ಟೈಗರ್‌ 3 ಟ್ರೈಲರ್‌ ವಿಮರ್ಶೆ: ಸಲ್ಮಾನ್‌ ಖಾನ್‌ಗೆ ದೇಶ ಅಥವಾ ಕುಟುಂಬದ ಆಯ್ಕೆಯ ಸವಾಲು, ಟವಲ್‌ ಬಿಚ್ಚಿದರೂ ಕತ್ರಿನಾ ಕೈಫ್‌ ಫೈಟಿಂಗ್‌
ಕನ್ನಡ ಸುದ್ದಿ  /  ಮನರಂಜನೆ  /  ಟೈಗರ್‌ 3 ಟ್ರೈಲರ್‌ ವಿಮರ್ಶೆ: ಸಲ್ಮಾನ್‌ ಖಾನ್‌ಗೆ ದೇಶ ಅಥವಾ ಕುಟುಂಬದ ಆಯ್ಕೆಯ ಸವಾಲು, ಟವಲ್‌ ಬಿಚ್ಚಿದರೂ ಕತ್ರಿನಾ ಕೈಫ್‌ ಫೈಟಿಂಗ್‌

ಟೈಗರ್‌ 3 ಟ್ರೈಲರ್‌ ವಿಮರ್ಶೆ: ಸಲ್ಮಾನ್‌ ಖಾನ್‌ಗೆ ದೇಶ ಅಥವಾ ಕುಟುಂಬದ ಆಯ್ಕೆಯ ಸವಾಲು, ಟವಲ್‌ ಬಿಚ್ಚಿದರೂ ಕತ್ರಿನಾ ಕೈಫ್‌ ಫೈಟಿಂಗ್‌

Tiger 3 trailer Review: ಮಹೇಶ್‌ ಶರ್ಮಾ ನಿರ್ದೇಶನದ ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ನಟನೆಯ ಟೈಗರ್‌ 3 ಟ್ರೈಲರ್‌ ಬಿಡುಗಡೆಯಾಗಿದೆ. ಟೈಗರ್‌ 3 ಸಿನಿಮಾವು ನವೆಂಬರ್‌ 12ರಂದು ಬಿಡುಗಡೆಯಾಗಲಿದೆ.

ಟೈಗರ್‌ 3 ಟ್ರೈಲರ್‌ ವಿಮರ್ಶೆ
ಟೈಗರ್‌ 3 ಟ್ರೈಲರ್‌ ವಿಮರ್ಶೆ

ಬೆಂಗಳೂರು: ಟೈಗರ್‌ 3 ಟ್ರೈಲರ್‌ ಇಂದು ಬಿಡುಗಡೆಯಾಗಿದೆ. ಸಲ್ಮಾನ್‌ ಖಾನ್‌ ಮತ್ತೆ ಒಜಿ ಸೂಪರ್‌ಸ್ಪೈ ಆಗಿ ಮರಳಿದ್ದಾರೆ. ವೈಆರ್‌ಎಫ್‌ ಸ್ಪೈ ಯೂನಿವರ್ಸ್‌ ಮೂಲಕ ಈ ಹಿಂದೆ ಟೈಗರ್‌ ಜಿಂದಾ ಹೈ (2017), ವಾರ್‌ (2019) ಮತ್ತು ಪಠಾಣ್‌ (2023) ಬಳಿಕ ವೈಆರ್‌ಎಫ್‌ ಇದೀಗ ಟೈಗರ್‌ 3 ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ ಸಲ್ಮಾನ್‌ ಖಾನ್‌ಗೆ ದೇಶ ಬೇಕಾ ಅಥವಾ ಕುಟುಂಬ ಬೇಕಾ ಎಂಬ ಸಂದಿಗ್ಧತೆಯ ಹೋರಾಟವಿದೆ. ಈ ಕುರಿತು ಟ್ರೈಲರ್‌ನಲ್ಲಿ ತಿಳಿಸಲಾಗಿದೆ. ತನ್ನ ಹೆಂಡತಿ / ಸಹ ಪತ್ತೆದಾರಿಣಿ ಕತ್ರಿನಾ ಕೈಫ್‌ ಮತ್ತು ಮಗನನ್ನು ಉಳಿಸಿಕೊಳ್ಳುವ ಜತೆ ದೇಶವನ್ನೂ ಉಳಿಸಿಕೊಳ್ಳಲು ಸಾಧ್ಯವಾಗುತ್ತ ಎಂದು ನೋಡಬೇಕಿದೆ. ಇದೇ ಟ್ರೈಲರ್‌ನಲ್ಲಿ ಕತ್ರಿನಾ ಕೈಫ್‌ ಅವರ ಟವಲ್‌ ಅನ್ನು ಮತ್ತೊಬ್ಬಳು ಫೈಟರ್‌ ಎಳೆಯುವ ದೃಶ್ಯವಿದೆ.

ಟೈಗರ್‌ ಮತ್ತು ಝೋಯಾ ಯುಗಳಗೀತೆ

ಈ ಟ್ರೈಲರ್‌ನಲ್ಲಿ ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಅವರ ಸಾಹಸ ದೃಶ್ಯಗಳು ಮೇಲೈಸಿವೆ. ಸಲ್ಮಾನ್‌ ಖಾನ್‌ ಅವರು ಟೈಗರ್‌ ಆಗಿ, ಕತ್ರಿನಾ ಕೈಪ್‌ ಅವರು ಝೊಯಾ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನ ಮೊದಲಾರ್ಧವು ತನ್ನ ಕುಟುಂಬದ ಜತೆ ಉತ್ತಮ ಜೀವನ ನಡೆಸುತ್ತಿರುವ ದೃಶ್ಯವಿದೆ. ಬಳಿಕ ಟೈಗರ್‌ಗೆ ದೇಶ ಮತ್ತು ಕುಟುಂಬದ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಸನ್ನಿವೇಶ ಬರುತ್ತದೆ. ಟ್ರೈಲರ್‌ನಲ್ಲಿ ಟೈಗರ್‌ ಮಗನಿಗೆ ಹಾನಿಯಾಗಿರುವುದೂ ಕಾಣಿಸುತ್ತದೆ.

ಟ್ರೈಲರ್‌ನಲ್ಲಿ ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಪ್‌ ಅವರು ಕಾಂಬ್ಯಾಟ್‌ ಫೈಟಿಂಗ್‌ನಲ್ಲಿ ಶತ್ರುಗಳನ್ನು ಸದೆ ಬಡಿಯುವ ದೃಶ್ಯ ಕಾಣಿಸುತ್ತದೆ. ಒಟ್ಟಾರೆ, ಇದು ಅನನ್ಯ ಆಕ್ಷನ್‌ ಫಿಲ್ಮ್‌ ಆಗಿರುವ ಸೂಚನೆಯನ್ನು ಟ್ರೈಲರ್‌ ನೀಡಿದೆ. ಮತ್ತೊಬ್ಬಳು ಮಹಿಳೆಯ ಜತೆ ಕತ್ರಿನಾ ಕೈಫ್‌ ಟವಲ್‌ ಧರಿಸಿ ಹೊಡೆದಾಟ ನಡೆಸುವ ದೃಶ್ಯವಿದೆ. ಈ ಇಬ್ಬರೂ ಒಂದೇ ಟವಲ್‌ ಹೊಂದಿದ್ದಾರೆ. ಈ ಟ್ರೈಲರ್‌ನಲ್ಲಿ ರಾ ಮುಖ್ಯಸ್ಥೆಯಾಗಿ ರೇವತಿಯ ಧ್ವನಿ ಕೇಳಿಸುತ್ತದೆ. ಏಕ್‌ ಥ ಟೈಗರ್‌ನಲ್ಲೂ ಇವರು ರಾ ಚೀಫ್‌ ಆಗಿದ್ದರು.

ಟೈಗರ್‌ 3 ಟ್ರೈಲರ್‌ ಇಲ್ಲಿದೆ ನೋಡಿ

ಕೆಲವು ದಿನಗಳ ಹಿಂದೆ ಟೈಗರ್‌ 3 ಟೀಸರ್‌ ರಿಲೀಸ್‌ ಆಗಿತ್ತು. ಟೀಸರ್‌ನಲ್ಲಿ ಗನ್‌ಗಳ ಮೊರೆತ ಹಿನ್ನೆಲೆಯಲ್ಲಿ ಕೇಳುತ್ತಿರುತ್ತದೆ. ಹಲವು ಡೈಲಾಗ್‌ಗಳು ಸಲ್ಮಾನ್‌ ಖಾನ್‌ ಹೇಳುತ್ತಿರುತ್ತಾರೆ. ಹಲವು ಸೈನಿಕರ ಜತೆ ಸಲ್ಮಾನ್‌ ಖಾನ್‌ ಡೂಂ ಡಾಂ ಫೈಟಿಂಗ್‌ ಮಾಡುವ ಸೀನ್‌ ಕೂಡ ಇದೆ. ಮೊದಲ ನೋಟಕ್ಕೆ ಇದು ಟರ್ಕಿಯಲ್ಲಿ ನಡೆಯುವ ಹೋರಾಟದಂತೆ ಇದೆ. ಒಂದೆಡೆ "ಎಲ್ಲಿಯವರೆಗೆ ಟೈಗರ್‌ ಸಾಯುವುದಿಲ್ಲವೋ, ಅಲ್ಲಿಯವರೆಗೆ ಅವನು ಕಾಣೆಯಾಗುವುದಿಲ್ಲ" ಎಂಬ ಡೈಲಾಗ್‌ ಕೂಡ ಕೇಳಿಸುತ್ತದೆ.

ಟೈಗರ್‌ 3 ಸಿನಿಮಾವು ನವೆಂಬರ್‌ 12ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರೆದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌ ಅವರ ಏಕ್‌ ಥ ಟೈಗರ್‌ ಮತ್ತು ಟೈಗರ್‌ ಝಿಂದಾ ಹೈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾದ ಬಳಿಕ ಆದಿತ್ಯ ಚೋಪ್ರಾ ಅವರು ಕಬೀರ್‌ ಸಿನಿಮಾದಲ್ಲಿ ಹೃತಿಕ್‌ ರೋಷಣ್‌ರನ್ನು, ಪಠಾಣ್‌ನಲ್ಲಿ ಶಾರೂಕ್‌ ಖಾನ್‌ರನ್ನು ಗುಪ್ತಚರ ಏಜೆಂಟ್‌ ಆಗಿ ಚಿತ್ರಿಸಿದ್ದರು. ಇದೀಗ ಟೈಗರ್‌ 3ಯಲ್ಲಿ ಇದೇ ಸ್ಪೈ ಏಜೆಂಟ್‌ ಸರಣಿ ಮುಂದುವರೆಯುತ್ತಿದೆ.

Whats_app_banner