ಕನ್ನಡ ಸುದ್ದಿ  /  Cricket  /  Ishan Kishan Ashwin Yuzvendra Chahal Out Indias Probable Squad For T20 World Cup 2024 Virat Kohli Rishabh Pant Prs

ಕಿಶನ್, ಶಮಿ, ಚಹಲ್ ಔಟ್-ರಿಷಭ್, ಜೈಸ್ವಾಲ್​ಗೆ ಅವಕಾಶ; ಟಿ20 ವಿಶ್ವಕಪ್​ಗೆ ಭಾರತದ 15 ಆಟಗಾರರ ಸಂಭಾವ್ಯ ತಂಡ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಏಪ್ರಿಲ್ ಕೊನೆಯ ವಾರದಲ್ಲಿ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ. ಆದರೆ ಈ ಮೆಗಾ ಟೂರ್ನಿಯ ಯೋಜನೆಯಲ್ಲಿರುವ ಆಟಗಾರರು ಯಾರು?

ಟಿ20 ವಿಶ್ವಕಪ್​ಗೆ ಭಾರತದ 15 ಆಟಗಾರರ ಸಂಭಾವ್ಯ ತಂಡ
ಟಿ20 ವಿಶ್ವಕಪ್​ಗೆ ಭಾರತದ 15 ಆಟಗಾರರ ಸಂಭಾವ್ಯ ತಂಡ

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ ಮಧ್ಯದಲ್ಲೇ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಭಾರತ ತಂಡವನ್ನು (Team India) ಪ್ರಕಟಿಸಲು ಬಿಸಿಸಿಐ (BCCI) ಸಜ್ಜಾಗುತ್ತಿದೆ. ಮೇ 1ರೊಳಗೆ 15 ಸದಸ್ಯರ ತಂಡವನ್ನು ಪ್ರಕಟಿಸಲು ಐಸಿಸಿ ಡೆಡ್​ಲೈನ್ ನೀಡಿರುವ ಕಾರಣ ಏಪ್ರಿಲ್ ಕೊನೆಯ ವಾರದಲ್ಲಿ ವಿಶ್ವಕಪ್ ಆಡಲಿರುವ ಆಟಗಾರರ ಹೆಸರನ್ನು ಪ್ರಕಟಿಸಲಿದೆ. ಆದರೆ ಪ್ರಮುಖ ಆಟಗಾರರನ್ನೇ ಕೈಬಿಡುವುದು ಪಕ್ಕಾ ಆಗಿದೆ.

ಆರಂಭಿಕರು ಯಾರು?

ನಾಯಕ ರೋಹಿತ್​ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರು ಆರಂಭಿಕ ಸ್ಥಾನಕ್ಕೆ ಅವಕಾಶ ಪಡೆಯುವುದು ಖಚಿತವಾಗಿದೆ. ಇದಕ್ಕೂ ಮೊದಲು ಇಶಾನ್​ ಕಿಶನ್​ ಅವರು ಈ ರೇಸ್​​ನಲ್ಲಿದ್ದರು. ಆದರೆ ಅವರು ಬಿಸಿಸಿಐ ಮತ್ತು ಸೆಲೆಕ್ಟರ್ಸ್​ ಆದೇಶ ಪಾಲಿಸದೆ ನಿರ್ಲಕ್ಷ್ಯ ತೋರಿದ ಕಾರಣ, ಆತನನ್ನು ವರ್ಲ್ಡ್​​ಕಪ್ ಪ್ಲಾನ್​ನಿಂದ ಹೊರಗಿಡಲು ನಿರ್ಧರಿಸಲಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಯಾರಿಗೆ ಅವಕಾಶ?

