ವಿರಾಟ್ ಕೊಹ್ಲಿ-ರೋಹಿತ್‌ ಶರ್ಮಾ ದುಲೀಪ್ ಟ್ರೋಫಿ ಆಡದಿರಲು ಕಾರಣ ಬಹಿರಂಗ; ಇಲ್ಲಿದೆ ಕುತೂಹಲಕಾರಿ ವಿಚಾರ-reason behind virat kohli and rohit sharma not playing duleep trophy 2024 indian cricket team ind vs ban vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ-ರೋಹಿತ್‌ ಶರ್ಮಾ ದುಲೀಪ್ ಟ್ರೋಫಿ ಆಡದಿರಲು ಕಾರಣ ಬಹಿರಂಗ; ಇಲ್ಲಿದೆ ಕುತೂಹಲಕಾರಿ ವಿಚಾರ

ವಿರಾಟ್ ಕೊಹ್ಲಿ-ರೋಹಿತ್‌ ಶರ್ಮಾ ದುಲೀಪ್ ಟ್ರೋಫಿ ಆಡದಿರಲು ಕಾರಣ ಬಹಿರಂಗ; ಇಲ್ಲಿದೆ ಕುತೂಹಲಕಾರಿ ವಿಚಾರ

ವಿರಾಟ್ ಕೊಹ್ಲಿ-ರೋಹಿತ್‌ ಶರ್ಮಾ ಇಬ್ಬರೂ ದುಲೀಪ್ ಟ್ರೋಫಿ ಆಡದಿರಲು ನಿರ್ಧರಿಸಿದ್ದಾರೆ. ಹಿರಿಯ ಜೋಡಿ ದೇಶೀಯ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದೆ. ವಿರಾಟ್ 2013ರಿಂದ ದೆಹಲಿ ಪರ ಆಡಿಲ್ಲ ಆದರೆ ರೋಹಿತ್ ಕೊನೆಯದಾಗಿ 2018 ರಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದರು.

ವಿರಾಟ್ ಕೊಹ್ಲಿ-ರೋಹಿತ್‌ ಶರ್ಮಾ ದುಲೀಪ್ ಟ್ರೋಫಿ ಆಡದಿರಲು ಕಾರಣ ಬಹಿರಂಗ; ಇಲ್ಲಿದೆ ಕುತೂಹಲಕಾರಿ ವಿಚಾರ
ವಿರಾಟ್ ಕೊಹ್ಲಿ-ರೋಹಿತ್‌ ಶರ್ಮಾ ದುಲೀಪ್ ಟ್ರೋಫಿ ಆಡದಿರಲು ಕಾರಣ ಬಹಿರಂಗ; ಇಲ್ಲಿದೆ ಕುತೂಹಲಕಾರಿ ವಿಚಾರ

ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದು ನೋಡಬೇಕೆಂಬ ಅಭಿಮಾನಿಗಳ ಆಸೆ ಈ ಬಾರಿಯೂ ಈಡೇರಲಿಲ್ಲ. ದೇಶೀಯ ಕ್ರಿಕೆಟ್ ಋತುವಿನ ಪ್ರಮುಖ ಟೂರ್ನಿಯಾದ ದುಲೀಪ್ ಟ್ರೋಫಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಆದರೆ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರು ಇದರಲ್ಲಿಲ್ಲ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ದುಲೀಪ್ ಟ್ರೋಫಿಯ ಮೊದಲ ಸುತ್ತಿಗೆ ಭಾರತ ಎ, ಭಾರತ ಬಿ, ಭಾರತ ಸಿ ಮತ್ತು ಭಾರತ ಡಿ ತಂಡಗಳನ್ನು ಘೋಷಿಸಿದ್ದು, ಇದಕ್ಕೆ ಶ್ರೇಯಸ್ ಅಯ್ಯರ್ ಮತ್ತು ಶುಭ್​ಮನ್ ಗಿಲ್ ಸೇರಿದಂತೆ ನಾಲ್ವರು ನಾಯಕರನ್ನು ನೇಮಿಸಲಾಗಿದೆ.

ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಯನ್ನು ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳಿವೆ. ಇದಕ್ಕೂ ಮುನ್ನ, ದುಲೀಪ್ ಟ್ರೋಫಿಯೊಂದಿಗೆ ದೇಶೀಯ ಋತುವು ಪ್ರಾರಂಭವಾಗುತ್ತಿದೆ. ಬಿಸಿಸಿಐ ಕೂಡ ಟೆಸ್ಟ್ ಸರಣಿಗೆ ಸಿದ್ಧರಾಗಲು ಟೀಮ್ ಇಂಡಿಯಾದ ಹಲವು ಸದಸ್ಯರಿಗೆ ಈ ಟೂರ್ನಿಯಲ್ಲಿ ಆಡುವಂತೆ ಆದೇಶ ನೀಡಿದೆ. ಇದರಲ್ಲಿ ರೋಹಿತ್ ಮತ್ತು ವಿರಾಟ್ ಕೂಡ ಆಡುತ್ತಾರೆ ಎಂದು ನಂಬಲಾಗಿತ್ತು. ಆದರೆ, ಇವರಿಗೆ ಕಡ್ಡಾಯಗೊಳಿಸಲಾಗಿಲ್ಲ. ಇಬ್ಬರೂ ತಮ್ಮ ಆಯ್ಕೆಯ ಪ್ರಕಾರ ಆಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಬಹುದು.

