ಮೆಸೇಜ್ ಬಂದಿದ್ದೇ ಗೊತ್ತಿರಲಿಲ್ಲ; ಜೊಕೊವಿಕ್ ಜೊತೆಗೆ ಗೆಳೆತನ ಹುಟ್ಟಿದ್ದೇಗೆಂದು ತೆರೆದಿಟ್ಟ ಕೊಹ್ಲಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೆಸೇಜ್ ಬಂದಿದ್ದೇ ಗೊತ್ತಿರಲಿಲ್ಲ; ಜೊಕೊವಿಕ್ ಜೊತೆಗೆ ಗೆಳೆತನ ಹುಟ್ಟಿದ್ದೇಗೆಂದು ತೆರೆದಿಟ್ಟ ಕೊಹ್ಲಿ

ಮೆಸೇಜ್ ಬಂದಿದ್ದೇ ಗೊತ್ತಿರಲಿಲ್ಲ; ಜೊಕೊವಿಕ್ ಜೊತೆಗೆ ಗೆಳೆತನ ಹುಟ್ಟಿದ್ದೇಗೆಂದು ತೆರೆದಿಟ್ಟ ಕೊಹ್ಲಿ

Virat Kohli on Novak Djokovic: ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತ ತಂಡವನ್ನು ಮತ್ತೆ ಸೇರಿದ ಕಿಂಗ್ ವಿರಾಟ್ ಕೊಹ್ಲಿ, ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್​ ಅವರೊಂದಿಗೆ ಸ್ನೇಹ ಬೆಳೆದಿದ್ದೇಗೆಂದು ವಿವರಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ನೊವಾಕ್ ಜೊಕೊವಿಕ್.
ವಿರಾಟ್ ಕೊಹ್ಲಿ ಮತ್ತು ನೊವಾಕ್ ಜೊಕೊವಿಕ್.

ವಿರಾಟ್ ಕೊಹ್ಲಿ (Virat Kohli) ಅವರ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತೇನೆ. ಅವರು ಮತ್ತು ನಾನು ಕೆಲವು ವರ್ಷಗಳಿಂದ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಆದರೆ ಪರಸ್ಪರ ಭೇಟಿಯಾಗಲಿಲ್ಲ ಎಂದು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ (Novak Djokovic) ಹೇಳಿಕೆ ನೀಡಿದ ನಂತರ ಸೂಪರ್ ಸ್ಟಾರ್ ಕ್ರಿಕೆಟಿಗ ಪ್ರತಿಕ್ರಿಯಿಸಿದ್ದಾರೆ. ಜೊಕೊವಿಕ್ ಮತ್ತು ತನ್ನ ನಡುವೆ ಸ್ನೇಹ ಹುಟ್ಟಿದ್ದೇಗೆ ಎಂಬುದನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತ ತಂಡವನ್ನು ಮತ್ತೆ ಸೇರಿದ ಕಿಂಗ್ ಕೊಹ್ಲಿ, ಜೊಕೊವಿಕ್​ರನ್ನು ಇನ್​ಸ್ಟಾಗ್ರಾಂ ಮೂಲಕ ಸಂಪರ್ಕಿಸಿದ್ದಾಗಿ ಹೇಳಿದ್ದಾರೆ. ಭಾರತ ಮತ್ತು ಅಫ್ಘನ್ ನಡುವಿನ 2ನೇ ಟಿ20 ಮುನ್ನಾದಿನದಂದು ಬಿಸಿಸಿಐ ಜೊತೆಗೆ ಮಾತನಾಡಿದ ಕೊಹ್ಲಿ, ಜೊಕೊವಿಕ್ ಅವರೊಂದಿಗಿನ ತಮ್ಮ ಮೊದಲ ಸಂವಾದವನ್ನು ನೆನಪಿಸಿಕೊಂಡರು. ಆಸ್ಟ್ರೇಲಿಯನ್ ಓಪನ್​​ಗೂ ಮುನ್ನ ಶುಭಕೋರಿದ್ದಾರೆ.

‘ಇನ್​​ಸ್ಟಾಗ್ರಾಂನಲ್ಲಿ ಮೆಸೇಜ್​ ಬಂದಿದ್ದೇ ಗೊತ್ತಾಗಿಲ್ಲ’

ಸೆರ್ಬಿಯಾದ ಆಟಗಾರನೊಂದಿಗೆ ಸದ್ಯ ನಿರಂತರ ಸಂಪರ್ಕದಲ್ಲಿರುವ ಕೊಹ್ಲಿ, ಮೊದಲು ಜೊಕೊವಿಕ್​ರನ್ನು ಇನ್ಸ್ಟಾಗ್ರಾಂ ಮೂಲಕ ಸಂಪರ್ಕಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ನಾನು ಇನ್ಸ್ಟಾಗ್ರಾಂನಲ್ಲಿ ಜೊಕೊವಿಕ್ ಅವರ ಪ್ರೊಫೈಲ್ ನೋಡುತ್ತಿದ್ದೆ. ಆ ವೇಳೆ ಇದ್ದಕ್ಕಿದ್ದಂತೆ ಮೆಸೇಜ್ ಬಟನ್ ಒತ್ತಿದೆ. ಆದರೆ ಅದಾಗಲೇ ಅವರು ನನಗೆ ಡಿಎಂನಲ್ಲಿ (ನೇರ ಸಂದೇಶ- ಡೈರೆಕ್ಟ್ ಮೆಸೇಜ್) ನೋಡಿದೆ. ಮೊದಲು ನಕಲಿ ಖಾತೆ ಇರಬಹುದು ಎಂದುಕೊಂಡೆ. ಬಳಿಕ ಅವರೇ ಎಂದು ಗೊತ್ತಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

ಆದರೆ ಅವರು (ಜೊಕೊವಿಕ್) ನನಗೆ ಮೆಸೇಜ್ ಮಾಡಿದ್ದು ಗೊತ್ತೇ ಇರಲಿಲ್ಲ. ಡಿಎಂ ನೋಡಿದ ಬಳಿಕವೇ ನನಗೆ ಮೆಸೇಜ್​ ಬಂದಿರುವುದು ಗೊತ್ತಾಗಿದ್ದು. ಅಂದಿನಿಂದ ಪರಸ್ಪರ ಮಾತನಾಡಲು ಮತ್ತು ಶುಭಾಶಯಗಳನ್ನು ಕಳುಹಿಸಲು ಪ್ರಾರಂಭಿಸಿದೆವು ಎಂದು ಟೆನಿಸ್ ದಿಗ್ಗಜನ ಜೊತೆಗಿನ ಗೆಳೆತನದ ಬಗ್ಗೆ ಹೇಳಿರುವ ವಿರಾಟ್, ಭಾರತದಲ್ಲಿ ಜೊಕೊವಿಕ್ ಜೊತೆ ಒಂದು ಕಪ್ ಕಾಪಿ ಕುಡಿಯಲು ಎದುರು ನೋಡುತ್ತಿದ್ದೇನೆ ಎಂದು ಬ್ಯಾಟಿಂಗ್ ಐಕಾನ್ ಹೇಳಿದರು. 2024ರ ಋತುವಿನ ಆಸ್ಟ್ರೇಲಿಯಾ ಓಪನ್​ ಗ್ರ್ಯಾಂಡ್ ಸ್ಲಾಮ್ ಟೂರ್ನಿಗೆ ತಾರಾ ಕ್ರಿಕೆಟಿಗ ಜೊಕೊವಿಕ್​ಗೆ ಶುಭ ಹಾರೈಸಿದರು.

