ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ; ಆಸೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ಆಲಭ್ಯ-new zealand fast bowler neil wagner retires from international cricket not available for tests against australia jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ; ಆಸೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ಆಲಭ್ಯ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ; ಆಸೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ಆಲಭ್ಯ

Neil Wagner Retirement: ಕಿವೀಸ್‌ ವೇಗದ ಬೌಲರ್‌ ನೀಲ್ ವ್ಯಾಗ್ನರ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 27ರ ಸರಾಸರಿಯಲ್ಲಿ 260 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲ್ಯಾಂಡ್‌ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ (AFP)

ನ್ಯೂಜಿಲ್ಯಾಂಡ್‌ ವೇಗದ ಬೌಲರ್‌ ನೀಲ್ ವ್ಯಾಗ್ನರ್ (Neil Wagner) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 250ಕ್ಕೂ ಹೆಚ್ಚು ವಿಕೆಟ್ ಪಡೆದ ಕಿವೀಸ್‌ನ ಐವರು ಬೌಲರ್‌ಗಳಲ್ಲಿ ಒಬ್ಬರಾದ ವ್ಯಾಗ್ನರ್, ಈ ಕ್ಷಣದಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವುದಿಲ್ಲ ಎಂದಿದ್ದಾರೆ.

ಸೆಲ್ಲೊ ಬೇಸಿನ್ ರಿಸರ್ವ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿಯೂ ಎಡಗೈ ವೇಗದ ಬೌಲರ್ ಆಡುವ ಸಾಧ್ಯತೆ ಇಲ್ಲ. ಆ ಬಳಿಕ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೂ ಮುಂಚಿತವಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

64 ಟೆಸ್ಟ್ ಪಂದ್ಯ‌ಗಳಲ್ಲಿ 260 ವಿಕೆಟ್‌

ದಕ್ಷಿಣ ಆಫ್ರಿಕಾ ಮೂಲದವರಾದ ವ್ಯಾಗ್ನರ್, ಕಿವೀಸ್‌ ಪರ 64 ಟೆಸ್ಟ್ ಪಂದ್ಯ‌ಗಳಲ್ಲಿ ಆಡಿದ್ದಾರೆ. 37ರ ಸರಾಸರಿಯಲ್ಲಿ 260 ವಿಕೆಟ್‌ ಕಬಳಿಸಿರುವ ಅವರು, ನ್ಯೂಜಿಲ್ಯಾಂಡ್‌‌ನ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಸಾರ್ವಕಾಲಿಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇದೀಗ ನಿವೃತ್ತಿಯೊಂದಿಗೆ ತಮ್ಮ 12 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಇದನ್ನೂ ಓದಿ | ರನ್​ಚೇಸ್​ನಲ್ಲಿ ಅರ್ಧಶತಕ, ನಾಯಕನಾಗಿ ಮತ್ತೊಂದು ದಾಖಲೆ; ಪಟೌಡಿ, ಗಂಗೂಲಿ ಎಲೈಟ್ ಕ್ಲಬ್ ಸೇರಿದ ರೋಹಿತ್ ಶರ್ಮಾ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ದೇಶೀಯ ಕ್ರಿಕೆಟ್‌ನಲ್ಲಿ ಮೈದಾನದಕ್ಕಿಳಿಯಲು 37 ವರ್ಷದ ಆಟಗಾರ ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಅವರು, 2008ರಲ್ಲಿ ಒಟಾಗೊ ಪರ ದೇಶೀಯ ಕ್ರಿಕೆಟ್ ಆಡಲು ಡ್ಯುನೆಡನ್‌ಗೆಗೆ ತೆರಳಿದರು. ನಂತರ 2018ರಲ್ಲಿ ಉತ್ತರ ಜಿಲ್ಲೆಗಳ ಪರ ಆಡಲು ಪಾಪಮೊವಾಗೆ ಬಂದರು.

ವ್ಯಾಗ್ನರ್ ಭಾವುಕ ನುಡಿ

ವಿದಾಯ ಕುರಿತು ಮಾತನಾಡಿದ ಅವರು, ಈ ನಿರ್ಧಾರ ಸುಲಭವಲ್ಲ. ಆದರೆ ಮುಂದುವರೆಯ ಇದು ಸೂಕ್ತ ಸಮಯ ಎಂಬುದು ಸ್ಪಷ್ಟವಾಗಿದೆ ಎಂದು ವ್ಯಾಗ್ನರ್ ಹೇಳಿದ್ದಾರೆ. “ಕಿವೀಸ್‌ ಪರ ಟೆಸ್ಟ್ ಕ್ರಿಕೆಟ್ ಆಡಿದ ಪ್ರತಿ ಕ್ಷಣವನ್ನು ನಾನು ಆನಂದಿಸಿದ್ದೇನೆ. ತಂಡವಾಗಿ ನಾವು ಸಾಧಿಸಿದ ಎಲ್ಲದರ ಬಗ್ಗೆ ಹೆಮ್ಮೆ ಇದೆ. ನನ್ನ ವೃತ್ತಿಜೀವನದಲ್ಲಿ ಸಂಪಾದಿಸಿದ ಸ್ನೇಹ ಮತ್ತು ಬಂಧಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ನಾನು ಈ ಹಂತಕ್ಕೆ ಬರುವಲ್ಲಿ ಪಾಲು ಪಡೆದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ತಂಡದ ಸದಸ್ಯರು ಯಾವಾಗಲೂ ನನಗೆ ಜಗತ್ತನ್ನು ಅರ್ಥೈಸಿದ್ದಾರೆ. ತಂಡಕ್ಕೆ ಉತ್ತಮವಾಗಿದ್ದನ್ನು ಮಾತ್ರ ನಾನು ಮಾಡಲು ಬಯಸುತ್ತೇನೆ. ಅದುವೇ ನಾನು ಬಿಟ್ಟುಹೋಗುವ ಪರಂಪರೆ ಎಂದು ನಾನು ಭಾವಿಸುತ್ತೇನೆ” ಎಂದು ವ್ಯಾಗ್ನರ್ ಭಾವುಕರಾಗಿ ಹೇಳಿದ್ದಾರೆ.

ಡಬ್ಲ್ಯೂಟಿಸಿ ಫೈನಲ್‌ ಪಂದ್ಯದಲ್ಲಿ ಆಡಿದ್ದ ವ್ಯಾಗ್ನರ್

2012ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟ್ಸ್ಮನ್, ಐಸಿಸಿ ಟೆಸ್ಟ್ ವಿಶ್ವ ಶ್ರೇಯಾಂಕದಲ್ಲಿ ಕಿವೀಸ್‌ ತಂಡವು ನಂಬರ್‌ 1 ಸ್ಥಾನಕ್ಕೆ ಏರುವ ಸಂದರ್ಭದಲ್ಲಿ ತಂಡದಲ್ಲಿ ಪಾಲು ಪಡೆದಿದ್ದರು. ಅಲ್ಲದೆ 2021ರ ಉದ್ಘಾಟನಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಮಣಿಸಿ ಕಿವೀಸ್‌ ಗೆಲುವು ಸಾಧಿಸಿದಾಗ, ತಂಡದ ಪ್ರಮುಖ ಸದಸ್ಯರಾಗಿದ್ದರು. ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ | ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಸೋಲು; ಮಯಾಂಕ್‌ ಬಳಗ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟ ವಿದರ್ಭ

ವೃತ್ತಿಜೀವನದ ವೇಳೆ ತಮಗೆ ನಿರಂತರ ಬೆಂಬಲ ನೀಡಿದ ತಮ್ಮ ಪತ್ನಿ ಲಾನಾ ಮತ್ತು ಮಕ್ಕಳಿಗೆ ಅವರು ಧನ್ಯವಾದ ಅರ್ಪಿಸಿದರು. “ನಾನು ಇಂದು ಮನುಷ್ಯನಾಗಲು ಸಹಾಯ ಮಾಡಿದ ನನ್ನ ಪತ್ನಿ ಲಾನಾ ಮತ್ತು ನಮ್ಮ ಇಬ್ಬರು ಹೆಣ್ಣು ಮಕ್ಕಳಾದ ಒಲಿವಿಯಾ ಮತ್ತು ಜಹ್ಲಿ ಮತ್ತು ನಮ್ಮ ಮಗ ಜೋಶ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ | WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ; ಲೈವ್‌ ಸ್ಟ್ರೀಮಿಂಗ್‌ ವಿವರ

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point