ಇದೀಗ ಕೊಹ್ಲಿ-ರೋಹಿತ್ ಇಬ್ಬರೂ ದುಲೀಪ್ ಟ್ರೋಫಿ ಆಡದಿರಲು ನಿರ್ಧರಿಸಿದ್ದಾರೆ. ಹಿರಿಯ ಜೋಡಿ ದೇಶೀಯ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದೆ. ವಿರಾಟ್ 2013 ರಿಂದ ದೆಹಲಿ ಪರ ಆಡಿಲ್ಲ. ಆದರೆ ರೋಹಿತ್ ಕೊನೆಯದಾಗಿ 2018 ರಲ್ಲಿ ಮುಂಬೈಯನ್ನು ಪ್ರತಿನಿಧಿಸಿದ್ದರು. ಅವರ ಅನುಪಸ್ಥಿತಿಯ ಹಿಂದಿನ ಕಾರಣವನ್ನು ESPNcricinfo ವರದಿ ಮಾಡಿದೆ. ವರದಿಯ ಪ್ರಕಾರ, ಹೋಮ್ ಸೀಸನ್ ಪ್ರಾರಂಭವಾಗುವ ಮೊದಲು ಅವರಿಗೆ ವಿರಾಮ ನೀಡಲಾಗಿದೆ. ಇಬ್ಬರು ಅನುಭವಿ ಆಟಗಾರರು ಸತತವಾಗಿ ಕ್ರಿಕೆಟ್ ಆಡುತ್ತಿರುವುದರಿಂದ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಲಾಗಿದೆಯಂತೆ.

ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 19 ರಂದು ಮೈದಾನಕ್ಕೆ ಮರಳಲು ಸಿದ್ಧವಾಗಿದೆ. ತವರಿನಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ, ತಂಡವು ಆಸ್ಟ್ರೇಲಿಯಾಕ್ಕೆ ಹಾರಲಿದೆ. ಅದೇ ಸಮಯದಲ್ಲಿ, ಟಿ20 ಆಟಗಾರರು 4 ಟಿ20 ಗಳನ್ನು ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳುತ್ತಾರೆ.

ದುಲೀಪ್‌ ಟ್ರೋಫಿ ತಂಡಗಳು

ದುಲೀಪ್‌ ಟ್ರೋಫಿಗಾಗಿ ನಾಲ್ಕು ತಂಡಗಳನ್ನು ಬಿಸಿಸಿಐ ಹೆಸರಿಸಿದೆ. ವಿರಾಟ್ ಮತ್ತು ರೋಹಿತ್ ಶರ್ಮಾ ಸೇರಿದಂತೆ, ಜಸ್ಪ್ರೀತ್ ಬುಮ್ರಾ ಮತ್ತು ಆರ್ ಅಶ್ವಿನ್ ಅವರನ್ನು ಕೂಡ ಯಾವುದೇ ತಂಡದಲ್ಲಿ ಹೆಸರಿಸಲಾಗಿಲ್ಲ.

ಇತ್ತ ಶುಭ್ಮನ್ ಗಿಲ್, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ ಎ, ಬಿ, ಸಿ ಮತ್ತು ಡಿ ತಂಡಗಳ ನಾಯಕರಾಗಿ ನೇಮಕಗೊಂಡಿದ್ದಾರೆ. ಈಶ್ವರನ್ ನಾಯಕತ್ವದಲ್ಲಿ ರಿಷಭ್ ಪಂತ್ ಆಡಲಿದ್ದು, ಕೆಎಲ್ ರಾಹುಲ್ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರಿಗೆ ಟೆಸ್ಟ್ ಪುನರಾಗಮನ ಮಾಡಲು ಅವಕಾಶ ನೀಡಲಾಗಿದೆ ಮತ್ತು ಅವರು ಸಿ ಟೀಮ್‌ಗಾಗಿ ಆಡಲಿದ್ದಾರೆ. ಇಶಾನ್ ಕಿಶನ್ ಮತ್ತೆ ಕಣಕ್ಕಿಳಿಯಲಿದ್ದು, ಅವರು ಅಯ್ಯರ್ ಅವರ ನಾಯಕತ್ವದಲ್ಲಿ ಆಡಲಿದ್ದಾರೆ.