ಪಾಕಿಸ್ತಾನ ಕ್ರಿಕೆಟ್​ನ ಪಕ್ಷಪಾತ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್; ರಿಯಾಜ್ 'ಫೇವರಿಸಂ' ಬಗ್ಗೆ ಗಂಭೀರ ಆರೋಪ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ಕ್ರಿಕೆಟ್​ನ ಪಕ್ಷಪಾತ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್; ರಿಯಾಜ್ 'ಫೇವರಿಸಂ' ಬಗ್ಗೆ ಗಂಭೀರ ಆರೋಪ

ಪಾಕಿಸ್ತಾನ ಕ್ರಿಕೆಟ್​ನ ಪಕ್ಷಪಾತ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್; ರಿಯಾಜ್ 'ಫೇವರಿಸಂ' ಬಗ್ಗೆ ಗಂಭೀರ ಆರೋಪ

Virender Sehwag: ಮೊಹಮ್ಮದ್ ಅಮೀರ್​ ಮತ್ತು ವಹಾಬ್ ರಿಯಾಜ್ ಅವರ ವಿರುದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ವಾಗ್ದಾಳಿ ನಡೆಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಇರುವ​ ಪಕ್ಷಪಾತ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಇರುವ​ ಪಕ್ಷಪಾತ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಅವರು ಪಾಕಿಸ್ತಾನದ ಜೋಡಿ ವಹಾಬ್ ರಿಯಾಜ್ (Wahab Riaz) ಮತ್ತು ಮೊಹಮ್ಮದ್ ಅಮೀರ್ (Mohammad Amir) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪಾಕಿಸ್ತಾನ ತಂಡದಲ್ಲಿ ನಡೆಯುವ ಪಕ್ಷಪಾತದ ಕುರಿತು ಬಹಿರಂಗಪಡಿಸಿದ್ದಾರೆ. ಕಳೆದ ವರ್ಷ ಆಗಸ್ಟ್​​ನಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದ ವಹಾಬ್, ಪ್ರಸ್ತುತ ಪಾಕಿಸ್ತಾನದ ರಾಷ್ಟ್ರೀಯ ಪುರುಷರ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರಾಗಿದ್ದಾರೆ. 2023ರ ನವೆಂಬರ್​​ನಲ್ಲಿ ಈ ಪಾತ್ರವನ್ನು ವಹಿಸಿಕೊಂಡಿದ್ದರು.

ಅಂದು ಟೀಕಿಸುತ್ತಿದ್ದವರೇ ಇಂದು…

ರಿಯಾಜ್ ಆಯ್ಕೆದಾರರಾಗಿ ನೇಮಕಗೊಂಡ ನಂತರ ಇಂಟರ್​​​ನ್ಯಾಷನಲ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಮೊಹಮ್ಮದ್ ಅಮೀರ್ ಅವರನ್ನು ಮತ್ತೆ ತಂಡಕ್ಕ ಕರೆ ತಂದರು. ಇದೇ ವಿಚಾರಕ್ಕೆ ಸಂಬಂಧಿಸಿ ಸೆಹ್ವಾಗ್, ಆಯ್ಕೆ ಸಮಿತಿಯ ಮುಖ್ಯಸ್ಥರ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಈ ಹಿಂದೆ ಅಮೀರ್​ ಮತ್ತು ವಹಾಬ್​ ಅವರು ಪಾಕಿಸ್ತಾನ ತಂಡವನ್ನು ಟೀಕಿಸುತ್ತಿದ್ದರು. ಆದರೀಗ ಅವರಲ್ಲಿ ಒಬ್ಬರು ಚೀಫ್ ಸೆಲೆಕ್ಟರ್, ಮತ್ತೊಬ್ಬರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ.

