಡಬಲ್ ಮಾಡಲು ರೆಡ್ ಆರ್ಮಿ ಸಜ್ಜಾಗಿದೆ. ಚೆನ್ನೈ ಮತ್ತು ಆರ್​ಸಿಬಿ ಉಭಯ ತಂಡಗಳ ಒಟ್ಟಾರೆ 31 ಮುಖಾಮುಖಿಯಲ್ಲಿ ಆರ್​ಸಿಬಿ 10 ಗೆಲುವು, ಚೆನ್ನೈ 20 ಗೆಲುವು, ಒಂದು ಪಂದ್ಯ ಫಲಿತಾಂಶ ಇಲ್ಲದೆ ಅಂತ್ಯಗೊಂಡಿದೆ.

mysore-dasara_Entry_Point