ತೆಳ್ಳಗಾದ ಸೂರ್ಯಕುಮಾರ್ ಯಾದವ್, ನಾಲ್ಕೇ ತಿಂಗಳಲ್ಲಿ 15 ಕೆಜಿ ತೂಕ ಇಳಿಕೆ; ಈ ಆಹಾರ ಕ್ರಮ ನೀವು ಅನುಕರಿಸಿ ತೂಕ ಇಳಿಸಿ!
ಕನ್ನಡ ಸುದ್ದಿ  /  ಕ್ರಿಕೆಟ್  /  ತೆಳ್ಳಗಾದ ಸೂರ್ಯಕುಮಾರ್ ಯಾದವ್, ನಾಲ್ಕೇ ತಿಂಗಳಲ್ಲಿ 15 ಕೆಜಿ ತೂಕ ಇಳಿಕೆ; ಈ ಆಹಾರ ಕ್ರಮ ನೀವು ಅನುಕರಿಸಿ ತೂಕ ಇಳಿಸಿ!

ತೆಳ್ಳಗಾದ ಸೂರ್ಯಕುಮಾರ್ ಯಾದವ್, ನಾಲ್ಕೇ ತಿಂಗಳಲ್ಲಿ 15 ಕೆಜಿ ತೂಕ ಇಳಿಕೆ; ಈ ಆಹಾರ ಕ್ರಮ ನೀವು ಅನುಕರಿಸಿ ತೂಕ ಇಳಿಸಿ!

Suryakumar Yadav: ಟೀಮ್ ಇಂಡಿಯಾ ಸ್ಟೈಲಿಶ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ 14 ರಿಂದ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ತೆಳ್ಳಗಾದ ಸೂರ್ಯಕುಮಾರ್ ಯಾದವ್, ನಾಲ್ಕೇ ತಿಂಗಳಲ್ಲಿ 15 ಕೆಜಿ ತೂಕ ಇಳಿಕೆ; ಈ ಆಹಾರ ಕ್ರಮ ನೀವು ಅನುಕರಿಸಿ ತೂಕ ಇಳಿಸಿ!
ತೆಳ್ಳಗಾದ ಸೂರ್ಯಕುಮಾರ್ ಯಾದವ್, ನಾಲ್ಕೇ ತಿಂಗಳಲ್ಲಿ 15 ಕೆಜಿ ತೂಕ ಇಳಿಕೆ; ಈ ಆಹಾರ ಕ್ರಮ ನೀವು ಅನುಕರಿಸಿ ತೂಕ ಇಳಿಸಿ!

ಚುಟುಕು ಕ್ರಿಕೆಟ್ ಲೋಕದ ಸೆನ್ಸೇಷನ್ ಸೂರ್ಯಕುಮಾರ್​ ಯಾದವ್, ಬೇಸ್​ಬಾಲ್ ಪ್ರಿಯರ ನಾಡಲ್ಲೂ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ. 2024ರ ಟಿ20 ವಿಶ್ವಕಪ್​​​ ಟೂರ್ನಿಯಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವುಕ್ಕೂ ಮುನ್ನ ಬಾಂಗ್ಲಾದೇಶ ಎದುರಿನ ಅಭ್ಯಾಸ ಪಂದ್ಯದಲ್ಲಿ 31 ರನ್ ಕಲೆಹಾಕಿದ ಸೂರ್ಯ, ಹಿಂದೆಂದಿಗಿಂತಲೂ ತೆಳ್ಳಗೆ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ.

ಟಿ20 ಪಂದ್ಯಗಳಲ್ಲಿ ಅಭಿಮಾನಿಗಳಿಗೆ ಭರ್ಜರಿ ಹಬ್ಬದೂಟ ನೀಡುವ ವಿನಾಶಕಾರಿ ಬ್ಯಾಟರ್​, ಕಳೆದ ವರ್ಷದ ಕೊನೆಯಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆ ಒಳಗಾಗಿದ್ದರು. ಹೀಗಾಗಿ ಸುಮಾರು ನಾಲ್ಕು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್​ಗೆ ದೂರ ಉಳಿದಿದ್ದರು. ಈ ವರ್ಷ ಜನವರಿಯಲ್ಲಿ ಲಂಡನ್​​ಗೆ ತೆರಳಿ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮುಂಬೈಕರ್​​, 14-15 ಕೆಜಿ ತೂಕ ಇಳಿಸಿದ್ದಾರೆ ಎಂಬ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.

ಹೀಗಂತ ಸೂರ್ಯ ಅವರ ಪೌಷ್ಠಿಕತಜ್ಞೆ ಶ್ವೇತಾ ಭಾಟಿಯಾ ಬಹಿರಂಗಪಡಿಸಿದ್ದಾರೆ. 'ಮೈಂಡ್ ಯುವರ್ ಫಿಟ್‌ನೆಸ್' ಸಂಸ್ಥಾಪಕಿ ಕೂಡ ಆಗಿರುವ ಶ್ವೇತಾ ಭಾಟಿಯಾ ನೀಡಿದ ಕಟ್ಟುನಿಟ್ಟಿನ ಆಹಾರ ಪದ್ಧತಿ, ಶಕ್ತಿ ತರಬೇತಿಯಿಂದ ಸೂರ್ಯ ತೆಳ್ಳಗೆ ಮತ್ತು ಫಿಟ್​ ಆಗಿ ರೂಪಾಂತರಗೊಳ್ಳಲು ಕಾರಣವಾಗಿದೆ. ಅಮೆರಿಕದಲ್ಲಿ ಟಿ20 ಸಮರಕ್ಕೆ ಸಜ್ಜಾಗುತ್ತಿರುವ ಸೂರ್ಯ​ ಅವರ ಡಯೆಟ್ ಪ್ಲಾನ್ ಹೇಗಿತ್ತು? ಏನೆಲ್ಲಾ ಅನುಕರಿಸಿದ್ದಾರೆ? ಇಲ್ಲಿದೆ ವಿವರ.

ಶ್ವೇತಾ ಭಾಟಿಯಾ ಹೇಳಿದ್ದೇನು?

ಫಿಟ್ನೆಸ್​ ಭಾಗವಾಗಿ ಚೇತರಿಸಿಕೊಳ್ಳುತ್ತಿದ್ದ ಕಾರಣ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದ ಮಿ. 360 ಡಿಗ್ರಿ ಬ್ಯಾಟರ್​​ ಸಪೂರ ತೆಳ್ಳಗೆ ಕಾಣಿಸಿಕೊಂಡಿದ್ದನ್ನು ನೋಡಿದ ಅಭಿಮಾನಿಗಳು ಅಚ್ಚರಿಗೆ ಒಳಗಾಗಿದ್ದರು. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ನಂತರ ಸೂರ್ಯ, ತೆಳ್ಳಗೆ ಮತ್ತು ಫಿಟ್ ಆಗಿರಲು ಡಯೆಟ್ ಪ್ಲಾನ್ ಮತ್ತು ಸ್ಟ್ರೆಂಥ್​ ಟ್ರೈನಿಂಗೇ ಕಾರಣ.

ಹೌದು, ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಶ್ವೇತಾ ಭಾಟಿಯಾ, ಸೂರ್ಯ ತೂಕ ಇಳಿಸಿಕೊಂಡಿದ್ದೇಗೆ ಎಂಬುದರ ಕುರಿತು ವಿವರಿಸಿದ್ದಾರೆ. ತೆಳ್ಳಗೆ ಮತ್ತು ಬಲಶಾಲಿಯಾಗಿ ರೂಪಾಂತರಗೊಂಡಿದ್ದಾರೆ. ಸ್ನಾಯುಗಳು ಬಲ ಹೆಚ್ಚಾಗಿದೆ. ಈ ಗುರಿ ಸಾಧಿಸಲು ಪೂರಕ ಆಹಾರ (ಡಯೆಟ್ ಪ್ಲಾನ್​) ಯೋಜನೆ ಮತ್ತು ಶಕ್ತಿ ತರಬೇತಿ (ಸ್ಟ್ರೆಂತ್)ಯೇ ಕಾರಣ. ಇದು ನೈಸರ್ಗಿಕ ವೈದ್ಯಕೀಯ ಪದ್ಧತಿ ಎಂದು ಪೌಷ್ಠಿಕತಜ್ಞೆ ತಿಳಿಸಿದ್ದಾರೆ.

