RCB vs UPW: ಕಳೆದ ವರ್ಷದ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಆರ್‌​ಸಿಬಿ; ಪುಟಿದೇಳುವ ಪಣತೊಟ್ಟ ಸ್ಮೃತಿ ಮಂಧಾನ ಬಳಗ-royal challengers bangalore women vs up warriorz wpl 2024 match preview rcb vs upw playing eleven smriti mandhana jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Vs Upw: ಕಳೆದ ವರ್ಷದ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಆರ್‌​ಸಿಬಿ; ಪುಟಿದೇಳುವ ಪಣತೊಟ್ಟ ಸ್ಮೃತಿ ಮಂಧಾನ ಬಳಗ

RCB vs UPW: ಕಳೆದ ವರ್ಷದ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಆರ್‌​ಸಿಬಿ; ಪುಟಿದೇಳುವ ಪಣತೊಟ್ಟ ಸ್ಮೃತಿ ಮಂಧಾನ ಬಳಗ

WPL 2024: ಮಹಿಳಾ ಪ್ರೀಮಿಯರ್‌ ಲೀಗ್ ಎರಡನೇ ಆವೃತ್ತಿಗೆ ಬಲಿಷ್ಠ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್‌ಸಿಬಿ, ತವರು ಮೈದಾನದ ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಮುಂದೆ ಅಬ್ಬರಿಸುವ ಪಣ ತೊಟ್ಟಿದೆ.‌ ಡಬ್ಲ್ಯೂಪಿಎಲ್‌ 2024ರ ಎರಡನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಯುಪಿ ವಾರಿಯರ್ಸ್‌ ವಿರುದ್ಧ ಕಣಕ್ಕಿಳಿಯಲಿದೆ.

ಪುಟಿದೇಳುವ ಪಣತೊಟ್ಟ ಸ್ಮೃತಿ ಮಂಧಾನ ಬಳಗ
ಪುಟಿದೇಳುವ ಪಣತೊಟ್ಟ ಸ್ಮೃತಿ ಮಂಧಾನ ಬಳಗ

ಎರಡನೇ ಆವೃತ್ತಿಯ ಡಬ್ಲ್ಯೂಪಿಎಲ್‌ಗೆ (Womens Premier League 2024) ಫೆಬ್ರವರಿ 23ರ ಶುಕ್ರವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಗೆದ್ದು ಬೀಗಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಇಂದು (ಫೆಬ್ರುವರಿ 24 ಶನಿವಾರ) ರೋಚಕ ಕದನ ನಡೆಯಲಿದೆ. ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್‌ (Royal Challengers Bangalore Women vs UP Warriorz) ಮುಖಾಮುಖಿಯಾಗುತ್ತಿವೆ.

ಕಳೆದ ಆವೃತ್ತಿಯಲ್ಲಿ ಬಲಿಷ್ಠ ತಂಡವಿದ್ದರೂ ಕಳಪೆ ಪ್ರದರ್ಶನ ನೀಡಿದ್ದ ಸ್ಮೃತಿ ಮಂಧಾನ ಬಳಗವು, ಎರಡನೇ ಆವೃತ್ತಿಯಲ್ಲಿ ದಿಟ್ಟ ಹೋರಾಟ ನಡೆಸುವ ವಿಶ್ವಾಸದಲ್ಲಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಆಡಿದ ಒಟ್ಟು ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆರ್‌ಸಿಬಿ ಗೆದ್ದಿತ್ತು. ನಾಕೌಟ್‌ ಹಂತಕ್ಕೆ ಲಗ್ಗೆ ಹಾಕಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿದ್ದಿತ್ತು.

ಇದನ್ನೂ ಓದಿ | WPL 2024: ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಹೇಗಿದೆ; ತಂಡದ ಬಲಾಬಲ ಮತ್ತು ದೌರ್ಬಲ್ಯಗಳೇನು? ಹೀಗಿದೆ ವಿಶ್ಲೇಷಣೆ

ಈ ಬಾರಿಯ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಹೊಸ ಹಾಗೂ ಬಲಿಷ್ಠ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್‌ಸಿಬಿ, ಹರಾಜಿನ ಬಳಿಕ ಮತ್ತಷ್ಟು ಬಲಿಷ್ಠವಾಗಿದೆ. ಅಲ್ಲದೆ ತವರು ನೆಲ ಚಿನ್ನಸ್ವಾಮಿ ಅಂಗಳದಲ್ಲಿ ತಮ್ಮ ಅಭಿಮಾನಿಗಳ ಮುಂದೆ ಅಬ್ಬರಿಸುವ ಪಣ ತೊಟ್ಟಿದೆ.

ತಂಡದಲ್ಲಿ ಸ್ಫೋಟಕ ಆಟಗಾರ್ತಿಯರ ದೊಡ್ಡ ಬಳಗವೇ ಇದೆ. ಅದರಲ್ಲೂ ಹಲವು ಆಟಗಾರ್ತಿಯರು ಫೂರ್ಣಕಾಲಿಕ ಆಲ್‌ರೌಂಡರ್‌ಗಳು. ಕಳೆದ ಬಾರಿ ಅಬ್ಬರಿಸಿದ್ದ ಎಲ್ಲಿಸ್ ಪೆರ್ರಿ ಹಾಗೂ ಸೋಫಿ ಡಿವೈನ್ ಈ ಬಾರಿಯೂ ಸ್ಫೋಟಿಸುವ ನಿರೀಕ್ಷೆ ಇದೆ. ಬಲಿಷ್ಠ ಆಲ್‌ರೌಂಡರ್ ಕೇಟ್ ಕ್ರಾಸ್‌ ತಂಡ ಸೇರಿಕೊಂಡಿದ್ದು, ಕೆಳ ಕ್ರಮಾಂಕಕ್ಕೆ ಬಲ ಬಂದಿದೆ. ಅನುಭವಿ ಹಾಗೂ ಸ್ಫೋಟಕ ಆಟಗಾರ್ತಿಯರು ಮಾತ್ರವಲ್ಲದೆ ಆಲ್‌ರೌಂಡರ್‌ಗಳು ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆರ್‌ಸಿಬಿಯ ಬ್ಯಾಟಿಂಗ್ ಲೈನಪ್‌ ಭಾರಿ ಬಲಿಷ್ಠವಾಗಿದೆ. ರಿಚಾ ಘೋಷ್‌, ಶುಭಾ ಸತೀಶ್, ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅಬ್ಬರಿಸುವ ನಿರೀಕ್ಷೆ ಇದೆ.

ಪ್ರಮುಖರೇ ವಿಫಲರಾಗುವ ಭೀತಿ

ಕಳೆದ ಬಾರಿಯ ಆವೃತ್ತಿಯಲ್ಲಿ ನಾಯಕಿ ಸ್ಮೃತಿ ಮಂಧಾನ ವೈಫಲ್ಯ ಅನುಭವಿಸಿದ್ದರು. ಇದೇ ವೇಳೆ ಪ್ರಮುಖ ಭಾರತೀಯ ವೇಗಿ ರೇಣುಕಾ ಸಿಂಗ್‌ ಕೂಡಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ತಂಡವು ವಿದೇಶಿ ಆಟಗಾರ್ತಿಯರನ್ನು ಅತಿಯಾಗಿ ಅವಲಂಬಿಸಿತ್ತು. ಈ ಬಾರಿಯೂ ಇದೇ ಭೀತಿ ತಂಡದಲ್ಲಿದ್ದು, ಸಾಂಘಟಿತ ಪೈಪೋಟಿಗೆ ತಂಡ ಮುಂದಾಗಬೇಕಿದೆ. ತಂಡದಲ್ಲಿ ಬಹುತೇಕರು ಆಲ್‌ರೌಂಡರ್‌ಗಳಾಗಿದ್ದು; ಬ್ಯಾಟಿಂಗ್‌, ಬೌಲಿಂಗ್‌ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಆಟಗಾರ್ತಿಯರ ಕೊರತೆಯಂತೂ ಇಲ್ಲ. ತಂಡದ ಸಂಪನ್ಮೂಲವು ಸರಿಯಾಗಿ ಮೈದಾನದಲ್ಲಿ ಬಳಕೆಯಾಗಬೇಕಿದೆ. ಈ ಬಾರಿ ತವರಿನ ಅಭಿಮಾನಿಗಳ ಮುಂದೆ ಆಡುವ ಅವಕಾಶ ಸಿಕ್ಕಿರುವುದು ಆರ್‌ಸಿಬಿಗೆ ಅತಿ ದೊಡ್ಡ ಧನಾತ್ಮಕ ಅಂಶವಾಗಿದೆ.

ಇದನ್ನೂ ಓದಿ | ಕೊನೆಯ ಎಸೆತಕ್ಕೆ 5 ರನ್, ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟ ಸಜನಾ; ಚೊಚ್ಚಲ ಪಂದ್ಯದಲ್ಲೇ ಮುಂಬೈಗೆ ಗೆಲುವು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಡುವ ಬಳಗ

ಸೋಫಿ ಡಿವೈನ್, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್‌ ಕೀಪರ್), ನಡಿನ್ ಡಿ ಕ್ಲರ್ಕ್, ಸಿಮ್ರಾನ್ ಬಹದ್ದೂರ್, ಶ್ರೇಯಾಂಕಾ ಪಾಟೀಲ್, ಕೇಟ್ ಕ್ರಾಸ್, ಆಶಾ ಶೋಭನಾ, ರೇಣುಕಾ ಸಿಂಗ್.

ಯುಪಿ ವಾರಿಯರ್ಜ್ ಸಂಭಾವ್ಯ ಆಡುವ ಬಳಗ

ತಹ್ಲಿಯಾ ಮೆಕ್‌ಗ್ರಾತ್, ಚಾಮರಿ ಅಥಾಪತ್ತು, ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ವೃಂದಾ ದಿನೇಶ್, ಸೈಮಾ ಠಾಕೋರ್, ಸೋಫಿ ಎಕ್ಲೆಸ್ಟನ್, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್‌ವಾಡ್, ಅಂಜಲಿ ಸರ್ವಾನಿ.

mysore-dasara_Entry_Point