Shaheen Afridi: ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ: ಶಾಹೀನ್ ಅಫ್ರಿದಿಯನ್ನು ಕಿತ್ತೆಸೆದ ಕೋಚ್-pakistan vs bangladesh 2nd test major surgery in pakistan test team shaheen afridi kicks out of team vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Shaheen Afridi: ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ: ಶಾಹೀನ್ ಅಫ್ರಿದಿಯನ್ನು ಕಿತ್ತೆಸೆದ ಕೋಚ್

Shaheen Afridi: ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ: ಶಾಹೀನ್ ಅಫ್ರಿದಿಯನ್ನು ಕಿತ್ತೆಸೆದ ಕೋಚ್

Pakistan vs Bangladesh 2nd Test: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಅವರನ್ನು ಪಾಕಿಸ್ತಾನ ತಂಡದಿಂದ ಹೊರಗಿಡಲಾಗಿದೆ.

ಪಾಕಿಸ್ತಾನದ ವೇಗದ ಬೌಲರ್​ ಶಾಹೀನ್ ಅಫ್ರಿದಿ.
ಪಾಕಿಸ್ತಾನದ ವೇಗದ ಬೌಲರ್​ ಶಾಹೀನ್ ಅಫ್ರಿದಿ.

Shaheen Afridi: ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ರಾವಲ್ಪಿಂಡಿಯಲ್ಲಿ ಆಗಸ್ಟ್ 30 ರಿಂದ ನಡೆಯಲಿದ್ದು, ಇದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ಎರಡನೇ ಟೆಸ್ಟ್‌ಗೆ 12 ಆಟಗಾರರ ಹೆಸರನ್ನು ಮಂಡಳಿ ಪ್ರಕಟಿಸಿದೆ. ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ತಂಡದ ಪ್ರಮುಖ ವೇಗದ ಬೌಲರ್ ಶಾಹೀನ್ ಅಫ್ರಿದಿ ಹೆಸರು ಕಾಣೆಯಾಗಿದೆ. ಅವರನ್ನು ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯದಿಂದ ಮುಖ್ಯ ಕೋಚ್ ಜೇಸನ್ ಗಿಲ್ಲೆಸ್ಪಿ ಹೊರಗಿಟ್ಟಿದ್ದಾರೆ.

ಆಫ್ರಿದಿ ಅವರ ಜಾಗದಲ್ಲಿ ಎಡಗೈ ವೇಗದ ಬೌಲರ್ ಮೀರ್ ಹಮ್ಜಾ ಮತ್ತು ಸ್ಪಿನ್ನರ್ ಅಬ್ರಾರ್ ಅಹ್ಮದ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಪೈಕಿ ಒಬ್ಬ ಆಟಗಾರ ಮಾತ್ರ ಎರಡನೇ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಕಂಡ ಹೀನಾಯ ಸೋಲಿನ ಬಳಿಕ ಪಾಕ್ ತಂಡದಲ್ಲಿ ಮೇಜರ್ ಸರ್ಜರಿ ನಡೆಯುತ್ತಿದೆ ಎಂಬುದು ಎದ್ದು ಕಾಣುತ್ತಿದೆ. ಆದರೆ, ಇದರ ಬಗ್ಗೆ ಕೋಚ್ ನೇರವಾಗಿ ಏನೂ ಹೇಳಿಲ್ಲ.

ಎರಡನೇ ಟೆಸ್ಟ್‌ಗೂ ಮುನ್ನ, ಪಾಕಿಸ್ತಾನ ಟೆಸ್ಟ್ ತಂಡದ ನೂತನ ಮುಖ್ಯ ಕೋಚ್ ಜೇಸನ್ ಗಿಲ್ಲೆಸ್ಪಿ, 'ಶಾಹೀನ್ ಈ ಪಂದ್ಯದಲ್ಲಿ ಆಡುವುದಿಲ್ಲ. ನಾವು ಅವರೊಂದಿಗೆ ಮಾತುಕತೆ ನಡೆಸಿದ್ದೇವೆ ಮತ್ತು ತಂಡದ ಆಡಳಿತ ಮಂಡಳಿ ನಿರ್ಧಾರಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಶಾಹೀನ್‌ಗೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಅವರು ಕಮ್​ಬ್ಯಾಕ್ ಮಾಡಲು ಕೆಲವು ವಿಷಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾವು ಅತ್ಯುತ್ತಮ ಫಾರ್ಮ್‌ನಲ್ಲಿ ನೋಡಲು ಬಯಸುತ್ತೇವೆ,’ ಎಂದು ಹೇಳಿದ್ದಾರೆ.

