ಶಿಖರ್ ಧವನ್ ನಿವೃತ್ತಿ: ಪಂಜಾಬ್ ಕಿಂಗ್ಸ್ ತೆಕ್ಕೆಗೆ ರೋಹಿತ್ ಶರ್ಮಾ, ಸಿಕ್ಕಿತು ದೊಡ್ಡ ಅಪ್ಡೇಟ್-rohit sharma likely to join punjab kings ahead of ipl 2025 as shikhar dhawan retires from cricket mumbai indians vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಶಿಖರ್ ಧವನ್ ನಿವೃತ್ತಿ: ಪಂಜಾಬ್ ಕಿಂಗ್ಸ್ ತೆಕ್ಕೆಗೆ ರೋಹಿತ್ ಶರ್ಮಾ, ಸಿಕ್ಕಿತು ದೊಡ್ಡ ಅಪ್ಡೇಟ್

ಶಿಖರ್ ಧವನ್ ನಿವೃತ್ತಿ: ಪಂಜಾಬ್ ಕಿಂಗ್ಸ್ ತೆಕ್ಕೆಗೆ ರೋಹಿತ್ ಶರ್ಮಾ, ಸಿಕ್ಕಿತು ದೊಡ್ಡ ಅಪ್ಡೇಟ್

Rohit Sharma: ಐಪಿಎಲ್‌ 2025ರ ಆವೃತ್ತಿಯ ಮೆಗಾ ಹರಾಜಿಗೂ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ರಿಟೈನ್‌ ಮಾಡದಿದ್ದರೆ, ಅವರು ಪಂಜಾಬ್‌ ಕಿಂಗ್ಸ್‌ ತಂಡದ ಖರೀದಿಯಾಗುವ ಸಾಧ್ಯತೆ ಇದೆ.

ಶಿಖರ್ ಧವನ್ ನಿವೃತ್ತಿ: ಪಂಜಾಬ್ ಕಿಂಗ್ಸ್ ತೆಕ್ಕೆಗೆ ರೋಹಿತ್ ಶರ್ಮಾ, ಸಿಕ್ಕಿತು ಅಪ್ಡೇಟ್
ಶಿಖರ್ ಧವನ್ ನಿವೃತ್ತಿ: ಪಂಜಾಬ್ ಕಿಂಗ್ಸ್ ತೆಕ್ಕೆಗೆ ರೋಹಿತ್ ಶರ್ಮಾ, ಸಿಕ್ಕಿತು ಅಪ್ಡೇಟ್

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಮೆಗಾ ಹರಾಜು ಕುರಿತ ಸಸ್ಪೆನ್ಸ್ ಇನ್ನೂ ಹಾಗೆ ಉಳಿದಿದೆ. ಬಿಸಿಸಿಐಯಿಂದ ಯಾವುದೇ ಅಪ್ಡೇಟ್ ಬಂದಿಲ್ಲ. ಅತ್ತ ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ ಅವರ ಭವಿಷ್ಯದ ಮೇಲೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಗಳು ಉಳಿದಿವೆ. 2024ರ ಐಪಿಎಲ್‌​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಮಾಡಿದ ಪರಿಣಾಮ ಹಿಟ್‌​ಮ್ಯಾನ್ ಮುಂಬೈನಲ್ಲಿ ಉಳಿಯುತ್ತಾರೆಯೇ ಎಂಬ ಬಗ್ಗೆ ಅನುಮಾನಗಳಿವೆ.

ರೋಹಿತ್ ಐಪಿಎಲ್ ಆಡಿದ ಶ್ರೇಷ್ಠ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು. ಐಪಿಎಲ್ ಇತಿಹಾಸದಲ್ಲಿ ಎಂಎಸ್ ಧೋನಿ ಜೊತೆಗೆ ಜಂಟಿಯಾಗಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ರೋಹಿತ್ ಅವರು 2013, 2015, 2017, 2019 ಮತ್ತು 2020ರಲ್ಲಿ ಎಂಐ ತಂಡವನ್ನು ಐದು ಬಾರಿ ಪ್ರಶಸ್ತಿಯತ್ತ ಮುನ್ನಡೆಸಿದ್ದಾರೆ.

