TPL 2 Trophy: ಟಿಪಿಎಲ್ ಸೀಸನ್-2ಕ್ಕೆ ಅದ್ಧೂರಿ ತೆರೆ.. ಹರ್ಷ ಸಿ.ಎಂ ಗೌಡ ತಂಡಕ್ಕೆ ಒಲಿದ ಟ್ರೋಫಿ
ಕನ್ನಡ ಸುದ್ದಿ  /  ಮನರಂಜನೆ  /  Tpl 2 Trophy: ಟಿಪಿಎಲ್ ಸೀಸನ್-2ಕ್ಕೆ ಅದ್ಧೂರಿ ತೆರೆ.. ಹರ್ಷ ಸಿ.ಎಂ ಗೌಡ ತಂಡಕ್ಕೆ ಒಲಿದ ಟ್ರೋಫಿ

TPL 2 Trophy: ಟಿಪಿಎಲ್ ಸೀಸನ್-2ಕ್ಕೆ ಅದ್ಧೂರಿ ತೆರೆ.. ಹರ್ಷ ಸಿ.ಎಂ ಗೌಡ ತಂಡಕ್ಕೆ ಒಲಿದ ಟ್ರೋಫಿ

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳು ಟಿಪಿಎಲ್ ಸೀಸನ್-2ನಲ್ಲಿ ಭಾಗವಹಿಸಿದ್ದವು.

ಟಿಪಿಎಲ್ ಸೀಸನ್-2ಕ್ಕೆ ಅದ್ಧೂರಿ ತೆರೆ
ಟಿಪಿಎಲ್ ಸೀಸನ್-2ಕ್ಕೆ ಅದ್ಧೂರಿ ತೆರೆ

ಎನ್ 1 ಕ್ರಿಕೆಟ್ ಅಕಾಡೆಮಿ ಸುನಿಲ್ ಕುಮಾರ್. ಬಿ. ಆರ್ ಸಾರಥ್ಯದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ತೆರೆ ಬಿದ್ದಿದೆ. ಹರ್ಷ ಸಿ.ಎಂ. ಗೌಡ ನೇತೃತ್ವದ ಎನಿಎಲ್ಪ್ ಟೂರ್ನಿವಲ್ ತಂಡ ಟಿಪಿಎಲ್ ಸೀಸನ್ -2 ಟ್ರೋಪಿಯನ್ನು ಮುಡಿಗೇರಿಸಿಕೊಂಡಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ಸುನಿಲ್ ಕುಮಾರ್ ಬಿ.ಆರ್‌. ಕಳೆದ ವರ್ಷದಿಂದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭಿಸಿದ್ದಾರೆ. ಈ ಬಾರಿ ಎರಡನೇ ಸೀಸನ್ ಮಾರ್ಚ್ 12 ರಿಂದ ಆರಂಭವಾಗಿತ್ತು. ಮಾರ್ಚ್ 12 ರಿಂದ 15ರ ವರೆಗೆ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು, ಅಂತಿಮವಾಗಿ ಹರ್ಷ ಸಿ.ಎಂ. ಗೌಡ ನೇತೃತ್ವದ ಎನಿಎಲ್ಪ್ ಟೂರ್ನಿವಲ್ ತಂಡ ಟಿಪಿಎಲ್ ಸೀಸನ್ -2 ಟ್ರೋಫಿಗೆ ಮುತ್ತಿಟ್ಟಿದೆ. ಮಂಜು ಪಾವಗಡ ನೇತೃತ್ವದ ಅಶ್ವಸೂರ್ಯ ರಿಯಾಲಿಟೀಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಗಾಯಕ ವ್ಯಾಸರಾಜ್ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳು ಟಿಪಿಎಲ್ ಸೀಸನ್-2ನಲ್ಲಿ ಭಾಗವಹಿಸಿದ್ದವು. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ನಾಯಕತ್ವದಲ್ಲಿ ತಂಡಗಳನ್ನು ಮುನ್ನಡೆಸಲಾಗಿತ್ತು.

ಸಿಸಿಎಲ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ ಬುಲ್ಡೋಜರ್ಸ್‌

ಮತ್ತೊಂದೆಡೆ, ಕರ್ನಾಟಕ ಬುಲ್ಡೋಜರ್ಸ್‌ ತಂಡ ಸೆಮಿ ಫೈನಲ್‌ಗೆ ಕಾಲಿಟ್ಟಿದೆ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯ ಲೀಗ್ ಹಂತಗಳು ಮುಕ್ತಾಯಗೊಂಡಿದ್ದು ಇದೀಗ ತಂಡಗಳು ಸೆಮಿ ಫೈನಲ್‌ಗೆ ಸಿದ್ಧವಾಗುತ್ತಿವೆ. ಈ ಲೀಗ್‌ನಲ್ಲಿ ಭಾಗವಹಿಸಿದ್ದ 8 ತಂಡಗಳಲ್ಲಿ ಸದ್ಯಕ್ಕೆ ಕರ್ನಾಟಕ ಬುಲ್ಡೋಜರ್ಸ್‌ ಮೊದಲ ಸ್ಥಾನದಲ್ಲಿರುವುದು ಕನ್ನಡ ಸಿನಿಪ್ರಿಯರು ಹಾಗೂ ಕ್ರಿಕೆಟ್‌ ಪ್ರೇಮಿಗಳಿಗೆ ಖುಷಿಯಾಗಿದೆ.

ಈ ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳು ಜರುಗಿವೆ. ಪ್ರತಿ ತಂಡಗಳೂ 4 ಪಂದ್ಯಗಳನ್ನು ಆಡಿವೆ. ಕಳೆದ ಶನಿವಾರ, ಮಾರ್ಚ್‌ 11 ರಂದು ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಜಯಗಳಿಸುವ ಮೂಲಕ ಸೆಮಿ ಫೈನಲ್‌ ಪ್ರವೇಶಿಸಿದೆ. ಶನಿವಾರ ಪಂಜಾಬ್‌ ದಿ ಶೇರ್‌ ಜೊತೆ ಕರ್ನಾಟಕ ತಂಡ 14ನೇ ಮ್ಯಾಚ್‌ ಆಡಿದ್ದು 8 ವಿಕೆಟ್‌ಗಳಿಂದ ಜಯ ಗಳಿಸಿದೆ. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್‌, ಆಡಿದ ನಾಲ್ಕೂ ಪಂದ್ಯಗಳಲ್ಲಿ ಜಯ ಗಳಿಸಿ ರಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದೆ. ಜೊತೆಗೆ ನಾಲ್ಕು ಪಂದ್ಯಗಳನ್ನು ಗೆದ್ದು ಭೋಜ್‌ಪುರಿ ದಬಾಂಗ್ಸ್‌ ಎರಡನೇ ಸ್ಥಾನ ಪಡೆದಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಮುಂಬೈ ಹೀರೋಸ್‌ ಮೂರನೇ ಸ್ಥಾನ ಹಾಗೂ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿರುವ ತೆಲುಗು ವಾರಿಯರ್ಸ್ ನಾಲ್ಕನೇ ಸ್ಥಾನದಲ್ಲಿದ್ದು ಈ ನಾಲ್ಕೂ ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ. ಚೆನ್ನೈ ರೈನೋಸ್‌, ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌ ಹಾಗೂ ಪಂಜಾಬ್‌ ದಿ ಶೇರ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಮಾರ್ಚ್‌ 18 ರಂದು ಮಧ್ಯಾಹ್ನ 2.30 ರಿಂದ 6.30 ವರೆಗೆ ಕರ್ನಾಟಕ ಬುಲ್ಡೋಜರ್ಸ್‌ ಹಾಗೂ ತೆಲುಗು ವಾರಿಯರ್ಸ್‌ ನಡುವೆ ಮೊದಲ ಸೆಮಿ ಫೈನಲ್‌ ಮ್ಯಾಚ್‌ ನಡೆಯಲಿದೆ. ಅದೇ ದಿನ ಸಂಜೆ 7 ರಿಂದ ರಾತ್ರಿ 11ವರೆಗೆ ಭೋಜ್‌ಪುರಿ ದಬಾಂಗ್ಸ್‌ ಹಾಗೂ ಮುಂಬೈ ಹೀರೋಸ್‌ ತಂಡಗಳ ನಡುವೆ ಎರಡನೇ ಸೆಮಿ ಫೈನಲ್‌ ಪಂದ್ಯ ನಡೆಯಲಿದೆ.

Whats_app_banner