ಮಹೇಶನಿಂದ ತಂಗಿಯನ್ನು ಬಿಡಿಸಿದ ಭಾಗ್ಯಾ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಹೇಶನಿಂದ ತಂಗಿಯನ್ನು ಬಿಡಿಸಿದ ಭಾಗ್ಯಾ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ; ಭಾಗ್ಯಲಕ್ಷ್ಮೀ ಧಾರಾವಾಹಿ

ಮಹೇಶನಿಂದ ತಂಗಿಯನ್ನು ಬಿಡಿಸಿದ ಭಾಗ್ಯಾ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 13ರ ಸಂಚಿಕೆಯಲ್ಲಿ ಕುಸುಮಾ ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್‌ ಸವಾರನಿಗೆ ಡಿಕ್ಕಿ ಹೊಡೆಯುತ್ತದೆ. ಇತ್ತ ಭಾಗ್ಯಾ, ಮಹೇಶನಿಂದ ತಂಗಿಯನ್ನು ಕಾಪಾಡುತ್ತಾಳೆ.

ಮಹೇಶನಿಂದ ತಂಗಿಯನ್ನು ಬಿಡಿಸಿದ ಭಾಗ್ಯಾ, ಸ್ಕೂಟರ್‌ಗೆ ಡಿಕ್ಕಿ ಹೊಡೆದ  ಕುಸುಮಾ ಪ್ರಯಾಣಿಸುತ್ತಿದ್ದ ಆಟೋ; ಭಾಗ್ಯಲಕ್ಷ್ಮೀ ಧಾರಾವಾಹಿ
ಮಹೇಶನಿಂದ ತಂಗಿಯನ್ನು ಬಿಡಿಸಿದ ಭಾಗ್ಯಾ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಶ್ರೇಷ್ಠಾ-ತಾಂಡವ್‌ ಮದುವೆ ನಿಲ್ಲಿಸೋಕೆ ಕುಸುಮಾ, ಪೂಜಾ, ಸುಂದ್ರಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಯಾರೂ ಮದುವೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಶ್ರೇಷ್ಠಾ‌, ಪೂಜಾಳನ್ನು ಕಿಡ್ನಾಪ್‌ ಮಾಡಿ ಮಹೇಶನನ್ನು ಕಾವಲು ಇಡುತ್ತಾಳೆ. ಮತ್ತೊಮ್ಮೆ ಕುಸುಮಾ ಇಲ್ಲಿಗೆ ಬಂದರೆ ಅವಳನ್ನು ಒಳಗೆ ಬಿಡದಂತೆ ತಡೆಯುವಂತೆ ರೆಸಾರ್ಟ್‌ ಸಿಬ್ಬಂದಿಗೆ ಸೂಚಿಸುತ್ತಾಳೆ.

ಮಹೇಶನ ಕೆನ್ನೆಗೆ ಬಾರಿಸಿ ತಂಗಿಯನ್ನು ಕಾಪಾಡಿದ ಭಾಗ್ಯಾ

ಪೂಜಾ ಅಪಾಯದಲ್ಲಿದ್ದಾಳೆ ಎಂದು ತಿಳಿದ ಸುಂದ್ರಿ ಅವಳನ್ನು ಕಾಪಾಡಲು ಭಾಗ್ಯಾ ಬಳಿ ಹೋಗುತ್ತಾಳೆ. ಸುಂದ್ರಿಯನ್ನು ನೋಡಿ ಭಾಗ್ಯಾ ಕೋಪ ಮಾಡಿಕೊಂಡರೂ ನಂತರ ಅವಳು ಹೇಳಿದ್ದನ್ನು ನಂಬಿ ಪೂಜಾಳನ್ನು ಕರೆ ತರಲು ಹೋಗುತ್ತಾಳೆ. ಭಾಗ್ಯಾ, ಧರ್ಮರಾಜ್‌ ಇಬ್ಬರನ್ನೂ ಜೊತೆಗೆ ಕರೆ ತಂದಿದ್ದಕ್ಕೆ ಮಹೇಶ ಕೋಪಗೊಳ್ಳುತ್ತಾನೆ. ನನಗೆ ದುಡ್ಡು ಬೇಕು ಅಷ್ಟೇ, ದುಡ್ಡು ಕೊಟ್ಟು ನಿಮ್ಮ ತಂಗಿಯನ್ನು ಕರೆದುಕೊಂಡು ಹೋಗಿ ಎಂದು ಮಹೇಶ ಕಂಡಿಷನ್‌ ಮಾಡುತ್ತಾನೆ. ಅವನನ್ನು ತಳ್ಳಿ ಭಾಗ್ಯಾ ಒಳಗೆ ಬರುತ್ತಾಳೆ. ಪೂಜಾಳನ್ನು ನೋಡಿ ಅವಳನ್ನು ಬಿಡಿಸುತ್ತಾರೆ. ತಂಗಿಗೆ ಏನೂ ಅಪಾಯವಾಗಿಲ್ಲ ಎಂದು ತಿಳಿದು ಸಮಾಧಾನಗೊಳ್ಳುತ್ತಾಳೆ.

ಪೂಜಾಳನ್ನು ಕರೆದುಕೊಂಡು ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಮತ್ತೆ ಮಹೇಶ ಅಡ್ಡ ಬರುತ್ತಾನೆ. ನನಗೆ ದುಡ್ಡು ಕೊಟ್ಟು ಇಲ್ಲಿಂದ ಹೋಗಿ ಎನ್ನುತ್ತಾನೆ. ಆಗ ಭಾಗ್ಯಾ ತಾನು ತಂದ ಒಡವೆಯನ್ನು ಮಹೇಶನಿಗೆ ಕೊಡುತ್ತಾಳೆ. ಅದನ್ನು ನೋಡಿ ಮಹೇಶ ಕೋಪಗೊಂಡು ಎಸೆಯುತ್ತಾನೆ. ಈ ಒಡವೆಯಿಂದ ನನಗೆ ಏನು ಪ್ರಯೋಜನ? ಶ್ರೇಷ್ಠಾ ನನಗೆ 5 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದಳು, ಅಷ್ಟು ಹಣ ಕೊಟ್ಟು ಇಲ್ಲಿಂದ ಹೋಗಿ ಎನ್ನುತ್ತಾನೆ. ಮಹೇಶನ ದುರಹಂಕಾರ ಕಂಡು ಭಾಗ್ಯಾ ಕೋಪಗೊಳ್ಳುತ್ತಾಳೆ. ಮಹೇಶನ ಕೆನ್ನೆಗೆ ಬಾರಿಸುವ ಭಾಗ್ಯಾ, ಇಲ್ಲಿಂದ ನಾವು ಇನ್ನು 5 ನಿಮಿಷದಲ್ಲಿ ಹೋಗದಿದ್ದರೆ ಇಲ್ಲಿಗೆ ಪೊಲೀಸರು ಬರುತ್ತಾರೆ. ನಾವು ಬರುವುದು ತಡವಾದರೆ ಪೊಲೀಸರಿಗೆ ಲೊಕೇಶನ್‌ ಕಳಿಸುವಂತೆ ನನ್ನ ಮಗನಿಗೆ ಹೇಳಿ ಬಂದಿದ್ದೇನೆ ಎನ್ನುತ್ತಾಳೆ.

ಪೊಲೀಸ್‌ ಹೆಸರು ಕೇಳುತ್ತಿದ್ದಂತೆ ಭಯಗೊಂಡ ಮಹೇಶ, ಸುಂದ್ರಿ

ಪೊಲೀಸ್‌ ಎಂದ ಕೂಡಲೇ ಸುಂದ್ರಿ, ಮಹೇಶ ಇಬ್ಬರಿಗೂ ಭಯವಾಗುತ್ತದೆ. ನಿನಗೆ ಇದೆಲ್ಲಾ ಬೇಕಾ? ಪೊಲೀಸ್‌ ಬಂದರೆ ನನಗೂ ಸಮಸ್ಯೆ, ನಿನಗೂ ಸಮಸ್ಯೆ ಎಲ್ಲರನ್ನೂ ಬಿಟ್ಟುಬಿಡು ಎಂದು ಸುಂದ್ರಿ, ಮಹೇಶನಿಗೆ ಬುದ್ಧಿ ಹೇಳುತ್ತಾಳೆ. ಹೌದು, ಪೊಲೀಸರು ಬಂದರು ನನನ್ನು ಸುಮ್ಮನೆ ಬಿಡುವುದಿಲ್ಲ ಎಂದುಕೊಂಡು ಮಹೇಶ ಎಲ್ಲರನ್ನೂ ಹೊರಗೆ ಬಿಡುತ್ತಾನೆ. ಹೊರಗೆ ಬರುತ್ತಿದ್ದಂತೆ ಪೂಜಾ ಅಕ್ಕನಿಂದ ತಪ್ಪಿಸಿಕೊಂಡು ಮದುವೆ ಮನೆಗೆ ಹೊರಡುತ್ತಾಳೆ. ಮತ್ತೆ ಪೂಜಾಳನ್ನು ಕಾಣದೆ ಭಾಗ್ಯಾ ಗಾಬರಿ ಆಗುತ್ತಾಳೆ.

ಇತ್ತ ಕುಸುಮಾ ಪ್ರಯಾಣಿಸುತ್ತಿದ್ದ ಆಟೋ, ಸ್ಕೂಟರ್‌ ಸವಾರನಿಗೆ ಡಿಕ್ಕಿ ಹೊಡೆಯುತ್ತದೆ. ಆಟೋ ಹತ್ತಿದಾಗಿನಿಂದ ಈ ಮಹಿಳೆ ಬೇಗ ಹೋಗುವಂತೆ ಹೇಳಿದ್ದರು ಅದಕ್ಕೆ ಆಟೋ ವೇಗವಾಗಿ ಓಡಿಸಿದೆ, ಈ ಅನಾಹುತಕ್ಕೆ ಇವರೇ ಕಾರಣ ಎಂದು ಆಟೋ ಚಾಲಕ ಕುಸುಮಾಳತ್ತ ಬೆರಳು ತೋರುತ್ತಾನೆ. ಕೋಪಗೊಂಡ ಸ್ಕೂಟರ್‌ ಸವಾರ, ನನ್ನ ಸ್ಕೂಟರ್‌ ಡ್ಯಾಮೇಜ್‌ ಆಗಿದೆ, ನನಗೂ ಗಾಯವಾಗಿದೆ 3 ಸಾವಿರ ಕೊಟ್ಟು ಇಲ್ಲಿಂದ ಹೋಗಿ ಎನ್ನುತ್ತಾನೆ. ನನ್ನ ಬಳಿ ಅಷ್ಟು ಹಣವಿಲ್ಲ, ನಾನು ಎಲ್ಲೋ ಹೋಗಬೇಕಿದೆ, ದಯವಿಟ್ಟು ನನ್ನನ್ನು ಬಿಡಿ, ನಾಳೆ ಖಂಡಿತ ನಿಮಗೆ ದುಡ್ಡು ಕೊಡುತ್ತೇನೆ ಎಂದು ಮನವಿ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಟ್ರಾಫಿಕ್‌ ಪೊಲೀಸರು ಬರುತ್ತಾರೆ.

ಕುಸುಮಾ ಹೋಗುವಷ್ಟರಲ್ಲಿ ಮದುವೆ ನಡೆದೇ ಹೋಗುತ್ತಾ? ಅಥವಾ ಪೂಜಾ ಮದುವೆ ನಿಲ್ಲಿಸಲು ಯಶಸ್ವಿಯಾಗುತ್ತಾಳಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

Whats_app_banner