IPL Auction 2025: ಈ ಸ್ಟಾರ್ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ 25 ರಿಂದ 30 ಕೋಟಿಗೆ ಸೇಲ್ ಆಗಲಿದ್ದಾರಂತೆ!
ಕನ್ನಡ ಸುದ್ದಿ  /  ಕ್ರಿಕೆಟ್  /  Ipl Auction 2025: ಈ ಸ್ಟಾರ್ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ 25 ರಿಂದ 30 ಕೋಟಿಗೆ ಸೇಲ್ ಆಗಲಿದ್ದಾರಂತೆ!

IPL Auction 2025: ಈ ಸ್ಟಾರ್ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ 25 ರಿಂದ 30 ಕೋಟಿಗೆ ಸೇಲ್ ಆಗಲಿದ್ದಾರಂತೆ!

Rishabh Pant: ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದ್ದು, ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಇದೇ ವೇಳೆ ಸುರೇಶ್ ರೈನಾ ಅವರು ಪಂತ್​ 25 ರಿಂದ 30 ಕೋಟಿ ಜಾಕ್​ಪಾಟ್ ಹೊಡೆದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ 25 ರಿಂದ 30 ಕೋಟಿಗೆ ಸೇಲ್ ಆಗಲಿದ್ದಾರಂತೆ!
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ 25 ರಿಂದ 30 ಕೋಟಿಗೆ ಸೇಲ್ ಆಗಲಿದ್ದಾರಂತೆ!

ಇಂಡಿಯನ್ ಪ್ರೀಮಿಯರ್ ಲೀಗ್​​ 2025 ಮೆಗಾ ಹರಾಜಿಗೆ (IPL Auction 2025) ದಿನಗಣನೆ ಆರಂಭವಾಗಿದೆ. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಟಗಾರರ ಮೇಳ ನಡೆಯಲಿದೆ. ಈಗಾಗಲೇ ಫ್ರಾಂಚೈಸಿಗಳ ಮಾಲೀಕರು ಸೌದಿ ಅರೇಬಿಯಾ ತಲುಪಿದ್ದು, ಯಾರನ್ನ ಖರೀದಿಸಬೇಕು ಎನ್ನುವುದರ ಲೆಕ್ಕಾಚಾರ ಹಾಕುತ್ತಿವೆ. ಎರಡು ದಿನಗಳ ಈವೆಂಟ್‌ಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಮೊದಲ ಎರಡು ಸೆಟ್​ಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಪೈಕಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಲ್ಲದೆ, ಅವರೇ ಈ ಬಾರಿ ಅತಿ ಹೆಚ್ಚು ಬೆಲೆಗೆ ಸೇಲ್ ಆಗಲಿದ್ದಾರೆ ಎಂಬುದು ಮಾಜಿ ಕ್ರಿಕೆಟಿಗರ ಮಾತು.

17ನೇ ಆವೃತ್ತಿಯ ಐಪಿಎಲ್​ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ತಂಡದ ನಾಯಕತ್ವವನ್ನೂ ವಹಿಸಿದ್ದರು. ಭೀಕರ ಕಾರು ಅಪಘಾತದ ನಂತರ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದ ರಿಷಭ್, 13 ಪಂದ್ಯಗಳಲ್ಲಿ 40ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 446 ರನ್ ಗಳಿಸಿದ್ದರು. ಸ್ಟ್ರೈಕ್​ರೇಟ್ 155.40 ಇತ್ತು. ಆದರೆ ಅವರ ನಾಯಕತ್ವದಲ್ಲಿ ಡೆಲ್ಲಿ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. 14 ಪಂದ್ಯಗಳಲ್ಲಿ 7 ಗೆಲುವು, 7 ಸೋಲಿನೊಂದಿಗೆ 14 ಅಂಕ ಪಡೆದು 6ನೇ ಸ್ಥಾನದಲ್ಲಿತ್ತು. ಪ್ರಸ್ತುತ ಹರಾಜಿಗೆ ಬಂದಿರುವ ಪಂತ್, ಜಾಕ್ ಪಾಟ್ ಹೊಡೆಯುತ್ತಾರೆ ಎನ್ನಲಾಗ್ತಿದೆ.

