Kichcha Sudeep: ಮುಂದಿನ ಸಿನಿಮಾಗಳ ಬಗ್ಗೆ ಕಿಚ್ಚನಿಂದ ಬಂತು ಸ್ಪಷ್ಟನೆ; ಹೀಗಿದೆ ಸುದೀಪ್‌ ಪ್ರಾಜೆಕ್ಟ್‌ಗಳ ಲೈನ್‌ಅಪ್‌
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ಮುಂದಿನ ಸಿನಿಮಾಗಳ ಬಗ್ಗೆ ಕಿಚ್ಚನಿಂದ ಬಂತು ಸ್ಪಷ್ಟನೆ; ಹೀಗಿದೆ ಸುದೀಪ್‌ ಪ್ರಾಜೆಕ್ಟ್‌ಗಳ ಲೈನ್‌ಅಪ್‌

Kichcha Sudeep: ಮುಂದಿನ ಸಿನಿಮಾಗಳ ಬಗ್ಗೆ ಕಿಚ್ಚನಿಂದ ಬಂತು ಸ್ಪಷ್ಟನೆ; ಹೀಗಿದೆ ಸುದೀಪ್‌ ಪ್ರಾಜೆಕ್ಟ್‌ಗಳ ಲೈನ್‌ಅಪ್‌

ಸುದೀಪ್‌ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೂರು ಸಿನಿಮಾಗಳಿಗಾಗಿ ಹಗಲು ರಾತ್ರಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಮುಂದಿನ ಸಿನಿಮಾಗಳ ಬಗ್ಗೆ ಕಿಚ್ಚನಿಂದ ಬಂತು ಸ್ಪಷ್ಟನೆ; ಹೀಗಿದೆ ಸುದೀಪ್‌ ಪ್ರಾಜೆಕ್ಟ್‌ಗಳ ಲೈನ್‌ಅಪ್‌
ಮುಂದಿನ ಸಿನಿಮಾಗಳ ಬಗ್ಗೆ ಕಿಚ್ಚನಿಂದ ಬಂತು ಸ್ಪಷ್ಟನೆ; ಹೀಗಿದೆ ಸುದೀಪ್‌ ಪ್ರಾಜೆಕ್ಟ್‌ಗಳ ಲೈನ್‌ಅಪ್‌

Kichcha Sudeep: ಕಿಚ್ಚ ಸುದೀಪ್‌ ಏನು ಮಾಡುತ್ತಿದ್ದಾರೆ? ಯಾವೆಲ್ಲ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ತರಹೇವಾರಿ ಉತ್ತರಗಳು ಹರಿದಾಡುತ್ತಿದ್ದವು. ಆದರೆ ಅವುಗಳ ಸತ್ಯಾಸತ್ಯತೆ ಮಾತ್ರ ಗೊತ್ತಿರಲಿಲ್ಲ. ಇದೀಗ ಸ್ವತಃ ಸುದೀಪ್‌ ಹರಿದಾಡಿದ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಸುದೀರ್ಘ ಪತ್ರ ಬರೆದಿರುವ ಸುದೀಪ್‌, ಸಿನಿಮಾ ಕೆರಿಯರ್‌ನಲ್ಲೇ ಇಷ್ಟೊಂದು ಲಾಂಗ್‌ ಗ್ಯಾಪ್‌ ಯಾವತ್ತೂ ಪಡೆದಿರಲಿಲ್ಲ ಎಂದು ಸುದೀಪ್‌ ಹೇಳಿದ್ದಾರೆ. ಇದರ ಜತೆಗೆ ಎಷ್ಟು ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ ಕಿಚ್ಚ.

ಮೂರು ಸಿನಿಮಾಗಳಿಗೆ ಹಗಲು ರಾತ್ರಿ ಕೆಲಸ..

"#Kichcha46 ಚಿತ್ರದ ಬಗೆಗಿನ ಮೀಮ್‌ಗಳನ್ನು ನೋಡುತ್ತಿದ್ದರೆ ನಿಜಕ್ಕೂ ಖುಷಿ ಎನಿಸುತ್ತದೆ. ಇರಲಿ ಅದಕ್ಕೆ ಧನ್ಯವಾದಗಳು. ಈಗ ನಾನೊಂದು ಸಣ್ಣ ಕ್ಲಾರಿಫಿಕೇಷನ್‌ ನೀಡಲು ನಿರ್ಧರಿಸಿದ್ದೇನೆ.

