ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ-ರೋಹಿತ್​ ಅಲ್ಲ; ಭಾರತಕ್ಕೆ ಟಿ20 ವಿಶ್ವಕಪ್​ ಟ್ರೋಫಿ ಗೆದ್ದುಕೊಡಬಲ್ಲ ಜೋಡಿಯನ್ನು ಹೆಸರಿಸಿದ ರವಿ ಶಾಸ್ತ್ರಿ

ಕೊಹ್ಲಿ-ರೋಹಿತ್​ ಅಲ್ಲ; ಭಾರತಕ್ಕೆ ಟಿ20 ವಿಶ್ವಕಪ್​ ಟ್ರೋಫಿ ಗೆದ್ದುಕೊಡಬಲ್ಲ ಜೋಡಿಯನ್ನು ಹೆಸರಿಸಿದ ರವಿ ಶಾಸ್ತ್ರಿ

Ravi Shastri : 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಟ್ರೋಫಿ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರರು ಯಾರು ಎಂಬುದನ್ನು ಮಾಜಿ ಹೆಡ್​ಕೋಚ್ ರವಿ ಶಾಸ್ತ್ರಿ ಹೆಸರಿಸಿದ್ದಾರೆ.

ಕೊಹ್ಲಿ-ರೋಹಿತ್​ ಅಲ್ಲ; ಭಾರತಕ್ಕೆ ಟಿ20 ವಿಶ್ವಕಪ್​ ಟ್ರೋಫಿ ಗೆದ್ದುಕೊಡಬಲ್ಲ ಜೋಡಿಯನ್ನು ಹೆಸರಿಸಿದ ರವಿ ಶಾಸ್ತ್ರಿ
ಕೊಹ್ಲಿ-ರೋಹಿತ್​ ಅಲ್ಲ; ಭಾರತಕ್ಕೆ ಟಿ20 ವಿಶ್ವಕಪ್​ ಟ್ರೋಫಿ ಗೆದ್ದುಕೊಡಬಲ್ಲ ಜೋಡಿಯನ್ನು ಹೆಸರಿಸಿದ ರವಿ ಶಾಸ್ತ್ರಿ

2024ರ ಟಿ20 ವಿಶ್ವಕಪ್‌ ಟೂರ್ನಿಗೆ (T20 World Cup 2024) 15 ಸದಸ್ಯರ ಭಾರತ ಕ್ರಿಕೆಟ್ ತಂಡವನ್ನು (Indian Cricket Team) ಘೋಷಿಸಿ ಸುಮಾರು ಒಂದು ವಾರ ಕಳೆದಿದೆ. ಮೆನ್ ಇನ್ ಬ್ಲೂ 17 ವರ್ಷಗಳ ಬರವನ್ನು ಕೊನೆಗೊಳಿಸುವ ಸಾಧ್ಯತೆಗಳ ಬಗ್ಗೆ ವಿಶ್ವದಾದ್ಯಂತದ ಕ್ರಿಕೆಟ್ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ಪ್ರಸ್ತುತ ವಿಶ್ವಕಪ್​ನಲ್ಲಿ ಮಿಂಚುವ ಭಾರತದ ಜೋಡಿ ಯಾವುದೆಂದು ಮಾಜಿ ಹೆಡ್​ಕೋಚ್ ರವಿ ಶಾಸ್ತ್ರಿ (Ravi Shastri) ಅವರು ಬಹಿರಂಗಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್​​ನಲ್ಲಿ​ ಎಲ್ಲರ ಕಣ್ಣು ನಾಯಕ ರೋಹಿತ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರ ಮೇಲಿದೆ. ಆದರೆ, ರವಿ ಶಾಸ್ತ್ರಿ ಅವರು ಪ್ರಮುಖ ಆಟಗಾರರೆಂದು ಹೆಸರಿಸಿದ್ದು ಎಡಗೈ ಬ್ಯಾಟಿಂಗ್ ಜೋಡಿಯನ್ನು. 1983ರ ವಿಶ್ವಕಪ್ ವಿಜೇತ ರವಿಶಾಸ್ತ್ರಿ ಅವರು ದಿಗ್ಗಜ ಆಟಗಾರರನ್ನೇ ಕೈಬಿಟ್ಟು ಎಡಗೈ ಬ್ಯಾಟರ್​​ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಮಿಂಚಿನ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ದುಬೆ-ಜೈಸ್ವಾಲ್​ ಭಾರತದ ಪ್ರಮುಖ ಕೀಲಿಗಳು ಎಂದ ರವಿ ಶಾಸ್ತ್ರಿ

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಮಧ್ಯಮ ಕ್ರಮಾಂಕದ ಎನ್‌ಫೋರ್ಸರ್ ಶಿವಂ ದುಬೆ ಅವರು ಭಾರತ ತಂಡಕ್ಕೆ ​ಎರಡನೇ ಟಿ20 ವಿಶ್ವಕಪ್ ಗೆದ್ದುಕೊಡಲು  ಪ್ರಮುಖ ಕೀಲಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶಾಸ್ತ್ರಿ ತಿಳಿಸಿದ್ದಾರೆ. ಇಬ್ಬರು ಭಾರತದ ಪರ ಸ್ಫೋಟಕ ಪ್ರದರ್ಶನದ ಮೂಲಕ ಟ್ರೋಫಿ ಗೆಲ್ಲಲು ಸಹಾಯ ಮಾಡಲಿದ್ದಾರೆ ಎಂದಿದ್ದಾರೆ. ದುಬೆ ಮತ್ತು ಜೈಸ್ವಾಲ್ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಭಾರತದ ಪರ ಇಬ್ಬರು ಎಡಗೈ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ. ಈ ಇಬ್ಬರು ಸಹ ತಮ್ಮ ಮೊದಲ ವಿಶ್ವಕಪ್ ಆಡುತ್ತಿದ್ದಾರೆ. ಅದರಲ್ಲೂ ಯಶಸ್ವಿ ಕುರಿತು ವಿಶೇಷವಾಗಿ ಹೇಳುವುದೇನಿಲ್ಲ. ಏಕೆಂದರೆ ಆತನ ಸಾಮರ್ಥ್ಯ ಏನೆಂಬುದನ್ನು ನಮಗೆ ಸಾಕಷ್ಟು ತಿಳಿದಿದೆ. ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಜೈಸ್ವಾಲ್, ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಲಿದ್ದಾರೆ. ಚಿಕ್ಕವನಾದರೂ ನಿರ್ಭೀತಿಯಿಂದ ಆಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ದುಬೆ ವಿನಾಶಕಾರಿ ಎಂದ ಮಾಜಿ ಕೋಚ್

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಿಡಿದೇಳುವ ಈ (ಶಿವಂ ದುಬೆ) ಬ್ಯಾಟರ್​ ಬಗ್ಗೆ ದಯವಿಟ್ಟು ಎಚ್ಚರದಿಂದಿರಿ. ಏಕೆಂದರೆ, ಆತ ಸ್ಫೋಟಕ, ಆತ ವಿನಾಶಕಾರಿ. ಆತ ಮ್ಯಾಚ್​ ವಿನ್ನರ್. ಆತ ಮೋಜಿಗಾಗಿ ಸಿಕ್ಸರ್‌ ಸಿಡಿಸುತ್ತಾರೆ. ಸ್ಪಿನ್ ಬೌಲರ್​​ಗಳನ್ನು ನಾಶಪಡಿಸಬಹುದು ಎಂದು ಶಾಸ್ತ್ರಿ ಐಸಿಸಿ ಸಂವಾದದಲ್ಲಿ ಹೇಳಿದ್ದಾರೆ. ಆತ ಕೆಲವು ಚೆಂಡುಗಳನ್ನು ಒಂದು ಐಲ್ಯಾಂಡ್​​ನಿಂದ ಮತ್ತೊಂದು ಐಲ್ಯಾಂಡ್​​ಗೆ ಕಳುಹಿಸುವ ಸಾಮರ್ಥ್ಯ ಹೊಂದಿದ್ದಾನೆ. ಏಕೆಂದರೆ ಆತ ಪವರ್​ ಹಿಟ್ಟರ್ ಎಂದಿದ್ದಾರೆ.

ಅತಿ ಉದ್ದದ ಸಿಕ್ಸರ್​​ಗಳನ್ನು ಚಚ್ಚುವ ಶಿವಂ ದುಬೆ, ಸ್ಪಿನ್ ವಿರುದ್ಧ ರಾಕ್ಷಸ ರೂಪ ತಾಳುತ್ತಾರೆ. ವೇಗದ ಬೌಲರ್‌ಗಳ ವಿರುದ್ಧವೂ ಸಹ, ಅವರು ತಮ್ಮ ಆಟವನ್ನು ವರ್ಕೌಟ್ ಮಾಡಿದ್ದಾರೆ. ಆಡುವ ವಿಧಾನವನ್ನು ಅರ್ಥಮಾಡಿಕೊಂಡಿದ್ದಾರೆ. ಅವರು ಆ ಐದನೇ, ಆರನೇ ಸ್ಥಾನದಲ್ಲಿ ತಂಡದ ಪ್ರಮುಖ ಕೀಲಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. 20-25 ಎಸೆತಗಳಲ್ಲಿ ಪಂದ್ಯದ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ಬಾರಿ 200 ಪ್ಲಸ್​ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿದ್ದಾರೆ. ಇದು ಟೀಮ್ ಇಂಡಿಯಾಗೆ ಅಗಾಧವಾಗಿ ನೆರವು ನೀಡುತ್ತದೆ ಎಂದು ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ.

IPL_Entry_Point