ವಿರಾಟ್ ಕೊಹ್ಲಿ ವಿಶ್ವಕಪ್​ನಲ್ಲಿ ತಮ್ಮ 50ನೇ ಏಕದಿನ ಶತಕ ಸಿಡಿಸಿದ ವೇಳೆ ಸರ್ಬಿಯಾದ ಟೆನಿಸ್ ಐಕಾನ್, ಜೊಕೊವಿಕ್ ಅವರಿಗೆ ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದರು. ನನ್ನ 50ನೇ ಶತಕದ ವೇಳೆ ಇನ್​ಸ್ಟ್ರಾಂನಲ್ಲಿ ಸ್ಟೋರಿ ಹಾಕಿದ್ದರು. ಅಲ್ಲದೆ, ಎಕ್ಸ್​ ಖಾತೆಯಲ್ಲೂ ಪೋಸ್ಟ್​ ಮಾಡಿದ್ದರು. ಅಲ್ಲದೆ, ನನಗೆ ಉತ್ತಮವಾದ ಸಂದೇಶ ಸಹ ಕಳುಹಿಸಿದ್ದರು. ಜಾಗತಿಕ ಕ್ರೀಡಾಪಟುಗಳೊಂದಿಗೆ ಸಂಪರ್ಕ ಸಾಧಿಸಲು ನಿಜವಾಗಿಯೂ ಸಂತೋಷವಾಗಿದೆ. ಅವರು ಮುಂದಿನ ಪೀಳಿಗೆಗೆ ನಿಜಕ್ಕೂ ಸ್ಫೂರ್ತಿದಾಯಕ ವ್ಯಕ್ತಿ ಎಂದು ಕೊಹ್ಲಿ ಹೇಳಿದರು.

ಕೊಹ್ಲಿ ಬಗ್ಗೆ ಜೊಕೊವಿಕ್ ಹೇಳಿದ್ದೇನು?

ಆಸ್ಟ್ರೇಲಿಯನ್ ಓಪನ್ 2024ಕ್ಕೆ ಮುನ್ನ ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಜೊಕೊವಿಕ್, ತಾನು ಮತ್ತು ಕೊಹ್ಲಿ ಕೆಲವು ವರ್ಷಗಳಿಂದ ಪರಸ್ಪರ ಮೆಸೇಜ್ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಆದರೆ ಪರಸ್ಪರ ಭೇಟಿಯಾಗುವ ಅವಕಾಶ ಸಿಗಲಿಲ್ಲ. ಅವರು ನನ್ನ ಬಗ್ಗೆ ಚೆನ್ನಾಗಿ ಮಾತನಾಡುವುದನ್ನು ಕೇಳುವುದು ನಿಜವಾಗಿಯೂ ಹಿತ ಎನಿಸುತ್ತದೆ. ಅವರ ವೃತ್ತಿಜೀವನ ಮತ್ತು ಸಾಧನೆಯನ್ನು ನಾನು ಹೆಮ್ಮೆಪಡುತ್ತೇನೆ. ಶೀಘ್ರವೇ ಭಾರತಕ್ಕೆ ಭೇಟಿ ನೀಡಿ ಅವರೊಂದಿಗೆ ಕಾಲ ಕಳೆಯುತ್ತೇನೆ ಎಂದು ಜೊಕೊವಿಕ್ ಹೇಳಿದ್ದರು.

14 ತಿಂಗಳ ನಂತರ ಟಿ20ಗೆ ಮರಳಿದ ಕೊಹ್ಲಿ

2022ರ ಟಿ20 ವಿಶ್ವಕಪ್​ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಟಿ20 ಆಡಿದ್ದ ಕೊಹ್ಲಿ, ಇದೀಗ 14 ತಿಂಗಳ ನಂತರ ಚುಟುಕು ಕ್ರಿಕೆಟ್​ಗೆ ಮರಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್, ಇಂದು (ಜನವರಿ 14) ಟಿ20ಗೆ ಮರಳಿದ್ದಾರೆ. ಇಂದೋರ್​​ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಪಡೆದಿದೆ.

Whats_app_banner