ಕನ್ನಡ ಸುದ್ದಿ  /  ಕ್ರಿಕೆಟ್  /  ಗಯಾನಾ ಪಿಚ್ ಯಾರಿಗೆ ನೆರವು; ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ರೂಪಿಸಿರುವ ತಂತ್ರವೇನು?

ಗಯಾನಾ ಪಿಚ್ ಯಾರಿಗೆ ನೆರವು; ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ರೂಪಿಸಿರುವ ತಂತ್ರವೇನು?

India vs England Semi-final: ಟಿ20 ವಿಶ್ವಕಪ್ 2024 ಟೂರ್ನಿಯ ಎರಡನೇ ಸೆಮಿಫೈನಲ್​​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಆತಿಥ್ಯ ವಹಿಸುವ ಗಯಾನಾದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ರಿಪೋರ್ಟ್ ಹೇಗಿದೆ? ಇಲ್ಲಿದೆ ವಿವರ.

ಗಯಾನಾ ಪಿಚ್ ಯಾರಿಗೆ ನೆರವು; ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ರೂಪಿಸಿರುವ ತಂತ್ರವೇನು?
ಗಯಾನಾ ಪಿಚ್ ಯಾರಿಗೆ ನೆರವು; ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ರೂಪಿಸಿರುವ ತಂತ್ರವೇನು?

ಟಿ20 ವಿಶ್ವಕಪ್ 2024ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ (India vs England Semi-final) ವಿರುದ್ಧ ಸೆಣಸಾಟ ನಡೆಸಲಿದೆ. ಬಹು ನಿರೀಕ್ಷಿತ ಪಂದ್ಯವು ಜೂನ್ 27ರ ಗುರುವಾರ ಗಯಾನಾದ ಪ್ರಾವಿಡೆನ್ಸ್​​​ನಲ್ಲಿರುವ ಗಯಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (Providence Stadium) ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಲೀಗ್​ ಮತ್ತು ಸೂಪರ್​-8 ಸುತ್ತಿನಲ್ಲಿ ಅಜೇಯವಾಗಿ ಅಗ್ರಸ್ಥಾನ ಪಡೆದು ಭಾರತ ತಂಡ ಸೆಮಿಫೈನಲ್​​ನಲ್ಲೂ ಭರ್ಜರಿ ಗೆಲುವು ಸಾಧಿಸಿ ಫೈನಲ್​ಗೇರಲು ಸಜ್ಜಾಗಿದೆ. ಕೊಹ್ಲಿ ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ರೋಹಿತ್ ಶರ್ಮಾ ಮತ್ತೆ ಲಯಕ್ಕೆ ಮರಳಿದ್ದಾರೆ. ಆಸೀಸ್ ವಿರುದ್ಧ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿ ಮಿಂಚಿದರು. ಇಂಗ್ಲೆಂಡ್ ಬೌಲರ್ಸ್​ ಎದುರು ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದ್ದಾರೆ.

ಭಾರತ vs ಇಂಗ್ಲೆಂಡ್: ಪಿಚ್ ವರದಿ

ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿನ ಪಿಚ್ ಸ್ಪಿನ್ನರ್ಸ್​​ಗಳ ಸ್ವರ್ಗವಾಗಿದೆ. ಹೀಗಾಗಿ ರೋಹಿತ್ ಪಡೆ ಮೂವರು ಸ್ಪಿನ್ನರ್​​​​​ಗಳನ್ನು ಕಣಕ್ಕಿಳಿಸಬಹುದು. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಮೊದಲ ದರ್ಜೆಯ ಸ್ಪಿನ್ನರ್​ಗಳು ಇಂಗ್ಲೆಂಡ್ ವಿರುದ್ಧ ದಾಳಿ ನಡೆಸಲಿದ್ದಾರೆ. ಈ ಸ್ಪಿನ್ ಟ್ರ್ಯಾಕ್​​ನ ಪ್ರಯೋಜನ ಪಡೆಯಲು ಟೀಮ್ ಇಂಡಿಯಾ ಮುಂದಾಗಿದೆ. ಇಂಗ್ಲೆಂಡ್ ತಂಡದಲ್ಲೂ ಸ್ಪೆಷಲಿಸ್ಟ್ ಸ್ಪಿನ್ನರ್​​ಗಳೇ ಇದ್ದು, ರೋಹಿತ್​ ಪಡೆ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ.

ಟ್ರೆಂಡಿಂಗ್​ ಸುದ್ದಿ

ಭಾರತ ನಿರೀಕ್ಷಿತ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್​ ಸಂಭಾವ್ಯ ಪ್ಲೇಯಿಂಗ್ XI

ಜೋಸ್ ಬಟ್ಲರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.

ಹವಾಮಾನ ಮುನ್ಸೂಚನೆ

ವಿಶ್ವಕಪ್ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಆಟಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಈಗಾಗಲೇ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆಯಾಗಿದ್ದು, ನಾಳೆಯೂ ಪಂದ್ಯದ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ವಾರವಿಡೀ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಕಾಣಿಸಿಕೊಂಡರೂ ಪಂದ್ಯಕ್ಕೆ 120 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ. 5 ಓವರ್ ಅಥವಾ ಸೂಪರ್​ ಓವರ್​ ಆಡಲು ಅವಕಾಶ ಸಿಕ್ಕರೂ ಪಂದ್ಯ ನಡೆಸಲಾಗುತ್ತದೆ.

ಆದರೆ, ಅದಕ್ಕೂ ಮಳೆ ಅವಕಾಶ ನೀಡದೆ ಇದ್ದರೂ ಮೀಸಲು ದಿನ ಇರಲಿದೆ. ಒಂದು ವೇಳೆ ಮೀಸಲು ದಿನವೂ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿ ಪಂದ್ಯ ಸ್ಥಗಿತಗೊಂಡರೆ ಫೈನಲ್​ಗೆ ಯಾರು ಪ್ರವೇಶಿಸುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರಿಸರ್ವ್ ಡೇಯೂ ಪಂದ್ಯ ಸ್ಥಗಿತಗೊಂಡರೆ ಸೂಪರ್​​-8 ಗ್ರೂಪ್ 1ರಲ್ಲಿ ಭಾರತ ಅಗ್ರಸ್ಥಾನಿಯಾಗಿ ಫೈನಲ್​ಗೇರಲಿದೆ. ಏಕೆಂದರೆ ಇಂಗ್ಲೆಂಡ್​ಗಿಂತ ಹೆಚ್ಚು ಅಂಕ, ರನ್ ರೇಟ್ ಹೊಂದಿದೆ.