ಘಟಾನುಘಟಿ ಸ್ಟಾರ್‌ಗಳ ಚಿತ್ರದ ದಾಖಲೆ ಪುಡಿಗಟ್ಟಿದ ಸ್ತ್ರೀ 2 ಒಟಿಟಿ ಪುರಪ್ರವೇಶ!; ಯಾವ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯ?-bollywood ott news rajkummar rao shraddha kapoors stree 2 out on prime video but with a twist mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಘಟಾನುಘಟಿ ಸ್ಟಾರ್‌ಗಳ ಚಿತ್ರದ ದಾಖಲೆ ಪುಡಿಗಟ್ಟಿದ ಸ್ತ್ರೀ 2 ಒಟಿಟಿ ಪುರಪ್ರವೇಶ!; ಯಾವ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯ?

ಘಟಾನುಘಟಿ ಸ್ಟಾರ್‌ಗಳ ಚಿತ್ರದ ದಾಖಲೆ ಪುಡಿಗಟ್ಟಿದ ಸ್ತ್ರೀ 2 ಒಟಿಟಿ ಪುರಪ್ರವೇಶ!; ಯಾವ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯ?

ಯಾವುದೇ ನಿರೀಕ್ಷೆ ಇಲ್ಲದೆ ಪ್ರೇಕ್ಷಕರ ಮುಂದೆ ಬಂದಿದ್ದ ಸ್ತ್ರೀ2, ಬಾಕ್ಸ್ ಆಫೀಸ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈ ವರ್ಷ 713 ಕೋಟಿ ರೂ ಗಳಿಕೆ ಕಂಡ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈಗ ಇದೇ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು? ಇಲ್ಲಿದೆ ಮಾಹಿತಿ.

ಒಟಿಟಿಗೆ ಎಂಟ್ರಿಕೊಟ್ಟ ಶ್ರದ್ಧಾ ಕಪೂರ್‌ ನಟನೆಯ ಸ್ತ್ರೀ 2 ಸಿನಿಮಾ
ಒಟಿಟಿಗೆ ಎಂಟ್ರಿಕೊಟ್ಟ ಶ್ರದ್ಧಾ ಕಪೂರ್‌ ನಟನೆಯ ಸ್ತ್ರೀ 2 ಸಿನಿಮಾ

Stree 2 OTT: ಬಾಲಿವುಡ್‌ನಲ್ಲಿ ಸದ್ದು ಗದ್ದಲವಿಲ್ಲದೆ ಬಂದ ಸಿನಿಮಾ, ಇಡೀ ಬಾಕ್ಸ್‌ ಆಫೀಸ್‌ ಅನ್ನೇ ಶೇಕ್‌ ಮಾಡಿತ್ತು. ವಿಮರ್ಶೆ ದೃಷ್ಟಿಯಿಂದ ಏಕ್‌ ನಂಬರ್‌ ಎನಿಸಿಕೊಂಡಿದ್ದ ಈ ಸಿನಿಮಾ, ಬರೋಬ್ಬರಿ 600 ಕೋಟಿ ಗಳಿಸಿ ಹೊಸ ದಾಖಲೆ ಬರೆದಿತ್ತು. ಆ ಸಿನಿಮಾ ಬೇರಾವುದೂ ಅಲ್ಲ, ಸ್ತ್ರೀ 2. ಯಾವುದೇ ನಿರೀಕ್ಷೆ ಇಲ್ಲದೆ ಪ್ರೇಕ್ಷಕರ ಮುಂದೆ ಬಂದಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಜತೆಗೆ 713 ಕೋಟಿ ಒಟ್ಟಾರೆ ಬಿಜಿನೆಸ್‌ ಮಾಡಿದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿತ್ತು. ಈಗ ಇದೇ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು? ಇಲ್ಲಿದೆ ಮಾಹಿತಿ.

ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ..

