ಸ್ಫೋಟಕ 94 ರನ್ ಸಿಡಿಸಿ 17 ವರ್ಷಗಳ ಹರ್ಷಲ್ ಗಿಬ್ಸ್ ದಾಖಲೆಯನ್ನು ಛಿದ್ರಗೊಳಿಸಿದ ಆರನ್ ಜೋನ್ಸ್​
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಫೋಟಕ 94 ರನ್ ಸಿಡಿಸಿ 17 ವರ್ಷಗಳ ಹರ್ಷಲ್ ಗಿಬ್ಸ್ ದಾಖಲೆಯನ್ನು ಛಿದ್ರಗೊಳಿಸಿದ ಆರನ್ ಜೋನ್ಸ್​

ಸ್ಫೋಟಕ 94 ರನ್ ಸಿಡಿಸಿ 17 ವರ್ಷಗಳ ಹರ್ಷಲ್ ಗಿಬ್ಸ್ ದಾಖಲೆಯನ್ನು ಛಿದ್ರಗೊಳಿಸಿದ ಆರನ್ ಜೋನ್ಸ್​

Aaron Jones : ಟಿ20 ವಿಶ್ವಕಪ್ 2024 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೆನಡಾ ವಿರುದ್ಧ ಸ್ಫೋಟಕ 94 ರನ್ ಬಾರಿಸಿದ ಅಮೆರಿಕ ತಂಡದ ಆಟಗಾರ ಆರನ್ ಜೋನ್ಸ್, 17 ವರ್ಷಗಳ ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ.

ಸ್ಫೋಟಕ 94 ರನ್ ಸಿಡಿಸಿ 17 ವರ್ಷಗಳ ಹರ್ಷಲ್ ಗಿಬ್ಸ್ ದಾಖಲೆಯನ್ನು ಛಿದ್ರಗೊಳಿಸಿದ ಆರನ್ ಜೋನ್ಸ್
ಸ್ಫೋಟಕ 94 ರನ್ ಸಿಡಿಸಿ 17 ವರ್ಷಗಳ ಹರ್ಷಲ್ ಗಿಬ್ಸ್ ದಾಖಲೆಯನ್ನು ಛಿದ್ರಗೊಳಿಸಿದ ಆರನ್ ಜೋನ್ಸ್

ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ಜೂನ್ 2ರಂದು ಭಾನುವಾರ ನಡೆದ ಅಮೆರಿಕ-ಕೆನಡಾ ನಡುವಿನ ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ (T20 World Cup 2024) ಮೊದಲ ಪಂದ್ಯ ನಡೆಯಿತು. ಉದ್ಘಾಟನಾ ಪಂದ್ಯದಲ್ಲಿ ಕೆನಡಾ ತಂಡವನ್ನು 7 ವಿಕೆಟ್​ಗಳಿಂದ ಯುಎಸ್​ಎ ಮಣಿಸಿತು. ಸ್ಫೋಟಕ 94 ರನ್ ಸಿಡಿಸಿದ ಯುನೈಟೆಡ್ ಸ್ಟೇಟ್ಸ್ ಬ್ಯಾಟರ್ ಆ್ಯರನ್ ಜೋನ್ಸ್ (Aaron Jones), ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಅವರ 17 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಕೆನಡಾ ನೀಡಿದ್ದ 195 ರನ್​ಗಳ ಗುರಿಯನ್ನು 17.4 ಓವರ್‌ಗಳಲ್ಲೇ ಜಯ ತಂದುಕೊಡಲು ಜೋನ್ಸ್ ಪ್ರಮುಖ ಕಾರಣರಾದ 29 ವರ್ಷದ ಆ್ಯರನ್ ಜೋನ್ಸ್ ಕೇವಲ 40 ಎಸೆತಗಳಲ್ಲಿ 10 ಸಿಕ್ಸರ್​​, 4 ಬೌಂಡರಿ ಸಹಿತ 94 ರನ್ ಗಳಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಜೋನ್ಸ್, ಟಿ20 ವಿಶ್ವಕಪ್​​ನ ಮೊದಲ ಪಂದ್ಯದಲ್ಲಿ ಅತಿ ಹೆಚ್ಚು ಕಲೆ ಹಾಕಿ ಹರ್ಷಲ್ ಗಿಬ್ಸ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 17 ವರ್ಷಗಳ ನಂತರ ಈ ದಾಖಲೆ ಮುರಿದಿರುವುದು ವಿಶೇಷ.