ಇದೇ ವೇಳೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಅವರು, ರಿಷಭ್ ಪಂತ್ ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಈ ಮೆಗಾ ಆಕ್ಷನ್​ನಲ್ಲಿ 25 ರಿಂದ 30 ಕೋಟಿ ಪಡೆಯಲಿದ್ದಾರೆ ಎಂದು ರೈನಾ ಹೇಳಿದ್ದಾರೆ. ಪಂತ್ ನಾಯಕತ್ವದ ಮೆಟಿರಿಯಲ್, ವಿಕೆಟ್ ಕೀಪರ್, ಮಧ್ಯಮ ಕ್ರಮಾಂಕದ ಬ್ಯಾಟರ್, ಆಕ್ರಮಣಕಾರಿ ಬ್ಯಾಟರ್ ಕೂಡ ಹೌದು. ಅವರ ಬ್ರ್ಯಾಂಡ್ ಮೌಲ್ಯವೂ ಉತ್ತಮವಾಗಿದೆ. ಹೀಗಾಗಿ, ಅವರು ಉತ್ತಮ ಹಣ ಪಡೆಯುವ ನಿರೀಕ್ಷೆ ಇದೆ. ನನ್ನ ಪ್ರಕಾರ, 25 ರಿಂದ 30 ಕೋಟಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರಿಷಭ್ ಅವರು ಎಲ್ಲಿಯಾದರೂ ಕಪ್ ಗೆಲ್ಲುವ ಮನೋಭಾವವನ್ನು ಹೊಂದಿದ್ದಾರೆ. ಡೆಲ್ಲಿ ತಂಡಕ್ಕೆ ಕಪ್ ಗೆದ್ದುಕೊಡಲು ಸಾಕಷ್ಟು ಪ್ರಯತ್ನ ನಡೆಸಿದರು. ಸಾಕಷ್ಟು ಶ್ರಮಿಸಿದರು. ಅದೇ ರೀತಿ ಶ್ರೇಯಸ್ ಅಯ್ಯರ್ (ಕೆಕೆಆರ್ ಉಳಿಸಿಕೊಂಡಿಲ್ಲ), ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್ ಉಳಿಸಿಕೊಂಡಿಲ್ಲ) ಅವರಿಗೂ ಬೇಡಿಕೆ ಹೆಚ್ಚಿದೆ. ಕೆಲವು ತಂಡಗಳಿಗೆ ನಾಯಕತ್ವದ ಅವಶ್ಯಕತೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೆಕೆಆರ್​, ಪಂಜಾಬ್ ಕಿಂಗ್ಸ್, ಡೆಲ್ಲಿ, ಲಕ್ನೋ ತಂಡಗಳು ನಾಯಕನನ್ನು ಹುಡುಕುತ್ತಿವೆ. ಹೀಗಾಗಿ, ಪಂತ್ ಜೊತೆಗೆ ಅಯ್ಯರ್, ರಾಹುಲ್ ಕೂಡ ನಾಯಕತ್ವದ ಮೆಟಿರಿಯಲ್ಸ್. ಹಾಗಾಗಿ ಈ ಮೂವರಿಗೆ ಕೋಟಿ ಕೋಟಿ ಸುರಿಯಲು ಫ್ರಾಂಚೈಸಿಗಳು ಸಿದ್ಧವಾಗಿವೆ.

ಆರ್​​ಸಿಬಿ ಸೇರಿದರೂ ಅಚ್ಚರಿ ಇಲ್ಲ

ಹರಾಜಿನಲ್ಲಿ ಪಂತ್ ಖರೀದಿಗೆ ಸಿಎಸ್​ಕೆ ಒಲವು ತೋರುವುದಿಲ್ಲ ಎಂದು ರೈನಾ ಹೇಳಿದ್ದಾರೆ. ಏಕೆಂದರೆ, ಸಿಎಸ್​ಕೆ ಪರ್ಸ್ ಸಂಖ್ಯೆ ಕಡಿಮೆ ಇದೆ. ಒಂದು ವೇಳೆ ಪಂತ್ ಖರೀದಿಸಿದರೆ ಉಳಿದ ಆಟಗಾರರ ಖರೀದಿಗೆ ದುಡ್ಡು ಇಲ್ಲದ ಪರಿಸ್ಥಿತಿಗೆ ಬರುತ್ತದೆ. ಆರ್​ಸಿಬಿ ಜೊತೆಗೆ ದೊಡ್ಡ ಪರ್ಸ್ ಹೊಂದಿರುವ ತಂಡಗಳಿಗೆ ಒಬ್ಬ ಕೀಪರ್-ಬ್ಯಾಟರ್ ಬೇಕಿದೆ. ಸಿಎಸ್​ಕೆ ಪ್ರಸ್ತುತ ಉಳಿಸಿಕೊಂಡ ಐವರು ಆಟಗಾರರಿಗೆ 65 ಕೋಟಿ ಖರ್ಚು ಮಾಡಿದೆ. ಉಳಿದ 55 ಕೋಟಿಯಲ್ಲಿ ಪಂತ್​ 25 ರಿಂದ 30 ಕೋಟಿ ನೀಡಿದರೆ, ಉಳಿದ ಆಟಗಾರರ ಖರೀದಿಗೆ ಕಷ್ಟವಾಗುತ್ತದೆ. ಪಂತ್ ಆರ್​ಸಿಬಿಗೆ ಹೋದರೂ ಅಚ್ಚರಿ ಇಲ್ಲ. ಏಕೆಂದರೆ ಆ ತಂಡಕ್ಕೆ ನಾಯಕತ್ವದ ಜೊತೆಗೆ ವಿಕೆಟ್ ಕೀಪರ್, ಮಧ್ಯಮ ಕ್ರಮಾಂಕದ ಬ್ಯಾಟರ್ ಬೇಕಿದೆ ಎಂದು ರೈನಾ ಹೇಳಿದ್ದಾರೆ.

2021ರಲ್ಲಿ ಡೆಲ್ಲಿ ಕ್ಯಾಪ್ಟನ್ ಆಗಿದ್ದ ಪಂತ್

2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಐಪಿಎಲ್ ವೃತ್ತಿಜೀವನ ಆರಂಭಿಸಿದ ರಿಷಭ್, 2018 ಮತ್ತು 2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಉಳಿಸಿಕೊಂಡಿತ್ತು. ಅಂದಿನಿಂದ 2024ರವರೆಗೂ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪಂತ್ 2021ರಲ್ಲಿ ಅಯ್ಯರ್​ನಿಂದ ತೆರವಾದ ನಾಯಕತ್ವದ ಸ್ಥಾನವನ್ನು ಅಲಂಕರಿಸಿದ್ದರು. 2022ರಿಂದ ಪಂತ್ ಪ್ರತಿ ಐಪಿಎಲ್​ಗೂ 16 ಕೋಟಿ ರೂಪಾಯಿ ಪಡೆಯುತ್ತಿದ್ದರು. 2021ರಲ್ಲಿ ಗಾಯದ ಕಾರಣ ಆವೃತ್ತಿಯ ಮೊದಲಾರ್ಧ ಕಳೆದಕೊಂಡಿದ್ದ ಅಯ್ಯರ್​ ಅವರ ಸ್ಥಾನವನ್ನು ರಿಷಭ್ ತುಂಬಿದ್ದರು. ಆದರೆ 2022ರ ಐಪಿಎಲ್​ ಹರಾಜಿಗೂ ಮುನ್ನ ಅಯ್ಯರ್ ಅವರನ್ನು ಡಿಸಿ ಬಿಡುಗಡೆ ಮಾಡಿತ್ತು.

ವರ್ಷತಂಡಸಂಬಳ
2025??
2024ಡೆಲ್ಲಿ ಕ್ಯಾಪಿಟಲ್ಸ್16 ಕೋಟಿ
2023ಡೆಲ್ಲಿ ಕ್ಯಾಪಿಟಲ್ಸ್16 ಕೋಟಿ
2022 (ರಿಟೇನ್)ಡೆಲ್ಲಿ ಕ್ಯಾಪಿಟಲ್ಸ್16 ಕೋಟಿ
2021ಡೆಲ್ಲಿ ಕ್ಯಾಪಿಟಲ್ಸ್15 ಕೋಟಿ
2020 (ರಿಟೇನ್)ಡೆಲ್ಲಿ ಕ್ಯಾಪಿಟಲ್ಸ್8 ಕೋಟಿ
2019 (ರಿಟೇನ್)ಡೆಲ್ಲಿ ಕ್ಯಾಪಿಟಲ್ಸ್8 ಕೋಟಿ
2018ಡೆಲ್ಲಿ ಡೇರ್ ಡೆವಿಲ್ಸ್8 ಕೋಟಿ
2017ಡೆಲ್ಲಿ ಡೇರ್ ಡೆವಿಲ್ಸ್1.9 ಕೋಟಿ
2016ಡೆಲ್ಲಿ ಡೇರ್ ಡೆವಿಲ್ಸ್I1.9 ಕೋಟಿ

Whats_app_banner