ಕನ್ನಡ ಸುದ್ದಿ  /  ಕ್ರಿಕೆಟ್  /  ಡಿವೋರ್ಸ್​ ವದಂತಿ ನಡುವೆ ಸುರಸುಂದರಿಯ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಈಕೆ ಯಾರು? ವಿಡಿಯೋ ವೈರಲ್

ಡಿವೋರ್ಸ್​ ವದಂತಿ ನಡುವೆ ಸುರಸುಂದರಿಯ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಈಕೆ ಯಾರು? ವಿಡಿಯೋ ವೈರಲ್

Hardik Pandya dating: ನತಾಶಾ ಸ್ಟಾಂಕೋವಿಕ್ ಜತೆಗೆ ಡಿವೋರ್ಸ್ ವದಂತಿಯ ನಡುವೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಸುಂದರವಾದ ಯುವತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಡಿವೋರ್ಸ್​ ವದಂತಿ ನಡುವೆ ಸುರಸುಂದರಿಯ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಈಕೆ ಯಾರು? ವಿಡಿಯೋ ವೈರಲ್
ಡಿವೋರ್ಸ್​ ವದಂತಿ ನಡುವೆ ಸುರಸುಂದರಿಯ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಈಕೆ ಯಾರು? ವಿಡಿಯೋ ವೈರಲ್

ಪತ್ನಿ ನತಾಶಾ ಸ್ಟಾನ್‌ಕೋವಿಕ್‌ (Natasa Stankovic) ಅವರಿಂದ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾರೆ ಎಂಬ ವದಂತಿಗಳ ನಡುವೆ ಹಾರ್ದಿಕ್ ಪಾಂಡ್ಯ (Hardik Pandya) ಸುಂದರ ಯುವತಿಯೊಂದಿಗೆ ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಯುವತಿಯೊಂದಿಗಿರುವ ಫೋಟೋ ಮತ್ತು ವಿಡಿಯೋ ವೈರಲ್ ಆದ ಬೆನ್ನಲ್ಲೇ ನತಾಶಾಗೆ ವಿಚ್ಛೇದನ ಕೊಟ್ಟಿರುವುದು ಖಚಿತ ಎಂದು ನೆಟ್ಟಿಗರು ಊಹಿಸಿದ್ದಾರೆ. ಅಲ್ಲದೆ, ಆ ಹುಡುಗಿ ಯಾರೆಂದು ಗೂಗಲ್​ನಲ್ಲಿ ಹುಡುಕಾಟವೂ ನಡೆಯುತ್ತಿದೆ.

ಆಕೆಯ ಹೆಸರು ಪ್ರಾಚಿ ಸೋಲಂಕಿ. ಅವರು ಪ್ರಸಿದ್ಧ ಮೇಕಪ್ ಕಲಾವಿದೆ. ಇನ್​ಸ್ಟಾಗ್ರಾಂನಲ್ಲಿ ಸುಮಾರು 5.46 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಡಿಜಿಟಲ್ ಕ್ರಿಯೇಟರ್ ಆಗಿರುವ ಪ್ರಾಚಿ, ತಾನು ಮಾಡಿರುವ ಒಂದು ಪೋಸ್ಟ್​ ತನ್ನನ್ನು ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿಗೊಳಿಸಿದೆ. ಆದರೆ, ಡೇಟಿಂಗ್ ವದಂತಿಗಳ ಬಗ್ಗೆ ಸತ್ಯ ಹೊರಬಿದ್ದಿದೆ. ಹಾರ್ದಿಕ್ ಮತ್ತು ಪ್ರಾಚಿ ಇಬ್ಬರು ಡೇಟಿಂಗ್ ಮಾಡುತ್ತಿಲ್ಲ. ಆಕೆ ಕೇವಲ ಅಭಿಮಾನಿ. ಹಾರ್ದಿಕ್​ರನ್ನು ಭೇಟಿಯಾದ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುವ ಪೋಸ್ಟ್ ಹಂಚಿಕೊಂಡಿದ್ದಾರಷ್ಟೆ.

