ಗೌತಮ್ ಗಂಭೀರ್​ ಟೀಮ್ ಇಂಡಿಯಾ ಹೆಡ್​ಕೋಚ್; ಕೆಕೆಆರ್​ ಮೆಂಟರ್ ಆಗಲಿದ್ದಾರೆ ರಾಹುಲ್ ದ್ರಾವಿಡ್​?
ಕನ್ನಡ ಸುದ್ದಿ  /  ಕ್ರಿಕೆಟ್  /  ಗೌತಮ್ ಗಂಭೀರ್​ ಟೀಮ್ ಇಂಡಿಯಾ ಹೆಡ್​ಕೋಚ್; ಕೆಕೆಆರ್​ ಮೆಂಟರ್ ಆಗಲಿದ್ದಾರೆ ರಾಹುಲ್ ದ್ರಾವಿಡ್​?

ಗೌತಮ್ ಗಂಭೀರ್​ ಟೀಮ್ ಇಂಡಿಯಾ ಹೆಡ್​ಕೋಚ್; ಕೆಕೆಆರ್​ ಮೆಂಟರ್ ಆಗಲಿದ್ದಾರೆ ರಾಹುಲ್ ದ್ರಾವಿಡ್​?

Gautam Gambhir : ಗೌತಮ್ ಗಂಭೀರ್ ಹೊರಗುಳಿಯುವ ಕಾರಣ 2025ರ ಐಪಿಎಲ್​ಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಸ್ಥಾನಕ್ಕೆ​ ರಾಹುಲ್​ ದ್ರಾವಿಡ್ ಅವರನ್ನು ಫ್ರಾಂಚೈಸಿ ಸಂಪರ್ಕಿಸಿದೆ.

ಗೌತಮ್ ಗಂಭೀರ್​ ಟೀಮ್ ಇಂಡಿಯಾ ಹೆಡ್​ಕೋಚ್; ಕೆಕೆಆರ್​ ಮೆಂಟರ್ ಆಗಲಿದ್ದಾರೆ ರಾಹುಲ್ ದ್ರಾವಿಡ್​?
ಗೌತಮ್ ಗಂಭೀರ್​ ಟೀಮ್ ಇಂಡಿಯಾ ಹೆಡ್​ಕೋಚ್; ಕೆಕೆಆರ್​ ಮೆಂಟರ್ ಆಗಲಿದ್ದಾರೆ ರಾಹುಲ್ ದ್ರಾವಿಡ್​?

ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡುವುದರೊಂದಿಗೆ ರಾಹುಲ್ ದ್ರಾವಿಡ್ ಅವರು ತಮ್ಮ ಹೆಡ್​ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನವನ್ನು ಗೌತಮ್ ಗಂಭೀರ್ ಅವರು ತುಂಬಲಿದ್ದಾರೆ. ಇದೀಗ ದ್ರಾವಿಡ್ ಇಂಡಿಯನ್ ಪ್ರೀಮಿಯರ್​ ಲೀಗ್​ನತ್ತ ಮುಖ ಮಾಡುವ ನಿರೀಕ್ಷೆ ಇದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಐಪಿಎಲ್-2024ರ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್​​ (KKR) 3ನೇ ಬಾರಿಗೆ ಚಾಂಪಿಯನ್ ಆಯಿತು. ಸನ್​ರೈಸರ್ಸ್ ಹೈದರಾಬಾದ್​ ವಿರು ಫೈನಲ್​ನಲ್ಲಿ 8 ವಿಕೆಟ್​ಗಳ ಜಯ ಸಾಧಿಸಿತು. ಕಳೆದ ಎರಡು ಆವೃತ್ತಿಗಳಲ್ಲಿ ಏಳನೇ ಸ್ಥಾನದಲ್ಲಿದ್ದ ಕೆಕೆಆರ್​​ಗೆ ಗೌತಿ ಮೆಂಟರ್ ಆದ ವರ್ಷದಲ್ಲೇ ಟ್ರೋಫಿಗೆ ಮುತ್ತಿಕ್ಕಿತು. ಗಂಭೀರ್ ನಾಯಕನಾಗಿಯೇ ಎರಡು ಟ್ರೋಫಿಗಳನ್ನು ಗೆದ್ದುಕೊಂಡಿದ್ದರು.

ದ್ರಾವಿಡ್ ಸಂಪರ್ಕಿಸಿದ ಕೆಕೆಆರ್​

ಗಂಭೀರ್ ಅವರು ಟೀಮ್ ಇಂಡಿಯಾ ಹೆಡ್​ಕೋಚ್ ಆಗಲಿರುವ ಕಾರಣಕ್ಕೆ ಕೆಕೆಆರ್ ಮೆಂಟರ್ ಸ್ಥಾನ ತುಂಬಲು ರಾಹುಲ್ ದ್ರಾವಿಡ್ ಅವರನ್ನು ಫ್ರಾಂಚೈಸಿ ಸಂಪರ್ಕಿಸಿದೆ ಎಂದು ವರದಿಯಾಗಿದೆ. ಗಂಭೀರ್​​ ಅವರ ಸ್ಥಾನ ತೆರವಾಗಿದ್ದು, 2025ರ ಋತುವಿಗೂ ಮುನ್ನ ಖಾಲಿ ಇರುವ ಸ್ಥಾನವನ್ನು ತುಂಬಬೇಕಾಗಿದೆ. ದ್ರಾವಿಡ್​ ಹೆಡ್​ಕೋಚ್ ಅವಧಿಯಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಮತ್ತು ಏಕದಿನ ವಿಶ್ವಕಪ್ ಫೈನಲ್​​, ಟಿ20 ವಿಶ್ವಕಪ್ ಫೈನಲ್ ಆಡಿದೆ. ಆದರೆ ಟಿ20ಯಲ್ಲಿ ಮಾತ್ರ ಕಪ್ ಗೆದ್ದಿತು.

ಗೆಲುವಿನ ನಂತರ ಕೆನ್ಸಿಂಗ್ಟನ್ ಓವಲ್​ನಲ್ಲಿ ವರದಿಗಾರರೊಂದಿಗಿನ ಸಂಭಾಷಣೆಯಲ್ಲಿ ದ್ರಾವಿಡ್ ಮುಂದಿನ ವಾರದಿಂದ ‘ನಿರುದ್ಯೋಗಿ’ ಆಗುತ್ತೇನೆ ಎಂದು ತಮಾಷೆ ಮಾಡಿದ್ದರು. ನ್ಯೂಸ್ 18 ವರದಿಯ ಪ್ರಕಾರ, ಭಾರತದ ಮಾಜಿ ನಾಯಕನನ್ನು ವಿವಿಧ ಐಪಿಎಲ್ ಫ್ರಾಂಚೈಸಿಗಳು ಸಂಪರ್ಕಿಸಿವೆ ಎಂದು ಹೇಳಲಾಗಿದೆ. ಆದರೀಗ ದ್ರಾವಿಡ್ ಮತ್ತೊಂದು ಕೆಲಸಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ತೋರುತ್ತದೆ.

ರಾಹುಲ್ ದ್ರಾವಿಡ್ ವೃತ್ತಿಜೀವನ

ಗಂಭೀರ್ ಅವರ ಸಮರ್ಥ ಬದಲಿ ಆಟಗಾರನನ್ನು ಹುಡುಕುತ್ತಿರುವ ಕೆಕೆಆರ್, 2025ರ ಋತುವಿಗೆ ದ್ರಾವಿಡ್ ಅವರನ್ನು ಕೋಚ್ ಅಥವಾ ಮಾರ್ಗದರ್ಶಕರಾಗಿ ಬಯಸುವ ಐಪಿಎಲ್ ತಂಡಗಳಲ್ಲಿ ಒಂದಾಗಿದೆ ಎಂದು ವರದಿ ತಿಳಿಸಿದೆ. ಗಂಭೀರ್ ಅವರು ಮುಖ್ಯ ಕೋಚ್ ಆಗಿ 12 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ದ್ರಾವಿಡ್ ಅವರು 2012ರಲ್ಲಿ ಅಂತಾರಾಷ್ಟ್ರೀಯ ನಿವೃತ್ತಿಯ ನಂತರ ಕೋಚಿಂಗ್​​ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

 2014ರಿಂದ 2015ರ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ದ್ರಾವಿಡ್, ನಂತರ ಅವರನ್ನು ಭಾರತದ ಅಂಡರ್ -19 ಮತ್ತು ಎ ತಂಡಕ್ಕೆ ಮುಖ್ಯ ತರಬೇತುದಾರರಾಗಿ ನೇಮಿಸಲಾಯಿತು. 2016ರಲ್ಲಿ ಅಂಡರ್-19 ತಂಡ ಫೈನಲ್ ಹಾಗೂ 2018ರಲ್ಲಿ ಪ್ರಶಸ್ತಿ ಜಯಿಸಿದ್ದಕ್ಕೆ ಕೋಚ್ ಆಗಿದ್ದ ಅವರು, ರಿಷಭ್ ಪಂತ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಭವಿಷ್ಯದ ಸ್ಟಾರ್​​ಗಳಿಗೆ ತರಬೇತಿ ನೀಡಿದ ಕೀರ್ತಿಗೂ ಪಾತ್ರರಾಗಿದ್ದಾರೆ. ನಂತರ 2016 ರಲ್ಲಿ ಅವರು ದೆಹಲಿ ಐಪಿಎಲ್ ತಂಡಕ್ಕೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದರು.

ಏತನ್ಮಧ್ಯೆ, ಗಂಭೀರ್ ಕಳೆದ ವಾರ ಕೆಕೆಆರ್​​ ಪರ ತಮ್ಮ ವಿದಾಯ ವಿಡಿಯೋವನ್ನು ಚಿತ್ರೀಕರಿಸಲು ಕೋಲ್ಕತ್ತಾದಲ್ಲಿದ್ದರು ಎಂದು ವರದಿಯಾಗಿದೆ. ಶೀಘ್ರದಲ್ಲೇ ಭಾರತದ ಮುಖ್ಯತರಬೇತುದಾರರಾಗಿ ನೇಮಕವಾಗಲಿದ್ದಾರೆ. ಅವರು ನೇಮಕಗೊಂಡ ಬೆನ್ನಲ್ಲೇ ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.

Whats_app_banner