ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ: ಬಾಬರ್ ಅಜಮ್ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

ಪಾಕಿಸ್ತಾನ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ: ಬಾಬರ್ ಅಜಮ್ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

Virender Sehwag: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಾಬರ್ ಅಜಮ್ ವಿರುದ್ಧ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದು, ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ: ಬಾಬರ್ ಅಜಮ್ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್
ಪಾಕಿಸ್ತಾನ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ: ಬಾಬರ್ ಅಜಮ್ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

2024ರ ಟಿ20 ವಿಶ್ವಕಪ್​​​ನಲ್ಲಿ ಪಾಕಿಸ್ತಾನ ತಂಡವು ಗ್ರೂಪ್ ಹಂತದಿಂದ ಅವಮಾನಕರ ನಿರ್ಗಮನಕ್ಕೆ ಕಾರಣವಾದ ಬಾಬರ್ ಅಜಮ್ (Babar Azam) ವಿರುದ್ಧ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ವಾಗ್ದಾಳಿ ನಡೆಸಿದ್ದಾರೆ. ಎ ಗುಂಪಿನ ಕೊನೆಯ 2 ಪಂದ್ಯಗಳನ್ನು ಕೆನಡಾ-ಐರ್ಲೆಂಡ್ ವಿರುದ್ಧ ಗೆದ್ದರೂ ಸೂಪರ್ 8ರ ರೇಸ್​ನಿಂದ ಹೊರಗುಳಿಯಿತು. ಪಾಕಿಸ್ತಾನದ ನಿರ್ಗಮನದ ನಂತರ, ಬಾಬರ್ ಅವರ ನಾಯಕತ್ವ ಮತ್ತು ಅವರ ಪ್ರದರ್ಶನವು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ವಿಶ್ವಕಪ್​ನಲ್ಲಿ ಪಾಕಿಸ್ತಾನ ಪರ ಆಡಿದ 4 ಪಂದ್ಯಗಳಲ್ಲಿ ಬಾಬರ್ 101.66ರ ಸ್ಟ್ರೈಕ್​ರೇಟ್​ನಲ್ಲಿ ಕೇವಲ 122 ರನ್ ಗಳಿಸಿದರು. ಕ್ರಿಕ್​ಬಜ್ ಜೊತೆ ಜತೆ ಮಾತನಾಡಿದ ಸೆಹ್ವಾಗ್, ಪಾಕಿಸ್ತಾನ ನಾಯಕ ಆಧುನಿಕ ಟಿ20 ಆಟದ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿಲ್ಲ ಎಂದು ಆಟದಲ್ಲಿನ ದೋಷಗಳನ್ನು ಬಹಿರಂಗಪಡಿಸಿದ್ದಾರೆ. 2007ರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ವೀರೂ, ಪಿಸಿಬಿ ಬಾಬರ್ ವಿರುದ್ಧ ಕ್ರಮ ಕೈಗೊಂಡು ಅವರನ್ನು ಮತ್ತೊಮ್ಮೆ ವೈಟ್-ಬಾಲ್ ನಾಯಕತ್ವದಿಂದ ತೆಗೆದು ಹಾಕಬೇಕು. ಅಲ್ಲದೆ ಪಾಕಿಸ್ತಾನ ಟಿ20ಐ ತಂಡಕ್ಕೆ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವೇಗಿಗಳಿಗೆ ಸಿಕ್ಸರ್​ ಹೊಡೆದಿದ್ದು ನೋಡಿಯೇ ಇಲ್ಲ ಎಂದ ಸೆಹ್ವಾಗ್

