ಕನ್ನಡ ಸುದ್ದಿ  /  ಕ್ರಿಕೆಟ್  /  ಗಯಾನಾದಲ್ಲಿ ಸತತ 12 ಗಂಟೆಗಳಿಂದ ಮಳೆ, ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯೋದೇ ಡೌಟ್; ರಿಸರ್ವ್ ಡೇ ನಿಯಮ ಹೇಳುವುದೇನು?

ಗಯಾನಾದಲ್ಲಿ ಸತತ 12 ಗಂಟೆಗಳಿಂದ ಮಳೆ, ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯೋದೇ ಡೌಟ್; ರಿಸರ್ವ್ ಡೇ ನಿಯಮ ಹೇಳುವುದೇನು?

India vs England weather report: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ನ ಸೆಮಿಫೈನಲ್ 2 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಗಯಾನಾದಲ್ಲಿ ಸತತ 12 ಗಂಟೆಗಳಿಂದ ಮಳೆ, ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯೋದೇ ಡೌಟ್; ರಿಸರ್ವ್ ಡೇ ನಿಯಮ ಹೇಳುವುದೇನು?
ಗಯಾನಾದಲ್ಲಿ ಸತತ 12 ಗಂಟೆಗಳಿಂದ ಮಳೆ, ಭಾರತ-ಇಂಗ್ಲೆಂಡ್ ಸೆಮಿಫೈನಲ್ ನಡೆಯೋದೇ ಡೌಟ್; ರಿಸರ್ವ್ ಡೇ ನಿಯಮ ಹೇಳುವುದೇನು?

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ​ ಭಾರತ-ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಆದರೆ, ಪಂದ್ಯ ಮಳೆಗೆ ಆಹುತಿಯಾಗುವ ಆತಂಕ ಸೃಷ್ಟಿಯಾಗಿದೆ. ಗಯಾನಾದಲ್ಲಿ ನಿರಂತರ ಮಳೆಯಿಂದ ಉಭಯ ತಂಡಗಳು ಅಭ್ಯಾಸ ಕೂಡ ನಡೆಸಿಲ್ಲ. ಪ್ರಸ್ತುತ ಟೀಮ್ ಇಂಡಿಯಾ 2022ರ ಟಿ20 ವಿಶ್ವಕಪ್ ಸೆಮೀಸ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯನ್ನು ಹಾಕಿಕೊಂಡಿರುವ ಭಾರತ ತಂಡಕ್ಕೆ ಮಳೆಯೇ ವಿಲನ್ ಆಗುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

2022ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಹಂತದಲ್ಲಿ ಮಾಜಿ ಚಾಂಪಿಯನ್ ಭಾರತ ತಂಡವನ್ನು ಇಂಗ್ಲೆಂಡ್ 10 ವಿಕೆಟ್​ಗಳಿಂದ ಸೋಲಿಸಿತು. ಫೈನಲ್​ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಇಂಗ್ಲೆಂಡ್ 2ನೇ ಬಾರಿಗೆ ಪ್ರಸಿದ್ಧ ಟ್ರೋಫಿಯನ್ನು ಎತ್ತಿ ಹಿಡಿದಿತು. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಟಿ20 ವಿಶ್ವಕಪ್​​ನ 2ನೇ ಸೆಮಿಫೈನಲ್​ ಪಂದ್ಯಕ್ಕೆ ಮಳೆಯ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ. ಗಯಾನಾದ ಹವಾಮಾನ ಮುನ್ಸೂಚನೆ ತೀವ್ರ ಕೆಟ್ಟದಾಗಿದೆ.

ವಿಶ್ವಕಪ್ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಆಟಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಈಗಾಗಲೇ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆಯಾಗಿದ್ದು, ನಾಳೆಯೂ ಪಂದ್ಯದ ಅವಧಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ವಾರವಿಡೀ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಕಾಣಿಸಿಕೊಂಡರೂ ಪಂದ್ಯಕ್ಕೆ 250 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿದೆ. 5 ಓವರ್ ಅಥವಾ ಸೂಪರ್​ ಓವರ್​ ಆಡಲು ಅವಕಾಶ ಸಿಕ್ಕರೂ ಪಂದ್ಯ ನಡೆಸಲಾಗುತ್ತದೆ.

ಅಚ್ಚರಿ ಸುದ್ದಿ ಏನೆಂದರೆ, ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಪಂದ್ಯ ಸ್ಥಗಿತಗೊಂಡರೆ ಸೂಪರ್​​-8 ಗ್ರೂಪ್ 1ರಲ್ಲಿ ಭಾರತ ಅಗ್ರಸ್ಥಾನಿಯಾಗಿ ಫೈನಲ್​ಗೇರಲಿದೆ. ಏಕೆಂದರೆ ಇಂಗ್ಲೆಂಡ್​ಗಿಂತ ಹೆಚ್ಚು ಅಂಕ, ರನ್ ರೇಟ್ ಹೊಂದಿದೆ. ಗುರುವಾರ ಪಂದ್ಯವನ್ನು ಆಡದಿದ್ದರೆ, ಶುಕ್ರವಾರ ಪಂದ್ಯವನ್ನು ಮರು ಆಯೋಜಿಸುವ ಸಾಧ್ಯತೆಯಿಲ್ಲ.

ಸಂಜೆ 5-6 ಗಂಟೆಯ ನಡುವೆ ಮಳೆ ತೀವ್ರಗೊಳ್ಳುವ ನಿರೀಕ್ಷೆಯಿದೆ. ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಪಂದ್ಯವು ಸ್ಥಳೀಯ ಸಮಯ ಬೆಳಿಗ್ಗೆ 10:30 ಕ್ಕೆ (ಭಾರತೀಯ ಕಾಲಮಾನ ರಾತ್ರಿ 8:00) ಪ್ರಾರಂಭವಾಗಲಿದೆ.  ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 7.30ಕ್ಕೆ) ನಡೆಯಲಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯ ವಿಳಂಬವಾಗುವ ಸಾಧ್ಯತೆ ಇದೆ.

ಇಂಗ್ಲೆಂಡ್ ವಿರುದ್ಧದ ಟಿ 20 ವಿಶ್ವಕಪ್ 2024 ರ ಸೆಮಿಫೈನಲ್ ಪಂದ್ಯಕ್ಕೆ ಮುಂಚಿತವಾಗಿ ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಗಯಾನಾಕ್ಕೆ ಆಗಮಿಸಿದೆ. ಟಿ20 ವಿಶ್ವಕಪ್ ಸೆಮಿಫೈನಲ್​​​ಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡ ವಿಡಿಯೋದಲ್ಲಿ ನಾಯಕ ರೋಹಿತ್, ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಇತರ ಆಟಗಾರರು ಬ್ಲಾಕ್​ಬಸ್ಟರ್​ ಮುಖಾಮುಖಿಗಾಗಿ ಗಯಾನಾಕ್ಕೆ ಬರುವುದನ್ನು ಕಾಣಬಹುದು. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವೂ ಸೆಮಿಫೈನಲ್​ಗೆ ಈಗಾಗಲೇ ಆಗಮಿಸಿದೆ. ಗ್ರೂಪ್-2ರಲ್ಲಿ ಎರಡನೇ ಸ್ಥಾನ ಪಡೆದ ನಂತರ ಹಾಲಿ ಚಾಂಪಿಯನ್ಸ್ ಜಾರ್ಜ್​ಟೌನ್​ಗೆ ವಿಮಾನ ಹತ್ತಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