ವಿರಾಟ್ ಕೊಹ್ಲಿ ಆಯ್ಕೆಯ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಆದರೆ ನಾಯಕ ರೋಹಿತ್​, ಏನೇ ಆಗಲಿ ಕೊಹ್ಲಿ ತಂಡದಲ್ಲಿ ಇರಬೇಕು ಎಂದು ಬಿಸಿಸಿಐ ಮತ್ತು ಸೆಲೆಕ್ಟರ್ಸ್​​ಗೆ ಸೂಚಿಸಿದ್ದಾರೆ. ಹಾಗಾಗಿ ಕೊಹ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಸದ್ಯ ಗಾಯದಿಂದ ಚೇತರಿಸಿಕೊಳ್ತಿರುವ ಸೂರ್ಯಕುಮಾರ್​ ಯಾದವ್ ಮತ್ತು ರಿಂಕು ಸಿಂಗ್​ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

ವಿಕೆಟ್ ಕೀಪರ್ಸ್​

ವಿಕೆಟ್ ಕೀಪರ್​​ ರಿಷಭ್ ಪಂತ್​ ಸದ್ಯ ಚೇತರಿಸಿಕೊಂಡು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ವಿಶ್ವಕಪ್​​ ಪ್ಲಾನ್​​ಗೆ ಸೇರಿದ್ದಾರೆ. ಅಲ್ಲದೆ, ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್​ ಕೂಡ ಅವಕಾಶ ಪಡೆಯಲಿದ್ದಾರೆ. ಆದರೆ ಒಬ್ಬರು ಮಾತ್ರ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ. ವಿಕೆಟ್ ಕೀಪರ್​ ಜೊತೆಗೆ ಮಧ್ಯಮ ಕ್ರಮಾಂಕಲ್ಲೂ ಬ್ಯಾಟ್ ಬೀಸಲಿದ್ದಾರೆ.

ಆಲ್​ರೌಂಡರ್​​ಗಳು

ಆಲ್​ರೌಂಡರ್ಸ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಸ್ಥಾನ ಪಡೆಯುವುದು ಖಚಿತವಾಗಿದೆ. ಪಾಂಡ್ಯ ಮಧ್ಯಮ ವೇಗದ ಬೌಲರ್​ ಆಗಿದ್ದರೆ, ಜಡೇಜಾ ಸ್ಪಿನ್ನರ್. ಆಡುವ 11ರ ಬಳಗದಲ್ಲಿ ಈ ಇಬ್ಬರಿಗೂ ಸ್ಥಾನ ಸಿಗುವುದು ಖಚಿತ.

ಸ್ಪಿನ್ನರ್​​ಗಳು

ಸ್ಪಿನ್ನರ್​ಗಳ ಕೋಟಾದಲ್ಲಿ ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ಕಣಕ್ಕಿಳಿಯಲಿದ್ದಾರೆ. ಆದರೆ ಒಬ್ಬರಿಗೆ ಮಾತ್ರ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗಲಿದೆ. ಏಕೆಂದರೆ ಮತ್ತೊಬ್ಬ ಸ್ಪಿನ್ನರ್​ ಆಗಿ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ.

ವೇಗಿಗಳು

ವೇಗದ ಬೌಲರ್​​ಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷ್​ದೀಪ್ ಸಿಂಗ್ ಮೂವರು ಕೂಡ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ. ಅಲ್ಲದೆ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಮೂವರಿಗೂ ಚಾನ್ಸ್​ ಸಿಗುವುದು ಖಚಿತ.

ಯಾರಿಗೆಲ್ಲಾ ಸಿಗಲ್ಲ ಟಿಕೆಟ್?

ಯುಜ್ವೇಂದ್ರ ಚಹಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಸೇರಿದಂತೆ ಪ್ರಮುಖ ಆಟಗಾರರು ಟಿ20 ವಿಶ್ವಕಪ್​​ ತಂಡದ ಭಾಗವಾಗುವುದು ಅನುಮಾನ.

ಯಾರಿಗೆಲ್ಲಾ ಚಾನ್ಸ್ ಇದೆ?

ಶಿವಂ ದುಬೆ, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಅಕ್ಷರ್​ ಪಟೇಲ್.

ಭಾರತದ ಟಿ20 ವಿಶ್ವಕಪ್ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ , ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷ್​ದೀಪ್ ಸಿಂಗ್.

IPL_Entry_Point