ಬಾಬರ್ ಅಜಮ್ ಸಿಕ್ಸರ್ ಹೊಡೆಯುವ ಆಟಗಾರನಲ್ಲ. ಸೆಟ್ ಆದಾಗ ಸ್ಪಿನ್ನರ್​​ಗಳ ವಿರುದ್ಧ ಮಾತ್ರ ಸಿಕ್ಸರ್​ಗಳ ಹೊಡೆಯುತ್ತಾರೆ. ವೇಗದ ಬೌಲರ್​​​​​ಗಳ ವಿರುದ್ಧ ಕವರ್​​ ಮೇಲೆ ಸಿಕ್ಸರ್ ಹೊಡೆಯುವುದನ್ನು ನಾನು ಎಂದಿಗೂ ನೋಡಿಲ್ಲ; ಅವರು ನೆಲದಲ್ಲೇ ಹೊಡೆಯುವ ಮೂಲಕ ಸುರಕ್ಷಿತ ಕ್ರಿಕೆಟ್ ಆಡಲು ಯತ್ನಿಸುತ್ತಿದ್ದಾರೆ. ಇದನ್ನು ಆಟ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಸ್ಥಿರವಾಗಿ ರನ್ ಗಳಿಸುತ್ತಾರೆ. ಅವರ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ ಎಂದು ಸೆಹ್ವಾಗ್ ಕ್ರಿಕ್​ಬಜ್​ಗೆ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೆ ಒಬ್ಬ ನಾಯಕನಾಗಿ ಈ ಆಟವು ಅವರ ತಂಡಕ್ಕೆ ಉಪಯುಕ್ತವಾಗಿದೆಯೇ ಎಂದು ಅವರೇ ಯೋಚಿಸಬೇಕು. ಇಲ್ಲದಿದ್ದರೆ, ಅವರನ್ನು ಹಿಂಬಡ್ತಿಗೊಳಿಸಿ. ಪವರ್​​ಪ್ಲೇನಲ್ಲಿ ದೊಡ್ಡ ಶಾಟ್​​ಗಳನ್ನು ಆಡಬಲ್ಲ ಯಾರನ್ನಾದರೂ ಕಳುಹಿಸಿ. ಅವರಿಂದ ತಂಡಕ್ಕೆ 50-60 ರನ್​ ಹರಿದು ಬರಲಿವೆ. ಆದರೆ ನಾಯಕ ಬದಲಾದರೆ, ಬಾಬರ್ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ. ಅವರ ಪ್ರದರ್ಶನವು ಇಂದಿನ ಟಿ20 ಕ್ರಿಕೆಟ್​ ಬೇಡಿಕೆಗಳಿಗೆ ಅನುಗುಣವಾಗಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ಬಹಿರಂಗವಾಗಿಯೇ ಘೋಷಿಸುತ್ತೇನೆ ಎಂದ ಬಾಬರ್​

ಜೂನ್ 16ರಂದು ಭಾನುವಾರ 2024ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ಆಡಿತು. ಬಾಬರ್ 34 ಎಸೆತಗಳಲ್ಲಿ 32 ರನ್ ಗಳಿಸಿ ಕೇವಲ 107 ರನ್​​ಗಳ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಇದೇ ವೇಳೆ ವೈಟ್-ಬಾಲ್ ತಂಡದಲ್ಲಿ ತಮ್ಮ ನಾಯಕತ್ವದ ಪಾತ್ರದ ಭವಿಷ್ಯದ ಬಗ್ಗೆಯೂ ಬಾಬರ್​ ಮಾತನಾಡಿದ್ದಾರೆ. ನಾನು ಮತ್ತೆ ಕಂಬ್ಯಾಕ್ ಮಾಡಲು ಪಿಸಿಬಿ ನಿರ್ಧಾರವಾಗಿತ್ತು. ತವರಿಗೆ ಮರಳಿದ ನಂತರ ಎಲ್ಲವನ್ನೂ ತೀವ್ರವಾಗಿ ಚರ್ಚಿಸುತ್ತೇವೆ. ನಾನು ನಾಯಕತ್ವವನ್ನು ತೊರೆಯಬೇಕಾದರೆ, ನಾನು ಅದನ್ನು ಬಹಿರಂಗವಾಗಿ ಘೋಷಿಸುತ್ತೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡದ ವಿರುದ್ಧವೂ ಸೆಹ್ವಾಗ್ ಕಿಡಿಕಾರಿದ್ದು, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳಲು ಲಾಯಕ್ಕಿಲ್ಲ. ನೀವು ನೀಡಿರುವ ಕಳಪೆ ಪ್ರದರ್ಶನಕ್ಕೂ ಟೂರ್ನಿಯಿಂದ ಹೊರಬೀಳುವುದಕ್ಕೂ ಮಳೆಗೂ ಏನೂ ಸಂಬಂಧ. ಟೂರ್ನಿಯಲ್ಲಿ ಭಾಗವಹಿಸಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.