ಸ್ತ್ರೀ ಸಿನಿಮಾ 2018ರಲ್ಲಿ ತೆರೆಕಂಡಿತ್ತು. ಆ ಚಿತ್ರದ ಮುಂದುವರಿದ ಭಾಗವಾಗಿ ಪಾರ್ಟ್‌ 2 ನಿರ್ಮಿಸಲಾಗಿದೆ. ಈ ಹಾರರ್ ಕಾಮಿಡಿ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಿ ಹೊಸ ದಾಖಲೆ ಬರೆದಿತ್ತು. ನಿರ್ದೇಶಕ ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದ ಈ ಸಿನಿಮಾ, ಅದ್ಯಾವಾಗ ಒಟಿಟಿಗೆ ಬರಲಿದೆ ಎಂದೇ ಒಟಿಟಿ ವೀಕ್ಷಕರು ಕಾಯುತ್ತಿದ್ದರು. ಈಗ ಇದೇ ಸಿನಿಮಾ ಒಟಿಟಿ ಅಂಗಳ ಪ್ರವೇಶಿಸಿದೆ.

ಯಾವ ಒಟಿಟಿಯಲ್ಲಿ ವೀಕ್ಷಣೆ?

ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ತ್ರೀ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪ್ರಸ್ತುತ ಈ ಸಿನಿಮಾವನ್ನು ಬಾಡಿಗೆ ಆಧಾರದ ಮೇಲೆ ವೀಕ್ಷಿಸಬಹುದು. ಬರೋಬ್ಬರಿ 349 ರೂಪಾಯಿ ಪೇ ಮಾಡಿ ಈ ಸಿನಿಮಾವನ್ನು ನೋಡಬಹುದಾಗಿದೆ. ಒಂದಷ್ಟು ದಿನಗಳ ಬಳಿಕ ಈ ಸಿನಿಮಾ ಎಲ್ಲ ಪ್ರೈಂ ಸದಸ್ಯರಿಗೆ ವೀಕ್ಷಣೆಗೆ ಸಿಗಲಿದೆ. ಚಿತ್ರಮಂದಿರದಲ್ಲಿ ಕೋಟಿ ಕೋಟಿ ಬಾಚಿಕೊಂಡ ಈ ಸಿನಿಮಾ, ಈಗ ಒಟಿಟಿಯಲ್ಲಿಯೂ ರೆಂಟ್‌ ಮೂಲಕ ಹಣ ಗಳಿಕೆಗೆ ಮುಂದಾಗಿದೆ.

ಏನಿದು ಸ್ತ್ರೀ ಕಥೆ?

ಚಂದೇರಿ ಗ್ರಾಮದಲ್ಲಿ ಮಹಿಳೆಯರ ಸಮಸ್ಯೆ ಬಗೆಹರಿದಿದೆ ಎಂದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಅದೇ ಸಮಯದಲ್ಲಿ, ಅದೇ ಗ್ರಾಮದಲ್ಲಿ ಹೊಸ ಸಮಸ್ಯೆಯೊಂದು ಶುರುವಾಗುತ್ತದೆ. ಸರ್ಕಾಟ ಹಳ್ಳಿಯ ಮಾಡರ್ನ್‌ ಹುಡುಗಿಯರಿಗೆ ಪ್ರೇತ ತೊಂದರೆ ನೀಡುತ್ತದೆ. ಕೆಲವು ಹುಡುಗಿಯರು ನಾಪತ್ತೆಯಾಗುತ್ತಾರೆ. ಇದರೊಂದಿಗೆ ವಿಕ್ಕಿ (ರಾಜ್‌ಕುಮಾರ್ ರಾವ್), ರುದ್ರ (ಪಂಕಜ್ ತ್ರಿಪಾಠಿ), ಜಾನಾ (ಅಭಿಷೇಕ್ ಬ್ಯಾನರ್ಜಿ), ಬಿಟ್ಟು (ಅಪರ ಶಕ್ತಿ) ಜೊತೆಗೆ ಶ್ರದ್ಧಾ ಕಪೂರ್ ಸಮಸ್ಯೆಯನ್ನು ಪರಿಹರಿಸಲು ಪ್ರೇತದ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಹೆದರಿಸುವ ಮೂಲಕ ಎಲ್ಲರನ್ನು ನೋಡಿಸಿಕೊಂಡು ಹೋಗಲಿದೆ ಈ ಸಿನಿಮಾ.

mysore-dasara_Entry_Point