ಸೆಲೆಕ್ಟರ್​​ಗಳ ಮತ್ತು ತಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ರಿಯಾಜ್, ಈಗ ಅಧಿಕಾರಕ್ಕೆ ಏರಿದ ನಂತರ ಮಾಡುತ್ತಿರುವುದೇನು? ಎಂದು ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ಚರ್ಚೆಯೊಂದರಲ್ಲಿ ಪ್ರಶ್ನಿಸಿದ್ದಾರೆ. ನನ್ನೊಂದಿಗೆ ಅಮೀರ್ ಆಡಿದ್ದಾರೆ ಎಂಬ ಕಾರಣಕ್ಕೆ ಮತ್ತೆ ಅವರನ್ನೇ ತಂಡಕ್ಕೆ ಆಯ್ಕೆ ಮಾಡಿರುವ ವಹಾಬ್ ಅವರ ನಿರ್ಧಾರದ ವಿರುದ್ಧ ಬೆರಳೆತ್ತಿ ತೋರಿಸಿದ್ದಾರೆ. ಆದರೆ, ಇದು ದೊಡ್ಡ ತಪ್ಪು. ಹೀಗೆ ಮಾಡಬಾರದು ಎಂದು ಪಿಸಿಬಿ ಪಕ್ಷಪಾತವನ್ನು ಎತ್ತಿ ತೋರಿಸಿದ್ದಾರೆ.

ಅಗರ್ಕರ್ ಹಾಗೆ ಮಾಡಲಿಲ್ಲ ಎಂದ ಸೆಹ್ವಾಗ್

ಹಾಗಾದರೆ, ಅಜಿತ್ ಅಗರ್ಕರ್ ಅವರು ಬಿಸಿಸಿಐ ಚೀಫ್ ಸೆಲೆಕ್ಟರ್​ ಆಗಿದ್ದಾರೆ. ನಾನು ಕೂಡ ಅವರೊಂದಿಗೆ ಆಡಿದ್ದೇನೆ. ಬನ್ನಿ ವೀರೂ, ನಾನು ನಿಮಗೆ ತಂಡಕ್ಕೆ ಕಂಬ್ಯಾಕ್ ಮಾಡಲು ಸಹಾಯ ಮಾಡುತ್ತೇನೆ ಎಂದು ಹೇಳಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ನೀವು ಭವಿಷ್ಯವನ್ನು ನೋಡಬೇಕು. ಆಯ್ಕೆಗಾರರಾಗಿ, ನಿಮ್ಮ ಕೈಯಲ್ಲಿ ಕೆಲಸವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿ, ಉಪಕಾರ ಮಾಡಿ. ಆಯ್ಕೆದಾರರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಟಿ20 ವಿಶ್ವಕಪ್‌ 2024 ಟೂರ್ನಿಯಿಂದ ಲೀಗ್ ಹಂತದಲ್ಲೇ ನಿರ್ಗಮಿಸಿದ ನಂತರ ಪಾಕಿಸ್ತಾನ ತಂಡವು ಸಾಕಷ್ಟು ಟೀಕೆಗೆ ಒಳಗಾಗಿದೆ. ಮೊದಲ ಸುತ್ತಿನಲ್ಲಿ ಭಾರತ ವಿರುದ್ಧ 120 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ತಂಡವು, ಯುನೈಟೆಡ್ ಸ್ಟೇಟ್ಸ್‌ ಎದುರು ಸೂಪರ್ ಓವರ್​​ನಲ್ಲಿ ನಿರಾಶಾದಾಯಕ ಸೋಲನ್ನು ಅನುಭವಿಸಿತು. ಕೊನೆಯ 2 ಪಂದ್ಯಗಳಲ್ಲಿ ಗೆದ್ದರೂ ಸೂಪರ್​​-4 ಪ್ರವೇಶಿಸಲಿಲ್ಲ. ಕಳೆದ ಬಾರಿ ರನ್ನರ್​ಅಪ್ ಆಗಿತ್ತು.

ಅಮೆರಿಕ ಮತ್ತು ವೆಸ್ಟ್ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿರುವ ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮತ್ತು ಆಟಗಾರರನ್ನು ಬದಲಾಯಿಸಬಹುದು ಎಂಬ ವದಂತಿಗಳಿವೆ. ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸೀಂ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿಯಾಗಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ನಿವೃತ್ತರಾದ ನಾಲ್ಕು ವರ್ಷಗಳ ನಂತರ ಮೊಹಮ್ಮದ್ ಅಮೀರ್ ಪಾಕಿಸ್ತಾನ ತಂಡಕ್ಕೆ ಮರಳಿದರು.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Whats_app_banner