Ishan Kishan: ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಮರಳಿ ಪಡೆಯಲು ಇಶಾನ್ ಕಿಶನ್ ಮಾಡಬೇಕಾದ ಕೆಲಸವೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  Ishan Kishan: ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಮರಳಿ ಪಡೆಯಲು ಇಶಾನ್ ಕಿಶನ್ ಮಾಡಬೇಕಾದ ಕೆಲಸವೇನು?

Ishan Kishan: ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಮರಳಿ ಪಡೆಯಲು ಇಶಾನ್ ಕಿಶನ್ ಮಾಡಬೇಕಾದ ಕೆಲಸವೇನು?

Ishan Kishan: ಭಾರತ ತಂಡದಲ್ಲಿ ಮತ್ತೊಮ್ಮೆ ವಿಫಲವಾಗಿರುವ ವಿಕೆಟ್​ ಕೀಪರ್​ ಇಶಾನ್ ಕಿಶನ್ ಅವರು ತಮ್ಮ ಸ್ಥಾನ ಮರಳಿ ಪಡೆಯಲು ಏನು ಮಾಡಬೇಕಿದೆ. ಇಲ್ಲಿದೆ ವಿವರ.

ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಮರಳಿ ಪಡೆಯಲು ಇಶಾನ್ ಕಿಶನ್ ಮಾಡಬೇಕಾದ ಕೆಲಸವೇನು?
ಭಾರತ ತಂಡದಲ್ಲಿ ಮತ್ತೆ ಸ್ಥಾನವನ್ನು ಮರಳಿ ಪಡೆಯಲು ಇಶಾನ್ ಕಿಶನ್ ಮಾಡಬೇಕಾದ ಕೆಲಸವೇನು?

ರಣಜಿ ಆಡುವಂತೆ ಪದೇ ಪದೇ ಸೂಚಿಸಿದ್ದರೂ ಜಾರ್ಖಂಡ್​ ಪರ ಕಣಕ್ಕಿಳಿಯದೇ ನಿರ್ಲಕ್ಷಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಶಾನ್ ಕಿಶನ್​​ಗೆ (Ishan Kishan) ಟೀಮ್ ಇಂಡಿಯಾ (Team India) ಬಾಗಿಲು ಇನ್ನೂ ತೆರೆದಿಲ್ಲ! ಮುಂಬರುವ ಶ್ರೀಲಂಕಾ ವಿರುದ್ಧದ ಟಿ20ಐ, ಏಕದಿನ ಸರಣಿಗೆ ಅಜಿತ್​ ಅಗರ್ಕರ್ (Ajit Agarkar)​ ನೇತೃತ್ವದ ಸೆಲೆಕ್ಷನ್​ ಕಮಿಟಿ ಭಾರತ ತಂಡವನ್ನು ಪ್ರಕಟಿಸಿದೆ. ಆದರೆ, ವಿಕೆಟ್‌ ಕೀಪರ್ ಮತ್ತೊಮ್ಮೆ ಪಡೆಯದೆ ಅವಮಾನಿತರಾಗಿದ್ದಾರೆ. ಆದರೆ ಇಶನ್ ಮತ್ತೆ ಅವಕಾಶ ಪಡೆಯಬೇಕೆಂದರೆ ಏನು ಮಾಡಬೇಕು?

ಮಾನಸಿಕ ಆಯಾಸವೆಂದು ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲೇ ಭಾರತಕ್ಕೆ ಮರಳಿದ ಇಶಾನ್ ಕಿಶನ್, ಹೇಳಿದಂತೆ ನಡೆದುಕೊಂಡಿಲ್ಲ. ಮಾನಸಿಕ ಆಯಾಸವಾಗಿರುವ ಕಾರಣ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಬೇಕೆಂದು ಹೇಳಿದ್ದರು. ಆದರೆ ಇಶಾನ್, ದುಬೈನಲ್ಲಿ ಬರ್ತ್​ಡೇ ಪಾರ್ಟಿಗೆ ಹೋಗಿದ್ದರು. ನಂತರ, ಜನಪ್ರಿಯ ಕಾರ್ಯಕ್ರಮ ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಪಾಲ್ಗೊಂಡಿದ್ದರು. ನಂತರ ಬ್ಯಾಟಿಂಗ್ ಅಭ್ಯಾಸವನ್ನೂ ಮಾಡಿರಲಿಲ್ಲ. ಬಳಿಕ ಶಿಕ್ಷೆಯನ್ನೂ ನೀಡಲಾಯಿತು.

ಇದರ ನಂತರ ಭಾರತದ ಹಿರಿಯರ ತಂಡಕ್ಕೆ ಹಿಂತಿರುಗಬೇಕೆಂದರೆ ರಣಜಿ ಆಡಬೇಕು ಎಂದು ಬಿಸಿಸಿಐ, ಜಯ್​​ ಶಾ, ಅಂದಿನ ಹೆಡ್​ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದರು. ಆದರೆ, ಕಿಶನ್​ ಯಾರ ಮಾತನ್ನೂ ಕೇಳದೆ ರಣಜಿ ತಂಡದಲ್ಲಿ ನಿರ್ಲಕ್ಷಿಸಿದರು. ಆದರೂ ಮತ್ತೊಮ್ಮೆ ಅವಕಾಶ ಕೊಟ್ಟು ನೋಡಿದರೂ ಮತ್ತೆ ಮಾತು ಕೇಳಲಿಲ್ಲ. ಅಲ್ಲದೆ, ಐಪಿಎಲ್​ಗಾಗಿ ರಹಸ್ಯವಾಗಿ ಹಾರ್ದಿಕ್​ ಅವರೊಂದಿಗೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ನಂತರ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಕೈಬಿಡಲಾಯಿತು.

ಇದೀಗ ಮ್ಯಾನೇಜ್‌ಮೆಂಟ್, ಬಿಸಿಸಿಐ ಹಾಗೂ ಸೆಲೆಕ್ಟರ್​​​ಗಳು ಆತನನ್ನು ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳಿಂದ ದೂರವಿಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ತಂಡದಲ್ಲಿ ರಿಷಭ್ ಪಂತ್‌ಗೆ ಇಶಾನ್​ ಸ್ಥಾನವನ್ನು ನೀಡಲಾಗಿದೆ. ಪ್ರಸ್ತುತ ವಿಕೆಟ್ ಕೀಪಿಂಗ್ ಸ್ಲಾಟ್​​ಗಾಗಿ ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್​ಗಿಂತ ಇಶಾನ್​ ಹಿಂದೆ ಬಿದ್ದಿದ್ದಾರೆ. ಇದೀಗ ಮತ್ತೆ ಭಾರತ ತಂಡದಲ್ಲಿ ಹಾಗೂ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆಯಲು ಏನು ಮಾಡಬೇಕಿದೆ?

ಇಶಾನ್ ಕಿಶನ್ ಮಾಡಬೇಕಿರುವುದು ಏನು?

ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಇಶಾನ್ ಬಿಸಿಸಿಐ ಆಯ್ಕೆಗಾರರ ​​ಗಮನವನ್ನು ಸೆಳೆಯಲು ದೇಶೀಯ ಕ್ರಿಕೆಟ್‌ನ ಪೂರ್ಣ ಋತುವಿನಲ್ಲಿ ತೊಡಗಿಸಿಕೊಳ್ಳಬೇಕು. 2024-25ರ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಟಗಾರರ ಲಭ್ಯತೆ ಮತ್ತು ಭಾಗವಹಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಈ ಹಿಂದೆ ಬಿಸಿಸಿಐ ನಿರ್ದಿಷ್ಟಪಡಿಸಿತ್ತು. ರಿಯಾನ್ ಪರಾಗ್ ಐಪಿಎಲ್‌ ಜೊತೆಗೆ ವಿಜಯ್ ಹಜಾರೆಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶ್ರೇಯಸ್ ಅಯ್ಯರ್ ಕೂಡ ರಣಜಿ ಆಡದೆ ನಿರ್ಲಕ್ಷಿಸಿದ್ದರು. ಹಾಗಾಗಿ ಆತನನ್ನೂ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ನಂತರ ರಣಜಿಯಲ್ಲಿ ಮುಂಬೈ ಪರ ಕೊನೆಯ ಪಂದ್ಯಗಳಲ್ಲಿ ಕಣಕ್ಕಿಳಿದರು. ಆದರೂ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕಿತ್ತು ಹಾಕಲಾಯಿತು. ಇದೀಗ ಏಕದಿನ ಕ್ರಿಕೆಟ್​ಗೆ ಮರಳಿದ್ದಾರೆ. ಅಲ್ಲದೆ, ಕೇಂದ್ರ ಒಪ್ಪಂದದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆ ಇದೆ. ಶ್ರೇಯಸ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ

ಟಿ20ಐ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅರ್ಷದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ವಿಕೆಟ್ ಕೀಪರ್​), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Whats_app_banner