ಡೇಟಿಂಗ್ ಸುದ್ದಿ ಸುಳ್ಳು

ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ವಿಶ್ವಕಪ್​ ಹೀರೋ ಅವರನ್ನು ಭೇಟಿ ಮಾಡಿದೆ ಎಂದು ಕ್ಯಾಪ್ಶನ್ ಬರೆದು ಲವ್​ ಎಮೊಜಿ ಹಾಕಿದ್ದಾರೆ. ಪ್ರಾಚಿ ಸೋಲಂಕಿ ಅವರು ಹಾರ್ದಿಕ್ ಅವರ ಸಹೋದರ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖೂರಿ ಅವರೊಂದಿಗಿನ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಪಾಂಡ್ಯ ಕುಟುಂಬವು ಪ್ರಾಚಿಗೆ ತುಂಬಾ ಆತ್ಮೀಯರು ಎಂಬುದನ್ನು ಈ ವಿಡಿಯೋ ಸೂಚಿಸುತ್ತದೆ. ಹಾಗಾಗಿ ಇದು ಡೇಟಿಂಗ್ ವದಂತಿಗಳಿಗೆ ಉತ್ತೇಜನ ನೀಡಿದೆ. ಇದು ಸುಳ್ಳು ಸುದ್ದಿ ಎಂಬುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಟ್ರೆಂಡಿಂಗ್​ ಸುದ್ದಿ

ಆದರೆ ಸೋಲಂಕಿ ಅವರು ಪಾಂಡ್ಯ ಮನೆಗೆ ಭೇಟಿ ನೀಡಿದ್ದು ನೆಟ್ಟಿಗರಿಗೆ ಅನುಮಾನ ಮೂಡುವಂತೆ ಮಾಡಿದೆ. ಸೋಲಂಕಿ ಹಂಚಿಕೊಂಡ ವಿಡಿಯೋದಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡ ಕಾರಣ ನೆಟ್ಟಿಗರು ಮತ್ತು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿ, ಹಾರ್ದಿಕ್, ಪ್ರಾಚಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಇದಕ್ಕೆ ಹಾರ್ದಿಕ್ ಮತ್ತು ಪ್ರಾಚಿ ಇಬ್ಬರೂ ಸಹ ಸ್ಪಷ್ಟನೆ ಕೊಟ್ಟಿಲ್ಲ.

ವೆಸ್ಟ್ ಇಂಡೀಸ್​ನಲ್ಲಿ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿದ್ದ ಬಳಿಕ ತಮ್ಮ ಮಗ ಅಗಸ್ತ್ಯನೊಂದಿಗೆ ಸಂಭ್ರಮಿಸಿದ್ದ ಹಾರ್ದಿಕ್, ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಮತ್ತು ಟಿ20 ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಹಾರ್ದಿಕ್ ಬಗ್ಗೆ ನತಾಶಾ ಅವರು ಒಂದೇ ಒಂದು ಪೋಸ್ಟ್​ ಸಹ ಹಾಕಿಲ್ಲ. ಇದು ಪಾಂಡ್ಯ-ನತಾಶಾ ನಡುವೆ ಬಿರುಕು ಉಂಟಾಗಿರುವುದನ್ನು ಖಚಿತಪಡಿಸುತ್ತದೆ.

ಡಿವೋರ್ಸ್ ಸುದ್ದಿಯ ಮಧ್ಯೆ ಬಾಲಿವುಡ್​​ ನಟಿ ದಿಶಾ ಪಟಾನಿ ಅವರ ಗೆಳೆಯ​ ಎಂದು ಹೇಳಲಾದ ವ್ಯಕ್ತಿಯೊಂದಿಗೆ ನತಾಶಾ ಸ್ಟಾಂಕೋವಿಕ್​ ಕಾಣಿಸಿದ್ದರು. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ವೇಳೆ ನತಾಶಾಗೆ ಮಾಧ್ಯಮದವರು ಹಾರ್ದಿಕ್ ಕುರಿತು ಪ್ರಶ್ನಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು. ಪ್ರಸ್ತುತ ಹಾರ್ದಿಕ್ ಮತ್ತು ನತಾಶಾ ಕುರಿತು ವದಂತಿಗಳು ಹರಿದಾಡುತ್ತಿದ್ದರೂ ಇಬ್ಬರು ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.