ಕನ್ನಡ ಸುದ್ದಿ  /  ಕ್ರಿಕೆಟ್  /  ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಡಿವೋರ್ಸ್; ಕರ್ನಾಟಕ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು?

ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಡಿವೋರ್ಸ್; ಕರ್ನಾಟಕ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು?

Manish Pandey: ಕರ್ನಾಟಕ ಮೂಲಕ ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟರ್​ ಮನೀಷ್ ಪಾಂಡೆ ಮತ್ತು ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಡಿವೋರ್ಸ್; ಕರ್ನಾಟಕ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು?
ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಡಿವೋರ್ಸ್; ಕರ್ನಾಟಕ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು?

ಭಾರತದಲ್ಲಿ ವಿಚ್ಛೇದನ ಸುದ್ದಿಗಳು ದಿನಕ್ಕೊಂದು ಬರುತ್ತಿವೆ. ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ಸುದ್ದಿಯ ನಡುವೆಯೇ ಸ್ಯಾಂಡಲ್​ವುಡ್​ನಲ್ಲಿ ನಿವೇದಿತಾ ಗೌಡ-ಚಂದನ್ ಶೆಟ್ಟಿ ಮತ್ತು ಯುವ ರಾಜ್​ಕುಮಾರ್​-ಶ್ರೀದೇವಿ ಸೇರಿದಂತೆ ಪ್ರಮುಖರ ದಾಂಪತ್ಯ ಜೀವನದಲ್ಲೂ ಬಿರುಕು ಕಾಣಿಸಿಕೊಂಡಿದೆ. ಇದೀಗ ಈ ಸಾಲಿಗೆ ಕರ್ನಾಟಕ ಕ್ರಿಕೆಟಿಗ ಮನೀಷ್ ಪಾಂಡೆ-ಆಶ್ರಿತಾ ಶೆಟ್ಟಿ (Manish Pandey and Ashrita Shetty divorce) ಜೋಡಿಯೂ ಸೇರಿದೆ. ಹೌದು, ಮನೀಷ್​ ದಾಂಪತ್ಯ ಜೀವನದಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಮನೀಷ್ ಪಾಂಡೆ-ಆಶ್ರಿತಾ ಶೆಟ್ಟಿ ನಡುವೆ ಬಿರುಕು

2019ರಲ್ಲಿ ಆಶ್ರಿತಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರ್ನಾಟಕ ಮೂಲದ ಟೀಮ್ ಇಂಡಿಯಾ ಕ್ರಿಕೆಟಿಗ ಮನೀಷ್ ಪಾಂಡೆ (Manish Pandey Marriage) ದಾಂಪತ್ಯ ಜೀವನವು ಬೇರ್ಪಟ್ಟಿದೆ ಎಂಬ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಈ ದಂಪತಿಗಳ ಇನ್​ಸ್ಟಾಗ್ರಾಂ ಪೋಸ್ಟ್​. ಆಶ್ರಿತಾ ಶೆಟ್ಟಿ ಅವರು ಕ್ರಿಕೆಟಿಗನನ್ನು ವರಿಸುವುದಕ್ಕೂ ಮುನ್ನ ತುಳು ಚಿತ್ರದಲ್ಲಿ ನಟಿಸಿದ್ದರು. ತೆಲಿಕೆದ ಬೊಳ್ಳಿ ಸಿನಿಮಾದ ಕೂಡ ನಟನಾ ವೃತ್ತಿ ಆರಂಭಿಸಿದ್ದರು.

ಇನ್​ಸ್ಟಾಗ್ರಾಂನಲ್ಲಿ ಫೋಟೋಗಳು ಡಿಲೀಟ್

ಈ ಸ್ಟಾರ್ ಜೋಡಿ ಸದ್ಯದಲ್ಲೇ ದೂರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮನೀಷ್ ಮತ್ತು ಆಶ್ರಿತಾ ತಮ್ಮ ತಮ್ಮ ಇನ್​ಸ್ಟಾಗ್ರಾಂ ಅಕೌಟ್​​ಗಳಲ್ಲಿ ಹಂಚಿಕೊಂಡಿದ್ದ ತಮ್ಮ ಮದುವೆ ಫೋಟೋಗಳನ್ನು ಅಳಿಸಿ ಹಾಕಿದ್ದಾರೆ. ಹಾಗಾಗಿ, ಇಬ್ಬರು ಸಹ ಪ್ರತ್ಯೇಕವಾಗಿದ್ದಾರೆ ಎಂಬ ವದಂತಿಗಳು ಎದ್ದಿವೆ. ಮನೀಷ್​, ಕೆಕೆಆರ್ ತಂಡದ ಮತ್ತು ಟ್ರೋಫಿಯೊಂದಿಗಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾದಲ್ಲಿ​ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೆ ಪತ್ನಿ ಜೊತೆಗಿರುವ ಚಿತ್ರಗಳು ಮಾಯವಾಗಿವೆ. ಹಾಗಾಗಿ ಇದು ಅನುಮಾನ ಉಂಟು ಮಾಡಿದೆ. ನಟಿ ತನ್ನ ಪತಿಯನ್ನು ಅನ್​ಫಾಲೋ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವದಂತಿಯ ಕುರಿತು ಈ ದಂಪತಿ ಯಾವುದೇ ಸ್ಪಷ್ಟನೆ ನೀಡಿಲ್ಲ. ನೆಟ್ಟಿಗರು ಆಶ್ರಿತಾ ಜೊತೆ ಮನೀಷ್ ಅವರು ವಿಚ್ಛೇದನ ಪಡೆದಿದ್ದಾರೆ ಎಂದು ಪೋಸ್ಟ್​​ಗಳನ್ನು ಹಾಕುತ್ತಿದ್ದಾರೆ. ಅಲ್ಲದೆ, ವಿಚ್ಛೇದನ ಪಡೆಯಲು ಕಾರಣ ಪಡೆಯಲು ಏನೆಂಬುದು ಸಹ ಬಹಿರಂಗಗೊಂಡಿಲ್ಲ.

ಮದುವೆಗೂ ಮುನ್ನ ಡೇಟಿಂಗ್​

2019ರಲ್ಲಿ ಮನೀಷ್ ಮತ್ತು ಆಶ್ರಿತಾ ಮದುವೆಯಾಗುವುದಕ್ಕೂ ಮುನ್ನ ಈ ಜೋಡಿಯು ಸ್ವಲ್ಪ ಸಮಯದವರೆಗೆ ಡೇಟಿಂಗ್ ನಡೆಸಿತ್ತು ಎಂದು ವರದಿಯಾಗಿದೆ. ಆದಾಗ್ಯೂ, ಮದುವೆಯಾಗುವ ಮೊದಲು, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ದಂಪತಿಗಳು ಡೇಟಿಂಗ್ ಮಾಡುವ ಬಗ್ಗೆ ಯಾರೊಬ್ಬರಿಗೂ ತಿಳಿದಿರಲಿಲ್ಲ. ಅವರ ಮದುವೆಗೆ ಒಂದು ದಿನ ಮೊದಲು ಸಂದರ್ಶನವೊಂದರಲ್ಲಿ ಮನೀಶ್ ಈ ಸುದ್ದಿಯನ್ನು ಹೊರಹಾಕಿದ್ದರು.

2024ರ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಮನೀಷ್ ಪಾಂಡೆ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅವರು ಒಟ್ಟಾರೆ ಟೂರ್ನಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿದಿದ್ದರು. 2018ರ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯನ್ ತಂಡದ ಭಾಗವಾಗಿದ್ದ ಮನೀಷ್ ಅವರು ಕೊನೆಯದಾಗಿ ಮೆನ್ ಇನ್ ಬ್ಲ್ಯೂಜೆರ್ಸಿ ಧರಿಸಿದ್ದು 2021ರಲ್ಲಿ.

ಮನೀಷ್ ಪಾಂಡೆ ಕ್ರಿಕೆಟ್ ಅಂಕಿ-ಅಂಶಗಳು

ಭಾರತದ ಪರ 29 ಏಕದಿನ ಪಂದ್ಯಗಳನ್ನು ಆಡಿದ್ದು 566 ರನ್ ಗಳಿಸಿದ್ದಾರೆ. 39 ಟಿ20ಐ ಕ್ರಿಕೆಟ್​​ ಪಂದ್ಯಗಳಲ್ಲಿ 709 ರನ್ ಬಾರಿಸಿದ್ದಾರೆ. 171 ಐಪಿಎಲ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 3850 ರನ್ ಕಲೆ ಹಾಕಿದ್ದಾರೆ. 2021ರ ನಂತರ ಟೀಮ್ ಇಂಡಿಯಾ ಪರ ಕಾಣಿಸಿಕೊಳ್ಳದ ಕ್ರಿಕೆಟಿಗ, ದೇಶೀಯ ಕ್ರಿಕೆಟ್​​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.