ಟೆಸ್ಟ್‌ನಲ್ಲಿ ಶಾಹೀನ್ ಅವರ ಫಾರ್ಮ್ ಸುಮಾರು ಒಂದು ವರ್ಷದಿಂದ ಪಾಕಿಸ್ತಾನಕ್ಕೆ ಚಿಂತೆಯ ವಿಷಯವಾಗಿದೆ. ಆಸ್ಟ್ರೇಲಿಯಾದಲ್ಲಿ ವೇಗದ ಬೌಲಿಂಗ್‌ಗೆ ಅನುಕೂಲಕರವಾದ ಪಿಚ್​ನಲ್ಲಿ, ಅವರು 41 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದರು. ಆದರೆ, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು 96 ರನ್‌ಗಳಿಗೆ ಕೇವಲ ಎರಡು ಕೆಳ ಕ್ರಮಾಂಕದ ವಿಕೆಟ್‌ಗಳನ್ನು ಪಡೆದರು. ಕಳೆದ ವರ್ಷ ಅನುಭವಿಸಿದ ಗಾಯದಿಂದಾಗಿ ಅವರ ವೇಗವೂ ಕುಸಿದಿದೆ. ವಿಶ್ವಕಪ್ 2023 ಮತ್ತು ಟಿ20 ವಿಶ್ವಕಪ್ 2024ರಲ್ಲೂ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು.

ಏತನ್ಮಧ್ಯೆ, ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಯಾವುದೇ ಪ್ರಮುಖ ಸ್ಪಿನ್ನರ್ ಇಲ್ಲದೆ ಪಾಕ್ ತಂಡ ಮೈದಾನಕ್ಕಿಳಿದಿತ್ತು. ಅಂತಿಮವಾಗಿ ಸ್ಪಿನ್ ಬೌಲಿಂಗ್ ಆಧಾರದ ಮೇಲೆ ಬಾಂಗ್ಲಾದೇಶ ಗೆದ್ದಿತು. ರಾವಲ್ಪಿಂಡಿಯ ಹವಾಮಾನ ವೈಪರೀತ್ಯದಿಂದಾಗಿ ಆತಿಥೇಯ ತಂಡ 12 ಆಟಗಾರರ ಹೆಸರನ್ನು ಪ್ರಕಟಿಸಿದೆ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಉಭಯ ತಂಡಗಳಿಗೂ ಮೇಲ್ಮೈಯನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಗುರುವಾರ ನಡೆಯಬೇಕಿದ್ದ ಅಭ್ಯಾಸ ಅವಧಿಯೂ ರದ್ದಾಗಿತ್ತು.

ಬಾಬರ್​ಗೂ ಟೆನ್ಶನ್ ಶುರು

ಶಾಹೀನ್ ಹೊರಗುಳಿದ ನಂತರ, ಬಾಬರ್ ಅಜಮ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಊಹಾಪೋಹಗಳು ಕೂಡ ಪ್ರಾರಂಭವಾಗಿವೆ. ಟೆಸ್ಟ್‌ನ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಶತಕ ಅಥವಾ ಅರ್ಧಶತಕವನ್ನು ಗಳಿಸಲು ಬಾಬರ್​ಗೆ ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಅವರು 161 ರನ್ ಗಳಿಸಲಷ್ಟೇ ಶಕ್ತರಾದರು. ಬಾಬರ್ ಮೊದಲ ಪಂದ್ಯದಲ್ಲಿ ಕೇವಲ 22 ರನ್ ಗಳಿಸಿದರು. ಈ ಪೈಕಿ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದರು.