ಎದುರಾಳಿಗೆ ನಡುಕ ಶುರು; ನಿವೃತ್ತಿ ಘೋಷಣೆ ಬೆನ್ನಲ್ಲೇ ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂದ ಶಿಖರ್ ಧವನ್-shikhar dhawan says he will play cricket again after announcing his retirement set to join legends league llc jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಎದುರಾಳಿಗೆ ನಡುಕ ಶುರು; ನಿವೃತ್ತಿ ಘೋಷಣೆ ಬೆನ್ನಲ್ಲೇ ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂದ ಶಿಖರ್ ಧವನ್

ಎದುರಾಳಿಗೆ ನಡುಕ ಶುರು; ನಿವೃತ್ತಿ ಘೋಷಣೆ ಬೆನ್ನಲ್ಲೇ ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂದ ಶಿಖರ್ ಧವನ್

ಶಿಖರ್ ಧವನ್ ಆಗಸ್ಟ್ 24ರಂದು ನಿವೃತ್ತಿ ಘೋಷಣೆ ಮಾಡಿದರು. ಅವರು 2022ರಿಂದ ಟೀಮ್ ಇಂಡಿಯಾ ಪರ ಆಡಿರಲಿಲ್ಲ. ಕಮ್​ಬ್ಯಾಕ್ ಮಾಡಲು ಅವರಿಗೆ ಅವಕಾಶ ಕೂಡ ಸಿಗಲಿಲ್ಲ.

ನಿವೃತ್ತಿ ಘೋಷಣೆ ಬೆನ್ನಲ್ಲೇ ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂದ ಶಿಖರ್ ಧವನ್
ನಿವೃತ್ತಿ ಘೋಷಣೆ ಬೆನ್ನಲ್ಲೇ ನಾನು ಮತ್ತೆ ಕ್ರಿಕೆಟ್ ಆಡುತ್ತೇನೆ ಎಂದ ಶಿಖರ್ ಧವನ್ (Reuters)

ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾದ ಕೇವಲ ಮೂರು ದಿನಗಳ ಒಳಗಾಗಿ, ಶಿಖರ್ ಧವನ್ ಪುನರಾಗಮನವನ್ನು ಘೋಷಿಸಿದ್ದಾರೆ. ಗಬ್ಬರ್ ಸೆಪ್ಟೆಂಬರ್‌ನಲ್ಲಿ ಮೈದಾನದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಹಾಗಂತಾ, ಭಾರತದ ಮಾಜಿ ಆರಂಭಿಕ ಆಟಗಾರ ಭಾರತ ಅಥವಾ ಐಪಿಎಲ್‌ನಲ್ಲಿ ಆಡಲು ಹಿಂತಿರುಗುತ್ತಿಲ್ಲ. ಬದಲಾಗಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌​ನಲ್ಲಿ (ಎಲ್‌ಎಲ್‌ಸಿ -Legends League Cricket) ಕಾಣಿಸಿಕೊಳ್ಳುವ ನಿವೃತ್ತ ಭಾರತೀಯ ಆಟಗಾರರ ದೀರ್ಘ ಪಟ್ಟಿಗೆ ಧವನ್ ಸೇರಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಧವನ್ ಲೆಜೆಂಡ್ಸ್ ಕ್ರಿಕೆಟ್‌ ಲೀಗ್​ಗೆ ಪದಾರ್ಪಣೆ ಮಾಡಲಿದ್ದಾರೆ. “ನನ್ನ ದೇಹವು ಇನ್ನೂ ಕ್ರಿಕೆಟ್‌ ಆಡಬೇಕೆಂದು ಬಯಸುತ್ತಿದೆ. ಕ್ರಿಕೆಟ್ ನನ್ನನ್ನು ಬೇರ್ಪಡಿಸಲಾಗದ ಭಾಗವಾಗಿದೆ. ಅದು ನನ್ನಿಂದ ಎಂದಿಗೂ ಹೊರಗುಳಿಯುವುದಿಲ್ಲ. ನಾನು ಕ್ರಿಕೆಟ್‌ನೊಂದಿಗೆ ಮತ್ತೆ ಬೆರೆಯಲು ಉತ್ಸುಕನಾಗಿದ್ದೇನೆ. ಆ ಮೂಲಕ ನಾನು ಹೊಸ ನೆನಪುಗಳನ್ನು ಮತ್ತೆ ಸೃಷ್ಟಿಸುತ್ತೇನೆ. ನನ್ನ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರೆಸುತ್ತೇನೆ,” ಎಂದು ಧವನ್ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ.

ಧವನ್ ಆಗಸ್ಟ್ 24ರಂದು ತಮ್ಮ ನಿವೃತ್ತಿ ಘೋಷಣೆ ಮಾಡಿದರು. ಅವರು 2022ರಿಂದ ಟೀಮ್ ಇಂಡಿಯಾ ಪರ ಆಡಿರಲಿಲ್ಲ. ಕಮ್​ಬ್ಯಾಕ್ ಮಾಡಲು ಅವರಿಗೆ ಅವಕಾಶ ಕೂಡ ಸಿಗಲಿಲ್ಲ. ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ ಧವನ್ ಐಪಿಎಲ್‌ನಿಂದಲೂ ಹೊರಬಂದಿದ್ದಾರೆ.‌

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕರಲ್ಲಿ ಒಬ್ಬರಾದ ಧವನ್ 167 50-ಓವರ್ ಪಂದ್ಯಗಳಲ್ಲಿ 44.11ರ ಸರಾಸರಿಯಲ್ಲಿ 6793 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕ ಮತ್ತು 39 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಗರಿಷ್ಠ ರನ್

ಧವನ್ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಗ್ರ ಸ್ಕೋರರ್ ಆಗಿದ್ದರು ಮತ್ತು ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ ಐದು ಪಂದ್ಯಗಳಲ್ಲಿ 363 ರನ್ ಪೇರಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಧವನ್ ಅವರನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಗರಿಷ್ಠ ರನ್-ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಅವರು 338 ರನ್‌ಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು.

ಶಿಖರ್ ಧವನ್ 2015ರ ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ (412 ರನ್) ಆಟಗಾರ ಎನಿಸಿದರು. ಎಡಗೈ ಬ್ಯಾಟ್ಸ್‌ಮನ್ 2019ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 117 ರನ್ ಗಳಿಸುವ ಸಂದರ್ಭದಲ್ಲಿ ಗಾಯಗೊಂಡರು. ಆ ಬಳಿಕ ಅವರು ತಂಡದಿಂದ ಹೊರಬಿದ್ದರು. ಆ ಬಳಿಕ ತಂಡದಲ್ಲಿ ಕಾಯಂ ಆಟಗಾರನ ಸ್ಥಾನ ತಪ್ಪಿತು. ಅದರ ಬೆನ್ನಲ್ಲೇ ತವರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಧವನ್​ಗೆ ಸ್ಥಾನ ಸಿಗಲಿಲ್ಲ.

ಧವನ್ 34 ಟೆಸ್ಟ್ ಮತ್ತು 68 ಟಿ20 ಪಂದ್ಯಗಳನ್ನು ಕೂಡ ಆಡಿದ್ದಾರೆ. ಆದರೆ ಈ ಸ್ವರೂಪಗಳಲ್ಲಿ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಅವರು 2008ರಿಂದ 2024ರವರೆಗಿನ ಪ್ರತಿ ಐಪಿಎಲ್ ಋತುವಿನಲ್ಲಿ ಕಾಣಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. 2016 ರಲ್ಲಿ ಐಪಿಎಲ್ ಪ್ರಶಸ್ತಿಯನ್ನೂ ಎತ್ತಿ ಹಿಡಿದಿದ್ದರು.