ಬ್ರಿಟಿಷರೇ ಸಾಕಪ್ಪಾ ಇವರ ಸಹವಾಸ ಎಂದು ಕಳಿಸಿದ ತೀರಾ ಕೆಳ ದರ್ಜೆಯ ಬ್ರಿಟಿಷರ ಸಂತತಿ ಇಂದಿನ ಆಸ್ಟ್ರೇಲಿಯಾ; ರಂಗಸ್ವಾಮಿ ಮೂಕನಹಳ್ಳಿ ಬರಹ
ತೀರಾ ಕೆಳ ದರ್ಜೆಯ ಬ್ರಿಟಿಷರ ಸಂತತಿ ಇಂದಿನ ಆಸ್ಟ್ರೇಲಿಯಾ. ವಿಶ್ವಕಪ್ ಟ್ರೋಫಿಯೊಂದಿಗೆ ಆಸೀಸ್‌ನ ಮಿಚೆಲ್ ಮಾರ್ಷ್ ವರ್ತಿಸಿದ ರೀತಿ ಬಗ್ಗೆ ರಂಗಸ್ವಾಮಿ ಮೂಕನಹಳ್ಳಿ ಅವರ ಲೇಖನ ಓದಿ.
ಭಾವನೆ ಇಲ್ಲದೆ ಬದುಕಿಲ್ಲ. ಬದುಕಿಗೆ ಭಾವನೆ ಬೇಕು . ಆದರೆ ಅತಿ ಭಾವುಕತೆಯಿಂದ ಯಾವ ಪ್ರಯೋಜನವೂ ಇಲ್ಲ. ಅತಿ ಭಾವುಕತೆ ಲಾಜಿಕಲ್ ಥಿಂಕಿಂಗ್ ಕೊಲ್ಲುವ ಬಹಳ ದೊಡ್ಡ ಅಸ್ತ್ರ. ನಮ್ಮದು ಅತಿ ಭಾವುಕ ಸಮಾಜ. ನಮ್ಮ ಕಾಲು ಇತರರಿಗೆ ತಾಗಿದರೆ ನಾವು ಆ ವ್ಯಕ್ತಿಯನ್ನು ಮುಟ್ಟಿ ನಮಿಸುತ್ತೇವೆ. ಇದು ಎಲ್ಲರಿಗೂ ಗೊತ್ತು ಮತ್ತು ಇದು ನಮ್ಮ ಮೆದುಳಿನ ಅಪ್ಪಣೆಗೆ ಕಾಯದೆ ಅನೈಚ್ಚಿಕವಾಗಿ ನಡೆದು ಹೋಗುವ ಕಾರ್ಯ.
ಏಕೆಂದರೆ ಇದು ನಮ್ಮ ವಂಶವಾಹಿನಿಯಲ್ಲಿ ತಲೆತಲಾಂತರದಿಂದ ಬಂದಿರುವುದು. ಹಿಂದೊಮ್ಮೆ ಈಗ ಬರೆಯುವ ಸಾಲುಗಳನ್ನು ಬರೆದಿದ್ದೆ ಈಗ ಮತ್ತೆ ಬರೆಯುತ್ತಿದ್ದೇನೆ. ಸಮಾರಂಭವೊಂದರಲ್ಲಿ ಕುಳಿತ್ತಿದ್ದೆ , ನನ್ನ ಪಕ್ಕ ಪ್ರಖ್ಯಾತ ಲೇಖಕರೊಬ್ಬರು ಬಂದು ಕುಳಿತರು . ಕುಳಿತವರೇ ತಮ್ಮ ಒಂದು ಕಾಲನ್ನು ಎತ್ತಿ ಇನ್ನೊಂದು ಕಾಲ ಮೇಲೆ ಹಾಕಿಕೊಂಡರು. ಆಗ ಅವರ ಕಾಲು ನನಗೆ ತಾಗಿತು. ತಕ್ಷಣ ಅವರು ಬಾಗಿ ನನ್ನ ಮುಟ್ಟಿ ನಮಸ್ಕರಿಸಿದರು. ಧರ್ಮದ ಆಧಾರದಲ್ಲಿ ಅವರೊಬ್ಬ ಮುಸ್ಲಿಂ. ತಲೆತಲಾಂತರದಿಂದ ಬಂದ ಸಂಸ್ಕಾರ ಬದಲಾಗುವುದು ಸುಲಭವಲ್ಲ.
ಇನ್ನು ಆಸ್ಟ್ರೇಲಿಯಾ ಆಟಗಾರರ ನಡೆತೆಯ ಬಗ್ಗೆ ಬಹಳಷ್ಟು ಬರಹಗಳನ್ನು ನೋಡಿದೆ. ಹೀಗಾಗಿ ಇದನ್ನು ಬರೆಯಬೇಕೆನ್ನಿಸಿತು. ಆಸ್ಟ್ರೇಲಿಯಾ ಭಾರತದಂತೆ ಬ್ರಿಟಿಷರ ಅಧಿಪತ್ಯದಲ್ಲಿದ್ದ ವಸಹಾತು. ಇಂಗ್ಲೆಂಡ್ ದೇಶದಲ್ಲಿ ಕಾನೂನು ಭಂಗ ಮಾಡುವ ಎಲ್ಲಾ ಸಣ್ಣ ಪುಟ್ಟ ಮತ್ತು ದೊಡ್ಡ ಕ್ರಿಮಿನಲ್ಗಳನ್ನು ಅಂದರೆ ಅವರ ಸಮಾಜದ ಶಾಂತಿಗೆ ಭಂಗ ತರುವ ಎಲ್ಲರನ್ನೂ ಅವರು ಕ್ರಿಮಿನಲ್ ಎಂದು ಪರಿಗಣಿಸಿ ಅವರನ್ನು ಆಸ್ಟ್ರೇಲಿಯಾ ದೇಶದ ಜೈಲಿಗೆ ಅಟ್ಟುತ್ತಿದ್ದರು.
ನೀವು ಇತಿಹಾಸ ಮಾತ್ರವಲ್ಲ ಇಂದಿನ ದಿನದಲ್ಲೂ ಬ್ರಿಟಿಷರನ್ನು ಗಮನಿಸಿ ನೋಡಿ , ಅವರಿಗಿಂತ ಹೀನ ಮಟ್ಟದ ಯೂರೋಪಿಯನ್ ನಾನು ಕಂಡಿಲ್ಲ. ಎಲ್ಲೆಡೆ ವಂಡಲಿಸಮ್ ಸೃಷ್ಟಿಸುವುದು ಅವರ ರಕ್ತದಲ್ಲಿದೆ. ಅಂತಹ ಬ್ರಿಟಿಷರೇ ಸಾಕಪ್ಪಾ ಇವರ ಸಹವಾಸ ಎಂದು ಕಳಿಸಿದ ತೀರಾ ಕೆಳ ದರ್ಜೆಯ ಬ್ರಿಟಿಷರ ಸಂತತಿ ಇಂದಿನ ಆಸ್ಟ್ರೇಲಿಯಾ .
ನಾನು ಇಲ್ಲಿಯವರೆಗೆ ಆಸ್ಟ್ರೇಲಿಯಾ ದೇಶಕ್ಕೆ ಹೋಗದೆ ಇರಲು ಪ್ರಮುಖ ಕಾರಣ ಅವರ ಅಹಂ ಮತ್ತು ಇತರರನ್ನು ಕೀಳಾಗಿ ಕಾಣುವ ಮನೋಭಾವದಿಂದ , ಬೆಳಗಿದ್ದೇವೆ ಎನ್ನುವ ಸುಪೀರಿಯರಿಟಿ ಈ ಮಂದಿಯಲ್ಲಿ ನಾವು ಶ್ರೇಷ್ಠ ಎನ್ನುವ ವ್ಯಸನವನ್ನು ತುಂಬಿದೆ. ಅದು ಅವರ ವಂಶವಾಹಿನಿಯಲ್ಲಿ ಬಂದಿದೆ.
ನಮ್ಮೆಲ್ಲರ ವಂಶವಾಹಿನಿಯಲ್ಲಿ ಯಾವುದೋ ಒಬ್ಬ ಋಷಿಯ ಅಂಶ ಖಂಡಿತ ಇರುತ್ತದೆ. ಅದಕ್ಕೆ ನಾವು ಹೀಗೆ , ಅವರು ಹಾಗೆ . ಇಷ್ಟು ಅರ್ಥ ಮಾಡಿಕೊಂಡರೆ ಸಾಕು. ಅವರನ್ನು ನಿಕೃಷ್ಟ ನಾವು ನಮ್ಮ ಧರ್ಮ ಶ್ರೇಷ್ಠ ಎನ್ನುವ ವ್ಯಸನ ನಮ್ಮನ್ನು ಕಾಡುವುದು ಬೇಡ.
ಹೋಗುವ ಮುನ್ನ : ಯಾವುದು ಏನೇ ಇರಲಿ ನಾವು ಅವರಿಗೆ ಗ್ರೌಂಡ್ನಲ್ಲಿ ಉತ್ತರ ಕೊಡಬೇಕು ಅಷ್ಟೇ , ಉಳಿದದ್ದು ಅವರವರ ಪ್ರಾರಬ್ಧ ಕರ್ಮ ಅವರು ಅನುಭವಿಸುತ್ತಾರೆ. ಅತಿ ಭಾವುಕತೆ ನಮಗೆ ಮುಳ್ಳು . ಶ್ರೇಷ್ಠತೆ ಕೂಡ ವ್ಯಸನ. ಎರಡರಿಂದ ನಾವು ವಿಮುಖರಾದ ದಿನ ಗೆಲುವು ನಮ್ಮದು. ಶುಭವಾಗಲಿ.