ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್; ಕುಂಬ್ಳೆ-ಹರ್ಭಜನ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಅಶ್ವಿನ್-ಜಡೇಜಾ ಸ್ಪಿನ್‌ ಜೋಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ ಮೊದಲ ಟೆಸ್ಟ್; ಕುಂಬ್ಳೆ-ಹರ್ಭಜನ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಅಶ್ವಿನ್-ಜಡೇಜಾ ಸ್ಪಿನ್‌ ಜೋಡಿ

ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್; ಕುಂಬ್ಳೆ-ಹರ್ಭಜನ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಅಶ್ವಿನ್-ಜಡೇಜಾ ಸ್ಪಿನ್‌ ಜೋಡಿ

India vs England 1st Test: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರೊಂದಿಗೆ ದಾಖಲೆಯೊಂದನ್ನು ಬರೆದಿದ್ದಾರೆ.

ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ
ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ (PTI)

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ (India vs England 1st Test) ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆ ಕಾಯ್ದುಕೊಂಡಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲರ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರು. ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದ ಭಾರತವು, ಇಂಗ್ಲೆಂಡ್‌ ಬ್ಯಾಟಿಂಗ್‌ ಲೈನಪ್‌ ಅನ್ನು ಛಿದ್ರಗೊಳಿಸಿತು.

ಆರಂಭದಲ್ಲಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕೈಗೆ ಹೊಸ ಚೆಂಡು ನೀಡಿದ ನಾಯಕ ರೋಹಿತ್‌ ಶರ್ಮಾ, ಪಂದ್ಯದ ಒಂಬತ್ತನೇ ಓವರ್ ಬಳಿಕ ಸ್ಪಿನ್ನರ್‌ಗಳನನ್ನು ಕರೆಸಿದರು. ಅಲ್ಲಿಯವರೆಗೆ ಆಕ್ರಮಣಕಾರಿ ಆರಂಭ ಪಡೆದ ಇಂಗ್ಲೆಂಡ್, ದಿಢೀರನೆ ಕುಸಿಯತು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ಮೋಡಿಗೆ ಅಗ್ರ ಕ್ರಮಾಂಕ ಪತನಗೊಂಡಿತು. ಬೇಗನೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಆಂಗ್ಲರ ಇನ್ನಿಂಗ್ಸ್‌ ನಿಧಾನಗತಿ ಪಡೆದುಕೊಂಡಿತು.

ಅಶ್ವಿನ್ 2 ವಿಕೆಟ್ ಪಡೆದರೆ, ಜಡೇಜಾ ಕೂಡಾ ಬೇಗನೆ 2 ವಿಕೆಟ್‌ ಕಬಳಿಸಿದರು. ಇಂಗ್ಲೆಂಡ್‌ ಜಾಕ್ ಕ್ರಾಲೆ ಅವರನ್ನು 20 ರನ್ ಗಳಿಸಿದ್ದಾಗ ಅಶ್ವಿನ್ ಔಟ್ ಮಾಡುವ ಮೂಲಕ, ಭಾರತದ ಸ್ಪಿನ್ ಜೋಡಿಯು ಹೊಸ ದಾಖಲೆ ಬರೆದರು. ಅಶ್ವಿನ್ ಮತ್ತು ಜಡೇಜಾ ಜೋಡಿಯು ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿಯನ್ನು ಹಿಂದಿಕ್ಕಿ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಜೋಡಿಯಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ | ಇಂಗ್ಲೆಂಡ್​​ ಬಜ್​ಬಾಲ್​ಗೆ ಭಾರತ ಸ್ಪಿನ್​ ಮಂತ್ರ; ಕುಸಿದ ತಂಡಕ್ಕೆ ರೂಟ್-ಬೈರ್​ಸ್ಟೋ ಆಸರೆ, ಮೊದಲ ಸೆಷನ್​ಗೆ 108/3

ಟೆಸ್ಟ್ ಆರಂಭಕ್ಕೂ ಮುನ್ನ ಭಾರತದ ಮಾಜಿ ಸ್ಪಿನ್ ಜೋಡಿ, ಭಾರತದ ಮಾಜಿ ಜೋಡಿಗಿಂತ(503 ವಿಕೆಟ್) ಒಂದು ವಿಕೆಟ್‌ ಹಿಂದಿದ್ದರು. ಮತ್ತೊಂದೆಡೆ ವೇಗಿ ಜಹೀರ್ ಖಾನ್ ಹರ್ಭಜನ್ 474 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ಜೋಡಿಯ ದಾಖಲೆ ಅಬಾಧಿತ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿಯು 1039 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. 2023ರ ಆ್ಯಷಸ್ ಸರಣಿಯ ಬಳಿಕ ಬ್ರಾಡ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಮತ್ತೊಂದೆಡೆ ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾತ್ ಮತ್ತು ಶೇನ್ ವಾರ್ನ್ ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಹೆಚ್ಚು ವಿಕೆಟ್ (1001) ಪಡೆದ ವಿಶ್ವದ ಎರಡನೇ ಜೋಡಿಯಾಗಿದ್ದಾರೆ.

ಇದನ್ನೂ ಓದಿ | ಶೋಯೆಬ್ ಬಶೀರ್ ಯಾರು; ಭಾರತ ಪ್ರವಾಸಕ್ಕೆ ವೀಸಾ ಸಮಸ್ಯೆ ಎದುರಿಸಿದ ಇಂಗ್ಲೆಂಡ್ ಸ್ಪಿನ್ನರ್ ಬಗ್ಗೆ ಇಲ್ಲಿದೆ ಮಾಹಿತಿ

ವೇಗದ ಆಟಕ್ಕೆ ಮುಂದಾದ ಇಂಗ್ಲೆಂಡ್‌ ಆರಂಬಿಕರಾದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್, ಮೊದಲ ವಿಕೆಟ್​ಗೆ ವೇಗವಾಗಿ 50 ರನ್ ಕಲೆ ಹಾಕಿದರು. ಪ್ರತಿ ಓವರ್​​​ಗೆ 5ರ ಸರಾಸರಿಯಲ್ಲಿ ರನ್ ಪೇರಿಸಿದರು. 11.5ನೇ ಓವರ್​​ನಲ್ಲಿ 55 ರನ್ ವೇಳೆಗೆ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. 39 ಎಸೆತಗಳಲ್ಲಿ 35 ರನ್ದ್ದ ಗಳಿಸಿದ್ದ ಡಕೆಟ್, ಅಶ್ವಿನ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಬಳಿಕ ಮೂರು ರನ್​ಗಳ ಅಂತರದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಓಲಿ ಪೋಪ್ 1 ರನ್ ಗಳಿಸಿದ್ದಾಗ ಜಡೇಜಾ ಔಟ್ ಮಾಡಿದರು. ಜಾಕ್ ಕ್ರಾವ್ಲಿ ಸಿರಾಜ್​ಗೆ ಕ್ಯಾಚ್ ನೀಗಿ ನಿರ್ಗಮಿಸಿದರು.

Whats_app_banner