ಟಿ20ಐ ಕ್ರಿಕೆಟ್​: ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಸಿಕ್ಕೇ ಬಿಟ್ರು, ಸೌತ್ ಆಫ್ರಿಕಾದಲ್ಲಿ ಸತತ ಶತಕ ಸಿಡಿಸಿದ್ದ ಈತ!
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20ಐ ಕ್ರಿಕೆಟ್​: ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಸಿಕ್ಕೇ ಬಿಟ್ರು, ಸೌತ್ ಆಫ್ರಿಕಾದಲ್ಲಿ ಸತತ ಶತಕ ಸಿಡಿಸಿದ್ದ ಈತ!

ಟಿ20ಐ ಕ್ರಿಕೆಟ್​: ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಸಿಕ್ಕೇ ಬಿಟ್ರು, ಸೌತ್ ಆಫ್ರಿಕಾದಲ್ಲಿ ಸತತ ಶತಕ ಸಿಡಿಸಿದ್ದ ಈತ!

Tilak Varma: ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿಯಾಗಿ ಟೀಂ ಇಂಡಿಯಾಕ್ಕೆ ಹೊಸ ಆಟಗಾರನ ಎಂಟ್ರಿ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಿಲಕ್ ವರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಈ ಸ್ಥಾನವನ್ನು ಅಲಂಕರಿಸಿದ್ದಾರೆ.

ಟಿ20ಐ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಸಿಕ್ಕೇ ಬಿಟ್ರು
ಟಿ20ಐ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಸಿಕ್ಕೇ ಬಿಟ್ರು

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿಯಿಂದ ನಿವೃತ್ತಿಯಾದ ನಂತರ ಭಾರತ ಕ್ರಿಕೆಟ್ ತಂಡ ನಂಬರ್​ 3 ಸ್ಥಾನಕ್ಕಾಗಿ ಸಾಕಷ್ಟು ಪ್ರಯೋಗ ಮಾಡಿದೆ. ಆದರೆ ಯಾರೂ ಸೂಕ್ತ ಪರ್ಯಾಯವನ್ನು ಕಂಡುಕೊಂಡಿಲ್ಲ. ಆದರೀಗ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯಾಗಿ ಟೀಂ ಇಂಡಿಯಾಕ್ಕೆ ಹೊಸ ಆಟಗಾರನ ಎಂಟ್ರಿ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಿಲಕ್ ವರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಈ ಸ್ಥಾನವನ್ನು ಅಲಂಕರಿಸಿದ್ದಾರೆ.

ತಿಲಕ್ ವರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. ನಾಲ್ಕನೇ ಟಿ20ಯಲ್ಲಿ 47 ಎಸೆತಗಳಲ್ಲಿ 120 ರನ್ ಗಳಿಸಿದ ಅವರು ಮೂರನೇ ಟಿ20ಯಲ್ಲೂ ಪರಿಣಾಮಕಾರಿ ಇನ್ನಿಂಗ್ಸ್ ಆಡಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಭಾರತದ 3-1 ಸರಣಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರು ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಲು ತಮ್ಮ ಸ್ಥಾನವನ್ನು ತ್ಯಾಗ ಮಾಡಿದರು. ಈ ಮೂಲಕ ತಮ್ಮ ತಮ್ಮ ನಾಯಕತ್ವದ ಗುಣಗಳನ್ನು ತೋರಿದರು. ತಿಲಕ್ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ‘‘ತಿಲಕ್ ವರ್ಮಾ ತಂಡಕ್ಕಾಗಿ ಅದ್ಭುತವಾಗಿ ಆಡಿದ್ದಾರೆ ಮತ್ತು ಅವರ ಭವಿಷ್ಯದ ಬಗ್ಗೆ ನಮಗೆ ಹೇಳಿದ್ದಾರೆ. ಅವರು ಎಂತಹ ಪರಿಸ್ಥಿತಿಯಲ್ಲೂ ಬ್ಯಾಟಿಂಗ್ ಮಾಡಬಲ್ಲರು. ಇದು ಭಾರತೀಯ ಕ್ರಿಕೆಟ್‌ನ ಶಕ್ತಿಯನ್ನು ಪ್ರತಿನಿಧಿಸುತ್ತದೆ,’’ ಎಂದು ಸೂರ್ಯ ಕುಮಾರ್ ಯಾದವ್ ಹೇಳಿದ್ದಾರೆ.

ಕೊಹ್ಲಿ ದಾಖಲೆಯನ್ನೂ ಮುರಿದ ತಿಲಕ್

ವಿರಾಟ್ ಕೊಹ್ಲಿ ಜಾಗದಲ್ಲಿ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್‌ಗೆ ಬಂದಿದ್ದು ಮಾತ್ರವಲ್ಲದೆ ಅವರ ದಾಖಲೆಯನ್ನು ಸಹ ಮುರಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ, ಅವರು ನಾಲ್ಕು ಪಂದ್ಯಗಳಲ್ಲಿ 280 ರನ್ ಗಳಿಸಿದರು ಮತ್ತು ಸರಣಿಯಲ್ಲಿ 198 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ದಾಖಲಿಸಿದರು. ಈ ಸರಣಿಯಲ್ಲಿ ಎರಡು ಶತಕ ಬಾರಿಸಿ ದಿಗ್ಗಜ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 231 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ, ತಿಲಕ್ ವರ್ಮಾ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 280 ರನ್ ಗಳಿಸಿ ಈ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದರು.

ಸಂಜು ಸ್ಯಾಮ್ಸನ್ ಸ್ಥಾನವೂ ಭದ್ರ

ತಿಲಕ್ ವರ್ಮಾ ಜೊತೆಗೆ ಸಂಜು ಸ್ಯಾಮ್ಸನ್ ಕೂಡ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಸರಣಿಯ ಮೂಲಕ ಭಾರತ ತಂಡ ಹೊಸ ಸ್ಟಾರ್ ಆಟಗಾರರನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ಮೂಲಕ ಭಾರತ ತಂಡವು ಟಿ20ಯಲ್ಲಿ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಸಿದೆ. ಈ ಸರಣಿ ಗೆಲುವಿನೊಂದಿಗೆ ಭಾರತ ಟಿ20 ಮಾದರಿಯನ್ನು ಇನ್ನೂ ಕೆಲವು ವರ್ಷಗಳ ಕಾಲ ಆಳಲಿದೆ ಎಂದೇ ಹೇಳಬಹುದು.

Whats_app_banner