ರೋಹಿತ್ ಅವರನ್ನು ಎಂಐ ಉಳಿಸಿಕೊಳ್ಳದಿದ್ದರೆ ಮತ್ತು ಮೆಗಾ ಹರಾಜಿಗೆ ಪ್ರವೇಶಿಸಿದರೆ, ಅವರು ಹೆಚ್ಚು ಬೇಡಿಕೆಯಿರುವ ಆಟಗಾರರಲ್ಲಿ ಒಬ್ಬರಾಗುವುದು ಖಚಿತ. ಅನೇಕ ತಂಡಗಳು ನೂತನ ನಾಯಕನನ್ನು ಹುಡುಕುತ್ತಿರುವಾಗ, ಹಿಟ್‌​​ಮ್ಯಾನ್ ದೊಡ್ಡ ಮೊತ್ತಕ್ಕೆ ಸೇಲ್ ಆಗುವುದರಲ್ಲಿ ಅನುಮಾನವಿಲ್ಲ. ಸದ್ಯ ರೋಹಿತ್‌ನೊಂದಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಂಪರ್ಕ ಹೊಂದಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಶಿಖರ್ ಧವನ್ ನಿವೃತ್ತಿಯ ನಂತರ ಪಂಜಾಬ್‌ಗೆ ಹೊಸ ನಾಯಕನ ಅಗತ್ಯ ಕೂಡ ಇದೆ.

ಪಂಜಾಬ್ ಫ್ರಾಂಚೈಸಿಯ ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥ ಸಂಜಯ್ ಬಂಗಾರ್, ರೋಹಿತ್ ಹರಾಜಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.

"ಇದು ನಮ್ಮ ಜೇಬಿನಲ್ಲಿ ಹಣವಿದೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ. ರೋಹಿತ್ ಹರಾಜಿನಲ್ಲಿ ಬಂದರೆ, ಅವರು ಹೆಚ್ಚಿನ ಬೆಲೆಗೆ ಹೋಗುತ್ತಾರೆ ಎಂದು ನಾನು ಖಚಿತವಾಗಿ ಹೇಳುತ್ತೇನೆ" ಎಂದು ಬಂಗಾರ್ RAO ಪಾಡ್‌ಕಾಸ್ಟ್ ಯುಟ್ಯೂಬ್ ಚಾನೆಲ್‌ನ ಸಂವಾದದಲ್ಲಿ ಹೇಳಿದರು.

ರೋಹಿತ್ ಶರ್ಮಾ ಐಪಿಎಲ್ ವೃತ್ತಿಜೀವನ

ರೋಹಿತ್ 2011ರಲ್ಲಿ ಮುಂಬೈಗೆ ಸೇರಿದರು. ರಿಕಿ ಪಾಂಟಿಂಗ್ ಕೆಳಗಿಳಿದ ನಂತರ 2013ರ ಋತುವಿನ ಮಧ್ಯದಲ್ಲಿ ನಾಯಕನಾಗಿ ನೇಮಕಗೊಂಡರು. ಇದಕ್ಕೂ ಮುನ್ನ ಡೆಕ್ಕನ್ ಚಾರ್ಜರ್ಸ್ (DC) ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 2009ರಲ್ಲಿ ಡೆಲ್ಲಿ ತಂಡ ಟ್ರೋಫಿಯನ್ನು ಎತ್ತಿ ಹಿಡಿದಾಗ ರೋಹಿತ್ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಒಟ್ಟಾರೆಯಾಗಿ, ರೋಹಿತ್ ಲೀಗ್‌ನ ಎಲ್ಲಾ 17 ಋತುಗಳಲ್ಲಿ 6628 ರನ್‌ಗಳೊಂದಿಗೆ 257 ಪಂದ್ಯಗಳಲ್ಲಿ 29.72ರ ಸರಾಸರಿಯಲ್ಲಿ ಆಡಿದ್ದಾರೆ. ಎರಡು ಶತಕಗಳನ್ನು ಗಳಿಸಿದ್ದಾರೆ ಮತ್ತು ಹ್ಯಾಟ್ರಿಕ್ ಸೇರಿದಂತೆ 15 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.