ನಿಯಮಿತವಾಗಿ ವಿಟಮಿನ್​ಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ಕೊಟ್ಟ ಸೂರ್ಯ ಅವರು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಶಕ್ತಿ (ಸ್ಟ್ರೆಂತ್) ತರಬೇತಿ ಪಡೆದು ಪುನರಾಗಮನ ಸುಲಭಗೊಳಿಸಿದರು. ಆಹಾರ ಕ್ರಮ ಮತ್ತು ಶಕ್ತಿ ತರಬೇತಿಯಲ್ಲಿ ಸಮನ್ವಯ ಸಾಧಿಸಿದ್ದರ ಪರಿಣಾಮ ಸೂರ್ಯಕುಮಾರ್ ಅವರು 14 ರಿಂದ 15 ಕೆಜಿ ಇಳಿಸಲು ಸಾಧ್ಯವಾದರು ಎಂದು ಶ್ವೇತಾ ವಿವರಿಸಿದ್ದಾರೆ.

ಸೂರ್ಯಕುಮಾರ್ ಆಹಾರ ಕ್ರಮ ಹೇಗಿತ್ತು?

ಮೊಟ್ಟೆ, ಮಾಂಸ ಅಥವಾ ಮೀನಿನಂತಹ ಉತ್ತಮ ಗುಣಮಟ್ಟದ ಪ್ರೋಟೀನ್ ಸೇವನೆ ಮಾಡುತ್ತಿದ್ದರು. ಕೊಬ್ಬಿನಾಂಶಗಳಿಂದ ದೂರ ಇಡಲಾಗಿತ್ತು. ಕಾರ್ಬೋಹೈಡ್ರೇಟ್​ಗಳ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ. ನೆನೆಸಿದ ಕಾಳುಗಳನ್ನು ಹೆಚ್ಚು ತಿನ್ನುತ್ತಿದ್ದರು. ಅನ್ನವನ್ನು ಯಾವುದೇ ಕಾರಣಕ್ಕೂ ಅವರನ್ನು ಮುಟ್ಟುತ್ತಿರಲಿಲ್ಲ. ರೊಟ್ಟಿಗಳನ್ನು ಸೇವನೆ ಮಾಡುತ್ತಿದ್ದರು. ಸೂಪ್ ಮತ್ತು ಮಜ್ಜಿಗೆ, ತರಕಾರಿ, ದ್ರವ ಸೇವನೆ ಹೆಚ್ಚಾಗಿತ್ತು. ಇದೆಲ್ಲದರ ಜೊತೆಗೆ ಜಿಮ್​​ನಲ್ಲಿ ದೇಹವನ್ನು ದಂಡಿಸಿದ್ದಾರೆ. ಒಂದೂ ದಿನವೂ ಚಾಚು ತಪ್ಪದೆ ಇದೆನೆಲ್ಲವನ್ನೂ ಅನುಕರಿಸುತ್ತಿದ್ದರು.

ಇತ್ತೀಚೆಗೆ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರಂತಹ ಸ್ಟಾರ್​​ ಆಟಗಾರರು ಬೇರೆ ದೇಶಕ್ಕೆ ಪ್ರವಾಸ ಕೈಗೊಂಡ ಅವಧಿಯಲ್ಲಿ ತಮ್ಮ ವೈಯಕ್ತಿಕ ಬಾಣಸಿಗರನ್ನು ಕಳೆದುಕೊಂಡು ಹೋಗುತ್ತಾರೆ. ಏಕೆಂದರೆ ಬೇರೆ ಬೇರೆ ಆಹಾರ ಪದ್ಧತಿ ಅನುಕರಿಸಿದರೆ ತಮ್ಮ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಆತಂಕ. ಹೆಚ್ಚು ಮಂದಿ ಹೋಟೆಲ್ ಆಹಾರವನ್ನು ಹೆಚ್ಚಾಗಿ ತ್ಯಜಿಸುತ್ತಾರೆ. ಇದಕ್ಕಾಗಿ ಪ್ರತ್ಯೇಕ ಬಾಣಸಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಕ್ರಿಕೆಟರ್​ಗಳು.

ಟಿ20 ವಿಶ್ವಕಪ್​ಗೆ ಸಂಬಂಧಿಸಿದ ಇತರೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Whats_app_banner