2007ರ ಸೆಪ್ಟೆಂಬರ್ 11ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಿಬ್ಸ್, 55 ಬಾಲ್​​ಗಳಲ್ಲಿ 90 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಗಿಬ್ಸ್, ವಿಂಡೀಸ್ ವಿರುದ್ಧ 206 ರನ್‌ಗಳ ಗುರಿ ಬೆನ್ನಟ್ಟಲು ಸೌತ್ ಆಫ್ರಿಕಾಗೆ ನೆರವಾಗಿದ್ದರು. ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ಅವರು ಅದೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 57 ಎಸೆತಗಳಲ್ಲಿ 117 ರನ್ ಗಳಿಸಿದ್ದರು. ಜೋನ್ಸ್ 94 ರನ್‌ ಈಗ ಸಾರ್ವಕಾಲಿಕ ಪಟ್ಟಿಯಲ್ಲಿ ಗೇಲ್ ನಂತರ ಸ್ಥಾನ ಪಡೆದಿದೆ.

ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅತಿ ಹೆಚ್ಚು ರನ್

ಸ್ಥಾನಆಟಗಾರತಂಡವಿರೋಧರನ್ಎಸೆತಇನ್ನಿಂಗ್ಸ್ಸ್ಥಳದಿನಾಂಕ
1.ಕ್ರಿಸ್ ಗೇಲ್ವೆಸ್ಟ್ ಇಂಡೀಸ್ದಕ್ಷಿಣ ಆಫ್ರಿಕಾ117571 ನೇಜೋಹಾನ್ಸ್‌ಬರ್ಗ್ಸೆಪ್ಟೆಂಬರ್ 11, 2007
2.ಆರನ್ ಜೋನ್ಸ್ಯುಎಸ್​ಎಕೆನಡಾ94*402 ನೇಡಲ್ಲಾಸ್ಜೂನ್ 2, 2024
3.ಹರ್ಷಲ್ ಗಿಬ್ಸ್ದಕ್ಷಿಣ ಆಫ್ರಿಕಾವೆಸ್ಟ್ ಇಂಡೀಸ್90*552 ನೇಜೋಹಾನ್ಸ್‌ಬರ್ಗ್ಸೆಪ್ಟೆಂಬರ್ 11, 2007
4.ಜತೀಂದರ್ ಸಿಂಗ್ನನ್ನ ಸ್ವಂತದಪಪುವಾ ನ್ಯೂ ಗಿನಿಯಾ73*422 ನೇಅಲ್ ಅಮ್ರತ್ಅಕ್ಟೋಬರ್ 17, 2021
5.ಲ್ಯೂಕ್ ರೈಟ್Englandನೆದರ್ಲ್ಯಾಂಡ್ಸ್71491 ನೇಭಗವಂತನಜೂನ್ 5, 2009

ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ಸಿಕ್ಸರ್​​​

ಕೆನಡಾ ವಿರುದ್ಧ ಆರ್ಭಟಿಸಿ 10 ಸಿಕ್ಸರ್​​ ಸಿಡಿಸಿದ ಜೋನ್ಸ್, ಮತ್ತೊಂದು ದಾಖಲೆಯನ್ನೂ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ 3ನೇ ಆಟಗಾರ ಎನಿಸಿದ್ದಾರೆ. ಇನ್ನಿಂಗ್ಸ್​​ವೊಂದರಲ್ಲಿ ಹೆಚ್ಚು ಸಿಕ್ಸರ್​ ಬಾರಿಸಿದ ಕ್ರಿಸ್​ಗೇಲ್ ಅಗ್ರಸ್ಥಾನ ಪಡೆದಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ 11 ಸಿಕ್ಸರ್ ಚಚ್ಚಿದ್ದರು. ಗೇಲ್ 2007ರಲ್ಲಿ ಸೌತ್ ಆಫ್ರಿಕಾ ಎದುರು 10 ಸಿಕ್ಸರ್​ ಚಚ್ಚಿದ್ದರು. ಇದೀಗ ಜೋನ್ಸ್ ಕೆನಡಾ ಎದುರು 10 ಸಿಕ್ಸರ್​ ಬಾರಿಸಿದ್ದಾರೆ.

ಟಿ20 ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಚೇಸ್

230 - ಇಂಗ್ಲೆಂಡ್ vs ಸೌತ್ ಆಫ್ರಿಕಾ (ವಾಂಖೆಡೆ, 2016)

206 - ಸೌತ್ ಆಫ್ರಿಕಾ vs ವೆಸ್ಟ್​ ಇಂಡೀಸ್ (ಜೋಹಾನ್ಸ್ ಬರ್ಗ್, 2007)

195 - ಯುಎಸ್​​ಎ vs ಕೆನಡಾ (ಡಲ್ಲಾಸ್, 2024)

193 - ವೆಸ್ಟ್ ಇಂಡೀಸ್ vs ಭಾರತ (ವಾಂಖೆಡೆ, 2016)

192 - ಆಸ್ಟ್ರೇಲಿಯಾ vs ಪಾಕಿಸ್ತಾನ (ಗ್ರಾಸ್ ಐಸ್ಲೆಟ್ 2010)

ಟಿ20 ವಿಶ್ವಕಪ್​ 2024 ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner