ಕನ್ನಡ ಸುದ್ದಿ  /  ಚುನಾವಣೆಗಳು  /  Voter Slip: ನಿಮಗೆ ಇನ್ನೂ ಮತದಾನದ ಚೀಟಿ ಸಿಕ್ಕಿಲ್ಲವೇ, ಹೀಗೆ ಮಾಡಿ

Voter Slip: ನಿಮಗೆ ಇನ್ನೂ ಮತದಾನದ ಚೀಟಿ ಸಿಕ್ಕಿಲ್ಲವೇ, ಹೀಗೆ ಮಾಡಿ

ಮತದಾನ ಮಾಡಲು ಮನೆಗೆ ಮತದಾರರ ಚೀಟಿಗಳನ್ನು ತಲುಪಿಸಲಾಗುತ್ತಿದೆ. ನಿಮಗೆ ಮತದಾರರ ಚೀಟಿ ಸಿಗದೇ ಇದ್ದರೆ ಹೀಗೆ ಮಾಡಿರಿ..

ಚುನಾವಣೆ ಆಯೋಗ ನೀಡುತ್ತಿರುವ ಮತದಾರರ ಚೀಟಿ.
ಚುನಾವಣೆ ಆಯೋಗ ನೀಡುತ್ತಿರುವ ಮತದಾರರ ಚೀಟಿ.

ಕರ್ನಾಟಕದಲ್ಲಿ ಇನ್ನೇನು ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನಕ್ಕೆ ಬಹುತೇಕ ಸಿದ್ದತೆ ಪೂರ್ಣಗೊಂಡಿದೆ. ಶುಕ್ರವಾರ ಬೆಳಿಗ್ಗೆ7ರಿಂದ ಮತದಾನ ಶುರುವಾಗಲಿದೆ. ಈಗಾಗಲೇ ಚುನಾವಣೆ ಆಯೋಗವು ಮತದಾನಕ್ಕೆ ಸಿದ್ದತೆ ಮಾಡಿಕೊಂಡಿದೆ. ಕರ್ನಾಟಕದ 14 ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತಗಳು ಮತದಾನಕ್ಕೆ ಅಣಿಯಾಗಿವೆ. ಮತದಾರರ ಪಟ್ಟಿಯೂ ಅಂತಿಮಗೊಂಡಿದ್ದು. ಮತದಾನ ಮಾಡುವವರಿಗೆ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಚುನಾವಣೆ ಆಯೋಗದ ಸೂಚನೆಯಂತೆ ಆಯಾ ಜಿಲ್ಲೆಗಳಲ್ಲಿ ವಿಧಾನಸಭೆ ವ್ಯಾಪ್ತಿಯ ಬೂತ್‌ಗಳಲ್ಲಿ ಮತದಾನಕ್ಕೆ ಬೇಕಾದ ಮತದಾನ ಚೀಟಿಗಳನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ. ಸಿಗದೇ ಇದ್ದವರಿಗೆ ವಿತರಣೆ ಮಾಡಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಲಾಗಿದೆ.

ಮತದಾರರು ಸುಲಭವಾಗಿ ಮತದಾನ ಮಾಡಲು ಅನುವಾಗುವಂತೆ ಚುನಾವಣಾ ಆಯೋಗವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.ಎಲ್ಲಾ ಚುನಾವಣೆಗಳಿಗೂ ಮತದಾರರರಿಗೆ ಚೀಟಿಯನ್ನು ನೀಡಲಾಗುತ್ತದೆ. ಅದನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬೂತ್‌ ಹಂತದ ಅಧಿಕಾರಿಯನ್ನು ನಿಯೋಜಿಸಿ ಅವರೇ ಬೂತ್‌ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಚೀಟಿಯನ್ನು ವಿತರಿಸಲಿದ್ದಾರೆ.

ನಮ್ಮ ಬೂತ್‌ ವ್ಯಾಪ್ತಿಯಲ್ಲಿಯೇ ಬಹುತೇಕ ಶೇ. 80 ಮಂದಿ ಮತದಾರರಿಗೆ ಮತದಾನದ ಚೀಟಿಯನ್ನು ವಿತರಣೆ ಮಾಡಲಾಗಿದೆ. ಆಯಾ ಮನೆಗಳಿಗೆ ಹೋಗಿಯೇ ತಲುಪಿಸಿ ಬಂದಿದ್ದೇವೆ. ಕೆಲವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದರೆ, ಇಲ್ಲವೇ ಊರಿನಲ್ಲಿ ಇಲ್ಲದೇ ಇದ್ದರೆ ಅದನ್ನು ವಾಪಾಸ್‌ ತಂದಿದ್ದೇವೆ. ಅಂತವರು ಮತದಾನದ ದಿನ ಬಂದರೂ ನೀಡುತ್ತೇವೆ. ಅದನ್ನು ಪಡೆದು ಮತ ಹಾಕಬಹುದು. ಮತದಾನದ ಚೀಟಿ ಒಂದು ಇದ್ದರೆ ಮತದಾನದ ಕೇಂದ್ರ, ಬೂತ್‌, ಪ್ರದೇಶದ ಗೊಂದಲವೇ ಇರುವುದಿಲ್ಲ. ಎಲ್ಲವೂ ಅದರಲ್ಲಿ ನಮೂದಾಗಿರುವುದರಿಂದ ಮತಗಟ್ಟೆಗೆ ಬಂದು ಮತ ಹಾಕಿ ಹೋಗಬಹುದು ಎನ್ನುವುದು ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಹೇಮಾವತಿ ಶಾಲೆಯ ಬೂತ್‌ ಅಧಿಕಾರಿಯಾಗಿರುವ ಮಂಚನಾಯಕ ಅವರು ನೀಡುವ ವಿವರಣೆ.

ಹೀಗೆ ಮಾಡಿರಿ

  • ನಿಮ್ಮ ಮತದಾನದ ಬೂತ್‌ ವ್ಯಾಪ್ತಿಯ ಅಧಿಕಾರಿ ಮತದಾನ ಚೀಟಿ ನೀಡಲಿದ್ದಾರೆ.
  • ಈಗಾಗಲೇ ಆಯಾ ಮನೆಗಳಿಗೆ ಚೀಟಿಗಳನ್ನು ವಿತರಣೆ ಮಾಡಲಾಗಿದೆ.
  • ನೀವು ಮನೆ ಬದಲಾವಣೆ ಮಾಡಿದ್ದರೆ ಚೀಟಿ ನಿಮ್ಮ ಮನೆಯಲ್ಲಿ ವಿತರಿಸಿರುವುದಿಲ್ಲ.
  • ಆಯಾ ಮತದಾನದ ಚೀಟಿಗಳು ಬೂತ್‌ ಅಧಿಕಾರಿಯ ಬಳಿಯೇ ಇರಲಿವೆ
  • ನಿಮ್ಮ ಬೂತ್‌ ವ್ಯಾಪ್ತಿಯ ಬೂತ್‌ ಅಧಿಕಾರಿಯನ್ನು ಭೇಟಿ ಮಾಡಿ
  • ಅವರು ನಿಮ್ಮ ಮತದಾನದ ಚೀಟಿಗಳನ್ನು ನೀಡಲಿದ್ದಾರೆ.
  • ಬೂತ್‌ ಅಧಿಕಾರಿ ಯಾರು ಎಂದು ತಿಳಿಯದೇ ಇದ್ದರೆ ನೀವು ಕಳೆದ ಬಾರಿ ಮತ ಹಾಕಿದ್ದ ಕೇಂದ್ರಕ್ಕೆ ಹೋಗಿ
  • ಅಲ್ಲಿ ಪ್ರತೀ ಬೂತ್‌ ಅಧಿಕಾರಿಯ ಮೊಬೈಲ್‌ ನಂಬರ್‌ ಅನ್ನು ನಮೂದಿಸಲಾಗಿರುತ್ತದೆ.
  • ಆ ನಂಬರ್‌ಗೆ ಕರೆ ಮಾಡಿ ನಿಮ್ಮ ವಿಳಾಸ ತಿಳಿಸಿದರೆ ಅವರು ಮತದಾನ ಚೀಟಿ ವ್ಯವಸ್ಥೆ ಮಾಡಿಕೊಡುವರು.
  • ಕುಟುಂಬದಲ್ಲಿ ಇರುವ ಎಲ್ಲಾ ಮತದಾರರ ಚೀಟಿಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

ಇದನ್ನೂ ಓದಿರಿ: Curb On Kotak Bank: ಕೋಟಕ್‌ ಮಹೀಂದ್ರ ಬ್ಯಾಂಕ್‌ ಮೇಲೆ ಆರ್‌ಬಿಐ ಮಿತಿ, ಆನ್‌ಲೈನ್‌ ಹೊಸ ಗ್ರಾಹಕರು, ಕ್ರೆಡಿಟ್‌ ಕಾರ್ಡ್‌ ಗೆ ಬ್ರೇಕ್‌

  • ಇದರಲ್ಲಿ ಫೋಟೋ, ವಿಳಾಸ, ಎಪಿಕ್‌ ಸಂಖ್ಯೆಯ ವಿವರ ಇರಲಿದೆ.
  • ಕ್ಯೂಆರ್‌ ಕೋಡ್‌ ಕೂಡ ಇರಲಿದ್ದು, ಅದರ ಮೂಲಕ ನಿಮ್ಮ ಬೂತ್‌ನ ವಿವರಗಳನ್ನು ಪಡೆದುಕೊಳ್ಳಬಹುದು.
  • ಆ ಮತದಾನದ ಚೀಟಿ ತೆಗೆದುಕೊಂಡು ಹೋದರೆ ನೀವು ಮತದಾನ ಮಾಡಲು ಸುಲಭವಾಗಲಿದೆ.
  • ಮತದಾನದ ಚೀಟಿ ಸಿಗದೇ ಇದ್ದರೂ ಮತದಾನದ ದಿನ ನಿಮ್ಮ ಮತಗಟ್ಟೆಯ ಬಳಿ ಹೋದರೆ ಪಕ್ಷದವರು ವಿಳಾಸ ಆಧರಿಸಿ ವಿವರ ಬರೆದುಕೊಡಲಿದ್ದಾರೆ
  • ಅದನ್ನು ತೆಗೆದುಕೊಂಡು ಹೋದರೂ ಕೂಡ ನೀವು ಮತ ಹಾಕಲು ಅವಕಾಶ ಸಿಗಲಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)