IND vs PAK: ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಫ್ಯಾನ್ ಬೇಸ್ ತುಂಬಾ ದೊಡ್ಡದು; ಅವರ ಜನಪ್ರಿಯತೆ ಬಚ್ಚನ್, ಶಾರುಖ್ ಖಾನ್‌ಗೆ ಸಮ
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಅಭಿಮಾನಿಗಳ ಕಾತರ ಹೆಚ್ಚಿದೆ. ಪಂದ್ಯದಲ್ಲಿ ಹೆಚ್ಚು ಗಮನ ಸೆಳೆಯುವ ಆಟಗಾರನೆಂದರೆ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿಗೆ ಪಾಕಿಸ್ತಾನದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರು ಯಾವುದೇ ಸೂಪರ್ ಸ್ಟಾರ್‌ಗಿಂತ ಕಡಿಮೆಯಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಹೆಚ್ಚು ವಿವರಿಸಿ ಹೇಳಬೇಕಿಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಫ್ಯಾನ್ಸ್, ಫಾಲೋವರ್‌ಗಳನ್ನು ಹೊಂದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ. ಇವರಿಗಿರುವ ಫ್ಯಾನ್‌ಬೇಸ್‌ನ ಅರ್ಧದಷ್ಟು ಕೂಡಾ ಎರಡನೇ ಸ್ಥಾನದಲ್ಲಿರುವ ಆಟಗಾರನಿಗಿಲ್ಲ. ಭಾರತೀಯ ಹಾಲಿ ಹಾಗೂ ಮಾಜಿ ಕ್ರಿಕೆಟಿಗರಿಗೆ ಹೋಲಿಸಿದರೂ; ಸಚಿನ್, ಎಂಎಸ್ ಧೋನಿ, ರೋಹಿತ್ ಶರ್ಮಾ ಇವರೆಲ್ಲಾ ತುಂಬಾ ಹಿಂದಿದ್ದಾರೆ. ವಿರಾಟ್ ಅಭಿಮಾನಿಗಳು ಭಾರತ ಅಥವಾ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲಿ ವಿರಾಟ್‌ಗೆ ಅಪಾರ ಸಂಖ್ಯೆಯೆ ಅಭಿಮಾನಿಗಳಿದ್ದಾರೆ. ಇದನ್ನು ಖುದ್ದು ಅಲ್ಲಿಯ ಆಟಗಾರನೇ ಹೇಳಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆಯುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಹೌದು, ಕೊಹ್ಲಿಯ ಜನಪ್ರಿಯತೆ ಎಷ್ಟು ಎತ್ತರಕ್ಕೆ ತಲುಪಿದೆಯೆಂದರೆ, ಕ್ರಿಕೆಟ್ ತಂಡಗಳಿಂದ ಹೆಚ್ಚು ಫೇಮಸ್ ಆಗಿದ್ದಾರೆ. ಭಾರತದಲ್ಲಿ ಈ ಕ್ರೇಜ್ ಎಷ್ಟಿದೆ ಎಂಬ ಬಗ್ಗೆ ಜಗತ್ತಿಗೆ ತಿಳಿದಿದೆ. ಇದೇ ವೇಳೆ ಪಾಕಿಸ್ತಾನದಲ್ಲೂ ಕೊಹ್ಲಿಯ ಜನಪ್ರಿಯತೆ ದೊಡ್ಡ ಮಟ್ಟದಲ್ಲಿದೆ. ಪಾಕಿಸ್ತಾನದ ಅಭಿಗಳು ವಿರಾಟ್ ಕೊಹ್ಲಿ ಅವರನ್ನು ಪ್ರೀತಿಸುವ ಮತ್ತು ಅಭಿಮಾನಿಸುವ ಬಗೆ ನೋಡಿ ಅಲ್ಲಿನ ಮಾಜಿ ನಾಯಕ ರಶೀದ್ ಲತೀಫ್ ಆಶ್ಚರ್ಯಚಕಿತರಾಗಿದ್ದಾರೆ.
2008ರಿಂದ ಕೊಹ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡದಿದ್ದರೂ, ಅಲ್ಲಿ ಅವರ ಅಭಿಮಾನಿ ಬಳಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತ ಮತ್ತು ಪಾಕಿಸ್ತಾನದಲ್ಲಿ ಆಟಗಾರ ಪ್ರಖ್ಯಾತಿಯ ವಿಷಯದಲ್ಲಿ ಕೊಹ್ಲಿ ಈಗಾಗಲೇ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರನ್ನು ಮೀರಿಸಿದ್ದಾರೆ. ತಮ್ಮ ದೇಶದ ಜನರು ವಿರಾಟ್ ಬಗ್ಗೆ ಹೊಂದಿರುವ ಅಭಿಮಾನಿಕ್ಕೆ ಬೇರೆ ಯಾರೂ ಸಾಟಿಯಿಲ್ಲ ಎಂದು ಲತೀಫ್ ಹೇಳಿದ್ದಾರೆ. ಅವರು ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರಷ್ಟೇ ಗೌರವವನ್ನು ಪಾಕಿಸ್ತಾನದಲ್ಲಿ ಹೊಂದಿದ್ದಾರೆ ಎಂದು ಲತೀಫ್ ತಿಳಿಸಿದ್ದಾರೆ.
ಭಾರತೀಯರ ಬಗ್ಗೆ ಪಾಕಿಸ್ತಾನ ಜನತೆಗೆ ವಿಶೇಷ ಅಭಿಮಾನ
“ಪಾಕಿಸ್ತಾನದಲ್ಲಿ ಇಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಮೊದಲ ವ್ಯಕ್ತಿ ವಿರಾಟ್ ಅಲ್ಲ. ಇದಕ್ಕೂ ಹಿಂದೆ, ದಿಲೀಪ್ ಕುಮಾರ್ ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಸುನಿಲ್ ಗವಾಸ್ಕರ್ ಪಾಕಿಸ್ತಾನದಲ್ಲಿ ಒಂದು ಪಂಥವಾಗಿ ಮಾರ್ಪಟ್ಟರು. ಗವಾಸ್ಕರ್ ಅವರ ತಂತ್ರವನ್ನು ನಕಲು ಮಾಡಲು ಯುವ ಬ್ಯಾಟರ್‌ಗಳಿಗೆ ಹೇಳಲಾಯಿತು. ಆಗ ಅಮಿತಾಭ್ ಬಚ್ಚನ್ ಅವರ 'ಆಂಗ್ರಿ ಯಂಗ್ ಮ್ಯಾನ್' ಚಿತ್ರದ ಟಿಕೆಟ್ ಸೋಲ್ಡ್ ಔಟ್ ಆಗುತ್ತಿದ್ದವು. ನಂತರ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಎಂಎಸ್ ಧೋನಿ ಬಂದರು. ಧೋನಿ ಇಲ್ಲಿಗೆ ಬಂದಾಗ ಅವರ ಉದ್ದನೆಯ ಕೂದಲುಗಳು ಟ್ರೆಂಡ್ ಆಗಿ ಮಾರ್ಪಟ್ಟವು,” ಎಂದು ಲತೀಫ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
"ಪಾಕಿಸ್ತಾನದಲ್ಲಿ ವಿರಾಟ್ ಜನಪ್ರಿಯತೆ ದಿಲೀಪ್ ಸಾಹೇಬ್, ಮಿಸ್ಟರ್ ಬಚ್ಚನ್ ಮತ್ತು ಶಾರುಖ್‌ಗೆ ಸಮನಾಗಿದೆ. ಭಾರತದ ಜನರು ನಮ್ಮ ದೇಶದ ಬೌಲರ್‌ಗಳನ್ನು ತುಂಬಾ ಪ್ರೀತಿಸುತ್ತಾರೆ. ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಭಾರತದಲ್ಲಿ ಮನೆಮಾತಾಗಿದ್ದಾರೆ. ಹಾಗೆಯೇ ಪಾಕಿಸ್ತಾನದಲ್ಲಿ ನಾವು ಗವಾಸ್ಕರ್ ಸಾಹೇಬ್, ಸಚಿನ್ ತೆಂಡೂಲ್ಕರ್, ಆ ನಂತರ ಧೋನಿ ಮತ್ತು ಈಗ ಕೊಹ್ಲಿ ಅವರನ್ನು ಆರಾಧಿಸುತ್ತೇವೆ. ಅವರೆಲ್ಲರೂ ಕ್ರಿಕೆಟ್ ಲೋಕ್ ಐಕಾನ್‌ಗಳು. ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಪಾಕಿಸ್ತಾನದಲ್ಲಿ ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಏನೇ ಹೇಳಿದರೂ, ವಿರಾಟ್ ಮೇಲಿನ ಹುಚ್ಚು ಕ್ರೇಜ್ ಒಂದು ಹಂತ ಮೇಲಿದೆ ಎಂದು ಲತೀಫ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಆತ ನಂ 1 ಬ್ಯಾಟರ್ ಆಗಿದ್ದರೆ ಪಾಕಿಸ್ತಾನ ವಿರುದ್ಧ ರನ್ ಗಳಿಸಲಿ; ಸೂರ್ಯಕುಮಾರ್ ಯಾದವ್ಗೆ ಪಾಕ್ ಮಾಜಿ ಕ್ರಿಕೆಟಿಗನ ಸವಾಲು