ನಾನು ಇಷ್ಟೊಂದು ಸುದೀರ್ಘ ಬ್ರೇಕ್‌ ಯಾವತ್ತೂ ಪಡೆದಿರಲಿಲ್ಲ. ವಿಕ್ರಾಂತ್‌ ರೋಣ ಸಿನಿಮಾ ಆದ ಬಳಿಕ ಈ ರೀತಿಯ ಒಂದು ಬ್ರೇಕ್‌ ನನಗೆ ಬೇಕಿತ್ತು. ಕೋವಿಡ್‌ ಬಳಿಕ ನಾವು ಮತ್ತೆ ಬ್ರೇಕ್‌ ಪಡೆದಿರಲಿಲ್ಲ. ಅದಾಗುತ್ತಿದ್ದಂತೆ ಬಿಗ್‌ಬಾಸ್‌ ಒಟಿಟಿ ಶುರುವಾಯ್ತು, ಟಿವಿಯದ್ದೂ ಮುಗೀತು. ಹೀಗಿರುವಾಗ ನಾನು ಬ್ರೇಕ್‌ ಪಡೆದರೆ ಅದು ನನಗೂ ಖುಷಿ ಎನಿಸಬೇಕು. ಆಗ ನನಗೆ ಕ್ರಿಕೆಟ್‌ ಸಿಕ್ಕಿತು. ಒಂದಷ್ಟು ದಿನಗಳ ಕಾಲ ರಿಲ್ಯಾಕ್ಸ್‌ ಮೂಡ್‌ನಲ್ಲಿ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದೆ. ಕೆಸಿಸಿ ಮತ್ತು ಕರ್ನಾಟಕ ಬುಲ್ಡೋಸರ್ಸ್‌ ಜತೆ ಕೆಲ ಸಂತಸದ ಸಮಯ ಕಳೆದೆ. ನನಗನಿಸುತ್ತದೆ ಅದೊಂದು ಒಳ್ಳೆಯ ಬ್ರೇಕ್.‌ ಒಳ್ಳೆಯ ಸಮಯ ಕಳೆದೆ.

ಇನ್ನು ಸಿನಿಮಾ, ಕಥೆ ಕೇಳುವುದು ನನ್ನ ನಿತ್ಯದ ಕೆಲಸಗಳು. ಈವರೆಗೂ ಮೂರು ಸ್ಕ್ರಿಪ್ಟ್‌ಗಳನ್ನು ಅಂತಿಮ ಮಾಡಿದ್ದೇನೆ. ಆ ಮೂರು ಸ್ಕ್ರಿಪ್ಟ್‌ಗಳಿಗೆ ಸಾಕಷ್ಟು ತಯಾರಿಯ ಅಗತ್ಯವಿದೆ. ಆ ಕೆಲಸವೂ ನಡೆಯುತ್ತಿದೆ. ಆ ಮೂರು ಸಿನಿಮಾಗಳಿಗೆ ಸಂಬಂಧಿಸಿದ ತಂಡಗಳು ಹಗಲು ರಾತ್ರಿ ಕೆಲಸ ಮಾಡುತ್ತಿವೆ. ಶೀಘ್ರದಲ್ಲಿಯೇ ಸಿನಿಮಾ ಘೋಷಣೆ ಮಾಡಲಿದ್ದೇವೆ" ಎಂದಿದ್ದಾರೆ ಸುದೀಪ್.‌

ಹೊಂಬಾಳೆ ಜತೆ ಸಿನಿಮಾ ವದಂತಿ..

‘ವಿಕ್ರಾಂತ್‌ ರೋಣ’ ಸಿನಿಮಾ ಬಳಿಕ ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಆದರೆ, ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಚಿತ್ರದ ತೆರೆಮರೆಯ ಕೆಲಸಗಳಲ್ಲಿ ಸುದೀಪ್‌ ಬಿಜಿಯಾಗಿದ್ದಾರೆ. ಈ ನಡುವೆ ಕಿಚ್ಚನ ಬಗ್ಗೆ ಹೊಸ ಸುದ್ದಿಯೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ತೇಲಿಬಂದಿದೆ. ಅದೇನೆಂದರೆ, ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌, ಸುದೀಪ್‌ ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner