Pankaj Udhas death: ಜನಪ್ರಿಯ ಗಾಯಕ ಪಂಕಜ್‌ ಉಧಾಸ್‌ ನಿಧನ; ಕಿಚ್ಚ ಸುದೀಪ್‌ ನಟನೆಯ ಸ್ಪರ್ಶ ಚಿತ್ರದ ಗಾಯಕನಿಗೆ ಶ್ರದ್ಧಾಂಜಲಿ
ಕನ್ನಡ ಸುದ್ದಿ  /  ಮನರಂಜನೆ  /  Pankaj Udhas Death: ಜನಪ್ರಿಯ ಗಾಯಕ ಪಂಕಜ್‌ ಉಧಾಸ್‌ ನಿಧನ; ಕಿಚ್ಚ ಸುದೀಪ್‌ ನಟನೆಯ ಸ್ಪರ್ಶ ಚಿತ್ರದ ಗಾಯಕನಿಗೆ ಶ್ರದ್ಧಾಂಜಲಿ

Pankaj Udhas death: ಜನಪ್ರಿಯ ಗಾಯಕ ಪಂಕಜ್‌ ಉಧಾಸ್‌ ನಿಧನ; ಕಿಚ್ಚ ಸುದೀಪ್‌ ನಟನೆಯ ಸ್ಪರ್ಶ ಚಿತ್ರದ ಗಾಯಕನಿಗೆ ಶ್ರದ್ಧಾಂಜಲಿ

Pankaj Udhas death: ಭಾರತದ ಜನಪ್ರಿಯ ಘಜಲ್‌ ಮತ್ತು ಹಿನ್ನೆಲೆ ಗಾಯಕ ಪಂಕಜ್‌ ಉಧಾಸ್‌ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುದೀಪ್‌ ನಟನೆಯ ಸ್ಪರ್ಶ ಸಿನಿಮಾದ ಎರಡು ಹಾಡುಗಳನ್ನು ಇವರು ಹಾಡಿದ್ದರು. ಚಿಟ್ಟಿ ಆಯಿ ಹೇ ಸೇರಿದಂತೆ ಹಲವು ಜನಪ್ರಿಯ ಗೀತೆಗಳಿಗೆ ಇವರು ಧ್ವನಿಯಾಗಿದ್ದರು.

Pankaj Udhas death: ಜನಪ್ರಿಯ ಘಜಲ್‌, ಹಿನ್ನೆಲೆ ಗಾಯಕ ಪಂಕಜ್‌ ಉದಾಸ್‌ ನಿಧನ
Pankaj Udhas death: ಜನಪ್ರಿಯ ಘಜಲ್‌, ಹಿನ್ನೆಲೆ ಗಾಯಕ ಪಂಕಜ್‌ ಉದಾಸ್‌ ನಿಧನ

Pankaj Udhas death: ಭಾರತದ ಜನಪ್ರಿಯ ಘಜಲ್‌ ಮತ್ತು ಹಿನ್ನೆಲೆ ಗಾಯಕ ಪಂಕಜ್‌ ಉಧಾಸ್‌ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುದೀಪ್‌ ನಟನೆಯ ಸ್ಪರ್ಶ ಸಿನಿಮಾದ ಎರಡು ಹಾಡುಗಳನ್ನು ಇವರು ಹಾಡಿದ್ದರು. ಚಿಟ್ಟಿ ಆಯಿ ಹೇ ಸೇರಿದಂತೆ ಹಲವು ಜನಪ್ರಿಯ ಗೀತೆಗಳಿಗೆ ಇವರು ಧ್ವನಿಯಾಗಿದ್ದಾರೆ. ದೀರ್ಘಕಾಲದ ಅಸೌಖ್ಯದಿಂದಾಗಿ ಇವರು ಕೊನೆಯುಸಿರೆಳೆದಿದ್ದಾರೆ.

ಉಧಾಸ್‌ ಕುಟುಂಬದ ಹೇಳಿಕೆ

ಪಂಕಜ್‌ ಉಧಾಸ್‌ ಮಗಳು ನಯಾಬ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಈ ರೀತಿ ಬರೆದಿದ್ದಾರೆ. "ಭಾರವಾದ ಹೃದಯದಿಂದ ನಾವು ನಿಮಗೆ ಪದ್ಮಶ್ರೀ ಪಂಕಜ್‌ ಉದಾಸ್‌ ಅವರು 26ನೇ ಫೆಬ್ರವರಿ 2024ರಂದು ದೀರ್ಘಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.

ಪಂಕಜ್‌ ಉಧಾಸ್‌ ನಿಧನದ ಸುದ್ದಿ ಹೊರಬಿದ್ದ ತಕ್ಷಣ ಅವರ ಅಭಿಮಾನಿಗಳು ಕಂಬನಿ ಸುರಿದಿದ್ದಾರೆ. ಧೀಮಂತ ಗಾಯಕನ ಘಜಲ್‌ ಮತ್ತು ಹಾಡುಗಳನ್ನು ನೆನಪಿಸಿಕೊಂಡಿದ್ದಾರೆ. ಬ್ರೀಚ್‌ ಕ್ಯಾಂಡಿ ಹಾಸ್ಪಿಟಲ್‌ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಇವರು ಮೃತಪಟ್ಟಿದ್ದಾರೆ. ಇವರು ತನ್ನ ಪತ್ನಿ ಫರಿದಾ ಉದಾಸ್‌, ಮಗಳು ನಯಾಬ್‌ ಮತ್ತು ರೇವಾ ಉದಾಸ್‌, ಸಹೋದರರಾದ ನಿರ್ಮಲ್‌ ಮತ್ತು ಮನ್‌ಹರ್‌ ಉದಾಸ್‌ರನ್ನು ಅಗಲಿದ್ದಾರೆ. ಇವರ ಸಹೋದರರು ಕೂಡ ಗಾಯಕರು.

ಪಂಕಜ್‌ ಉಧಾಸ್‌ ಕರಿಯರ್‌ ಕುರಿತು

1986ರಲ್ಲಿ ಮಹೇಶ್‌ ಭಟ್‌ ನಿರ್ಮಾಣದ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ನಾಮ್‌ನಲ್ಲಿ ಇವರು ಹಾಡಿರುವ ಚಿಟ್ಟಿ ಆಯಿ ಹೇ ಎಂಬ ಹಾಡು ಸಖತ್‌ ಹಿಟ್‌ ಆಗಿತ್ತು. 1998ರಲ್ಲಿ ಪ್ರವೀಣ್‌ ಭಟ್‌ರ ಏಕ್‌ ಹೈ ಮಸ್ಕದ್‌ ಸಿನಿಮಾದ ಚಾಂದಿ ಸಜೈಸಾ ರಂಗ್‌ ಹೇ ಹಾಡು ಕೂಡ ಸಖತ್‌ ಹಿಟ್‌ ಆಗಿತ್ತು. ದಯವಾನ್‌ ಸಿನಿಮಾದ ಆಜ್‌ ಪಿರ್‌ ತೋಂಪೆ ಕೂಡ ಜನಪ್ರಿಯ ಹಾಡು. ಜೀಯೆ ತು ಜೀಯೇ ಕೈಸೆ ಹಾಡು ಕೂಡ ಫೇಮಸ್‌. ಹೀಗೆ ಇವರು ಹಾಡಿರುವ ಅಸಂಖ್ಯಾತ ಹಾಡುಗಳು ಜನಪ್ರಿಯತೆ ಪಡೆದಿವೆ.

ಇವರು ಘಜಲ್‌ ವಾದಕರು ಕೂಡ. ಅಹತ್‌ ಎಂಬ ಘಜಲ್‌ ಆಲ್ಬಂ ಅನ್ನು 1980ರಲ್ಲಿ ಹೊರತಂದಿದ್ದಾರೆ. ಈ ಹಿಂದೆ ಹಿಂದೂಸ್ತಾನ್‌ ಟೈಮ್ಸ್‌ಗೆ ಉದಾಸ್‌ ಅವರು ಸಂದರ್ಶನ ನೀಡಿದ್ದಾರೆ. "ಕೊರೊನಾ ಸಾಂಕ್ರಾಮಿಕದ ಮೊದಲು ಯಾವುದೇ ಸಂಗೀತ ಕಚೇರಿ ನಡೆಸಲು ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವಿತ್ತು. ಆದರೆ, ಬಳಿಕ ಇದು ನನ್ನ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿತು. ನಾನು ರಿಯಾಜ್‌ ನಿಯಮಿತವಾಗಿ ಮಾಡಿದರೂ, ನನ್ನ ಧ್ವನಿ ತುಕ್ಕು ಹಿಡಿಯದಂತೆ ಪ್ರಯತ್ನಿಸಿದರೂ ಧೈರ್ಯ ಸಾಲುತ್ತಿರಲಿಲ್ಲ. ಎರಡು ವರ್ಷದ ಬಳಿಕ ಇತ್ತೀಚೆಗೆ ಉತ್ತರ ಪ್ರದೇಶದ ರಾಂಪುರದಲ್ಲಿ ಸಂಗೀತ ಕಚೇರಿಗೆ ಹೋದೆ. ಅಲ್ಲಿ ನನ್ನ ಗಾಯನ ಕೇಳಲು ಆರು ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಇದ್ದರು. ಇಷ್ಟು ಅಭಿಮಾನಿಗಳನ್ನು ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಇಷ್ಟು ದಿನ ನಾನು ಇವರಿಂದ ದೂರ ಇದ್ದದ್ದಕ್ಕೆ ಬೇಸರವಾಯಿತು. ಇದು ನನ್ನ ಭಾವನಾತ್ಮಕ ಕ್ಷಣವಾಗಿತ್ತು" ಎಂದು ಅವರು ಹೇಳಿದ್ದರು.

ಕನ್ನಡದ ಸ್ಪರ್ಶ ಸಿನಿಮಾಕ್ಕೂ ಹಾಡಿದ್ದರು

ಕಿಚ್ಚ ಸುದೀಪ್‌ ಅಭಿನಯದ ಸ್ಪರ್ಶ ಸಿನಿಮಾದ ಎರಡು ಹಾಡುಗಳಿಗೆ ಪಂಕಜ್‌ ಉಧಾಸ್‌ ಧ್ವನಿಯಾಗಿದ್ದರು. ಚಂದಕ್ಕಿಂತ ಚಂದ ನೀನೇ ಸುಂದರ ಮತ್ತು ಬರೆಯದ ಮೌನದ ಕವಿತೆ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ.

Whats_app_banner