ಕನ್ನಡ ಸುದ್ದಿ  /  ಕ್ರಿಕೆಟ್  /  ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್​ ಒನ್​8 ಕಮ್ಯೂನ್ ವಿರುದ್ಧ ಎಫ್​ಐಆರ್ ದಾಖಲು; ಕಾರಣವೇನು?

ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್​ ಒನ್​8 ಕಮ್ಯೂನ್ ವಿರುದ್ಧ ಎಫ್​ಐಆರ್ ದಾಖಲು; ಕಾರಣವೇನು?

Virat Kohli: ಬೆಂಗಳೂರಿನಲ್ಲಿರುವ ಸೂಪರ್​ಸ್ಟಾರ್ ಕ್ರಿಕೆಟರ್​ ವಿರಾಟ್ ಕೊಹ್ಲಿ ಒಡೆತನದ ಒನ್​8 ಕಮ್ಯೂನ್ ಪಬ್​ ವಿರುದ್ಧ ಕಬ್ಬನ್ ಪಾರ್ಕ್​ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್​ ಒನ್​8 ಕಮ್ಯೂನ್ ವಿರುದ್ಧ ಎಫ್​ಐಆರ್ ದಾಖಲು; ಕಾರಣವೇನು?
ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್​ ಒನ್​8 ಕಮ್ಯೂನ್ ವಿರುದ್ಧ ಎಫ್​ಐಆರ್ ದಾಖಲು; ಕಾರಣವೇನು?

ಭಾರತದ ಸೂಪರ್​ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಒಡೆತನದ ಪಬ್ ಮೇಲೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕಸ್ತೂರ್​​ಬಾ ರಸ್ತೆಯಲ್ಲಿರುವ ಒನ್​ 8 ಕಮ್ಯೂನ್ ಪಬ್ (One8 Commune) ಅನ್ನು ರಾತ್ರಿ ಅವಧಿ ಮೀರಿ ತೆರೆದಿದ್ದರ ಕಾರಣ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಎಂಜಿ ರಸ್ತೆಯಲ್ಲಿರುವ ಹಲವು ಸಂಸ್ಥೆಗಳ ವಿರುದ್ಧ ಪ್ರಕರಣವೂ ದಾಖಲಾಗಿದೆ. ಮಧ್ಯರಾತ್ರಿ 1 ಗಂಟೆಯ ನಂತರ ಕಾರ್ಯಾಚರಿಸಿದ್ದರಿಂದ ಎಫ್‌ಐಆರ್ ದಾಖಲಿಸಲಾಗಿದೆ. ಈ ಪಬ್‌ಗಳು ನಗರ ನಿಯಮಗಳನ್ನು ಉಲ್ಲಂಘಿಸಿ 1:30 ರವರೆಗೆ ತೆರೆದಿರುವುದು ಕಂಡುಬಂದಿದೆ.

ಜುಲೈ 6ರಂದು ಶನಿವಾರ ಮಧ್ಯರಾತ್ರಿ 1.30ವರೆಗೆ ಸುಮಾರು 3 ಮತ್ತು 4 ಪಬ್‌ಗಳು ತೆರೆದಿದ್ದವು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಅವಧಿಯಲ್ಲಿ ಪಬ್ ತೆರೆದಿರುವ ಮಾಹಿತಿ ಸಿಕ್ಕಿತು. ಗ್ರಾಹಕರೂ ಇದ್ದದ್ದು ಕಂಡು ಬಂದಿದೆ. ಹೀಗಾಗಿ ಸಮಯ ಮೀರಿ ಅನಧಿಕೃತವಾಗಿ ಪಬ್ ತೆರೆದಿಟ್ಟ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಅನ್ನು ದಾಖಲಿಸಲಾಗಿದೆ. ತಡರಾತ್ರಿ ಅಬ್ಬರದ ಮ್ಯೂಸಿಕ್​ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿಯ ಒನ್8 ಕಮ್ಯೂನ್ ಪಬ್‌ನಲ್ಲೂ ಜೋರು ಡಿಜೆ ಹಾಕಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಒನ್ 8 ಕಮ್ಯೂನ್ ದೆಹಲಿ, ಮುಂಬೈ, ಪುಣೆ, ಗುರ್ಗಾಂವ್ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. 2023ರ ಡಿಸೆಂಬರ್‌ನಲ್ಲಿ ಪ್ರಾರಂಭವಾದ ಬೆಂಗಳೂರು ಶಾಖೆಯು ರತ್ನಂ ಕಾಂಪ್ಲೆಕ್ಸ್‌ನ 6ನೇ ಮಹಡಿಯಲ್ಲಿದೆ. ಇಲ್ಲಿ ಕಿಟಕಿಯ ಪಕ್ಕದ ಮೇಜಿನ ಬಳಿ ಕುಳಿತರೆ ಕ್ರಿಕೆಟ್ ಮೈದಾನ ಭಾಗಶಃ ಗೋಚರಿಸುತ್ತದೆ. ಈ ರೆಸ್ಟೋರೆಂಟ್ ಸರಪಳಿಯ 8ನೇ ಔಟ್‌ಲೆಟ್ ಇದಾಗಿದ್ದು, 3 ಮಹಡಿಗಳಲ್ಲಿ ಹರಡಿರುವ ವಿಲಾಸಿ ರೆಸ್ಟೋರೆಂಟ್, ಬೋಹೀಮಿಯನ್​ನಿಂದ ಅಲಂಕೃತಗೊಂಡಿದೆ.

ಅವಧಿ ಮೀರಿ ಕಾರ್ಯನಿರ್ವಹಿಸಿದ್ದಕ್ಕೆ ಒನ್ 8 ಕಮ್ಯೂನ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 1:30 ಗಂಟೆಗೆ ಪಬ್ ತೆರೆದು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದರು. ಒನ್ 8 ಕಮ್ಯೂನ್‌ನ ಸಹ-ಮಾಲೀಕ ವಿರಾಟ್ ಕೊಹ್ಲಿ ಅವರು ಬೆಂಗಳೂರಿನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದು, ಐಪಿಎಲ್ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯದಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆಲ್ಲಲು ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯುದ್ದಕ್ಕೂ ಅಂದರೆ ಗುಂಪು ಹಂತ, ಸೂಪರ್​-8 ಹಂತ, ಸೆಮಿಫೈನಲ್​​ನಲ್ಲಿ ಕಳಪೆ ಪ್ರದರ್ಶನ ನೀಡಿದ ವಿರಾಟ್, ಫೈನಲ್​​ನಲ್ಲಿ ಅಬ್ಬರಿಸಿದರು. ಭಾರತ 34ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಕೊಹ್ಲಿ ರಕ್ಷಿಸಿದರು. 59 ಎಸೆತಗಳಲ್ಲಿ 76 ರನ್ ಸಿಡಿಸಿ ಸ್ಮರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಗಿದ್ದರು.

ಫೈನಲ್​ ಪಂದ್ಯದ ಸಂಕ್ಷಿಪ್ತ ಸ್ಕೋರ್​

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಪಡೆ ಮೊದಲು ಬ್ಯಾಟಿಂಗ್ ನಡೆಸಿತು. ತನ್ನ ಪಾಲಿನ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದರೊಂದಿಗೆ ಭಾರತ 7 ರನ್​​ಗಳ ರೋಚಕ ಗೆಲುವು ಸಾಧಿಸಿ 2007ರ ನಂತರ 2ನೇ ಬಾರಿಗೆ ಐಸಿಸಿ ಟ್ರೋಫಿಗೆ ಮುತ್ತಿಕ್ಕಿತು.