ಎಂದೂ ನಗದವರು ಒಬ್ಬರನ್ನೊಬ್ರು ಮೇಲಕ್ಕೆತ್ತಿ ಸಂಭ್ರಮಿಸಿದ ಗಂಭೀರ್-ನರೈನ್; ನಿಮ್ಮ ನಗು ಕಂಡ ನಾವೇ ಧನ್ಯರೆಂದ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂದೂ ನಗದವರು ಒಬ್ಬರನ್ನೊಬ್ರು ಮೇಲಕ್ಕೆತ್ತಿ ಸಂಭ್ರಮಿಸಿದ ಗಂಭೀರ್-ನರೈನ್; ನಿಮ್ಮ ನಗು ಕಂಡ ನಾವೇ ಧನ್ಯರೆಂದ ನೆಟ್ಟಿಗರು

ಎಂದೂ ನಗದವರು ಒಬ್ಬರನ್ನೊಬ್ರು ಮೇಲಕ್ಕೆತ್ತಿ ಸಂಭ್ರಮಿಸಿದ ಗಂಭೀರ್-ನರೈನ್; ನಿಮ್ಮ ನಗು ಕಂಡ ನಾವೇ ಧನ್ಯರೆಂದ ನೆಟ್ಟಿಗರು

Gautam Gambhir Sunil Narine : ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಗೌತಮ್ ಗಂಭೀರ್ ಮತ್ತು ಸುನಿಲ್ ನರೈನ್ ಒಬ್ಬರೊಬ್ಬರು ಮೇಲಕ್ಕೆತ್ತಿ ಸಂಭ್ರಮಿಸಿದರು. ಆ ಮೂಲ ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಮಾನಿಗಳು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

ಎಂದೂ ನಗದವರು ಒಬ್ಬರನ್ನೊಬ್ರು ಮೇಲಕ್ಕೆತ್ತಿ ಸಂಭ್ರಮಿಸಿದ ಗಂಭೀರ್-ನರೈನ್; ನಿಮ್ಮ ನಗು ಕಂಡ ನಾವೇ ಧನ್ಯರೆಂದ ನೆಟ್ಟಿಗರು
ಎಂದೂ ನಗದವರು ಒಬ್ಬರನ್ನೊಬ್ರು ಮೇಲಕ್ಕೆತ್ತಿ ಸಂಭ್ರಮಿಸಿದ ಗಂಭೀರ್-ನರೈನ್; ನಿಮ್ಮ ನಗು ಕಂಡ ನಾವೇ ಧನ್ಯರೆಂದ ನೆಟ್ಟಿಗರು

Gautam Gambhir Sunil Narine: ಐಪಿಎಲ್-2024 ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ (KKR vs SRH) ಟ್ರೋಫಿಗೆ ಮುತ್ತಿಕ್ಕುತ್ತಿದ್ದಂತೆ ಎಂದೂ ನಗದೆ ಸದಾ ಗಂಭೀರವಾಗಿರುವ ಗೌತಮ್ ಗಂಭೀರ್ (Gautam Gambhir)​ ಮತ್ತು ಸುನಿಲ್ ನರೈನ್ (Sunil Narine) ಪರಸ್ಪರ ಒಬ್ಬರನ್ನೊಬ್ಬರು ಎತ್ತಿಕೊಂಡು ಸಂಭ್ರಮಿಸಿದ್ದಾರೆ. ಅವರು ನಗುವನ್ನು ಕಂಡ ನೆಟ್ಟಿಗರು, ನಿಮ್ಮ ನಗು ಕಂಡ ನಾವೇ ಧನ್ಯರು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಡಿಯೋ ಮತ್ತು ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ.

ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡದ ವಿರುದ್ಧ 8 ವಿಕೆಟ್​​ಗಳ ಸುಲಭ ಗೆಲುವು ದಾಖಲಿಸಿದ ಕೆಕೆಆರ್​, ಐಪಿಎಲ್ ಇತಿಹಾಸದಲ್ಲಿ 3ನೇ ಬಾರಿಗೆ ಟ್ರೋಫಿ ಒಲಿಸಿಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸನ್​ರೈಸರ್ಸ್, ಶ್ರೇಯಸ್ ಅಯ್ಯರ್ ಪಡೆಯ ಬೌಲರ್ಸ್​ ದಾಳಿಗೆ ತತ್ತರಿಸಿತು. ಪರಿಣಾಮ 18.3 ಓವರ್​​ಗಳಲ್ಲೇ 113 ರನ್​​ಗಳಿ ಆಲೌಟ್ ಆಯಿತು. ಈ ಗುರಿ ಹಿಂಬಾಲಿಸಿದ ಕೆಕೆಆರ್​ 10.3 ಓವರ್​​ಗಳಲ್ಲೇ ಜಯದ ನಗೆ ಬೀರಿತು.

11ನೇ ಓವರ್​​ನ 3ನೇ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ವಿನ್ನಿಂಗ್ ರನ್ ಬಾರಿಸುತ್ತಿದ್ದಂತೆ ಡಗೌಟ್​ನಲ್ಲಿ ಗೌತಮ್ ಗಂಭೀರ್ ಮತ್ತು ಸುನಿಲ್ ನರೈನ್ ಸಂಭ್ರಮದ ಅಲೆಯಲ್ಲಿ ತೇಲಾಡಿದರು. ಡಗೌಟ್​ನಲ್ಲಿದ್ದ ಆಟಗಾರರು ಮೈದಾನದತ್ತ ಓಡಿದರು. ಅಲ್ಲಿಯೇ ಉಳಿದಿದ್ದ ಮೆಂಟರ್ ಗಂಭೀರ್​ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಬಳಿಕ ಅವರು ಸಹ ಮೈದಾನದತ್ತ ಬಂದು ಆಟಗಾರರ ಖುಷಿಯಲ್ಲಿ ಪಾಲ್ಗೊಂಡರು. ಆದರೆ ಈ ವೇಳೆ ಗಮನ ಸೆಳೆದಿದ್ದು ಗಂಭೀರ್ ಮತ್ತು ನರೈನ್​ ನಗು. ಈ ದೃಶ್ಯ ಅಪರೂಪದ ಕ್ಷಣಗಳಲ್ಲಿ ಒಂದಾಗಿದೆ.

ತಮ್ಮ ಆಟಗಾರರಿಗೆ ಅಪ್ಪುಗೆ ನೀಡುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಸುನಿಲ್ ನರೈನ್, ಗೌತಮ್​ ಗಂಭೀರ್ ಅವರನ್ನು ಮೇಲೆತ್ತಿದರು. ತನ್ನನ್ನು ಕೆಳಗಿಳಿಸಿದ ಬೆನ್ನಲ್ಲೇ ಗಂಭೀರ್, ಸುನಿಲ್ ನರೈನ್ ಅವರನ್ನು ಮೇಲೆತ್ತಿ ಸಂಭ್ರಮಿಸಿದರು. ಒಂದೇ ಫ್ರೇಮ್​ನಲ್ಲಿ ಇಬ್ಬರ ನಗು ಮತ್ತು ಸಂತೋಷವನ್ನು ಕಣ್ಣಾರೆ ಕಂಡ ಅಭಿಮಾನಿಗಳು, ಕೊನೆಗೂ ನಕ್ಕಿಬಿಟ್ಟರಲ್ಲ ಎಂದು ಖುಷಿಪಟ್ಟಿದ್ದಾರೆ. ನಿಜವಾಗಲೂ ನಿಮ್ಮ ನಗು ನೋಡಿದ ಮತ್ತು ಅಪರೂಪದ ಕ್ಷಣಕ್ಕೆ ಕಣ್ತುಂಬಿಕೊಂಡ ನಾವೇ ಧನ್ಯರು ಎಂದು ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ನರೈನ್​​ರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಿದ್ದೇ ಗಂಭೀರ್​

ವೆಸ್ಟ್ ಇಂಡೀಸ್ ತಾರೆ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇ ಗೌತಮ್ ಗಂಭೀರ್. ತಾನು ನಾಯಕನಾಗಿದ್ದ ಅವಧಿಯಲ್ಲಿ ಗಂಭೀರ್, ಅಂದು ಕೇವಲ ಬೌಲರ್​ ಆಗಿದ್ದ ನರೈನ್​ರನ್ನು ಓಪನಿಂಗ್ ಮಾಡಿಸಿ ಪರಿಪೂರ್ಣ ಬ್ಯಾಟರ್ ಆಗಿ ರೂಪಿಸಿದ್ದರು. ಆದರೆ, ಗೌತಿ ವಿದಾಯದ ನಂತರ ಸುನಿಲ್ ಮತ್ತೆ ಬೌಲರ್ ಆಗಿ 7-8ನೇ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಿದ್ದರು. ಗಂಭೀರ್ ಕೆಕೆಆರ್ ಮೆಂಟರ್ ಆದ ಬೆನ್ನಲ್ಲೇ ಮೊದಲ ತೀರ್ಮಾನ ತೆಗೆದುಕೊಂಡಿದ್ದೇ ನರೈನ್​ ಓಪನಿಂಗ್ ಮಾಡಬೇಕು ಎಂದು. 14 ಪಂದ್ಯಗಳಲ್ಲಿ 488 ರನ್ ಗಳಿಸಿದರು.

ಅಂದು ನಾಯಕ, ಇಂದು ಮೆಂಟರ್​

ಅಂದು ನಾಯಕನಾಗಿ ಎರಡು ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್ ಗಂಭೀರ್, ಇಂದು ಮೆಂಟರ್ ಆಗಿ ಕೆಕೆಆರ್​ಗೆ ಮತ್ತೊಂದು ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2012 ಮತ್ತು 2014 ರಲ್ಲಿ ಕೋಲ್ಕತ್ತಾ ಗೌತಿ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಇದೀಗ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಪರ್ಪಲ್ ಆರ್ಮಿ ಮೂರನೇ ಕಿರೀಟಕ್ಕೆ ಮುತ್ತಿಕ್ಕಿದೆ. 2021ರಲ್ಲಿ ಇಯಾನ್ ಮಾರ್ಗನ್ ಸಾರಥ್ಯದಲ್ಲಿ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿದ್ದರೂ ರನ್ನರ್​ಅಪ್​ ತೃಪ್ತಿಯಾಗಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner